Asianet Suvarna News Asianet Suvarna News

ಮಕ್ಕಳಿಗೆ ಲಾಲಿ ಹಾಡು ಹಾಡಿದ ನಿವೇದಿತಾ-ಚಂದನ್; ಇಶಿತಾ ಯಾಕಮ್ಮ ಈ ಹಾಡು?

ರಾಜಾ ರಾಣಿ ವೇದಿಕೆಯಲ್ಲಿ ಮಕ್ಕಳಿಗೆ ಡಿಫರೆಂಟ್ ಆಗಿ ಲಾಲಿ ಹಾಡು ಹಾಡಿದ ಜೋಡಿಗಳು. ವೀಕೆಂಡ್ ಎಪಿಸೋಡ್ ವೈರಲ್.

Colors Kannada Raja Rani Chandan shetty Niveditha gowda Ishitha funny episode vcs
Author
Bangalore, First Published Aug 15, 2021, 1:47 PM IST
  • Facebook
  • Twitter
  • Whatsapp

ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ರಾಜಾ ರಾಣಿ ರಿಯಾಲಿಟಿ ಕಾರ್ಯಕ್ರಮ ದಿನೇ ದಿನೇ ಹೆಚ್ಚಿನ ಜನಪ್ರಿಯತೆ ಪಡೆದುಕೊಳ್ಳುತ್ತಿದೆ.  ವಿಭಿನ್ನ ಟಾಸ್ಕ್‌ಗಳನ್ನು ನೀಡುವ ಮೂಲಕ ವೀಕ್ಷಕರಿಗೆ ತಮ್ಮ ನೆಚ್ಚಿನ ತಾರೆಯರ ಬಗ್ಗೆ ಪರಿಚಯಿಸಿಕೊಡುತ್ತಿದ್ದಾರೆ.  ಅದರಂತೆಯೇ ಈ ವಾರದ ಟಾಸ್ಕ್‌ ಹೀಗಿತ್ತು.

ರಾಜಾ ರಾಣಿ ಕಾರ್ಯಕ್ರಮಲ್ಲಿ ಯಾವ ಜೋಡಿಗೆ ಮಕ್ಕಳಿಲ್ಲವೋ ಅಥವಾ ಪ್ಲಾನಿಂಗ್ ಮಾಡುತ್ತಿದ್ದಾರೆ ಅವರಿಗೆ ಒಂದು ಟಾಸ್ಕ್ ನೀಡಲಾಗಿತ್ತು. ಜಾಲಿ ಜೋಡಿಗಳ ಎದುರು ತೊಟ್ಟಿಲು ಹಾಗೂ ಒಂದು ಮಗುವಿನ ಗೊಂಬೆಯನ್ನು ಇಡಲಾಗಿತ್ತು. ಅವರು ತಮ್ಮ ಶೈಲಿಯಲ್ಲಿ ಮಗುವಿಗೆ ಹಾಡು ಹೇಳಿ ಸಮಾಧಾನ ಮಾಡಿ ಮಲಗಿಸಬೇಕಿತ್ತು.  'ಮಗು ಹಿಡಿದುಕೊಂಡ ನಿವೇದಿತಾ, ಪೊಗರು ನನ್ನ ಕಂದನಿಗೆ ಪೊಗರು' ಅಂತ ಹಾಡುತ್ತಾಳೆ ಎಂದು ಗೇಲಿ ಮಾಡಿದ್ದರು.

ಅಪ್ಪ-ಮಗನನ್ನು ಒಂದು ಮಾಡಿದ ರಾಜಾ-ರಾಣಿ ರಿಯಾಲಿಟಿ ಶೋ; ಕಣ್ಣೀರಿಟ್ಟ ರಾಜು ತಾಳಿಕೋಟೆ!

'ಲಾಲಿ ಲಾಲಿ ಲಾಲಿ, ಮಾಡು ನೀನು ಜಾಲಿ, ಎದುರಿಗೆ ಕುಂತ್ವನೆ ಪೊಲೀ, ಪವನ್ ತಲೆ ನೋಡು ಫುಲ್ ಕಾಲಿ' ಎಂದು ಹಾಡು ಹೇಳಿ ತಮಾಷೆ ಮಾಡುತ್ತಾರೆ ನಿವೇದಿತಾ ಮತ್ತು ಚಂದನ್. ಆದರೆ ಇಶಿತಾ ಮತ್ತು ಮುರುಗಾ 'ಮುಸ್ಸಂಜೆಯಲ್ಲಿ ನಮ್ಮೂರಲ್ಲಿ ತಂಗಾಳಿ' ಎಂದು ಹಾಡು ಹಾಡುತ್ತಾರೆ. 'ಇಲ್ಲ ಈ ಹಾಡು ಮಲಗಿಸುವುದಕ್ಕೆ ಅಲ್ಲ. ಮಗು ಆಗಲಿ ಎಂದು ಹಾಡುತ್ತಿರುವುದು' ಎಂದು ಸೃಜನ್ ಗೇಲಿ ಮಾಡುತ್ತಾರೆ.

 

Follow Us:
Download App:
  • android
  • ios