Jothe Jotheyali serial: ಜೊತೆ ಜೊತೆಯಲಿ ರೋಚಕ ಕತೆ, ರಾಜನಂದಿನಿಯೇ ಅನು ರೂಪದಲ್ಲಿ ಬರ್ತಿದ್ದಾಳಾ?
Kannada Serial News: ಜೊತೆ ಜೊತೆಯಲಿ ಸೀರಿಯಲ್ ಸಾಕಷ್ಟು ಇಂಟರೆಸ್ಟಿಂಗ್ ಘಟ್ಟಗಳನ್ನು ದಾಟಿದ ಬಳಿಕ ಇದೀಗ ರೋಚಕ ದೃಶ್ಯಗಳ ಮೂಲಕ ಗಮನ ಸೆಳೆಯುತ್ತಿದೆ. ಯಲ್ಲವ್ವನ ದಯದಿಂದ ಅನುಗೆ ರಾಜನಂದಿನಿ ವಿಷಯ ಗೊತ್ತಾಗಿದೆ. ರಾಜ ನಂದಿನಿಯೇ ಅನು ರೂಪ ತಾಳಿದ್ದಾಳೆ ಅನ್ನೋ ಸಂಗತಿ ಇದೀಗ ರಿವೀಲ್ ಆಗುತ್ತಿದೆ.
'ಜೊತೆ ಜೊತೆಯಲಿ' ಸೀರಿಯಲ್ (Jothe jotheyali serial) ಆರಂಭದಿಂದಲೂ ಗಮನಸೆಳೆದದ್ದು ವಿಭಿನ್ನ ಕತೆಯ ಮೂಲಕ. ಮಧ್ಯ ವಯಸ್ಸಿನ ವ್ಯಕ್ತಿ ತನ್ನ ಅರ್ಧಕ್ಕಿಂತ ಕಡಿಮೆ ವಯಸ್ಸಿನ ಹುಡುಗಿಯ ಜೊತೆಗೆ ಪ್ರೀತಿಯಲ್ಲಿ ಬೀಳೋ ಕಥೆ ಶುರುವಲ್ಲಿತ್ತು. ಮುಂದೆ ಇದರಲ್ಲಿ ಹೀರೋನೇ ವಿಲನ್ ಆಗಿ ಮತ್ತೊಂದು ರೋಚಕ ತಿರುವಿಗೆ ಸೀರಿಯಲ್ ಸಾಕ್ಷಿಯಾಯ್ತು. ಈಗ ಇನ್ನೊಂದು ರೂಪ ತಾಳುತ್ತಿದೆ. ಈ ಮೂಲಕ ಆರ್ಯವರ್ಧನ್ ಮೊದಲ ಹೆಂಡತಿ ರಾಜನಂದಿನಿಯೇ (Rajanandini), ಎರಡನೇ ಹೆಂಡತಿ ಅನು (Anu sirimane) ರೂಪದಲ್ಲಿ ಬರ್ತಿದ್ದಾಳಾ ಅನ್ನೋ ಕುತೂಹಲ ಹೆಚ್ಚಿದೆ.
ಮಧ್ಯಮ ವರ್ಗದ ಹುಡುಗಿ ಅನು ಸಿರಿಮನೆ, ದೊಡ್ಡ ಶ್ರೀಮಂತ ಆರ್ಯವರ್ಧನ್ (Aryavardhan). ಆಗಲೇ ಒಂದು ಮದುವೆ ಆಗಿ ಪತ್ನಿಯನ್ನು ಕಳೆದುಕೊಂಡ ವಿಧುರ. ಆರ್ಯವರ್ಧನ್ ಆಫೀಸಲ್ಲಿ ಕೆಲಸ ಮಾಡಲು ಬಂದ ಅನು ನಿಧಾನಕ್ಕೆ ತನ್ನ ಬಾಸ್ ಆರ್ಯ ಸಾರ್ ಆಕರ್ಷಣೆಯಲ್ಲಿ ಬೀಳುತ್ತಾಳೆ. ಅತ್ತ ಮಧ್ಯ ವಯಸ್ಕ ಆರ್ಯವರ್ಧನ್‌ಗೂ ಅನು ಸಿರಿಮನೆ ಮೇಲೆ ಪ್ರೀತಿ ಬೆಳೆಯುತ್ತದೆ. ಮೊದಲ ಪತ್ನಿ ಕಳೆದುಕೊಂಡ ಮೇಲೆ ವಿಧುರನಾಗಿಯೇ ಇದ್ದ ರಾಜವರ್ಧನ್ ಇದೀಗ ತನ್ನ ವಯಸ್ಸಿನ ಅರ್ಧಕ್ಕಿಂತಲೂ ಕಡಿಮೆ ವಯಸ್ಸಿನ ಅನು ಮೇಲೆ ಪ್ರೀತಿಯಲ್ಲಿ ಬೀಳುತ್ತಾನೆ. ವಯಸ್ಸು, ಆರ್ಥಿಕ ಅಂತರ, ಹಲವರ ಈರ್ಷ್ಯೆ ಎಲ್ಲವನ್ನೂ ಮೀರಿ ಇವರಿಬ್ಬರ ಪ್ರೀತಿ ಬೆಳೆಯುತ್ತದೆ. ಈ ಇಬ್ಬರ ಮದುವೆಯೂ ಗ್ರ್ಯಾಂಡ್ ಆಗಿ ಆಗುತ್ತೆ.
ಮದುವೆಗೂ ಮುನ್ನವೇ ಮೈ ಮೇಲೆ ಆವಾಹನೆಯಾದ ಹಾಗೆ ವರ್ತಿಸುವ ಅನು, ಮದುವೆ ಆದ ಮೇಲೂ ಈ ವರ್ತನೆ ತೋರಿಸುತ್ತಲೇ ಇರುತ್ತಾಳೆ. ಒಂದು ಹಂತದಲ್ಲಿ ಅವಳಿಗೆ ರಾಜನಂದಿನಿ ಬಗ್ಗೆ, ಆಕೆಯ ಕೊಲೆ ರಹಸ್ಯದ ಬಗ್ಗೆ ಅನುಮಾನ ಹುಟ್ಟಿಕೊಳ್ಳುತ್ತದೆ. ಈ ಹೊತ್ತಲ್ಲೇ ಅನು ಬಹುವಾಗಿ ಪ್ರೀತಿಸುತ್ತಿದ್ದ ಆರ್ಯ ಸಾರ್ ಇನ್ನೊಂದು ಮುಖ ಹೊರಬೀಳುತ್ತದೆ. ಹೀರೋ ಆಗಿದ್ದ ಆತ ವಿಲನ್ ಆಗಿ ಬದಲಾಗುತ್ತಾನೆ. ಆತನ ಮೂಲ ಹೆಸರು ಸುಭಾಷ್ ಪಾಟೀಲ್. ಆರ್ಯವರ್ಧನ್ ಶಾರದಾ ದೇವಿ ಅಂದರೆ ರಾಜ ನಂದಿನಿ ತಾಯಿ ಶಾರದಾ ದೇವಿಯ ಅಳಿಯ. ಆತನೇ ತಾನು ಎಂದು ನಂಬಿಸುವ ಸುಭಾಷ್ ಮುಂದೆ ರಾಜ ನಂದಿನಿಯನ್ನೇ ಪ್ರೀತಿಸುವ ನಾಟಕವಾಡಿ ಆಕೆಯ ಅಪಾರ ಆಸ್ತಿಯ ಮೇಲೆ ಕಣ್ಣು ಹಾಕುತ್ತಾನೆ. ಪ್ರೀತಿಯಲ್ಲಿ ಕುರುಡಾದ ರಾಜ ನಂದಿನಿ ಇತರ ಎಚ್ಚರಿಕೆಗಳನ್ನು ಪರಿಗಣಿಸೋದೇ ಇಲ್ಲ. ಕೊನೆಯಲ್ಲಿ ಸತ್ಯ ತಿಳಿಯುತ್ತದೆ. ಸುಭಾಷ್ ಪಾಟೀಲನ ದುರುಳತನ ರಿವೀಲ್ ಆಗುತ್ತದೆ. ಯಾವಾಗ ರಹಸ್ಯ ಬಯಲಾಯ್ತೋ ರಾಜನಂದಿನಿ ಬಲಿಗೆ ವೇದಿಕೆ ಸಿದ್ಧವಾಗುತ್ತದೆ.
ಇತ್ತ ಕಡೆ ರಾಜ ನಂದಿನಿ ತಾನು ನಂಬುವ ಯಲ್ಲವ್ವನ ಸನ್ನಿಧಾನಕ್ಕೆ ಬಂದಿದ್ದಾಳೆ. ಯಲ್ಲವ್ವ ತನ್ನ ಭಕ್ತೆಯ ತಪ್ಪಿಗೆ ಸಿಟ್ಟಾದರೂ ಆಕೆಯ ಬಗ್ಗೆ ದೇವಿಗೆ ಪ್ರೀತಿ ಇದೆ. ಆದರೆ ಸದ್ಯದ ಸ್ಥಿತಿಯಲ್ಲಿ ಅವಳು ಬದುಕಿಸಿದರೆ ಆ ದೇವಿಯ ಆಟ ಮುಂದೆ ಹೋಗಲ್ಲ. ಅದೇ ಹೊತ್ತಿಗೆ ದೇವಾಲಯಕ್ಕೆ ಬರುವ ಸುಬ್ಬು ದಂಪತಿಗೆ ರಾಜನಂದಿನಿ ಎದುರಾಗ್ತಾಳೆ, ದೇವಿಯ ಕೃಪೆಯಿಂದ ತಮಗೆ ರಾಜನಂದಿನಿಯಂಥಾ ಹೆಣ್ಣು ಮಗು ಸಿಗಲಿ ಎಂದು ದಂಪತಿ ಆಶಿಸುತ್ತಾರೆ.
ತಾಯಿಯಾಗುತ್ತಿದ್ದಾರೆ 'ಜೊತೆ ಜೊತೆಯಲಿ' ನಟಿ ರಶ್ಮಿ ಜಯರಾಜ್; ಅದ್ಧೂರಿ ಸೀಮಂತ ಫೋಟೋಸ್!
ಯಲ್ಲವ್ವ ದೇವಿ ಭಕ್ತರ ನಿರೀಕ್ಷೆ ಹುಸಿ ಮಾಡಲ್ಲ. ಇಲ್ಲಿ ಸೀರಿಯಲ್ ರೋಚಕ ಹಂತ ತಲುಪಿದೆ. ಅನು ಸಿರಿಮನೆಯ ಕನಸಿನಲ್ಲಿ ಈ ಸತ್ಯಗಳೆಲ್ಲ ಹೊರಬೀಳುವ ಮೂಲಕ ಅವಳಿಗೆ ತಾನು ನಿಜಕ್ಕೂ ಅನು ಸಿರಿಮನೆಯಾ ಅಥವಾ ರಾಜ ನಂದಿನಿಯೇ ತಾನಾ ಅನ್ನುವ ಅನುಮಾನ ಶುರುವಾಗಿದೆ. ಯಲ್ಲಮ್ಮ ತಾಯಿ ಮತ್ತು ರಾಜ ನಂದಿನಿ ನಡುವೆ ಕೊಂಡಿಯಾಗಿರುವ ಜೋಗವ್ವ ಇದೀಗ ಸತ್ಯದರ್ಶನ ಮಾಡಿಸಲು ಸಿದ್ಧತೆ ಮಾಡುತ್ತಿದ್ದಾಳೆ. ಅವಳೇ ಹೇಳಿರುವ ಮಾತಿನ ಪ್ರಕಾರ, ನಿಜಕ್ಕೂ ಈ ಅನು ಸಿರಿಮನೆ ಯಾರು, ಅವಳ ನಿಜವಾದ ತಂದೆ ತಾಯಿ ಯಾರು, ರಾಜ ನಂದಿನಿಯೇ ಅವಳ ರೂಪದಲ್ಲಿ ಬಂದು ತನ್ನ ಸಾಮ್ರಾಜ್ಯವನ್ನು ಮತ್ತೆ ಪಡೆದುಕೊಳ್ಳಲಿದ್ದಾಳಾ? ಆಮೂಲಕ ಹಿಂದಿನ ಜನ್ಮದ ಅನ್ಯಾಯಕ್ಕೆ ಸೇಡು ತೀರಿಸಿಕೊಳ್ಳಲಿದ್ದಾಳಾ?
Kannadathi Serial: ಮದ್ವೆ ಆಗಿದ್ದೇ ಹರ್ಷನ್ನ ಕಪಿ ಮುಷ್ಠಿ ಅಲ್ಲಲ್ಲ, ಬಿಗಿ ಮುಷ್ಠಿಲಿ ಹಿಡ್ಕೊತಾಳಂತೆ ಭುವಿ!
ಇಷ್ಟೆಲ್ಲ ಪ್ರಶ್ನೆಗಳನ್ನು ವೀಕ್ಷಕರ ತಲೆಗೆ ಬಿಟ್ಟಿದೆ ಈ ಸೀರಿಯಲ್. ಸದ್ಯದ ರೋಚಕತೆ ಸೀರಿಯಲ್‌ಅನ್ನು ಮತ್ತೆ ನೋಡುವ ಹಾಗೆ ಮಾಡಿದೆ. ಅನು ಸಿರಿಮನೆ ಪಾತ್ರದಲ್ಲಿ ಮೇಘಾ ಶೆಟ್ಟಿ (Megha Shetty), ರಾಜ ನಂದಿನಿಯಾಗಿ ಸೋನು ಗೌಡ (Sonu gowda), ಆರ್ಯವರ್ಧನ್ ಹಾಗೂ ಸುಭಾಷ್ ಪಾಟೀಲ್ ಆಗಿ ಅನಿರುದ್ಧ್ ಜತ್ಕರ್ (Anirudh Jathkar0 ಅಭಿನಯಿಸಿದ್ದಾರೆ. ಆರೂರು ಜಗದೀಶ್ (Aroor Jagadish) ಈ ಸೀರಿಯಲ್‌ನ ನಿರ್ದೇಶಕರು.
Divyaspandana ರಮ್ಯಾ ಮತ್ತೆ ಸಿನಿಮಾಗೆ ಬಂದಾಯ್ತಂತೆ, ನಿಜನಾ?