ಬಿಗ್ ಬಾಸ್ ಕನ್ನಡ ಸೀಸನ್ 10; ಸ್ಪರ್ಧಿಗಳಾಗಿ ಈಶಾನಿ, ವಿನಯ್ ಗೌಡ ಮತ್ತು ತುಕಾಲಿ ಸಂತು ಎಂಟ್ರಿ!
ಬಿಗ್ ಬಾಸ್ ಕನ್ನಡ ಸೀಸನ್ 10-ನ ಮೂರನೇ ಸ್ಪರ್ಧಿಯಾಗಿ ನಟಿ ಈಶಾನಿ, ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಗೌಡ ಹಾಗೂ ಐದನೇ ಸ್ಪರ್ಧಿಯಾಗಿ ತುಕಾಲಿ ಸಂತು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಅದರೆ, ಡ್ರೋನ್ ಪ್ರತಾಪ್ ವೇಯ್ಟಿಂಗ್ ಲಿಸ್ಟ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದು ಕಡೆ ಕುಳಿತಿದ್ದಾರೆ.

ಬಿಗ್ ಬಾಸ್ ಕನ್ನಡ ಸೀಸನ್ 10-ನ ಮೂರನೇ ಸ್ಪರ್ಧಿಯಾಗಿ ನಟಿ ಈಶಾನಿ, ನಾಲ್ಕನೇ ಸ್ಪರ್ಧಿಯಾಗಿ ವಿನಯ್ ಗೌಡ ಹಾಗೂ ಐದನೇ ಸ್ಪರ್ಧಿಯಾಗಿ ತುಕಾಲಿ ಸಂತು ಬಿಗ್ ಬಾಸ್ ಮನೆಗೆ ಎಂಟ್ರಿ ಪಡೆದುಕೊಂಡಿದ್ದಾರೆ. ಅದರೆ, ಡ್ರೋನ್ ಪ್ರತಾಪ್ ವೇಯ್ಟಿಂಗ್ ಲಿಸ್ಟ್‌ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಒಂದು ಕಡೆ ಕುಳಿತಿದ್ದಾರೆ.
ಬಿಗ್ ಬಾಸ್ ಕನ್ನಡ, ಸೀಸನ್ 10ರ ಮೂರನೇ ಸ್ಪರ್ಧಿಯಾಗಿ ಆಯ್ಕೆಯಾದವರು ರ‍್ಯಾಪರ್ ಇಶಾನಿ (Ishani).ಮೈಸೂರು ಮೂಲದ ಈಶಾನಿ ಹುಟ್ಟಿದ್ದು ದುಬೈನಲ್ಲಿ ಆನಂತರ ಲಾಸ್ ಏಂಜಲಿಸ್‌ನಲ್ಲಿ ಬೆಳೆದವರು. ರ‍್ಯಾಪರ್ ಆಗಿ ಅನೇಕ ಗೀತೆಗಳನ್ನು ಹಾಡಿದ್ದಾರೆ. ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದು, ಬಿಗ್ ಬಾಸ್ ಮನೆಗೆ ಮಗಳನ್ನು ಕಳುಹಿಸಲು ತಂದೆ ತಾಯಿ ಇಬ್ಬರೂ ಬಂದಿದ್ದರು. ಮನೆಗೆ ಕಾಲಿಡುವಾಗ ಕಣ್ಣೀರಿಡುತ್ತಲೇ ಇಶಾನಿ ಮನೆ ಪ್ರವೇಶ ಮಾಡಿದರು.
ಇಶಾನಿ ಮತ್ತು ಮಂಜು ಪಾವಗಡ ವೇದಿಕೆಯ ಮೇಲೆ ಒಂದಷ್ಟು ಹೊತ್ತು ಅಲ್ಲಿದ್ದವರನ್ನು ರಂಜಿಸಿದರು. ತಂದೆ ತಾಯಿಯನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಇಶಾನಿ ಮನೆ ಪ್ರವೇಶ ಮಾಡಿದರು.
ಇನ್ನು 'ಹರಹರ ಮಹಾದೇವ’ ಧಾರಾವಾಹಿಯಲ್ಲಿ ಶಿವನ ಪಾತ್ರವನ್ನು ಮಾಡಿ ಕರ್ನಾಟಕದಲ್ಲಿ ಫೇಮಸ್ ಆದವರು ವಿನಯ್ ಗೌಡ. ಬಿಗ್‌ಬಾಸ್‌ವರೆಗೂ ಒಂದು ಜರ್ನಿ, ಬಿಗ್ ಬಾಸ್ ನಂತರವೇ ಇನ್ನೊಂದು ಜರ್ನಿ' ಅನ್ನೋದು ಅವರ ಮಾತು. ದೇಹದಂಡನೆಯನ್ನು ಪ್ರೀತಿಸುವ ವಿನಯ್, ಜಿಮ್‌ನಲ್ಲಿ ಮಾತ್ರವೇ ನನ್ನದು 'ಮೀ ಟೈಮ್' ಅನ್ನುತ್ತಾರೆ. ಕುಟುಂಬದೊಳಗಿನ ನೋವಿನಿಂದ ಬೇಸತ್ತು ಮನೆಬಿಟ್ಟು ಹೊರಟು ಬದುಕಿಗಾಗಿ ಹೋರಾಡಿ ಈ ಹಂತಕ್ಕೆ ಬಂದಿರುವ ವಿನಯ್ ಅವರಿಗೆ ಪತ್ನಿಯೇ ಸರ್ವಸ್ವವಂತೆ. ಹದಿನಾಲ್ಕು ವರ್ಷದ ಮಗ ರಿಷಭ್ ಎಂದರೆ ಪಂಚಪ್ರಾಣ. ಎಂದಿದ್ದಾರೆ ವಿನಯ್ ಗೌಡ.
ಡಿಫರೆಂಟ್ ಆಗಬೇಕು ಎಂಬ ಹಂಬಲದಲ್ಲಿ'ತುಕಾಲಿ' ಎಂಬುದನ್ನು ತಮ್ಮ ಹೆಸರಿಗೇ ಅಂಟಿಸಿಕೊಂಡಿರುವ ಸಂತೋಷ್, ಬಿಗ್‌ಬಾಸ್ ಮನೆಯೊಳಗೆ ಸಂತೋಷದ ನಗುವನ್ನು ಹರಡುವ ಆಸೆಯಿಂದ ಹೊರಡುತ್ತಿದ್ದಾರೆ. ತುಕಾಲಿ ಎಂಬ ಬೈಗುಳವನ್ನು ಹೆಮ್ಮೆಯಿಂದ ಸ್ವೀಕರಿಸುವ ಸಂತೋಷ್, ಹೆಂಡತಿಯನ್ನು ಬಿಟ್ಟು, ಸಿಂಗಲ್ ಆಗಿ ಮನೆಯೊಳಗೆ ಕಾಲಕಳೆಯುವ ಹಂಬಲದಿಂದ ಬಂದಿದ್ದರಂತೆ. ಗಂಡ-ಹೆಂಡತಿ ಇಬ್ಬರನ್ನೂ ಒಟ್ಟಿಗೇ ಕಾಲೆಳೆಯುವ ಖುಷಿಯನ್ನು ನೋಡಲು ಕಿಚ್ಚ ಆಸೆಪಟ್ಟರು. ಅದಕ್ಕೂ ಜನತಾ ವೋಟಿಂಗ್ ಅನ್ನು ಅಪೇಕ್ಷಿಸಿದ ಕಿಚ್ಚ ಅವರ ಊಹೆಯಂತೆ ಜನರೂ ಸಂತೋಷ್ ದಂಪತಿ ಒಟ್ಟಿಗೆ ಮನೆಯೊಳಗೆ ಹೋಗಬೇಕು ಎಂದು ಆಸೆಪಟ್ಟರು. ಇದಕ್ಕೆ ಪ್ಯಾನಲಿಸ್ಟ್ ಕೂಡ ಅನುಮೋದನೆ ಕೊಟ್ಟರು.
ಸ್ಟೇಜ್ ಮೇಲೆಯೇ ಕಿಚ್ಚ ಸುದೀಪ್ ಕೊಟ್ಟ ಟಾಸ್ಕ್‌ನಲ್ಲಿ ಗೆದ್ದ ಸಂತೋಷ್, ಹೆಂಡತಿಯನ್ನು ಹೊರಗಡೆಯೇ ಬಿಟ್ಟು ಮನೆಯೊಳಗೆ ಹೋಗುತ್ತಿದ್ದಾರೆ. ಇದುವರೆಗಿನ ಸ್ಪರ್ಧಿಗಳಲ್ಲಿ ಜನರಿಂದ ಅತಿ ಹೆಚ್ಚು ಅಂದರೆ, 93% ಪಡೆದು, ಹೆಂಡತಿಯಿಂದ ಬೀಳ್ಕೊಟ್ಟು ಮನೆಯೊಳಗೆ ಅಡಿಯಿಟ್ಟಿದ್ದಾರೆ. ಮನೆಯೊಳಗೆ ನಗೆಹೊನಲನ್ನು ಹರಿಸಲು ಸಂತೋಷ್ ರೆಡಿಯಾಗಿದ್ದಾರೆ.
ಬಿಗ್ ಬಾಸ್ ಕನ್ನಡದ 9 ಸೀಸನ್ ಈಗಾಗಲೇ ಮುಗಿದಿದ್ದು, ಇದೀಗ 10ನೇ ಸೀಸನ್ ಪ್ರಾರಂಭವಾಗಿದೆ. ಈ ಮೊದಲಿನ ಎಲ್ಲಾ ಶೋಗಳನ್ನು ಹೋಸ್ಟ್ ಮಾಡಿರುವ ಸ್ಯಾಂಡಲ್‌ವುಡ್ ನಟ ಕಿಚ್ಚ ಸುದೀಪ್ ಈ ಸೀಸನ್ ಕೂಡ ನಡೆಸಿಕೊಡುತ್ತಿದ್ದಾರೆ. ಈ ಮೂಲಕ ಎಲ್ಲಾ ಭಾಷೆಗಳು ಸೇರಿದಂತೆ ನಟ ಸುದೀಪ್ ಮಾತ್ರ ಎಲ್ಲಾ ಬಿಗ್ ಬಾಸ್ ಸೀಸನ್‌ಗಳನ್ನು ಹೊಟ್ಸ್ ಮಾಡುವ ಮೂಲಕ ಹೊಸ ದಾಖಲೆ ನಿರ್ಮಿಸಿದ್ದಾರೆ. ಬಿಗ್ ಬಾಸ್ ಕನ್ನಡ ಸೀಸನ್ 10, ಕಲರ್ಸ್ ಕನ್ನಡದಲ್ಲಿ ಪ್ರತಿ ದಿನ ರಾತ್ರಿ 9.30 ರಿಂದ ಹಾಗೂ ಶನಿವಾರ ಮತ್ತು ಭಾನುವಾರ ರಾತ್ರಿ 9.00 ರಿಂದ ಪ್ರಸಾರವಾಗಲಿದೆ.