"ಪುಟ್ಟಕ್ಕನ ಮಕ್ಕಳು" ಧಾರಾವಾಹಿಯಲ್ಲಿ ಪುಟ್ಟಕ್ಕನಿಗೆ ಚೂರಿ ಇರಿತದ ದೃಶ್ಯ ವೈರಲ್. ಪುಟ್ಟಕ್ಕ ಸಾವು, ಅಭಿಮಾನಿಗಳ ಆಕ್ರೋಶ, ನಂತರ ಪುಟ್ಟಕ್ಕ ಬದುಕುಳಿದ ಸಂತಸದ ಘಟನಾವಳಿಗಳು ಚರ್ಚೆಗೆ ಗ್ರಾಸ. ಚಿತ್ರೀಕರಣದ ಹಿಂದಿನ ಹಾಸ್ಯಮಯ ದೃಶ್ಯಗಳು ಈಗ ಬಹಿರಂಗ. ಉಮಾಶ್ರೀ ಅವರ ನಟನೆಗೆ ಮೆಚ್ಚುಗೆ ವ್ಯಕ್ತ.
ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನಿಗೆ ಚೂರಿ ಇರಿದ ಪರಿಣಾಮ ಪುಟ್ಟಕ್ಕ ಸತ್ತೇ ಹೋದಳು ಎಂದು ತೋರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ, ಪುಟ್ಟಕ್ಕನ ಮಕ್ಕಳು ಸೀರಿಯಲ್ ಮೇಲೆ ಅಭಿಮಾನಿಗಳು ಕೋಪ ಮಾಡಿಕೊಂಡಿದ್ದರು. ಈ ಹಿಂದೆ ಸ್ನೇಹಾಳನ್ನು ಸಾಯಿಸಿರುವುದನ್ನೇ ಅಭಿಮಾನಿಗಳು ಇನ್ನೂ ನಿರ್ದೇಶಕರನ್ನು ಕ್ಷಮಿಸುತ್ತಿಲ್ಲ. ಅಂಥದ್ದರಲ್ಲಿ ಇಡೀ ಸೀರಿಯಲ್ಗೆ ಆಧಾರ ಆಗಿರುವ ಪುಟ್ಟಕ್ಕನನ್ನೇ ಸಾಯಿಸಿದರೆ ಮುಂದೇನು ಎನ್ನುವುದನ್ನು ಊಹಿಸಿಕೊಳ್ಳಲು ಸಾಧ್ಯವಾಗಲಿಲ್ಲ ವೀಕ್ಷಕರಿಗೆ. ಇದರ ಪ್ರೊಮೋ ಬಿಡುಗಡೆಯಾಗುತ್ತಿದ್ದಂತೆಯೇ ಸೀರಿಯಲ್ಗೆ ಛೀಮಾರಿ ಹಾಕಲು ಶುರು ಮಾಡಿದ್ದರು. ಈ ಧಾರಾವಾಹಿಯನ್ನು ನಾವು ನೋಡುವುದೇ ಇಲ್ಲ ಎಂದು ಹೇಳತೊಡಗಿದರು.
ಕೊನೆಗೆ ಆಸ್ಪತ್ರೆಯಲ್ಲಿ ಪುಟ್ಟಕ್ಕ ಕೊನೆಯುಸಿರು ಎಳೆದಂತೆ ತೋರಿಸಲಾಗಿತ್ತು. ಆದರೆ ಕುತೂಹಲ ಘಟ್ಟದಲ್ಲಿ ಪುಟ್ಟಕ್ಕನಿಗೆ ಜೀವ ಬಂದಿತು. ಸದ್ಯ ಪುಟ್ಟಕ್ಕ ಜೀವಂತ ಇದ್ದಾಳೆ. ಅಭಿಮಾನಿಗಳು ಖುಷಿಯಿಂದ ಕುಣಿದಾಡಿದ್ದಾರೆ. ಪುಟ್ಟಕ್ಕನ ಪಾತ್ರಧಾರಿ ಉಮಾಶ್ರಿ ಎನ್ನುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ತಮ್ಮೆಲ್ಲ ಪಾತ್ರಗಳಿಗೆ ಪರಕಾಯ ಪ್ರವೇಶ ಮಾಡಿದಂತೆ ನಟಿಸುತ್ತಲೇ ಚಿತ್ರಪ್ರಿಯರ ಕಣ್ಮಣಿಯಾಗಿದ್ದಾರೆ ನಟಿ ಉಮಾಶ್ರೀ. ಈಗ 67ರ ಹರೆಯದಲ್ಲಿಯೂ ಅವರ ಮಾಗಿದ ನಟನೆಗೆ ಮನಸೋಲದವರೇ ಇಲ್ಲ. ಅದರಲ್ಲಿಯೂ ಈಗ ಪುಟ್ಟಕ್ಕನ ಮಕ್ಕಳು ಸೀರಿಯಲ್‌ನಲ್ಲಿ ಪುಟ್ಟಕ್ಕನ ಪಾತ್ರದಲ್ಲಿನ ಅವರ ನಟನೆಗೆ ಕಣ್ಣೀರು ಹಾಕಿದವರು ಅದೆಷ್ಟೋ ಮಂದಿ. ಅವರು ಮಾಡುವ ಪ್ರತಿಯೊಂದು ಪಾತ್ರಗಳಲ್ಲೂ ಸ್ವಂತಿಕೆ, ಜೀವಂತಿಕೆ ಇದೆ. ರಂಗಭೂಮಿ ಮತ್ತು ಚಲನಚಿತ್ರರಂಗಗಳಲ್ಲಿ ಛಾಪು ಮೂಡಿಸಿರುವ ಪ್ರತಿಭಾನ್ವಿತ ಅಭಿನೇತ್ರಿ ಇವರು. ನಟಿಯ ಭಾವುಕತೆಯಲ್ಲಾಗಲಿ, ಹಾವ ಭಾವಗಳಲ್ಲಾಗಲಿ, ಅಭಿವ್ಯಕ್ತಿಯಲ್ಲಾಗಲಿ ಅವರ ಸಮಕ್ಕೆ ಇರುವ ಕಲಾವಿದರು ಅಪರೂಪವೆಂಬುದು ಚಿತ್ರಪ್ರಿಯರ ಅಭಿಪ್ರಾಯ. ಕೆಲವೊಂದು ವೈಶಿಷ್ಟ್ಯಪೂರ್ಣ ಪಾತ್ರಗಳಲ್ಲಿ ಕಣ್ಣುಗಳಲ್ಲಿಯೇ ತುಂಬಿಕೊಡುತ್ತಾರೆ.
ಸಾವೇ ಅಂತಿಮ ಆಯ್ಕೆಯಾಗಿತ್ತು, ಕುಡಿತ ಕಲಿತೆ... ಉಮಾಶ್ರಿ ಜೀವನದ ಮುಳ್ಳಿನ ಹಾದಿ ಅವರ ಮಾತಲ್ಲೇ ಕೇಳಿ...
ಇದೀಗ ಪುಟ್ಟಕ್ಕ ಅರ್ಥಾತ್ ಉಮಾಶ್ರೀ ಅವರಿಗೆ ಶೂಟಿಂಗ್ ಸೆಟ್ನಲ್ಲಿ ಚೂರಿ ಇರಿದದ್ದು ಹೇಗೆ ಎನ್ನುವ ಶೂಟಿಂಗ್ನ ವಿಡಿಯೋ ವೈರಲ್ ಆಗಿದೆ. ಈ ದೃಶ್ಯದ ಚಿತ್ರೀಕರಣದ ವೇಳೆ ನಡೆದ ಹಾಸ್ಯದ ಘಟನೆಯನ್ನು ಡಿವಿ ಡ್ರೀಮ್ಸ್ ಎನ್ನುವ ಯೂಟ್ಯೂಬ್ ಚಾನೆಲ್ನಲ್ಲಿ ತೋರಿಸಲಾಗಿದೆ. ಪುಟ್ಟಕ್ಕ ಮಗುವನ್ನು ಕರೆದುಕೊಂಡು ಬರುವುದು, ಆ ಸಮಯದಲ್ಲಿ ಬಂಗಾರಮ್ಮನ ರೂಪದಲ್ಲಿ ಇರುವ ಸಿಂಗಾರಮ್ಮ ಚೂರಿ ಹಾಕುವುದು, ಚೂರಿ ಹಾಕಿದಾಗ ಪುಟ್ಟಕ್ಕ ಚೀರುವುದು, ರಕ್ತದ ಮಡುವಿನಲ್ಲಿ ಬೀಳುವುದನ್ನು ಹೇಗೆ ಚಿತ್ರೀಕರಣ ಮಾಡಲಾಗಿದೆ ಎಂದು ಇದರಲ್ಲಿ ತೋರಿಸಲಾಗಿದೆ.
ಇದೇ ಸಮಯದಲ್ಲಿ ಚೂರಿ ಇರಿದ ತಕ್ಷಣ ಪುಟ್ಟಕ್ಕ ಪಾತ್ರಧಾರಿ ಉಮಾಶ್ರೀ ಮತ್ತು ಇತರ ಪಾತ್ರಧಾರಿಗಳು ಹೇಗೆ ಜೋಕ್ ಮಾಡಿಕೊಂಡು ನಕ್ಕಿದ್ದಾರೆ, ಅಲ್ಲಿ ಹೇಗೆಲ್ಲಾ ತಮಾಷೆಗಳು ನಡೆದಿವೆ ಎಂಬ ಬಗ್ಗೆ ಇದರಲ್ಲಿ ತೋರಿಸಲಾಗಿದೆ. ಶೂಟಿಂಗ್ ಸಮಯದಲ್ಲಿ ಒಂದು ದೃಶ್ಯಕ್ಕಾಗಿ ಇಡೀ ತಂಡ ಹೇಗೆಲ್ಲಾ ಕೆಲಸ ಮಾಡುತ್ತದೆ ಎನ್ನುವುದನ್ನು ಇದರಲ್ಲಿ ನೋಡಬಹುದಾಗಿದೆ.
ಬಾವಿಯ ತಣ್ಣೀರು ಮೈಮೇಲೆ ಸುರಿದುಕೊಳ್ಳುವಾಗ ಬಿಸಿಯಾಗೋದು ಹೇಗೆ? ಶೂಟಿಂಗ್ನಲ್ಲಿ ಏನೇನಾಗತ್ತೆ ನೋಡಿ!

