ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಎಲಿಮಿನೇಟ್ ಆಗಿರುವ ಉಗ್ರಂ ಮಂಜು ಅವರು ಒಂದು ಒಳ್ಳೆಯ ನಿರ್ಧಾರಗಳನ್ನು ತಗೊಂಡಿದ್ದಾರೆ. ಏನದು?
ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋನಲ್ಲಿ ಟಾಪ್ ಐದು ಸ್ಪರ್ಧಿಗಳಲ್ಲಿ, ಉಗ್ರಂ ಮಂಜು ಅವರು ಎಲಿಮಿನೇಟ್ ಆಗಿದ್ದಾರೆ. ಇನ್ನುಳಿದಂತೆ ನಾಲ್ವರು ಸ್ಪರ್ಧಿಗಳಿದ್ದು, ಯಾರು ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ. ಇನ್ನು ಫಿನಾಲೆ ವೇದಿಕೆಗೆ ಬಂದ ಉಗ್ರಂ ಮಂಜು ಅವರಿಗೆ ಬಹುಮಾನ ಸಿಕ್ಕಿದ್ದು, ಅವರು ಅದನ್ನು ಸದ್ವಿನಿಯೋಗ ಮಾಡಿದ್ದಾರೆ.
ದಾನ ಮಾಡಲು ಮುಂದಾದ ಉಗ್ರಂ ಮಂಜು!
ಉಗ್ರಂ ಮಂಜು ಅವರಿಗೆ ಎರಡು ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಲಾಗಿತ್ತು. ಆ ಹಣವನ್ನು ಅವರು ಹಿರಿಯ ನಾಗರಿಕರಿಗೆ ನೀಡಿ ಎಂದು ಮಂಜು ಹೇಳಿದ್ದಾರೆ. ಇನ್ನೂ ಒಂದು ಬಹುಮಾನ ಬಂದಾಗ ಅವರು ಅದನ್ನು ತನ್ನ ತಂದೆ ಬಳಿ, “ರೈತರಿಗೆ ಸಹಾಯ ಮಾಡಲು ಬಳಸಿ” ಎಂದಿದ್ದಾರೆ. ಆಗ ಕಿಚ್ಚ ಸುದೀಪ್ ಅವರು ಉಗ್ರಂ ಮಂಜು ಅವರನ್ನು ತಡೆದಿದ್ದಾರೆ. “ಮ್ಯಾಕ್ಸ್ ಮ್ಯಾಕ್ಸಿಮಮ್ ಹಿಟ್ ಆಗಿದೆ, ಅಷ್ಟೇ ಸಾಕು ನನಗೆ, ಇನ್ಮುಂದೆ ಸಿನಿಮಾ ಮಾಡೋದೆ. ನನಗೆ ಕಿಚ್ಚ ಸುದೀಪ್ ಅವರ ಸಿನಿಮಾದಲ್ಲಿ ನಟಿಸುವ ಅವಕಾಶ ಸಿಕ್ಕಿದೆ” ಎಂದು ಉಗ್ರಂ ಮಂಜು ಅವರು ಫಿನಾಲೆ ವೇದಿಕೆಯಲ್ಲಿ ಹೇಳಿದ್ದಾರೆ.
BBK 11: ಕಡ್ಡಿ ಮುರಿದಂತೆ ಬಿಗ್ ಬಾಸ್ ನೀಡಿದ ಬಂಪರ್ ಆಫರ್ ರಿಜೆಕ್ಟ್ ಮಾಡಿದ ಫಿನಾಲೆ ಸ್ಪರ್ಧಿಗಳು!
ಕಿಚ್ಚ ಸುದೀಪ್ ದೊಡ್ಡ ಗುಣ
“ಒಂದು ಸಂಸ್ಥೆಯವರು ಬಿಗ್ ಬಾಸ್ ಮನೆಯಲ್ಲಿ ನಿಮ್ಮ ಆಟವನ್ನು ನೋಡಿ ಈ ಹಣ ಕೊಟ್ಟಿದ್ದಾರೆ. ಅದಿಕ್ಕೆ ಗೌರವ ಕೊಡಿ, ದಾನ ಮಾಡೋದು ಒಳ್ಳೆಯ ಕೆಲಸ. ಆದರೆ ಅದಕ್ಕೂ ಇತಿ ಮಿತಿ ಇರಬೇಕು. ನೀವು ಅಂದುಕೊಂಡತೆ ಎರಡು ಲಕ್ಷ ರೂಪಾಯಿ ಹಣವನ್ನು ನಾನು ವಯಸ್ಸಾದ ಹಿರಿಯರಿಗೆ ಕೊಡ್ತೀನಿ. ಇನ್ನು ಹಣವನ್ನು ದಾನ ಕೊಡಬೇಕು ಅಂದ್ರೆ ಮಂಜು ಮೊದಲು ಅವರ ತಂದೆ-ತಾಯಿ ಅನುಮತಿ ಪಡೆಯಬೇಕು. ಆ ಹಣವನ್ನು ಅವರ ಪಾಲಕರಿಗೆ ಕೊಟ್ಟು ಆಮೇಲೆ ಏನು ಮಾಡ್ತೀರೋ ಮಾಡಿ” ಎಂದು ಹೇಳಿದ್ದಾರೆ.
ಮೀಸಲಾತಿ ವಿಷ್ಯ ಇಲ್ಲಿಗೆ ಬಿಟ್ಟುಬಿಡಿ, ದೊಡ್ ಮನಸ್ಸು ಮಾಡಿ ನನ್ನ ಕ್ಷಮಿಸಿ: ಬಿಗ್ ಬಾಸ್ ಹಂಸ
ಎರಡು ಬೇಡಿಕೆಗಳ ಕಥೆ ಏನು?
“ಉಗ್ರಂ ಮಂಜು ಅವರು ಈ ಮನೆಯಲ್ಲಿ ಸಂಪೂರ್ಣ ಜೀವಿಸಿದ್ದಾರೆ. ಅವರನ್ನು ಜನರು ಮೆಚ್ಚಿದ್ದಾರೆ. ಮಂಜು ಇಲ್ಲದೆ ಇದಿದ್ದರೆ ಈ ಸೀಸನ್ ಅಪೂರ್ಣ ಆಗುತ್ತಿತ್ತು” ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಇನ್ನು ಉಗ್ರಂ ಮಂಜುಗೆ ಅವರ ಪಾಲಕರ ಕಡೆಯಿಂದ ಎರಡು ಬೇಡಿಕೆಗಳು ಇತ್ತು. ಒಂದು ಮದುವೆ ಆಗಬೇಕು, ಇನ್ನೊಂದು ಕುಡಿಯೋದನ್ನು ಬಿಡಬೇಕು. ಇವೆರಡನ್ನು ನೆರವೇರಿಸ್ತೀರಾ ಅಂತ ಮಂಜುಗೆ ಪ್ರಶ್ನೆ ಮಾಡಲಾಗಿತ್ತು. ಆಗ ಮಂಜು ಅವರು “ಹಣೆಯಲ್ಲಿ ಬರೆದ ಹಾಗೆ ಆಗತ್ತೆ, ಮದುವೆ ಆಗ್ತೀನಿ, ಹುಡುಗಿ ಸಿಗಬೇಕು” ಎಂದು ಹೇಳಿದ್ದಾರೆ. ಆಗ ಕಿಚ್ಚ ಸುದೀಪ್ ಅವರು “ಮದುವೆ ಇನ್ನು ಎರಡು ವರ್ಷ ಲೇಟ್ ಆದರೆ ಓಲ್ಡ್ ಹೋಮ್ ಅಲ್ಲಿ ನೋಡಬೇಕಾಗುತ್ತದೆ” ಎಂದು ಕಾಮಿಡಿ ಮಾಡಿದ್ದಾರೆ. ಉಗ್ರಂ ಮಂಜು ಅವರೇ ಹೇಳಿದಂತೆ, ಸಾಕಷ್ಟು ವರ್ಷಗಳಿಂದ ಅವರು ಕುಡಿದಿದ್ದಾರಂತೆ. ಹೊರಗಡೆ ಇದ್ದಾಗ ಸಿಕ್ಕಾಪಟ್ಟೆ ಕುಡಿಯುತ್ತಿದ್ದ ಉಗ್ರಂ ಮಂಜು ಅವರು ದೊಡ್ಮನೆಗೆ ಬಂದಾಗಿನಿಂದ ಕುಡಿದಿಲ್ಲ. ಇನ್ನು ತ್ರಿವಿಕ್ರಮ್ ಅವರು, “ಈಗ ಚೆನ್ನಾಗಿ ಕಾಣುತ್ತಿದ್ದೀಯಾ, ಕುಡಿಯಬೇಡ, ಫಿಟ್‌ನೆಸ್ ಹಾಳು ಮಾಡಿಕೊಳ್ಳಬೇಡ, ಕನ್ನಡದ ನವಾಜುದ್ದೀನ್ ಸಿದ್ಧಿಕಿ ನೀನು” ಎಂದು ಕಿವಿಮಾತು ಹೇಳಿದ್ದರು. ಇನ್ನು ಹೊರಗಡೆ ಬರುತ್ತಿದ್ದಂತೆ ಪಬ್‌ಗೆ ಹೋಗಬೇಕು ಅಂತ ಮಂಜು ಅವರು ಕೆಲ ಬಾರಿ ಈ ಮನೆಯಲ್ಲಿ ಹೇಳಿದ್ದರು.
ಅಂದಹಾಗೆ ತ್ರಿವಿಕ್ರಮ್, ರಜತ್, ಹನುಮಂತ, ಮೋಕ್ಷಿತಾ ಪೈ ನಡುವೆ ಯಾರು ಈ ಸೀಸನ್ ಗೆಲ್ಲುತ್ತಾರೆ ಎಂದು ಕಾದು ನೋಡಬೇಕಿದೆ.
