Asianet Suvarna News Asianet Suvarna News

Amruthadhaare: ಇತ್ತ ಅಪ್ಪಿ ಮುದ್ದಾಟ, ಅತ್ತ ಜೈದೇವ್ ಕಳ್ಳಾಟ, ಒಟ್ನಲ್ಲಿ ಮಜಾ ಬರ್ತಿದೆ ಅಂತಿದ್ದಾರೆ ನೆಟ್ಟಿಗರು!

ಜೀ ಕನ್ನಡದ 'ಅಮೃತಧಾರೆ' ಧಾರಾವಾಹಿಯಲ್ಲಿ ಜೈದೇವ್ ಮತ್ತು ದಿಯಾ ರೊಮ್ಯಾನ್ಸ್‌ ದೃಶ್ಯಗಳು ವೀಕ್ಷಕರನ್ನು ರೊಚ್ಚಿಗೆಬ್ಬಿಸಿವೆ. ಗರ್ಭಿಣಿ ಪತ್ನಿ ಮಲ್ಲಿಯನ್ನು ಕಾರಿನಲ್ಲಿ ಬಿಟ್ಟು ದಿಯಾಳ ಜೊತೆ ಕಾರಿನಲ್ಲೇ ರೊಮ್ಯಾನ್ಸ್ ಮಾಡುವ ಜೈದೇವ್‌ ನಡೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟೀಕೆ ವ್ಯಕ್ತವಾಗಿದೆ.

Jaidev and Da romance in Amruthadhaare serial gets viewers angry bni
Author
First Published Sep 12, 2024, 9:01 PM IST | Last Updated Sep 13, 2024, 9:24 AM IST

ಜೀ ಕನ್ನಡದ ಬೊಂಬಾಟ್‌ ಸೀರಿಯಲ್ 'ಅಮೃತಧಾರೆ' ಗೆ ಭರ್ಜರಿ ರಭಸ ಬಂದಿದೆ. ಎರಡೂ ಕಡೆ ಎರಡೂ ಜೋಡಿಗಳ ಮುದ್ದಾಟ, ಕಳ್ಳಾಟ ನಡೀತಿದೆ. ಹೀರೋ ಹೀರೋಯಿನ್‌ ರೊಮ್ಯಾಂಟಿಕ್‌ ಸೀನ್‌ ಮಾಡುವಾಗ ಚಪ್ಪರಿಸಿಕೊಂಡು ನೋಡುವ ವೀಕ್ಷಕರು ಈ ಪಾತ್ರಗಳ ರೊಮ್ಯಾನ್ಸ್‌ಗೆ ಬಾಯಿಗೆ ಬಂದಂಗೆ ಬೈದು ಕ್ಲಾಸ್‌ ತಗೊಳ್ತಿದ್ದಾರೆ. ಅದಕ್ಕೆ ಕಾರಣ ಮತ್ತೇನಲ್ಲ. ಎರಡೂ ವಿಲನ್ ಜೋಡಿಗಳು. ಮೊದಲನೇ ಜೋಡಿ ಅಪ್ಪಿ - ಪಾರ್ಥದ್ದು. ಇದು ನೋಡಲಿಕ್ಕೇನೋ ಕ್ಯೂಟ್‌ ಜೋಡಿ. ಆದರೆ ಮದುವೆ ವಿಚಾರದಲ್ಲಿ ನಡೆದ ಬೆಳವಣಿಗೆಗಳಿಂದ ಮತ್ತು ಅತ್ತೆ ಶಕುಂತಳಾ ಕುಮ್ಮಕ್ಕಿನಿಂದ ಅಪೇಕ್ಷಾ ಈಗ ಔಟ್‌ ಆಂಡ್ ಔಟ್ ವಿಲನ್‌ ಆಗಿ ಬದಲಾಗಿದ್ದಾಳೆ. ಮೊದಲು ಪಾರ್ಥ ಮತ್ತು ಅಪ್ಪಿ ಸೀನ್‌ ಬಂದಾಕ್ಷಣ 'ಅಪ್ಪಿ ಪಪ್ಪಿ' ಜೋಡಿ ಬಂತು ಅಂತ ಖುಷಿಯಿಂದ ನೋಡ್ತಿದ್ದ ನೆಟ್ಟಿಗರಿಗೆ ಈಗೀಗ ಈ ಜೋಡಿ ಬಂದರೆ ಸಾಕು ಬಾಯಿಗೆ ಬಂದಂಗೆ ಬೈಯ್ಯೋದು, ಕೆಟ್ಟ ಕಾಮೆಂಟ್‌ ಹಾಕೋದನ್ನು ಮಾಡ್ತಿದ್ದಾರೆ. 

ಪಾತ್ರದ ಅಟೇರ್‌ ಬದಲಾಗ್ತಿದ್ದ ಹಾಗೇ ನೋಡುಗರ ಇಂಟರೆಸ್ಟ್ ಬದಲಾಗುತ್ತೆ ಅನ್ನೋದಕ್ಕೆ ಇದಕ್ಕಿಂತ ಸಾಕ್ಷಿ ಬೇಕಾ.. ಇನ್ನೊಂದು ಕಡೆ ಜೈದೇವ್ ಮತ್ತು ದಿಯಾಳ ಕಳ್ಳಾಟ ನಡೀತಿದೆ. ಕಾರಲ್ಲೇ ಈ ಜೋಡಿ ರೊಮ್ಯಾನ್ಸ್ ಮಾಡೋದನ್ನು ನೋಡಿ ವೀಕ್ಷಕರು ಯಾವ ಲೆವೆಲ್‌ಗೆ ಕೆಂಡಾಮಂಡಲರಾಗಿದ್ದಾರೆ ಅಂದರೆ ಎಲ್ಲಾದರೂ ಈ ಜೋಡಿ ಎದುರು ಬಂದರೆ ಹೊಡೆದೇ ಹಾಕ್ತರೇನೋ. ಆ ರೇಂಜ್‌ಗೆ ಜೈದೇವ್‌ ವೀಕ್ಷಕರನ್ನು ರೊಚ್ಚಿಗೆಬ್ಬಿಸೋದ್ರಲ್ಲಿ ಯಶಸ್ವಿಯಾಗಿದ್ದಾರೆ. 

ಮಲ್ಲಿ ಜತೆ ಜೈದೇವ್‌ಗೆ ಟೈಂಪಾಸ್‌ ಆಗುತ್ತಿಲ್ಲ. ಚಮಕ್‌ಚಲ್ಲೋ ದಿಯಾಳ ನೆನಪಲ್ಲಿ ಇದ್ದಾನೆ. ಈ ಸಮಯದಲ್ಲಿ ಪುಸ್ತಕವೊಂದನ್ನು ಓದುತ್ತ ಜೈದೇವ್‌ "ಗರ್ಭಿಣಿಯರು ವಾಕಿಂಗ್‌ ಮಾಡುವುದು ತುಂಬಾ ಮುಖ್ಯ" ಎಂಬ ಸಾಲನ್ನು ಓದುತ್ತಾನೆ. ಡಾಕ್ಟರ್‌ ಕೂಡ ಇದೇ ಹೇಳಿದ್ದಾರೆ, ನಾವಿಬ್ಬರು ವಾಕಿಂಗ್‌ ಮಾಡೋಣ ಬಾ ಎಂದು ಹೇಳಿದ್ದಾರೆ. ವಾಕಿಂಗ್‌ ಮಾಡೋದು ಬೋರ್‌ ಆದ್ರೆ ಲಾಂಗ್‌ ಡ್ರೈವ್‌ ಹೋಗೋಣ್ವ ಎಂದು ಕೇಳುತ್ತಾನೆ. "ಗಂಡನ ಜತೆ ಸುತ್ತಾಡೋದು ಇಷ್ಟ. ಹೋಗೋಣ ರೀ" ಎನ್ನುತ್ತಾಳೆ. ಈ ಮೂಲಕ ದಿಯಾಳನ್ನು ಭೇಟಿಯಾಗಲು ಐಡಿಯಾ ಮಾಡುತ್ತಾನೆ. ಇದಾದ ಬಳಿಕ ದಿಯಾಳಿಗೆ ಭೇಟಿಯಾಗುವೆ ಎಂದು ಮೆಸೆಜ್‌ ಮಾಡುತ್ತಾನೆ.

ತುಂಬಾ ಕ್ಷಮಿಸಿ, ಏನೇ ಅನ್ನಿ ಈ ಜರ್ಮನ್ ಸುಂದರಿ ಕನ್ನಡ ಕಿವಿಗೆ ಮುದ ನೀಡೋದು ಸುಳ್ಳಲ್ಲ!

ಡ್ರೈವ್‌ ನೆವದಲ್ಲಿ ಹೊರಬಂದ ಜೈದೇವ್‌ ಕಳ್ಳಬೆಕ್ಕಿನಂತೆ ಇದೀಗ ದಿಯಾಗೆ ಮೆಸೇಜ್‌ ಮಾಡಿ ಕರೆಸಿಕೊಂಡಿದ್ದಾನೆ. ಅವಳ ಜೊತೆ ಕಾರಿನೊಳಗೇ ರೊಮ್ಯಾನ್ಸ್ ಮಾಡುತ್ತಿದ್ದಾನೆ. ಇತ್ತ ತುಂಬು ಗರ್ಭಿಣಿ ಮಲ್ಲಿ ಒಬ್ಬಳನ್ನೇ ಕಾರಲ್ಲಿ ಬಿಟ್ಟು ಬಂದಿದ್ದಾನೆ. ಒಂದಿಷ್ಟು ಹೊತ್ತು ಕೂತ ಮಲ್ಲಿ ಬೋರಾಗಿ ಜೈದೇವ್ ಹುಡುಕುತ್ತಾ ಹೊರ ಬಂದಿದ್ದಾಳೆ. ಹಾಗೆ ಜೈದೇವ್, ದಿಯಾ ರೊಮ್ಯಾನ್ಸ್‌ ಮಾಡ್ತಿರೋ ಕಾರ್‌ ಸಮೀಪಕ್ಕೇ ಬಂದಿದ್ದಾಳೆ. ಇದು ಕಳ್ಳಾಟ ಆಡ್ತಿರೋ ಜೋಡಿಗೆ ಗೊತ್ತಾಗಿದೆ. ಎಲ್ಲಿ ಸಿಕ್ಕಿಬೀಳ್ತೀವೋ ಅಂತ ಇಬ್ಬರೂ ಕಾರೊಳಗೇ ಬಚ್ಚಿಟ್ಟುಕೊಂಡಿದ್ದಾರೆ. 

ಯೂಟ್ಯೂಬ್ ಒಂದೇ ಅಲ್ಲ 12-13 ಮನೆಗಳ ಬಾಡಿಗೆ ಬರುತ್ತೆ; ಆದಾಯ ಎಷ್ಟಿದೆ ಎಂದು ಬಾಯಿಬಿಟ್ಟ ಮಧು ಗೌಡ!

ಅಂಥಾ ಸುಂದರವಾದ ಹೆಂಡತಿ ಜೊತೆ ಇರುವಾಗ ಕೆಟ್ಟ ದಾರಿ ಹಿಡಿದಿರೋ ಜೈದೇವ್‌ಗೆ ಜನ ಮುಖಾ ಮೂತಿ ನೋಡ್ದಂತೆ ಚಚ್ಚಾಗ್ಬೇಕು ಅಂತಿದ್ದಾರೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಜೋಡಿಗೆ ಬೈಗುಳ ಹೆಚ್ಚಾಗಿದೆ. ಹಾಗೆ ಸೀರಿಯಲ್ ಟಿಆರ್‌ಪಿಯಲ್ಲೂ ಏರಿಕೆ ಆಗೋ ಲಕ್ಷಣ ಕಾಣ್ತಿದೆ. ಇನ್ನೊಂದೆಡೆ ಅಪೇಕ್ಷಾ ಮುದ್ದಾಟದಿಂದ ಪಾರ್ಥನ ಮನಸ್ಸಲ್ಲಿ ಭೂಮಿಕ ಬಗ್ಗೆ ವಿಷ ಬೀಜ ಬಿತ್ತಲು ಹೊರಟು ಉಗಿಸಿಕೊಂಡಿದ್ದಾಳೆ. ವೀಕ್ಷಕರಿಂದಲೂ ಉಗಿಸಿಕೊಂಡಿದ್ದಾಳೆ. ಅಲ್ಲಿಗೆ ಕಳ್ಳಾಟಕ್ಕೆ, ಮಳ್ಳಾಟಕ್ಕೆ ನೆಟ್ಟಿಗರು ಭಲೇ ಕ್ಲಾಸ್ ತಗೊಳ್ತಿದ್ದಾರೆ.

 

 
 
 
 
 
 
 
 
 
 
 
 
 
 
 

A post shared by Zee Kannada (@zeekannada)

Latest Videos
Follow Us:
Download App:
  • android
  • ios