Asianet Suvarna News Asianet Suvarna News

ಹೆಣ್ಣು ಮಗುವಿಗೆ ತಾಯಿಯಾದ ಕಿರುತೆರೆ ನಟಿ ಅಮೃತಾ!

ನಟಿ ಅಮೃತಾ ಮತ್ತು ನಟ ರಘು ಕುಟುಂಬಕ್ಕೆ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. 
 

Kannada Amrutha Ramamoorthy Raghu blessed with a baby girl vcs
Author
Bangalore, First Published Oct 23, 2021, 1:49 PM IST
  • Facebook
  • Twitter
  • Whatsapp

ಕನ್ನಡ ಕಿರುತೆರೆ ಲೋಕದಲ್ಲಿ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ (Mister and Misses Rangegowda) ಎಂದೇ ಜನಪ್ರಿಯತೆ ಪಡೆದಿರುವ ಜೋಡಿ  ಅಮೃತಾ (Amrutha) ಮತ್ತು ರಘು (Raghu) ಅಕ್ಟೋಬರ್ 21ರಂದು ಕುಟುಂಬಕ್ಕೆ ಪುಟ್ಟ ಲಕ್ಷ್ಮಿಯನ್ನು ಬರ ಮಾಡಿಕೊಂಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹಾಗೂ ಸಿನಿ ಸ್ನೇಹಿತರೊಂದಿಗೆ ಈ ಸಂತೋಷದ ವಿಚಾರವನ್ನು ಹಂಚಿಕೊಂಡಿದ್ದಾರೆ. 

'It's a girl' ಎಂದು ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ರಘು ಹಂಚಿಕೊಂಡಿದ್ದರು. ರಘು ಅವರ ಆನ್‌ಸ್ಕ್ರೀನ್ ಸಹೋದರಿ ಮೀರಾ ಅಲಿಯಾಸ್ ಅಂಕಿತಾ ಅಮರ್ (Ankita Amar) ಕೂಡ ಸೋಷಿಯಲ್ ಮೀಡಿಯಾದಲ್ಲಿ ಮಗು ಆಗಮನ ಹಾಗೂ ಅತ್ತಿಗೆ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ರಘು ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. 

Kannada Amrutha Ramamoorthy Raghu blessed with a baby girl vcs

ಆಗಸ್ಟ್‌ ತಿಂಗಳಲ್ಲಿ ರಘು ಕುಟುಂಬಸ್ಥರು ಬೆಂಗಳೂರಿನ ನಿವಾಸದಲ್ಲಿ ಅದ್ಧೂರಿ ಸೀಮಂತ ಕಾರ್ಯಕ್ರಮ (Baby Shower) ಹಮ್ಮಿಕೊಂಡಿದ್ದರು. 'ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು ಕನಸುಗಳು ಇರುತ್ತವೆ. ನನ್ನ ಬಹು ದೊಡ್ಡ ಕನಸು ಅಂದರೆ ನನ್ನ ಸೀಮಂತ ಶಾಸ್ತ್ರವನ್ನು ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಮೊದಲಿಗೆ ನನ್ನ ಜೀವ ರಘು, ಅತ್ತೆ, ಮಾವ, ಅತ್ತಿಗೆ, ಅಣ್ಣ, ಅಮ್ಮ,ಅಪ್ಪ, ಅಕ್ಕ, ಭಾವ, ಸ್ನೇಹಿತರು ಹಾಗೆ ನನ್ನ ಆತ್ಮೀಯರಾದವರು,' ಎಂದು ಅಮೃತಾ ಹೇಳಿದ್ದರು. 

ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಅಮೃತಾ; ಅದ್ಧೂರಿ ಸೀಮಂತ ಫೋಟೋಗಳಿವು!

ಕಲರ್ಸ್ ಕನ್ನಡ (Colors Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ (Nammane Yuvarani) ಧಾರಾವಾಹಿಯ ಚಿತ್ರೀಕರಣದಲ್ಲಿ ರಘು ಬ್ಯುಸಿಯಾಗಿದ್ದಾರೆ.  ಅನುಬಂಧ ಅವಾರ್ಡ್ (Anubhanda Awards) ಕಾರ್ಯಕ್ರಮದಲ್ಲಿ ಮನೆ ಮೆಚ್ಚಿದ ಸಹೋದರ ಅವಾರ್ಡ್‌ ಪಡೆದುಕೊಂಡಿದ್ದಾರೆ ಈ ರಘು. ಇನ್ನೂ ಅಮೃತಾ ಗರ್ಭಿಣಿ ಆದಾಗಿನಿಂದಲೂ ಆನ್‌ಸ್ಕ್ರೀನ್‌ನಿಂದ ಕೊಂಚ ಬ್ರೇಕ್ ತೆಗೆದುಕೊಂಡಿದ್ದಾರೆ. ಆದರೆ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿದ್ದು ಅನೇಕ ಸೀರೆ ಬ್ರ್ಯಾಂಡ್‌ಗಳನ್ನು ಎನ್ಡೋರ್ಸ್ ಮಾಡುತ್ತಿದ್ದಾರೆ. ಮಗು ಹುಟ್ಟುವ ಒಂದು ದಿನ ಹಿಂದೆಯೂ ಕೂಡ ಶ್ವೇತಾ ಬಣ್ಣದ ಸೀರೆ ಧರಿಸಿ ಫೋಟೋ ಹಂಚಿಕೊಂಡಿದ್ದರು. 

ಸೋಷಿಯಲ್ ಮೀಡಿಯಾದಲ್ಲಿ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಜೋಡಿಗೆ ಶುಭಾಶಯಗಳು ಹರಿದು ಬರುತ್ತಿವೆ.

Follow Us:
Download App:
  • android
  • ios