ತಾಯಿ ಕಳೆದುಕೊಂಡ ನೋವು ಕಿಚ್ಚ ಸುದೀಪ್‌ರನ್ನು ಇನ್ನೂ ಕಾಡುತ್ತಿದೆ. ಪ್ರತಿದಿನ ಬೆಳಿಗ್ಗೆ 5:30ಕ್ಕೆ ಅಮ್ಮನ ನೆನಪು ಕಣ್ಣೆದುರು ಬರುತ್ತದೆ ಎಂದು ಭಾವುಕರಾಗಿ ಹೇಳಿಕೊಂಡಿದ್ದಾರೆ. ಇದರ ಮಧ್ಯೆ, ಅವರ 'ಮ್ಯಾಕ್ಸ್' ಚಿತ್ರ 2024ರಲ್ಲಿ ಅತಿ ಹೆಚ್ಚು ಗಳಿಕೆ ಕಂಡ ಕನ್ನಡ ಚಿತ್ರವಾಗಿದೆ.

ಸ್ಯಾಂಡಲ್‌ವುಡ್ ಸ್ಟಾರ್ ನಟ ಕಿಚ್ಚ ಸುದಿಪ್ (Kichcha Sudeep) ಅವರು ಅಮ್ಮನನ್ನು ಅದೆಷ್ಟು ಪ್ರೀತಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಅಮ್ಮ ಅಂತಲ್ಲ, ಅವರು ಅಪ್ಪನೂ ಸೇರಿದಂತೆ ತಮ್ಮ ಪೋಷಕರನ್ನು ತುಂಬಾನೇ ಪ್ರೀತಿಸುತ್ತಾರೆ. ಈ ವಿಷಯ ಬಹಳಷ್ಟು ಜನರಿಗೆ ಗೊತ್ತು. ಅದರಲ್ಲೂ ಇತ್ತೀಚೆಗೆ ಸುದೀಪ್ ತಮ್ಮ ಅಮ್ಮನನ್ನು ಕಳೆದುಕೊಂಡಿದ್ದಾರೆ. ಆ ನೋವು ಅವರನ್ನು ಈಗಲೂ ಬಾಧಿಸುತ್ತಲೇ ಇದೆಯಂತೆ. ಅದನ್ನು ಅವರು ಅವಕಾಶ ಸಿಕ್ಕಾಗಲೆಲ್ಲಾ ಹೇಳುತ್ತಾರೆ. ಅಮ್ಮನ ಕಳೆದುಕೊಂಡ ಆ ಕ್ಷಣವನ್ನು ಮರೆಯಲಿಕ್ಕೇ ಆಗುತ್ತಿಲ್ಲ ಎಂದಿದ್ದಾರೆ ನಟ ಕಿಚ್ಚ ಸುದೀಪ್.

'ಇವತ್ತಿಗೂ ಕೂಡ 5 ರಿಂದ 5.30 ಆದ್ರೆ ನಂಗೆ ಕಣ್ಣುಓಪನ್ ಆಗುತ್ತೆ.. ಆವತ್ತಿಂದ ಇವತ್ತಿನವರೆಗೂ ನನಗೆ ಮಲಗೋಕೆ ಆಗ್ತಾ ಇಲ್ಲ... 5.30 ಆದ್ರೆ ಸಾಕು, ಕಣ್ಣು ಓಪನ್ ಆಗುತ್ತೆ.. ಎಷ್ಟು ಹೊತ್ತಿಗೆ ಮಲಗಿದ್ರೂ ನಂಗೆ 5.30ಕ್ಕೆ ಎಚ್ಚರ ಆಗ್ಬಿಡುತ್ತೆ.. ಅದು ನನ್ನ ಮೈಂಡ್‌ನಿಂದ ಹೋಗೇ ಇಲ್ಲ.. ನನ್ ಕಣ್ಣುಮುಂದೆ ನಡೆದಿದ್ದು ಅದು.. ನೆನಪು ಬಂದಾಗ ಒಂಥರಾ, ಸಿನಿಮಾ ಥರ.. ಸಿನಿಮಾದಲ್ಲಿ ನೋಡಿದ್ವಿ, ಕೇಳಿದ್ವಿ.. ಆದ್ರೆ ನಮ್ಮ ಜೀವನದ ಮೊದಲನೇ ಅನುಭವ ಅಲ್ವಾ? ಅದಕ್ಕೇ ಅದನ್ನ ನಾನು ಯಾವತ್ತಿಗೂ ಮರೆಯೋಕೆ ಆಗಲ್ಲ..' ಎಂದಿದ್ದಾರೆ ಕಿಚ್ಚ ಸುದೀಪ್.

ಕನ್ನಡದ ಈ ಐದು ನಕ್ಷತ್ರಗಳು ಯಾರು? AI ಕೊಟ್ಟಿರುವ ಫೋಟೋ ನೋಡಿ ಹೇಳುವಿರಾ? 

ಸದ್ಯ ಸುದೀಪ್ ನಟನೆಯ ಮ್ಯಾಕ್ಸ್ ಚಿತ್ರವು ಯಶಸ್ವೀ ಪ್ರದರ್ಶನ ಕಾಣುತ್ತಿದೆ. ಕಳೆದ ವರ್ಷದ ಕೊನೆಯಲ್ಲಿ, ಅಂದರೆ ಡಿಸೆಂಬರ್ 25ಕ್ಕೆ ಬಿಡುಗಡೆ ಆಗಿರುವ ಮ್ಯಾಕ್ಸ್ ಸಿನಿಮಾ ಭಾರಿ ಜನಮೆಚ್ಚುಗೆ ಪಡೆದಿದೆ. ಕನ್ನಡ, ತಮಿಳು ಹಾಗು ತೆಲುಗು ಭಾಷೆಗಳಲ್ಲಿ ಮ್ಯಾಕ್ಸ್ ಸಿನಿಮಾ ಬಿಡುಗಡೆ ಕಂಡಿದೆ. ಕನ್ನಡದಲ್ಲಿ ಸೂಪರ್ ಹಿಟ್ ಆಗಿರುವ ಮ್ಯಾಕ್ಸ್ ಬಿಡುಗಡೆಯಾದ ಹತ್ತೇ ದಿನಗಳಲ್ಲಿ ನಿರೀಕ್ಷೆ ಮೀರಿ ಗಳಿಕೆ ಮಾಡಿದೆ. ಈ ಬಗ್ಗೆ ಮಾಕ್ಸ್ ಸಿನಿಮಾವನ್ನು ಹಂಚಿಕೆ ಮಾಡಿರುವ ಕಾರ್ತಿಕ್ ಗೌಡ ಅವರು ಮಾಹಿತಿ ಹಂಚಿಕೊಂಡಿದ್ದಾರೆ. 

ಮ್ಯಾಕ್ಸ್ ಡಿಸ್ಟ್ರಿಬ್ಯೂಟರ್ ಕಾರ್ತಿಕ್ ಗೌಡ ಅವರು ಮ್ಯಾಕ್ಸ್ ಸಿನಿಮಾ ಬಾಕ್ಸ್ ಆಫೀಸ್ ಗಳಿಕೆ ಬಗ್ಗೆ ಅಂಕಿಅಂಶಗಳನ್ನು ಬಿಡುಗಡೆ ಮಾಡಿಲ್ಲ. ಆದರೆ ಮ್ಯಾಕ್ಸ್ ಸಿನಿಮಾ 2024ರಲ್ಲಿ ಕನ್ನಡ ಸಿನಿಮಾಗಳಲ್ಲಿಯೇ ಅತಿ ಹೆಚ್ಚು ಗಳಿಕೆ ಮಾಡಿದೆ ಎಂದಿದ್ದಾರೆ. ಈ ಮೂಲಕ ಮ್ಯಾಕ್ಸ್ ಸಿನಿಮಾ ಸೂಪರ್ ಹಿಟ್ ಸಿನಿಮಾ ಸಾಲಿಗೆ ಸೇರಿದೆ ಎನ್ನಬಹುದು. ಒಟ್ಟಾರೆಯಾಗಿ ಹೇಳಬೇಕು ಎಂದರೆ, ಈ ಹಿಂದೆ ಬಂದಿದ್ದ ನಟ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಹಾಗೂ 'ಪೈಲ್ವಾನ್' ಸಿನಿಮಾಗಳು ಸಿನಿಪ್ರಿಯರ ನಿರೀಕ್ಷೆ ರೀಚ್ ಆಗಿರಲಿಲ್ಲ. ಆದರೆ ಮ್ಯಾಕ್ಸ್ ನಿರೀಕ್ಷೆ ನಿಜವಾಗಿಹಿಸಿದೆ. 

ಒಂದೇ ಸಿನಿಮಾದಲ್ಲಿ ದರ್ಶನ್-ಸುದೀಪ್, ಡೈರೆಕ್ಟರ್‌ & ಪ್ರೊಡ್ಯೂಸರ್ ಫಿಕ್ಸ್ ಆಯ್ತು...!?