ಮೊದಲ ಮಗುವಿನ ನಿರೀಕ್ಷೆಯಲ್ಲಿ ಕಿರುತೆರೆ ನಟಿ ಅಮೃತಾ; ಅದ್ಧೂರಿ ಸೀಮಂತ ಫೋಟೋಗಳಿವು!
ಕಿರುತೆರೆ ಸ್ಟಾರ್ ಕಪಲ್ ಅಮೃತಾ ಹಾಗೂ ರಘು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅದ್ಧೂರಿ ಸೀಮಂತ ಫೋಟೋ ಹಂಚಿಕೊಂಡು ಕುಟುಂಬಸ್ಥರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
ಕಿರುತೆರೆ ಜನಪ್ರಿಯ ನಟಿ ಅಮೃತಾ ಮೂರ್ತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.
ಆಪ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ಸೀಮಂತ ಮಾಡಿಕೊಂಡಿದ್ದಾರೆ.
'ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನದ ಸಮಯದಲ್ಲಿ ವಿವಿಧ ಆಸೆಗಳು, ಕನಸುಗಳು ಇರುತ್ತದೆ.'
'ನನ್ನ ಬಹು ದೊಡ್ಡ ಕನಸು ಅಂದ್ರೆ ನನ್ನ ಸೀಮಂತ ಶಾಸ್ತ್ರವನ್ನು ಹಿರಿಯರ ಸಮ್ಮುಖದಲ್ಲಿ ಸಂತೋಷದಿಂದ ಮಾಡಿಸಿಕೊಳ್ಳಬೇಕು ಎಂದಿತ್ತು. ಆ ನನ್ನ ಕನಸು ಈಡೇರಿದೆ' ಎಂದು ಅಮೃತಾ ಬರೆದುಕೊಂಡಿದ್ದಾರೆ.
'ಇದಕ್ಕೆ ಕಾರಣರಾದ ಪ್ರತಿಯೊಬ್ಬರಿಗೂ ನಾನು ಚಿರಋಣಿ. ಮೊದಲಿಗೆ ನನ್ನ ಜೀವ ರಘು, ಅತ್ತೆ, ಮಾವ, ಅತ್ತಿಗೆ, ಅಣ್ಣ,ಅಪ್ಪ, ಅಮ್ಮ, ಅಕ್ಕ ,ಬಾವ, ಸ್ನೇಹಿತರು ಹಾಗೆ ನನ್ನ ಆತ್ಮೀಯರಾದವರ' ಎಂದು ಅಮೃತಾ ಹೇಳಿಕೊಂಡಿದ್ದಾರೆ.
ಕೆಂಪು ಹಸಿರು ಬಣ್ಣದ ಸೀರೆಯಲ್ಲಿ ಅಮೃತಾ ಮಿಂಚಿದ್ದಾರೆ, ಪೀಚ್ ಬಣ್ಣ ಶೇರ್ವಾನಿಯಲ್ಲಿ ರಘು ಕಾಣಿಸಿಕೊಂಡಿದ್ದಾರೆ.
2019, ಮೇ 13ರಂದು ಅಮೃತಾ ಮತ್ತು ರಘು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು.