Asianet Suvarna News Asianet Suvarna News

'ನಂದಿನಿ' ಧಾರಾವಾಹಿಯ ಕಾವ್ಯಾ ಮಾಡ್ತಿರೋ 'ಚಿನ್ನದ ಬೇಟೆ' ನೋಡಿ

ಎಪಿಸೋಡ್‌ಗಳ ಲೆಕ್ಕದಲ್ಲಿ ದಿನದ ಇಪ್ಪತ್ತನಾಲ್ಕು ಗಂಟೆಯೂ ಶೂಟಿಂಗ್‌ ಶೂಟಿಂಗ್‌ ಎಂದು ಬ್ಯುಸಿಯಾಗಿರುವ, ಪ್ರತಿ ದಿನ ಮನೆ ಮನೆಯ ಪುಟ್ಟಪರದೆಯಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿರುತೆರೆ ತಾರೆಗಳನ್ನು ಕೊರೋನಾ ಮನೆಯಲ್ಲೇ ಬಂಧಿಸಿದೆ. ಮನೆಯೇ ಮಂತ್ರಾಲಯ ಮಾಡಿಕೊಂಡರುವ ಮನೆ ಮನೆಯ ತಾರೆಗಳು ಇಲ್ಲಿ ತಮ್ಮ ಲಾಕ್‌ ಡೌನ್‌ ಅನುಭವ ಹೇಳಿಕೊಂಡಿದ್ದಾರೆ.

Kannada actress Anchor Kavya shastry share lockdown experience
Author
Bangalore, First Published Apr 4, 2020, 4:22 PM IST

ಪ್ರತಿ ದಿನ ಧಾರಾವಾಹಿ, ಈವೆಂಟ್‌ ಗಳಲ್ಲಿ ನಿರೂಪಣೆ, ಶೂಟಿಂಗ್‌... ಹೀಗೆ ಜೀವನ ಸಾಗುತ್ತಿದ್ದ ಹೊತ್ತಿನಲ್ಲಿ ಒಂದಿಷ್ಟುದಿನ ಮನೆಯಲ್ಲೇ ಇರಿ ಎನ್ನುವಂತಿದೆ ಲಾಕ್‌ ಡೌನ್‌. ಇದು ಅಗತ್ಯ ಮತ್ತು ಅನಿವಾರ್ಯ ಕೂಡ. ಮನೆ ಬಿಟ್ಟು ಆಚೆ ಹೋಗುತ್ತಿಲ್ಲ. ‘ನಂದಿನಿ’ ಧಾರಾವಾಹಿ ಜತೆಗೆ ‘ಚಿನ್ನದ ಬೇಟೆ’ ಕಾರ್ಯಕ್ರಮ ಮಾಡುತ್ತಿದ್ದೆ. ಮಾಚ್‌ರ್‍ 8ವರೆಗೂ ಬ್ಯಾಕಿಂಗ್‌ ಇತ್ತು. ಈಗ ಮರು ಪ್ರಸಾರ ಆಗುತ್ತಿದೆ. ಅಪ್ಪ-ಅಮ್ಮನ ಜತೆ ಕಾಲ ಕಳೆಯುವುದು, ಮೂರು ಗಂಟೆ ವ್ಯಾಯಾಮ ಮಾಡುವುದು, ಸಿನಿಮಾ ಹಾಗೂ ಧಾರಾವಾಹಿಗಳನ್ನು ನೋಡುವುದು..

Lockdown ಆದ ಆರ್ಯವರ್ಧನ್‌ ಮನೆಯಲ್ಲಿ ಏನ್‌ ಮಾಡುತ್ತಿದ್ದಾರೆ ನೋಡಿ

ಇದು ನನ್ನ ದಿನಚರಿ. ಇದೆಲ್ಲಕ್ಕಿಂತ ಮುಖ್ಯವಾಗಿ ಈ ಸಮಯದಲ್ಲಿ ನಾವು ಕಷ್ಟದಲ್ಲಿ ಇರುವವರಿಗೆ ನೆರವಾಗುವ ಕೆಲಸ ಮಾಡಬೇಕಿದೆ. ನಾನು ಯಾವ ಏರಿಯಾದಲ್ಲಿ ಯಾರು ಆಹಾರ ವಿತರಣೆ ಮಾಡುತ್ತಿದ್ದಾರೋ ಅವರ ವಿಳಾಸಗಳು, ಸಂಪರ್ಕಗಳನ್ನು ಪಡೆದು ಅಗತ್ಯ ಇರುವವರಿಗೆ ಕೊಡುತ್ತಿದ್ದೇನೆ. ಈ ಮೂಲಕ ನಿತ್ಯ ಜೀವನಕ್ಕೆ ಬೇಕಾದ ಅಗತ್ಯಗಳನ್ನು ಪಡೆದುಕೊಳ್ಳಲು ಸಹಾಯ ಮಾಡುತ್ತಿದ್ದೇನೆ. ಅಂದರೆ ಈಗ ಜಯನಗರದಲ್ಲಿ ಯಾರೋ ಕಟ್ಟಡ ಕಟ್ಟೋ ಕಾರ್ಮಿಕರು ಇದ್ದಾರೆ. ಅವರಿಗೆ ಊಟದ ಅಗತ್ಯ ಇದೆ ಎಂದು ಗೊತ್ತಾದರೆ ಅವರ ಬಗ್ಗೆ ದಾನಿಗಳಿಗೆ ಹಾಗೂ ಸ್ವಯಂ ಸೇವಕರಿಗೆ ಮಾಹಿತಿ ಕೊಡುವುದು. ಇದನ್ನ ಪ್ರತಿ ದಿನ ಮಾಡುತ್ತಿದ್ದೇನೆ. ಸೋಷಿಯಲ್‌ ಮೀಡಿಯಾಗಳನ್ನು ಬಳಸಿಕೊಂಡು ಈ ಕೆಲಸ ಮಾಡುತ್ತಿದ್ದೇನೆ. ಇದು ನನಗೆ ಅತಿ ಹೆಚ್ಚು ಖುಷಿ ಮತ್ತು ತೃಪ್ತಿ ಕೊಡುತ್ತಿರುವ ಕೆಲಸ ಇದು.

ಟಾಸ್ಕ್ ಕೊಟ್ಟ ಮೇಘಾ ಶೆಟ್ಟಿ, ಯಾರ ಮೇಲೆ ಅನುಗೆ ಇಂಥಾ ದೊಡ್ಡ ನಂಬಿಕೆ!

ಇದೆಲ್ಲದರ ಜತೆಗೆ ಈ ಲಾಕ್‌ ಡೌನ್‌ ಒಂದು ರೀತಿಯಲ್ಲಿ ನಮ್ಮ ಜತೆಗೆ ನಾವು ಜೀವನ ಮಾಡುವುದನ್ನು ಕಲಿಸಿಕೊಡುತ್ತಿದೆ. ಓದು, ಸಿನಿಮಾ, ಸಹಾಯ, ಅಡುಗೆ... ಇದೆಲ್ಲವೂ ನಮ್ಮನ್ನ ನಾವೇ ಅರ್ಥ ಮಾಡಿಕೊಳ್ಳುವುದಕ್ಕೆ ಸಹಕಾರಿ ಆಗುತ್ತದೆ. ಅದು ಲಾಕ್‌ ಡೌನ್‌ನಿಂದ ಸಿಕ್ಕಿರುವ ಅವಕಾಶ. ಇದನ್ನು ನಾನು ಸೂಕ್ತವಾಗಿ ಬಳಸಿಕೊಳ್ಳುತ್ತಿರುವೆ.

Follow Us:
Download App:
  • android
  • ios