ಬಿಗ್ ಬಾಸ್ ಕನ್ನಡ ಸೀಸನ್ 6ರ ಬಳಿಕ ಸುದೀಪ್‌ಗೆ ಏನಾಗಿತ್ತು? ಕಿಚ್ಚ ಬಿಚ್ಚಿಟ್ರು ಸೀಕ್ರೆಟ್!

ನಟ ಸುದೀಪ್ ಈ ಬಗ್ಗೆ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಉತ್ತರ.. ಹೌದು ನನಗೆ 6ನೇ ಸೀಸನ್ ಮುಗಿದಾಗ ನನ್ನಷ್ಟಕ್ಕೇ ನನಗೆ ಇದು ಸಾಕು ಎನ್ನಿಸಿತ್ತು.. ನಾನು ಇದನ್ನ ಓಪನ್‌ ಆಗಿಯೇ ಹೇಳ್ತಾ ಇದೀನಿ, ಇದ್ರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನನಗೆ ಆ ಸೀಸನ್ ಕಂಟೆಸ್ಟಂಟ್ ಮೇಲೆ..

Kannada actor Kichcha Sudeep talks about bigg boss kannada season 6 srb

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದಿಪ್ (Kichcha Sudeep) ಅವರು ಸಂದರ್ಶನದಲ್ಲಿ ಒಂದು ಪ್ರಶ್ನೆಯನ್ನು ಎದುರಿಸಿದ್ದಾರೆ. 'ನೀವು ಬಿಗ್ ಬಾಸ್‌ನ ಹತ್ತು ಸೀಸನ್ ನಡೆಸಿಕೊಟ್ಟು ಭಾರತದಲ್ಲಿ ಒಂದು ರೆಕಾರ್ಡ್ ಕ್ರಿಯೇಟ್ ಮಾಡಿದ್ದೀರಿ. ಆದ್ರೆ ಯಾವತ್ತಾದ್ರೂ ಇದು ಯಾಕೆ ಬೇಕು ಗುರೂ ಅಂತ ಅನ್ನಿಸಿದ್ದಿದ್ಯಾ'? ಎಂದು ಕಿಚ್ಚ ಸುದೀಪ್ ಅವರಿಗೆ ಪ್ರಶ್ನೆ ಕೇಳಲಾಗಿದೆ. ಅದಕ್ಕೆ ಸುದೀಪ್ ಅವರು 'ಹೌದು' ಎಂದು ಉತ್ತರಿಸಿ ಅದಕ್ಕೆ ಸಂಬಂಧಿಸಿದ ವಿವರಣೆ ನೀಡಿದ್ದಾರೆ ಕಿಚ್ಚ ಸುದೀಪ್.

ಹಾಗಿದ್ದರೆ ನಟ ಸುದೀಪ್ ಈ ಬಗ್ಗೆ ಅದೇನು ಹೇಳಿದ್ದಾರೆ? ಇಲ್ಲಿದೆ ನೋಡಿ ಉತ್ತರ.. ಹೌದು ನನಗೆ 6ನೇ ಸೀಸನ್ ಮುಗಿದಾಗ ನನ್ನಷ್ಟಕ್ಕೇ ನನಗೆ ಇದು ಸಾಕು ಎನ್ನಿಸಿತ್ತು.. ನಾನು ಇದನ್ನ ಓಪನ್‌ ಆಗಿಯೇ ಹೇಳ್ತಾ ಇದೀನಿ, ಇದ್ರಲ್ಲಿ ಯಾವ ಮುಚ್ಚುಮರೆಯೂ ಇಲ್ಲ. ನನಗೆ ಆ ಸೀಸನ್ ಕಂಟೆಸ್ಟಂಟ್ ಮೇಲೆ ಒಂದು ಒಪಿನಿಯನ್ ಕ್ರಿಯೇಟ್ ಆಗಿದೆ, ಅವ್ರ ಮೇಲೆ ಒಂದು ಬ್ಯಾಡ್ ಒಪಿನಿಯನ್ ಇದೆ ಅಂತಲ್ಲ.. ಆದ್ರೆ, ಯಾವುದೋ ಕಾರಣಕ್ಕೆ ನನಗೆ 
ಆ ಸಿಸನ್ ತುಂಬಾ ಸ್ಟ್ರೆಸ್ ಮಾಡ್ತು.. ನನಗೆ ತುಂಬಾ ತಲೆನೋವು ತಂತು.. 

ಅಗಲಿದ ಅಮ್ಮನ ನೆನಪು ಕಾಡುತ್ತೆ, ಬೆಳಿಗ್ಗೆ ಬೇಗ ಎಚ್ಚರವಾಗುತ್ತೆ: ಕಿಚ್ಚ ಸುದೀಪ್

ಬೇರೆ ಯಾವುದೇ ಸೀಸನ್‌ನಲ್ಲಿ ನಾನು ಬಿಗ್ ಬಾಸ್ ಶೂಟಿಂಗ್‌ ಸೆಟ್‌ಗೆ ತುಂಬಾ ಖುಷಿಖುಷಿಯಿಂದ ಓಡ್ತಾ ಇದ್ದೆ.. ನಾನು ಹೈದ್ರಾಬಾದ್‌ನಲ್ಲಿ ಇರ್ಲಿ, ಮುಂಬೈನಲ್ಲಿ ಇರ್ಲಿ, ಬಿಗ್ ಬಾಸ್ ಶೂಟಿಂಗ್ ಅಂದ್ರೆ ಖುಷಿಯಿಂದ ಓಡಿ ಬರ್ತಾ ಇದ್ದೆ.. ಆದ್ರೆ ಯಾವಾಗ 6ನೇ ಸೀಸನ್ ಆಯ್ತೋ, ಅಗ ನನಗೆ ಇದು ಸಾಕು ಅನ್ನಿಸಿಬಿಡ್ತು.. ಆ ಸೀಸನ್ ನನ್ನನ್ನ ತುಂಬಾ ಡ್ರೇನ್ ಮಾಡ್ತು.. ಆ ಸೀಸನ್‌ನಲ್ಲಿ ಅದೇನಾಯ್ತು ಅಂತ ನನಗೇ ಗೊತ್ತಿಲ್ಲ, ಆದ್ರೆ ಸಾಕು ಅನ್ನಿಸಿದ್ದಂತೂ ನಿಜ' ಎಂದಿದ್ದಾರೆ ನಟ ಕಿಚ್ಚ ಸುದೀಪ್. 

ಸದ್ಯ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ, ಅಂದರೆ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಿರುವ ಮ್ಯಾಕ್ಸ್ ಸಿನಿಮಾ ಭಾರಿ ಜನಮೆಚ್ಚುಗೆ ಪಡೆದಿದೆ. ಕನ್ನಡ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಮ್ಯಾಕ್ಸ್ ಸಿನಿಮಾ ಬಿಡುಗಡೆ ಕಂಡಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ ಮ್ಯಾಕ್ಸ್ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ನಿರೀಕ್ಷೆ ಮೀರಿ ಗಳಿಕೆ ಮಾಡಿದೆ. ಈ ಬಗ್ಗೆ ಮಾಕ್ಸ್ ಸಿನಿಮಾವನ್ನು ಹಂಚಿಕೆ ಮಾಡಿರುವ ಕಾರ್ತಿಕ್ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಒಂದೇ ಸಿನಿಮಾದಲ್ಲಿ ದರ್ಶನ್-ಸುದೀಪ್, ಡೈರೆಕ್ಟರ್‌ & ಪ್ರೊಡ್ಯೂಸರ್ ಫಿಕ್ಸ್ ಆಯ್ತು...!?

ಮ್ಯಾಕ್ಸ್ ಡಿಸ್ಟ್ರಿಬ್ಯೂಟರ್ ಕಾರ್ತಿಕ್ ಗೌಡ ಅವರು ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಮ್ಯಾಕ್ಸ್ ಸಿನಿಮಾ 2024ರಲ್ಲಿ ಕನ್ನಡ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದೆ ಎಂದಿದ್ದಾರೆ. ಈ ಮೂಲಕ ಮ್ಯಾಕ್ಸ್ ಸಿನಿಮಾ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರಿದೆ ಎನ್ನಬಹುದು. ಒಟ್ಟಾರೆಯಾಗಿ ಹೇಳಬೇಕು ಎಂದರೆ, ಈ ಹಿಂದೆ ಬಂದಿದ್ದ ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಹಾಗೂ 'ಪೈಲ್ವಾನ್' ಸಿನಿಮಾಗಳು ಸಿನಿಪ್ರಿಯರ ನಿರೀಕ್ಷೆ ರೀಚ್ ಆಗಿರಲಿಲ್ಲ. ಆದರೆ ಮ್ಯಾಕ್ಸ್ ನಿರೀಕ್ಷೆ ನಿಜವಾಗಿಹಿಸಿದೆ.

Latest Videos
Follow Us:
Download App:
  • android
  • ios