Jote Joteyali Serial Update: ರಾಜನಂದಿನಿ ಆರ್ಯವರ್ಧನ ಮೋಸಗಾರ ಅಂತ ತಿಳಿದಿದ್ದರೂ ಮೋಸಗಾರ ಆಗಿರಲಿಲ್ಲ. ರಾಜ ನಂದಿನಿ ಸಾವು ಆಕಸ್ಮಿಕವಾಗಿತ್ತು. ಆಕೆ ಬಂಡೆಯಲ್ಲಿ ಕಾಲು ಜಾರಿ ಬಿದ್ದಿದ್ದಳು ಅನ್ನೋದನ್ನು ಸೀರಿಯಲ್‌ ಮುಂದಿನ ಭಾಗದಲ್ಲಿ ತೋರಿಸಲಾಗುತ್ತದೆ. ಅಲ್ಲಿಗೆ ರಾಜನಂದಿನಿ ಅಧ್ಯಾಯಕ್ಕೆ ಮುಕ್ತಿ ಸಿಗುತ್ತದೆ.

ಜೀ ಕನ್ನಡದ ಸೀರಿಯಲ್ ಜೊತೆ ಜೊತೆಯಲಿ (Jothe Jotheyali) ಇದೀಗ ಪುನರ್ಜನ್ಮ, ಕೊಲೆಯ ಹಿನ್ನೆಲೆಯಲ್ಲಿ ರೋಚಕವಾಗಿ ತೆರೆದುಕೊಳ್ತಿದೆ. ರಾಜನಂದಿನಿ (Rajanandini) ಕೊಲೆ ರಹಸ್ಯ ಇದೀಗ ಅನು, ಜೋಗವ್ವನ ಮೂಲಕ ತೆರೆದುಕೊಳ್ತಿದೆ. ಈವರೆಗೆ ವಿಲನ್ ಅಂತಲೇ ಬಿಂಬಿತವಾಗಿದ್ದ ಆರ್ಯ (Aryavardhan) ವಿಲನ್ನೇ ಅಲ್ಲ ಅನ್ನೋ ರೀತಿ ಕತೆ ಇದೆ. ಹಾಗಿದ್ರೆ ಮುಂದೆ ಏನಾಗಬಹುದು? ರಾಜ ನಂದಿನಿ ದ್ರೋಹ ಅಂತ ಅಂದುಕೊಂಡಿದ್ದು ನಿಜಕ್ಕೂ ದ್ರೋಹ ಅಲ್ವಾ? ಮತ್ತೆ ಆಕೆಯ ಸಾವಿಗೆ ಏನು ಕಾರಣ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.

'ಜೊತೆ ಜೊತೆಯಲಿ' ಪ್ರೇಮದ ಕತೆಯೇ ಮುಖ್ಯವಾಗಿರೋ ಸೀರಿಯಲ್ ಅಂತ ಶುರು ಶುರುವಿಗೆ ಅನಿಸುತ್ತಿತ್ತು. ಆದರೆ ಒಂದು ಹಂತದ ನಂತರ ಇದರ ಕತೆ ಮರ್ಡರ್ ಮಿಸ್ಟ್ರಿಯಾಗಿ(murder mystery) ಬದಲಾಯ್ತು. ಇದೀಗ ಆ ಮಿಸ್ಟರಿ ರಿವೀಲ್ ಆಗೋ ಸಮಯ ಬಂದಿದೆ.

'ಜೊತೆ ಜೊತೆಯಲಿ' ಸೀರಿಯಲ್‌ ಮೂಲಕ ಸ್ಯಾಂಡಲ್‌ವುಡ್‌ ನಟ ಅನಿರುದ್ಧ (Anirudha Jathkar)ಕಿರುತೆರೆಗೆ ಬಂದರು. ಈ ಸೀರಿಯಲ್‌ ಅವರಿಗೆ ಮತ್ತೆ ಬ್ರೇಕ್ ನೀಡಿತು. ಈ ಸೀರಿಯಲ್‌ನಲ್ಲಿ ಅವರು ಹಲವು ಶೇಡ್‌ಗಳಲ್ಲಿ ನಟಿಸಿರೋದು ವಿಶೇಷ. ಇದರಲ್ಲಿ ಅನಿರುದ್ಧ ಅವರು ಆರ್ಯ ವರ್ಧನ್ ಎಂಬ ಮಧ್ಯವಯಸ್ಕ ಸಾಲ್ಟ್ ಪೆಪ್ಪರ್ ಹೀರೋ ಆಗಿ ಎಷ್ಟು ಫೇಮಸ್ ಆಗ್ತಾರೆ ಅಂದರೆ ಇವರ ಹೇರ್‌ಸ್ಟೈಲ್‌ಅನ್ನು ಬಹಳ ಮಂದಿ ಫಾಲೋ ಮಾಡಲಿಕ್ಕೆ ಶುರು ಮಾಡುತ್ತಾರೆ. ದೊಡ್ಡ ಕಂಪನಿಯ ಓನರ್‌ ಆಗಿ, ಅನು ಸಿರಿಮನೆ (Anu sirimane) ಅನ್ನೋ 20ರ ಹರೆಯದ ಹುಡುಗಿಯನ್ನು ಪ್ರೀತಿಸುವ ಈ ಪಾತ್ರವನ್ನು ಜನ ಬಹಳ ಇಷ್ಟಪಟ್ಟರು. ಈ ರೊಮ್ಯಾಂಟಿಕ್ ಕಾಮಿಡಿಯಿಂದ ಟಿಆರ್‌ಪಿಯೂ (TRP)ಹೆಚ್ಚಾಯ್ತು. ಆದರೆ ಎಷ್ಟು ಸಮಯ ಬರೀ ಪ್ರೀತಿಯನ್ನು ತೋರಿಸಲಿಕ್ಕಾಗುತ್ತೆ. ಒಂದು ಹಂತ ದಾಟಿದ ಮೇಲೆ ಅನೂಗೂ ಆರ್ಯನಿಗೂ ಮದುವೆ ಆಯ್ತು. ಇನ್ನೇನು ಅದೇ ಗಂಡ ಹೆಂಡತಿ ಜಗಳ, ಮನೆ ರಾಮಾಯಣ ಶುರುವಾಗುತ್ತೆ ಅಂದ್ಕೊಂಡ ವೀಕ್ಷಕರಿಗೆ ಮತ್ತೊಂದು ಸರ್ಪೈಸ್‌ ಕಾದಿತ್ತು. ಅನು ಆರ್ಯವರ್ಧನನ ಮೊದಲನೇ ಹೆಂಡತಿ ರಾಜ ನಂದಿನಿಯ ಕೊಲೆ ರಹಸ್ಯ ಬೇಧಿಸುವಂತೆ, ಅವಳ ಕೊಲೆಯ ಬಗೆಗಿನ ಹುಡುಕಾಟ ಶುರುವಾಯ್ತು. ಇದನ್ನು ಇನ್ನಷ್ಟು ರೋಚಕವಾಗಿಸಲು ಕನಸು, ದೇವಿಯ ಪಾತ್ರಗಳೆಲ್ಲ ಬಂದವು. ಇವೆಲ್ಲಕ್ಕಿಂತ ಮುಖ್ಯವಾಗಿ ಹೀರೋ ಆಗಿ ಮೆರೆದ ಆರ್ಯವರ್ಧನ ಏಕಾಏಕಿ ವಿಲನ್ ಆಗಿ ಬದಲಾಗಿಬಿಟ್ಟದ್ದು ಕನ್ನಡ ಸೀರಿಯಲ್‌ ಇತಿಹಾಸದಲ್ಲೇ ಒಂದು ಹೊಸ ಹೆಜ್ಜೆ.

Doresani serial : ಮುತ್ತು ಕೊಡೋ ಹುಡುಗ ಬಂದ್ರೂ ತುತ್ತು ಕೊಟ್ಟ ಅಪ್ಪನ್ನ ಮರೆಯಲ್ವಂತೆ ದೀಪಿಕಾ, ಮತ್ತೆ ಮದ್ವೆ ಕತೆ?

ಶುರುವಲ್ಲಿ ಈ ಜೋಡಿಯನ್ನು ಇಷ್ಟಪಡುವ ಸಾವಿರಾರು ಜನ ಈ ಟರ್ನ್ ಅನ್ನು ತೀವ್ರವಾಗಿ ವಿರೋಧಿಸಿದ್ರು. ಹೀಗೆಲ್ಲ ನಮ್ಮ ಭಾವನೆಗೆ ಹರ್ಟ್ ಮಾಡಿದ್ರೆ ಸೀರಿಯಲ್ ಬಹಿಷ್ಕರಿಸ್ತೀವಿ ಅಂತೆಲ್ಲ ಸೋಷಿಯಲ್ ಮೀಡಿಯಾದಲ್ಲಿ (Social media)ದೊಡ್ಡ ಗಲಾಟೆ ಶುರುವಾಯ್ತು. ಇದಕ್ಕೆ ಆರ್ಯವರ್ಧನ್ ಪಾತ್ರ ಮಾಡುವ ಅನಿರುದ್ಧ ಅವರೇ ಸ್ಪಷ್ಟನೆ ಕೊಡಬೇಕಾಯ್ತು. ಸೀರಿಯಲ್‌ ಟೀಮ್ ಗೆ ಮುಂದಿನ ಕತೆ ಸ್ಪಷ್ಟವಿತ್ತು. ಅವರು ಆರ್ಯನನ್ನು ಹೀರೋ ಆಗಿ ಒಪ್ಪಿದ ಜನರೇ, ಆತನನ್ನು ವಿಲನ್‌ ಆಗಿಯೂ ಒಪ್ಪುವ ಹಾಗೆ ಮಾಡಿದ್ರು. ಸದ್ಯಕ್ಕೀಗ ವಿಲನ್ ಆಗಿ ಬದಲಾದ ಆರ್ಯವರ್ಧನ್ ನಿಜಕ್ಕೂ ವಿಲನ್ ಅಲ್ಲ, ಆತ ಹೀರೋನೇ ಅನ್ನೋದು ರಿವೀಲ್ ಆಗ್ತಿದೆ. ಆರ್ಯವರ್ಧನ್ ವಿಲನ್‌ಆಗಿ ಆಸ್ತಿ ಹೊಡೆಯಲಿಕ್ಕೆ ರಾಜ ನಂದಿನಿಯನ್ನು ಕೊಲೆ ಮಾಡಿದ ಅಂತಲೇ ಉಸಿರು ಬಿಗಿ ಹಿಡಿದು ಎಪಿಸೋಡ್ ನೋಡುತ್ತಿದ್ದ ಜನ ಇದೀಗ ಆರ್ಯವರ್ಧನ ಹೀರೋ ನೆ ಅಂತ ಗೊತ್ತಾದಾಗ ಸಂಭ್ರಮಿಸೋದಕ್ಕೆ ಶುರು ಮಾಡಿದ್ದಾರೆ.

Jothe Jotheyali serial: ಜೊತೆ ಜೊತೆಯಲಿ ರೋಚಕ ಕತೆ, ರಾಜನಂದಿನಿಯೇ ಅನು ರೂಪದಲ್ಲಿ ಬರ್ತಿದ್ದಾಳಾ?

ರಾಜನಂದಿನಿ ಆರ್ಯವರ್ಧನ ಮೋಸಗಾರ ಅಂತ ತಿಳಿದಿದ್ದರೂ ಮೋಸಗಾರ ಆಗಿರಲಿಲ್ಲ. ರಾಜ ನಂದಿನಿ ಸಾವು ಆಕಸ್ಮಿಕವಾಗಿತ್ತು. ಆಕೆ ಬಂಡೆಯಲ್ಲಿ ಕಾಲು ಜಾರಿ ಬಿದ್ದಿದ್ದಳು ಅನ್ನೋದನ್ನು ಸೀರಿಯಲ್‌ ಮುಂದಿನ ಭಾಗದಲ್ಲಿ ತೋರಿಸಲಾಗುತ್ತದೆ. ಅಲ್ಲಿಗೆ ರಾಜನಂದಿನಿ ಅಧ್ಯಾಯಕ್ಕೆ ಮುಕ್ತಿ ಸಿಗುತ್ತದೆ. ಮುಂದೆ ಅನು ಆರ್ಯ ಚೆನ್ನಾಗಿರುತ್ತಾರಾ? ಯಲ್ಲಮ್ಮ ತಾಯಿ ದಯದಿಂದ ಅವರ ಬದುಕು ಸುಗಮವಾಗುತ್ತಾ? ಅಥವಾ ಮತ್ತೆ ರೋಚಕ ಟ್ವಿಸ್ಟ್ ಸಿಗುತ್ತಾ ಅನ್ನೋದನ್ನು ಇನ್ನಷ್ಟೇ ನೋಡಬೇಕಿದೆ.

Divyaspandana ರಮ್ಯಾ ಮತ್ತೆ ಸಿನಿಮಾಗೆ ಬಂದಾಯ್ತಂತೆ, ನಿಜನಾ?