ಇದು ಆಕಸ್ಮಿಕ ಮತ್ತು ಅನಿವಾರ್ಯವಾಗಿ ಎದುರಾಗಿರುವ ಲಾಕ್‌ ಡೌನ್‌ ಬಂಧನ. ಇದನ್ನ ನಾನು ವಿರಾಮ ಎಂದುಕೊಳ್ಳುವೆ. ಕಿರುತೆರೆಗೆ ಮರಳಿ ಬಂದು ‘ಜೊತೆ ಜೊತೆಯಲಿ’ ಎಂದು ಒಂಚೂರು ಬಿಡುವಿಲ್ಲದೆ ಕೆಲಸ ಮಾಡುತ್ತಿದ್ದೆ. ಮನೆಯವರ ಜತೆಗೆ ಇರಲಿಕ್ಕೆ ಆಗರುತ್ತಿರಲಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮನೆಯಲ್ಲೇ ಕೂತು ಮಾಡಿಕೊಳ್ಳಬೇಕಾದ ಕೆಲಸಗಳನ್ನು ದಿನಾ ಮುಂದೂಡುತ್ತಿದ್ವಿ.

ಅನು ಬದುಕೇ ಬದಲಿಸಿದ 'ಜೊತೆ ಜೊತೆಯಲಿ';ಹೇಗಿದ್ದ ಲೈಫ್ ಹೇಗಾಯ್ತು ನೋಡಿ!

ಈ ಲಾಕ್‌ ಡೌನ್‌ ಈಗ ಆ ಎಲ್ಲ ಕೆಲಸಗಳನ್ನು ನೆನಪಿಸಿದೆ. ಹಿರಿಯ ನಟಿ ಭಾರತಿ ವಿಷ್ಣುವರ್ಧನ್‌ ಅವರ ಜೀವನ ಪುಟಗಳನ್ನು ತೆರೆದಿಡುವ ಸಾಕ್ಷ್ಯ ಚಿತ್ರ ಮಾಡುತ್ತಿರುವುದು ನಿಮಗೆ ಗೊತ್ತೇ ಇದೆ. ಈಗ ಅದಕ್ಕೆ ಸಬ್‌ಟೈಟಲ್‌ ಬರೆಯುವ ಕೆಲಸದಲ್ಲಿ ಬ್ಯುಸಿ ಆಗಿದ್ದೇನೆ. ಜತೆಗೆ ನಿಯಮಿತವಾಗಿ ಆಂಗ್ಲ ಪತ್ರಿಕೆಗೆ ಲೇಖನಗಳನ್ನು ಬರೆಯುತ್ತಿದ್ದೇನೆ. ಇದರ ನಡುವೆ ಸಿನಿಮಾ ನೋಡುವುದು. ಅಲ್ಲದೆ ಯಾರೂ ಈಗ ಮನೆಗೆ ಕೆಲಸಗಾರರು ಬರುತ್ತಿಲ್ಲ. ನಾವೇ ಅವರನ್ನು ಮನೆಗೆ ಕಳುಹಿಸಿದ್ದೇವೆ. ಈಗ ಅವರ ಕೆಲಸಗಳನ್ನು ನನ್ನ ಪತ್ನಿ ಕೀರ್ತಿ ಹಾಗೂ ತಾಯಿ ಭಾರತಿ ವಿಷ್ಣುವರ್ಧನ್‌ ಅವರೇ ಮಾಡಬೇಕಿದೆ.

ಕೌಟುಂಬಿಕ ಸಂಭ್ರಮಗಳ ಜೊತೆ ಜೊತೆಯಲಿ..!

ಮನೆ ಕೆಲಸಗಳಿಗೆ ನಾನು ಜತೆಯಾಗಿದ್ದೇನೆ. ಎಲ್ಲಕ್ಕಿಂತ ಮುಖ್ಯವಾಗಿ ನಾನು ನಟಿಸಿದ ಧಾರಾವಾಹಿಯನ್ನು ನಾನೇ ನೋಡುವ ಅವಕಾಶ ಸಿಕ್ಕಿದೆ. ಯಾಕೆಂದರೆ ನಿರಂತವಾಗಿ ನಡೆಯುತ್ತಿದ್ದ ಶೂಟಿಂಗ್‌ ಬ್ಯುಸಿಯಲ್ಲಿ ನಮ್ಮ ಧಾರಾವಾಹಿಯನ್ನು ನಾವೇ ನೋಡಲು ಆಗುತ್ತಿರಲಿಲ್ಲ. ಈಗ ಆ ಅವಕಾಶ ಸಿಕ್ಕಿದೆ. ಜತೆಗೆ ಸೋಮವಾರದಿಂದ ಜೊತೆ ಜೊತೆಯಲಿ ಧಾರಾವಾಹಿ ಹಳೆಯ ಕಂತುಗಳು ಮರು ಪ್ರಸಾರ ಆಗುತ್ತಿದೆ. ಅದನ್ನು ನೋಡುತ್ತೇನೆ. ಬಹುಶಃ ಈ ಲಾಕ್‌ ಡೌನ್‌ ನಿಮ್ಮನ್ನು ನೀವು ನೋಡಿಕೊಳ್ಳಿ ಎನ್ನುವಂತಿದೆ.