450ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿರುವ ಸ್ವಾತಿ ಪತಿ ಕೂಡ ನಟ, ನಿರ್ದೇಶಕ, ನಿರ್ಮಾಪಕ. ಹಾಗಾದರೆ ಅವರು ಯಾರು?

ಕನ್ನಡದ ಅನೇಕ ಧಾರಾವಾಹಿಗಳಲ್ಲಿ ನಟಿಸಿರುವ ಸ್ವಾತಿ ಅವರ ಖಾಸಗಿ ಜೀವನದ ಬಗ್ಗೆ ಅನೇಕರಿಗೆ ಮಾಹಿತಿ ಇಲ್ಲ. ಸ್ವಾತಿ ಪತಿ ಗುರುದತ್‌ ಕೂಡ ಚಿತ್ರರಂಗದಲ್ಲಿ ಆಕ್ಟಿವ್‌ ಆಗಿದ್ದವರು. ಗುರುದತ್‌ ಅವರು ತಂತ್ರಜ್ಞ, ನಟ ಕೂಡ ಹೌದು. ಕಳೆದ 21 ವರ್ಷಗಳಿಂದ ಅವರು ನಟಿಸುತ್ತಿಲ್ಲ. ಬಾಲನಟನಾಗಿದ್ದ ಗುರುದತ್‌ ಅವರು ಸಾವಿರಾರು ಸಂಚಿಕೆಯುಳ್ಳ ಧಾರಾವಾಹಿ ಎಪಿಸೋಡ್‌ಗಳನ್ನು ನಿರ್ದೇಶಿಸಿ, ನಿರ್ಮಾಣ ಕೂಡ ಮಾಡಿದ್ದರು. ಎಡಿಟರ್, ಗಾಯಕ, ಬರಹಗಾರ, ಗೀತರಚನೆಕಾರ, ಛಾಯಾಗ್ರಾಹಕ ಕೂಡ ಹೌದು.

ಪತಿ ಬಗ್ಗೆ ಸ್ವಾತಿ ಏನು ಹೇಳ್ತಾರೆ?

ನಟಿ ಸ್ವಾತಿ ಹಾಗೂ ಗುರುದತ್‌ ಸವ್ಕೂರು ಅವರು ಮದುವೆಯಾಗಿದ್ದು, ಇವರಿಗೆ ಉದಿತ್‌ ಎಂಬ ಮಗನಿದ್ದಾನೆ. “ಅದ್ಭುತ ತಂತ್ರಜ್ಞ ಗುರುದತ್‌. ಅವರ ಥರ ಯಾರೂ ಇಲ್ಲ, ಹುಟ್ಟೋದೂ ಇಲ್ಲ. ಎಲ್ಲರಿಗೂ ಗುರುದತ್‌ ಅವರು ಸಹಾಯ ಮಾಡ್ತಾರೆ. ಈ ಗುಣ ಅತಿಯಾಗಬಾರದು. ಹೀಗಾಗಿ ನನ್ನ ಮಗನಿಗೂ ಕೂಡ ನಿನ್ನ ಅಪ್ಪನ ಥರ ಆಗಬೇಡ ಅಂತ ಹೇಳುವೆ” ಎಂದಿದ್ದಾರೆ ಸ್ವಾತಿ.

ಶಶಿಕಾಂತ್‌ ಸ್ಟುಡಿಯೋಕ್ಕೆ ಸ್ವಾತಿ ಅವರು ಡಬ್ಬಿಂಗ್‌ಗೆ ಬಂದಿದ್ದರು. ಆಗಲೇ ಗುರುದತ್‌ ಪರಿಚಯ ಆಗಿತ್ತು. ʼಋಣಾನುಬಂಧʼ ಕಿರುಚಿತ್ರದಲ್ಲಿ ಸ್ವಾತಿ ನಟಿಸಿದ್ದರು. ಹೀಗೆ ಇವರಿಗೆ ಪರಿಚಯ ಆಗಿ, ಮದುವೆಯಾಗಿ ಸುಂದರವಾದ ಜೀವನ ನಡೆಸುತ್ತಿದೆ.

ದಾಖಲೆಗಳು

ಕರ್ನಾಟಕದಲ್ಲಿ ʼಮಿಸ್‌ ಮಾಲಾʼ ಧಾರಾವಾಹಿಯಲ್ಲಿ ದ್ವಿಪಾತ್ರ ಸೃಷ್ಟಿ ಮಾಡಿದ ಮೊದಲ ವ್ಯಕ್ತಿ. ಇದರಲ್ಲಿ ಮಾಧುರಿ ಅವರು ನಟಿಸಿದ್ದರು.

20 ನಿಮಿಷ 40 ಸೆಕೆಂಡ್ಸ್‌ನಲ್ಲಿ ಎಪಿಸೋಡ್‌ ಮಾಡಿದ್ದರು.

ಗುರುದತ್‌ಗೆ ಅನಾರೋಗ್ಯ

ನಿದ್ದೆಯಲ್ಲಿದ್ದಾಗ ಗುರುದತ್‌ ಅವರಿಗೆ ಸ್ಟ್ರೋಕ್‌ ಹೊಡೆದಿತ್ತು. ಬೆಳಗ್ಗಿನ ಜಾವ 5ಗಂಟೆಗೆ ಸ್ಟ್ರೋಕ್‌ ಹೊಡೆದಿತ್ತು. ಇದು ಸ್ಟ್ರೋಕ್‌ ಎನ್ನೋದು ಕೂಡ ಗುರುದತ್‌ಗೆ ಗೊತ್ತಿರಲಿಲ್ಲ.

ಸ್ವಾತಿ ಎಲ್ಲಿಯವರು? 

ಹೊನ್ನಾವರ ಮೂಲದ ಸ್ವಾತಿ ಅವರು ಬೆಂಗಳೂರಿನಲ್ಲಿಯೇ ಓದಿ ಬೆಳೆದಿದ್ದಾರೆ. ಸುನೀಲ್‌ ಪುರಾಣಿಕ್‌ ಅವರ ಪರಿಚಯದಿಂದ ʼಪೊಲೀಸ್‌ ಡೈರಿʼ ಧಾರಾವಾಹಿ ಮೂಲಕ ಕಿರುತೆರೆಗೆ ಕಾಲಿಟ್ಟ ಸ್ವಾತಿ ಅವರು 450ಕ್ಕೂ ಅಧಿಕ ಧಾರಾವಾಹಿಗಳಲ್ಲಿ ನಟಿಸಿದ್ದರು. ಮದುವೆಯಾದ ಬಳಿಕ ಸ್ವಲ್ಪ ವರ್ಷಗಳ ಕಾಲ ನಟನೆಯಿಂದ ದೂರವಿದ್ದ ಸ್ವಾತಿ 2014ರಲ್ಲಿ ಬಹುತೇಕ ಧಾರಾವಾಹಿಗಳಲ್ಲಿ ಮತ್ತೆ ನಟಿಸಿದರು. ಈಗ ಅವರು ಧಾರಾವಾಹಿಗಳಲ್ಲಿ ತಾಯಿ ಪಾತ್ರ ಮಾಡುತ್ತಿದ್ದಾರೆ.

ರಾಘವೇಂದ್ರ ರಾಜ್‌ಕುಮಾರ್, ಪುನೀತ್‌ ರಾಜ್‌ಕುಮಾರ್‌, ವಿಜಯ್‌ ರಾಜ್‌ಕುಮಾರ್‌, ಯುವ ರಾಜ್‌ಕುಮಾರ್‌ ಸಿನಿಮಾಗಳಲ್ಲಿ ಸ್ವಾತಿ ನಟಿಸಿದ್ದಾರೆ.

YouTube video player

YouTube video player