ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ ಅವರು ಮತ್ತೆ ಮದುವೆ ಆಗುತ್ತಿದ್ದಾರಂತೆ. ಈ ವಿಷಯವನ್ನು ಅವರು ಅಧಿಕೃತಪಡಿಸಿದ್ದಾರೆ.
2023 ಜುಲೈನಲ್ಲಿ ವಿಚ್ಛೇದನದ ವಿಷಯ ತಿಳಿಸಿದ್ದ ಖ್ಯಾತ ನಿರೂಪಕಿ, ಬಿಗ್ ಬಾಸ್ ಕನ್ನಡ ಸೀಸನ್ 7 ಸ್ಪರ್ಧಿ ಚೈತ್ರಾ ವಾಸುದೇವನ್ ಅವರು ಈ ವರ್ಷ ಗುಡ್‌ನ್ಯೂಸ್ ಕೊಟ್ಟಿದ್ದಾರೆ. ಹೌದು, ಚೈತ್ರಾ ವಾಸುದೇವನ್ ಅವರು ಮದುವೆಯಾಗುತ್ತಿದ್ದಾರೆ.
ಚೈತ್ರಾ ವಾಸುದೇವನ್ ಏನಂದ್ರು?
ಅಂದಹಾಗೆ ಚೈತ್ರಾ ವಾಸುದೇವನ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡು ಎರಡನೇ ಮದುವೆ ಆಗುತ್ತಿರೋದಾಗಿ ಹೇಳಿದ್ದಾರೆ. “ನಾನು ನಿಮ್ಮೊಂದಿಗೆ ಹೃದಯಪೂರ್ವಕವಾದ ಒಂದು ಸಂತೋಷದ ಸುದ್ದಿ ಹಂಚಲು ಉತ್ಸುಕನಾಗಿದ್ದೇನೆ. ನಾನು ಈ ವರ್ಷ 2025ರ ಮಾರ್ಚ್‌ನಲ್ಲಿ ಜೀವನದ ಹೊಸ ಹೆಜ್ಜೆಗೆ ಕಾಲಿಡುತ್ತೇನೆ — ನನ್ನ ವಿವಾಹದ ಸುಂದರ ಪ್ರಯಾಣ. ಈ ಮುಂದಿನ ಹೆಜ್ಜೆ ಹಾಕುವಾಗ, ನಾನು ಈ ಹೊಸ ಅಧ್ಯಾಯಕ್ಕಾಗಿ ನಿಮ್ಮ ಪ್ರೀತಿಯು, ಆಶೀರ್ವಾದಗಳು ಮತ್ತು ಬೆಂಬಲವನ್ನು ವಿನಮ್ರವಾಗಿ ಕೋರುತ್ತೇನೆ” ಎಂದು ಚೈತ್ರಾ ವಾಸುದೇವನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
BBK 11: ಮತ್ತೆ ಅನುಮಾನ ಸೃಷ್ಟಿ ಮಾಡಿದ ಗೌತಮಿ ಜಾದವ್ ಮಾವ ಗಣೇಶ್ ಕಾಸರಗೋಡು ಪೋಸ್ಟ್!
ಚೈತ್ರಾ ವಾಸುದೇವನ್ ಅವರು ಯಾರನ್ನು ಮದುವೆ ಆಗುತ್ತಿದ್ದಾರೆ, ಆ ಹುಡುಗನ ವೃತ್ತಿ ಏನು ಎಂಬುದು ಇನ್ನೂ ರಿವೀಲ್ ಮಾಡಿಲ್ಲ. ಅಂದಹಾಗೆ ಮಾರ್ಚ್‌ನಲ್ಲಿ ಮದುವೆ ಎಂದಿದ್ದು, ದಿನಾಂಕದ ಬಗ್ಗೆ ಮಾಹಿತಿ ನೀಡಿಲ್ಲ.
ಪ್ರಿ ವೆಡ್ಡಿಂಗ್ ಫೋಟೋಶೂಟ್!
ಅಂದಹಾಗೆ ಕಳೆದ ಹತ್ತು ದಿನಗಳ ಹಿಂದೆ ಚೈತ್ರಾ ವಾಸುದೇವನ್ ಅವರು ಭಾವಿ ಪತಿಯ ಜೊತೆಗೆ ಪ್ಯಾರೀಸ್‌ನಲ್ಲಿ ಪ್ರಿ ವೆಡ್ಡಿಂಗ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಒಂದು ವಾರದ ಹಿಂದೆಯೇ ಅವರು ಪ್ಯಾರೀಸ್‌ನಲ್ಲಿ ಕಳೆದ ಸುಂದರ ಕ್ಷಣಗಳ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಆಗಲೂ ಅವರು ಪ್ರಿ ವೆಡ್ಡಿಂಗ್ ಫೋಟೋಶೂಟ್ ಎಂದು ಹೇಳಿಕೊಂಡಿರಲಿಲ್ಲ. ಈಗ ಅವರು ಹಂಚಿಕೊಂಡಿರುವ ಫೋಟೋಗಳನ್ನು ನೋಡಿದರೆ, ಟ್ರೆಡಿಷನಲ್, ವೆಸ್ಟರ್ನ್ ಸ್ಟೈಲ್‌ನಲ್ಲಿ ಫೋಟೋಶೂಟ್ ನಡೆದಿದೆ.
ಮದುವೆ ವಾರ್ಷಿಕೋತ್ಸವದ ದಿನವೇ ತಾಯಿಯಾಗಿ ಬಡ್ತಿ ಪಡೆದ ಶ್ರೀಮತಿ ಹರಿಪ್ರಿಯಾ ವಸಿಷ್ಠ ಸಿಂಹ!
ಮದುವೆಯ ಕಷ್ಟ!
ಡಿಗ್ರಿ ಮುಗಿಯುತ್ತಿದ್ದಂತೆ ಚೈತ್ರಾ ವಾಸುದೇವನ್ ಅವರು ಸತ್ಯ ನಾಯ್ಡು ಎನ್ನುವ ಉದ್ಯಮಿಯನ್ನು ಮದುವೆಯಾಗಿದ್ದರು. ಐದು ವರ್ಷಗಳ ಕಾಲ ಅವರು ಪತಿಯ ಜೊತೆಗೆ ಜೀವನ ನಡೆಸಿ, ಆಮೇಲೆ ವಿಚ್ಛೇದನಕ್ಕೆ ಮುಂದಾಗಿದ್ದರು. ಚೈತ್ರಾ ವಾಸುದೇವನ್ ಅವರು ಸಂಸಾರವನ್ನು ಉಳಿಸಿಕೊಳ್ಳಲು ತುಂಬ ಕಷ್ಟಪಟ್ಟಿರೋದಾಗಿ ಅವರು ಈ ಹಿಂದೆ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು.
ಮೋಸ ಆಯ್ತು!
“ನನ್ನ ಜೀವನ ಹೀಗಾಯ್ತು ಅಂತ ನನ್ನ ಅಪ್ಪ-ಅಮ್ಮ ತುಂಬ ಕುಗ್ಗಿ ಹೋಗಿದ್ದರು, ಮತ್ತೆ ನಾನು ನಗೋದು, ಅವರು ಸಮಾಧಾನವಾಗಿರೋದು ತುಂಬ ಸವಾಲಿನ ಕೆಲಸ ಆಗಿತ್ತು. ಡಿಗ್ರಿಯಾದಕೂಡಲೇ ಅರೇಂಜ್ ಮ್ಯಾರೇಜ್ ಆದ ನನಗೆ ಈ ರೀತಿ ಮೋಸ ಆಗತ್ತೆ ಅಂತ ಅಂದುಕೊಂಡಿರಲಿಲ್ಲ” ಎಂದು ಚೈತ್ರಾ ವಾಸುದೇವನ್ ಅವರು ಹೇಳಿದ್ದರು.
ನಿರೂಪಕಿಯೂ ಹೌದು, ಉದ್ಯಮಿಯೂ ಹೌದು!
ಅಂದಹಾಗೆ ಚೈತ್ರಾ ವಾಸುದೇವನ್ ಅವರು ಕಾಲೇಜು ದಿನಗಳಿಂದಲೂ ಸಂಪಾದನೆಯಲ್ಲಿ ನಂಬಿಕೆ ಇಟ್ಟವರು. ಆಗಲೇ ಅವರು ಇವೆಂಟ್ ಮ್ಯಾನೇಜ್‌ಮೆಂಟ್ ಕಂಪೆನಿಯೊಂದನ್ನು ಆರಂಭಿಸಿದ್ದರು. ಈ ಕಂಪೆನಿಯಲ್ಲಿ ಅವರು ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡುತ್ತ ಬಂದಿದ್ದಾರೆ. ಇದರ ಜೊತೆಗೆ ಅವರು ಸಾಕಷ್ಟು ಕಾರ್ಯಕ್ರಮಗಳ ನಿರೂಪಣೆ ಕೂಡ ಮಾಡುತ್ತ ಬಂದಿದ್ದಾರೆ. ಇನ್ನು ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಅವರು ಎರಡು ವಾರ ಇದ್ದರು. ಅಂದಹಾಗೆ ನಿತ್ಯವೂ ಗಂಟೆಗಳ ಕಾಲ ಕೆಲಸ ಮಾಡುವ ಅವರು ದುಬಾರಿ ಕಾರ್, ದುಬಾರಿ ಮನೆ ಖರೀದಿ ಮಾಡಿದ್ದಾರೆ. ಮೂವತ್ತು ವರ್ಷ ಆಗುವುದರೊಳಗಡೆ ಏನೇನು ಮಾಡಬೇಕು ಎಂದು ಅವರು ಲಿಸ್ಟ್ ಮಾಡಿಕೊಂಡಿದ್ದರಂತೆ. ಇದರಂತೆ ಅವರು ಕೆಲಸ ಮಾಡುತ್ತ ಬಂದು, ಕನಸು ನನಸು ಮಾಡಿಕೊಂಡರು.
