ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಪರ್ಸನಲ್ ವಿಚಾರಗಳ ಬಗ್ಗೆ ಹಂಚಿಕೊಂಡ ನಾಗಿಣಿ 2 ನಟಿ ನಮ್ರತಾ ಗೌಡ.
ಬಾಲನಟಿಯಾಗಿ ಕನ್ನಡ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲಿ ಮಿಂಚುತ್ತಿರುವ ನಟಿ ನಮ್ರತಾ ಗೌಡ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಗೋಲ್ಡನ್ ಗ್ಯಾಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವು. ನಮ್ರತಾ ಗೌಡ ಜೊತೆ ಅನುಪಮಾ ಗೌಡ ಮತ್ತು ರಕ್ಷ್ ಕೂಡ ಇದ್ದು ತಮ್ಮ ಫ್ರೆಂಡ್‌ಶಿಪ್ ಮತ್ತು ಸಿನಿ ಜರ್ನಿ ಬಗ್ಗೆ ಹಂಚಿಕೊಂಡಿದ್ದಾರೆ.
ಅನುಪಮಾ ಗೌಡ ಅವರ ತಾಯಿ, ರಕ್ಷ್ ಅವರ ಪತ್ನಿ ಅನುಷಾ ಮತ್ತು ನಮ್ರತಾ ಗೌಡ ಅವರ ತಾಯಿ ಕೂಡ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ನಮ್ರತಾ ಫ್ಯಾಮಿಲಿಯಿಂದ ತಮ್ಮ ವೃತ್ತಿ ಜೀವನಕ್ಕೆ ಯಾವ ರೀತಿ ಸಪೋರ್ಟ್ ಸಿಕ್ಕಿದೆ, ಸಂಬಂಧಿಕರು ಹೇಗೆ ನೋಡುತ್ತಾರೆಂದು ಮೊದಲ ಬಾರಿ ಹಂಚಿಕೊಂಡಿದ್ದಾರೆ.
ನಮ್ರತಾ ಮಾತುಗಳು:
'ನನ್ನ ತಾಯಿ ತುಂಬಾನೇ ಸೈಲೆಂಟ್. ಅವರಿಗೆ ನನಗೆ ತದ್ವಿರುದ್ಧ. ಕ್ಯಾಮೆರಾ ಮುಂದೆ ಕಾಣಿಸಿಕೊಳ್ಳುವುದು ಸ್ಟೇಜ್ ಮೇಲೆ ಬರುವುದು ಮಾಡುವುದಿಲ್ಲ. ಅವರು ಇಲ್ಲಿಗೆ ಬಂದಿರುವುದೇ ನನಗೆ ಖುಷಿ' ಎಂದು ಮಾತು ಆರಂಭಿಸಿ ತಮ್ಮ ಪರ್ಸನಲ್ ವಿಚಾರಗಳನ್ನು ಹೇಳಿಕೊಂಡಿದ್ದಾರೆ.

'ನಾನು ಹುಟ್ಟಿದ್ದು ಬೆಳೆದಿದ್ದು ಅವಿಭಕ್ತ ಕುಟುಂಬದಲ್ಲಿ. ಹೆಣ್ಣು ಮಗಳು ಅಂತ ಕೀಳಾಗಿ ನೋಡಿದ್ದರು ಊಟ ಕೊಡದೆ ಹಿಂಸೆ ಕೊಟ್ಟಿದ್ದಾರೆ. ಅಷ್ಟು ನೋವುಗಳನ್ನು ಮನಸ್ಸಿನಲ್ಲಿ ಇಟ್ಕೊಂಡು ನನಗೋಸ್ಕರ ಸ್ಟ್ರಾಂಗ್ ಆಗಿದ್ದಾರೆ. ಅವರ ಮಾತುಗಳನ್ನು ನಾನು ಕೇಳಿಸಿಕೊಳ್ಳಬಾರದು ಅಂತ ಸಂಗೀತ ಕ್ಲಾಸ್, ಡ್ಯಾನ್ಸ್ ಕ್ಲಾಸ್, ಕರಾಟೆ ಕ್ಲಾಸ್, ಮನೆ ಪಾಠ, ಶೂಟಿಂಗ್ ಹೀಗೆ ಬ್ಯುಸಿ ಮಾಡಿಟ್ಟರು. ನನಗೆ ಗೊತ್ತಿಲ್ಲ ಪಾಪ ಮನೆಯಲ್ಲಿ ಏನು ನಡೆಯುತ್ತಿದೆ ಎಂದು. ಅಪ್ಪ ಅಮ್ಮ ಇಬ್ರೂ ನೋವು ಅನುಭವಿಸುತ್ತಿದ್ದರು. ಈಗ ನಾವು ನಾಲ್ಕೈದು ವರ್ಷಗಳ ಹಿಂದೆ ಸಪರೇಟ್ ಆಗಿದ್ದು' ಎಂದು ನಮ್ರತಾ ಹೇಳಿಕೊಂಡಿದ್ದಾರೆ.
ಪುನೀತ್ ರಾಜ್‌ಕುಮಾರ್ ಎಂದು ಅಚ್ಚೆ ಹಾಕಿಸಿಕೊಂಡ ಕಿರುತೆರೆ ನಟಿ ನಮ್ರತಾ ಗೌಡ!
'ಹೆಣ್ಣುಮಗಳು ಅಂತ ತಂದೆ ಕಡೆ ಕೀಳಾಗಿ ನೋಡಿದರೆ ಮಮ್ಮಿ ಕಡೆ ಬೇರೆ. ಅವಳು ತುಂಬಾನೇ ಬೋಲ್ಡ್ ಅವಳು ನಟಿ ಸ್ಟೇಜ್ ಮೇಲೆ ಡ್ಯಾನ್ಸ್ ಮಾಡುತ್ತಾಳೆ ನಮ್ಮ ಮಕ್ಕಳ ಜೊತೆ ಸೇರಬಾರದು. ಇಂಡಸ್ಟ್ರಿ ಹುಡುಗಿ ಅಂದ್ರೆ ಕೆಟ್ಟದಾಗಿ ನೋಡ್ತಾರೆ. ಅವೆಲ್ಲಾ ನೋವಿಂದ ನಾನು ಇಷ್ಟು ಮುಂದೆ ಬಂದಿರುವುದು. ಅಪ್ಪ ಅಮ್ಮ ನೆಮ್ಮದಿಯಾಗಿರಬೇಕು ಎಂದು ಅಷ್ಟೇ ನನಗೆ ಯೋಚನೆ ಬರುವುದು.' ಎಂದಿದ್ದಾರೆ.
'ನಾನು ಸ್ಕೂಲ್‌ನಲ್ಲಿ ಇದ್ದಾಗ ಅಷ್ಟು ಮೆಚ್ಯೂರಿಟಿ ಬಂತು ಏಕೆಂದರೆ ನಾನು ಹೈಸ್ಕೂಲ್‌ನಲ್ಲಿ ಇದ್ದಾಗ ಅವರಿಗೆ ಊಟ ಕೊಡ್ತಿದ್ದಾರೆ ನನಗೆ ಕೊಡ್ತಿಲ್ಲ ಅವರಿಗೆ ಗಟ್ಟಿ ಹಾಲು ಕೊಡ್ತಿದ್ದಾರೆ ನನಗೆ ನೀರಿನ ಹಾಲು ಕೊಡ್ತಿದ್ದಾರೆ. ಅದೆಲ್ಲಾ ಗಮನಿಸಿದ್ದೀನಿ ತಂದೆ ತಾಯಿ ಖುಷಿಯಾಗಿಲ್ಲ ಅದಕ್ಕೆ ನಾನೇ ಕಾರಣ. ಅವರನ್ನು ಮನೆಯಿಂದ ಹೊರಗಡೆ ಕರೆದುಕೊಂಡು ಹೋಗಬೇಕು ಅಂತ ಆಗ ನಾನು ದುಡಿಯಲೇಬೇಕು ಅಂತ ನಿರ್ಧಾರ ಮಾಡಿದೆ.' ಎಂದು ನಮತ್ರಾ ಮಾತನಾಡಿದ್ದಾರೆ.
ಉದ್ದ ಕೂದಲು ಹಾಗೂ ವಸ್ತ್ರ ವಿನ್ಯಾಸದ ರಹಸ್ಯ ಬಿಚ್ಚಿಟ್ಟ ನಾಗಿಣಿ ನಟಿ ನಮ್ರತಾ!
'ನಮ್ರತಾ ಸಾಧನೆ ಬಗ್ಗೆ ನನಗೆ ಖುಷಿಯಿದೆ. ಅವಳು ಏನೇ ಮಾಡಿದರೂ ಒಳ್ಳೆಯದನ್ನೇ ಮಾಡುವುದು. ಖುಷಿ ಆಗುತ್ತೆ' ಎಂದು ನಮ್ರತಾ ತಾಯಿ ಹೇಳಿದ್ದಾರೆ.
ಗಣೇಶ್ ಮಾತು:
'ಕೆಸರಲ್ಲಿ ಮಾತ್ರ ಕಮಲ ಹರಳುವುದು. ನಾನು ರಕ್ಷ್‌ಗೆ ಮುರ್ನಾಲ್ಕು ಸಲ ಹೇಳಿದ್ದೀನಿ ordinary ವ್ಯಕ್ತಿಗಳಿಂದ ಮಾತ್ರ extrodinary ಕೆಲಸ ಮಾಡುವುದಕ್ಕೆ ಆಗುವುದು. ನಾವೆಲ್ಲಾ ಆ ದಾರಿಯಿಂದ ಬಂದಿರುವುದು. ಎಲ್ಲರೂ ಸಾಧನೆ ಮಾಡ್ತೀರ ನನಗೆ ಗೊತ್ತು' ಎಂದು ಗಣೇಶ್ ಧೈರ್ಯ ಕೊಟ್ಟಿದ್ದಾರೆ.
