"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ಡಿಸಿ ಸ್ನೇಹಾ ಅಪಘಾತದಲ್ಲಿ ಮೃತಪಟ್ಟ ನಂತರ, ಲಂಚದ ಆರೋಪ ಎದುರಿಸುತ್ತಿದ್ದಾರೆ. ಸ್ನೇಹಾಗೆ ನ್ಯಾಯ ಒದಗಿಸಲು ಪುಟ್ಟಕ್ಕ ಹೋರಾಟ ನಡೆಸುತ್ತಿದ್ದು, ನಿಗೂಢ ವ್ಯಕ್ತಿಯೊಬ್ಬರು ಸಾಥ್ ನೀಡುತ್ತಿದ್ದಾರೆ. ರವಿಚಂದ್ರನ್ ಎಂಬ ಊಹಾಪನೆಗಳಿದ್ದರೂ, ಝೀ ಕನ್ನಡ ಬಿಡುಗಡೆ ಮಾಡಿರುವ ಫೋಟೋದಲ್ಲಿ ವ್ಯಕ್ತಿಯ ಗುರುತು ಸ್ಪಷ್ಟವಿಲ್ಲ.

ಪುಟ್ಟಕ್ಕನ ಮಕ್ಕಳು (Puttakkana Makkalu) ಸೀರಿಯಲ್ ದಿನದಿಂದ ದಿನಕ್ಕೆ ಊಹಿಸಲಾಗದ ತಿರುವುಗಳನ್ನು ಪಡೆಯುತ್ತಾ ಸಾಗುತ್ತಿದೆ. ಒಂದು ಸಲ ಒಂದು ಪಾತ್ರದ ಸಾವಾದರೆ, ಮತ್ತೊಂದು ಸಲ, ಸಾವಿನ ದವಡೆಗೆ ಹೋಗಿ ಮತ್ತೆ ಮರಳಿ ಬರೋದು ಇದೆಲ್ಲವೂ ಈ ಸೀರಿಯಲ್ ನಲ್ಲಿ ಸಾಮಾನ್ಯ. ಈ ಧಾರಾವಾಹಿಯ ಕಥೆ ನೋಡಿ, ಕೆಲವರು ಸೀರಿಯಲ್ ಚೆನ್ನಾಗಿ ಮೂಡಿ ಬರುತ್ತಿದೆ ಅಂದ್ರೆ, ಇನ್ನೂ ಕೆಲವರು, ಧಾರಾವಾಹಿ ನೋಡೋದಕ್ಕೆ ಆಗುತ್ತಿಲ್ಲ. ಆದಷ್ಟು ಬೇಗ ಸೀರಿಯಲ್ ಮುಗಿಸಿ ಅನ್ನೋರು ಇದ್ದಾರೆ. ಇದೆಲ್ಲರ ನಡುವೆ ಸೀರಿಯಲ್ ನಲ್ಲಿ ಸದ್ಯಕ್ಕೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. 

ಸೆಟ್​ನಲ್ಲಿ ಉಮಾಶ್ರೀ ಹೊಟ್ಟೆಗೆ ಚೂರಿ ಇರಿತ! ಪುಟ್ಟಕ್ಕನ ಮಕ್ಕಳು ಶೂಟಿಂಗ್​ನಲ್ಲಿ ನಡೆದದ್ದೇನು? ವಿಡಿಯೋ ವೈರಲ್​

ಸ್ನೇಹಾ ಮದುವೆಯಾದ ನಂತರವೂ ಅಮ್ಮನ ಕನಸನ್ನು ನನಸಾಗಿಸಲು ಡಿಸಿ ಆಗಬೇಕೆಂಬ ಹಂಬಲಕ್ಕೆ ಬಿದ್ದು, ಕಷ್ಟ ಪಟ್ಟು ಡಿಸಿ ಆದಾಗ ಅದನ್ನು ಜನ ತುಂಬಾನೆ ಮೆಚ್ಚಿಕೊಂಡಿದ್ದರು. ಸ್ನೇಹಾ ಪಾತ್ರ ಜನರಿಗೆ ತುಂಬಾನೆ ಇಷ್ಟವಾಗಿದ್ದ ಪಾತ್ರವಾಗಿತ್ತು. ಆದರೆ ದಿಢೀರ್ ಆಗಿ ಡಿಸಿ ಸ್ನೇಹಾ (DC Sneha) ಆಕ್ಸಿಡೆಂಟಲ್ಲಿ ಸಾವನ್ನಪ್ಪಿದಾಗ, ಕಥೆಯೇ ಎತ್ತಲೋ ಸಾಗುತ್ತಿದೆ ಎಂದು ವೀಕ್ಷಕರು ಗೋಳಾಡಿತ್ತು, ಇನ್ನು ಮುಂದೆ ಸೀರಿಯಲ್ ನೋಡೋದೆ ಇಲ್ಲ ಎಂದಿದ್ದೂ ಇದೆ. ಸ್ನೇಹಾ ಸಾವಿನ ನಂತರ ಕಥೆ ಎತ್ತಲೋ ಸಾಗುತ್ತಿದೆ, ಈ ಕಥೆಯೇ ಬೇಡ ಅಂತಾನೂ ಹೇಳ್ತಿದ್ದಾರೆ ಜನ. ಇದೀಗ ಸತ್ತ ಮೇಲೂ ಡಿಸಿ ಸ್ನೇಹಾ ಮತ್ತೊಂದು ಆರೋಪವನ್ನು ಎದುರಿಸಬೇಕಾಗಿ ಬಂದಿದೆ. ಸ್ನೇಹಾ ಮೇಲೆ ಲಂಚ ತೆಗೆದುಕೊಂಡ ಆರೋಪ ವ್ಯಕ್ತವಾಗಿದ್ದು, ಹಾಗಾಗಿ, ಆಕೆಯ ವಿರುದ್ಧ ಹೋರಾಟಗಳು ನಡೆಯುತ್ತಿವೆ. ಜೊತೆಗೆ ಸ್ನೇಹಾಗೆ ಗೌರವಾರ್ತವಾಗಿ ಸಾವಿನ ನಂತರ ನೀಡಲಾದ ರಾಷ್ಟ್ರಧ್ವಜವನ್ನು ಸಹ ವಾಪಾಸ್ ತೆಗೆದುಕೊಂಡಿದ್ದಾರೆ. 

ಸ್ನೇಹಾ ಹಿಂದೆಯೇ ಪುಟ್ಟಕ್ಕನ ಸಾವು… ಶೀಘ್ರದಲ್ಲೇ ಅಂತ್ಯ ಕಾಣುತ್ತಾ ಪುಟ್ಟಕ್ಕನ ಮಕ್ಕಳು ಧಾರಾವಾಹಿ?

ಇದರಿಂದ ಸಿಡಿದೆದ್ದಿರುವ ಪುಟ್ಟಕ್ಕ ಇದೀಗ ಸ್ನೇಹಾಗೆ ನ್ಯಾಯ ಒದಗಿಸಲು ಹೋರಾಟಕ್ಕೆ ಮುಂದಾಗಿದ್ದು, ತನ್ನ ಕುಟುಂಬ ಹಾಗೂ ಇತರರ ಜೊತೆ ಸೇರಿ ಹೋರಾಟ ಮಾಡುತ್ತಿದ್ದಾರೆ, ಅದಕ್ಕೆ ಮತ್ತೊಬ್ಬ ನಾಯಕ ಸಾಥ್ ನೀಡಿದ್ದಾರೆ ಎಂದು ಝೀ ಕನ್ನಡ ವಾಹಿನಿಯು ಒಂದು ಬ್ಲರ್ ಫೋಟೊವನ್ನು ಪೋಸ್ಟ್ ಮಾಡಿದ್ದು, ಈ ನಾಯಕ ಯಾರು ಎಂದು ಕೇಳುತ್ತಿದ್ದಾರೆ. ಹೆಚ್ಚಿನ ಜನ ಇದು ಕ್ರೇಜಿಸ್ಟಾರ್ ರವಿಚಂದ್ರನ್ (Crazy Star Ravichandran) ಎಂದು ಹೇಳಿದ್ದಾರೆ. ಹಲವು ಸಮಯಗಳಿಂದ ರಿಯಾಲಿಟಿ ಶೋ, ಸಿನಿಮಾಗಳಿಂದಲೂ ದೂರ ಇರುವ ರವಿಚಂದ್ರನ್ ಅವರು ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ನಟಿಸುತ್ತಿದ್ದಾರೆ ಅಂದ್ರೆ ಅದು ನಂಬೋದಕ್ಕೆ ಕಷ್ಟ. ಆದ್ರೂ ಆ ಬ್ಲರ್ ಫೋಟೊ ನೋಡಿದ್ರೆ ಅವರೇನೆ ಅನ್ನುವಂತಿದೆ. ಇನ್ನು ಕೆಲವರು ಇದು ಶ್ರಾವಣಿ ಸುಬ್ರಹ್ಮಣ್ಯ (Shravani Subramanya) ಸೀರಿಯಲ್ ಸುಬ್ಬು ಎಂದು ಹೇಳುತ್ತಿದ್ದಾರೆ. ಮತ್ತೆ ಕೆಲವರು ಅಣ್ಣಯ್ಯ ಸೀರಿಯಲ್ ಶಿವು ಅಂತಾನೂ ಹೇಳುತ್ತಿದ್ದಾರೆ. ಅಷ್ಟಕ್ಕೂ ಪುಟ್ಟಕ್ಕನ ಹೋರಾಟಕ್ಕೆ ಸಾಥ್ ನೀಡುತ್ತಿರುವ ಆ ನಾಯಕ ಯಾರೂ ಅನ್ನೋದನ್ನು ಕಾದು ನೋಡಬೇಕು.