ಪುಟ್ಟಕ್ಕನ ಮಕ್ಕಳು ಧಾರಾವಾಹಿಯಲ್ಲಿ ನಟಿ ಚಂದನಾ ಮಹಾಲಿಂಗಯ್ಯನ (Chandana Mahalingiah), ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಚಂದನಾ ಈ ಧಾರಾವಾಹಿಯಿಂದ ಹೊರಡೆದಿದ್ದಾರೆ ಎನ್ನಲಾಗುತ್ತಿದೆ.
ಕನ್ನಡ ಕಿರುತೆರೆಯಲ್ಲಿ ಪ್ರಸಾರವಾಗುತ್ತಿರುವ ಪ್ರಸಿದ್ಧ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು (Puttakkana Makkalu) ಧಾರಾವಾಹಿ ಕೂಡ ಒಂದು. ಜೀ ಕನ್ನಡ (Zee Kannada) ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳಲ್ಲಿ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಪ್ರೇಕ್ಷಕರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಹಿರಿಯ ನಟಿ ಉಮಾಶ್ರೀ (Umashree) ಮುಖ್ಯಪಾತ್ರದಲ್ಲಿ ನಟಿಸಿರುವ ಈ ಧಾರಾವಾಹಿ ಟಿ ಆರ್ ಪಿಯಲ್ಲೂ ಟಾಪ್ ನಲ್ಲಿದೆ. ಅಂದಹಾಗೆ ಈ ಧಾರಾವಾಹಿಯಿಂದ ಇದೀಗ ಪ್ರಮುಖ ಸುದ್ದಿ ಹೊರಬಿದ್ದಿದೆ. ಪುಟ್ಟಕ್ಕನ ಮಕ್ಕಳು ಸೀರಿಯಲ್ ನಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ನಟಿ ಚಂದನಾ ಧಾರಾವಾಹಿಯಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.
ಈ ಧಾರಾವಾಹಿಯಲ್ಲಿ ನಟಿ ಚಂದನಾ ಮಹಾಲಿಂಗಯ್ಯನ (Chandana Mahalingiah), ಪೂರ್ವಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಆದರೀಗ ಕೇಳಿಬರುತ್ತಿರುವ ಮಾಹಿತಿ ಪ್ರಕಾರ ಚಂದನಾ ಈ ಧಾರಾವಾಹಿಯಿಂದ ಹೊರಡೆದಿದ್ದಾರೆ ಎನ್ನಲಾಗುತ್ತಿದೆ. ಚಂದನಾ ಪುಟ್ಟಕ್ಕನ ಮಕ್ಕಳು ಧಾರಾವಾಹಿ ತೊರೆದಿದ್ದಾರೆ ಎನ್ನುವ ಸುದ್ದಿ ಹಬ್ಬಲು ಕಾರಣವಾಗಿದ್ದು ಪೂರ್ವಿ ಪಾತ್ರದಲ್ಲಿ ಚಂದನಾ ಕಾಣಿಸಿಕೊಳ್ಳದೆ ಅನೇಕ ಸಮಯವಾಗಿದೆ. ಹಾಗಾಗಿ ಚಂದನಾ ಧಾರಾವಾಹಿಯಿಂದ ಹೊರನಡೆದಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.
ಅಂದಹಾಗೆ ಪುಟ್ಟಕ್ಕನ ಮಕ್ಕಳು ಧಾರಾವಾಹಿಯಿಂದ ಹೊರಬಂದ ಬಗ್ಗೆ ನಟಿ ಚಂದನಾ ಯಾವುದೇ ಮಾಹಿತಿ ಬಹಿರಂಗ ಪಡಿಸಿಲ್ಲ. ಅಲ್ಲದೆ ವಾಹಿನಿಕಡೆಯಿಂದನೂ ಯಾವುದೇ ಅಧಿಕೃತ ಮಾಹಿತಿ ಬಹಿರಂಗವಾಗಿಲ್ಲ. ಚಂದನಾ ಹೊರಬಂದಿರುವುದು ನಿಜವೇ ಆಗಿದ್ದರೆ ಸದ್ಯದಲ್ಲೇ ಗೊತ್ತಾಗಲಿದೆ. ಚಂದನಾ ಜಾಗಕ್ಕೆ ಯಾವ ನಟಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗಿಲ್ಲ. ಚಂದನಾ ಬದಲಾಗಿದ್ದಾರೆ ಎನ್ನುವ ಮಾಹಿತಿ ಬಹಿರಂಗವಾಗುತ್ತಿದ್ದಂತೆ ಪೂರ್ವಿಯಾಗಿ ಯಾವ ನಟಿ ಎಂಟ್ರಿ ಕೊಟ್ಟಿದ್ದಾರೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಹೆಚ್ಚಾಗಿದೆ.
Puttakkana Makkalu: ಹ್ಯಾಂಡ್ಸಮ್ ಕಂಠಿ, ಜಗಳಗಂಟಿ ಸ್ನೇಹಾ ಮಧ್ಯೆ ಶುರುವಾಗೇ ಬಿಡ್ತಾ ರೊಮ್ಯಾನ್ಸ್?
ಅಂದಹಾಗೆ ಪೂರ್ವಿ ಧಾರಾವಾಹಿಯ ನಾಯಕ ಕಂಠಿಯನ್ನು ಮದುವೆಯಾಗುವ ಹುಡುಗಿ ಪಾತ್ರವಾಗಿದೆ. ಪೂರ್ವಿ ಜೊತೆ ಮದುವೆಯಾಗಲು ಕಂಠಿಗೆ ಇಷ್ಟವಿಲ್ಲ. ಆದರೆ ಪೂರ್ವಿ ಮತ್ತು ಆಕೆಯ ಅಮ್ಮ ಸೇರಿ ಕಂಠಿ ಜೊತೆ ಮದುವೆ ಮಾಡಿಸಬೇಕೆಂದು ಪ್ಲಾನ್ ಮಾಡಿ ಮದುವೆ ಫಿಕ್ಸ್ ಮಾಡಿಕೊಂಡಿದ್ದಾರೆ. ಪೂರ್ವಿ ಕಂಠಿಯ ಅತ್ತೆಯ ಮಗಳು ಕೂಡ ಆಗಿರುತ್ತಾಳೆ. ಆದರೆ ಕಂಠಿ ನಾಯಕಿ ಸ್ನೇಹಾ ಜೊತೆ ಪ್ರೀತಿಯಲ್ಲಿದ್ದಾನೆ. ಕಂಠಿ ಮನೆಯರಿಗೆ ಈ ವಿಚಾರ ಗೊತ್ತಿಲ್ಲ. ಪೂರ್ವಿ ಜೊತೆ ಮದುವೆ ಮಾಡಲು ತಯಾರಿ ಮಾಡುತ್ತಿದ್ದಾರೆ. ಕಂಠಿ ಪ್ರೀತಿ ವಿಚಾರ ಯಾವಾಗ ಗೊತ್ತಾಗಲಿದೆ, ಕಂಠಿ ಪೂರ್ವಿಯನ್ನೇ ಮದುವೆ ಆಗುತ್ತಾನಾ ಎಂದು ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
'ಪುಟ್ಟಕ್ಕನ ಮಕ್ಕಳು' ಧಾರಾವಾಹಿಯಿಂದ 'ಲಾಯರ್ ಚಂದ್ರು' ಖ್ಯಾತಿಯ ಕಾರ್ತಿಕ್ ಔಟ್; ಹೊಸ ನಟ ಎಂಟ್ರಿ
ಇತ್ತೀಚಿಗಷ್ಟೆ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದ ನಟ ಕಾರ್ತಿಕ್(Karthik) ಹೊರನಡೆದಿದ್ದರು.ಈ ಧಾರಾವಾಹಿಯಲ್ಲಿ ಕಾರ್ತಿಕ್, ಚಂದ್ರು ಎನ್ನುವ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕಾರ್ತಿಕ್ ಜಾಗಕ್ಕೆ ಮತ್ತೋರ್ವ ನಟ ನಂದೀಶ್ ಎಂಟ್ರಿ ಕೊಟ್ಟಿದ್ದಾರೆ.
ಪುಟ್ಟಕ್ಕನ ಮಕ್ಕಳು ಮೂರು ಹೆಣ್ಣು ಮಕ್ಕಳ ಕಥೆ. ಮೂರು ಹೆಣ್ಣು ಮಕ್ಕಳು ಎನ್ನುವ ಕಾರಣಕ್ಕೆ ಪುಟ್ಟಕ್ಕನ ಗಂಡ ಹೆಂಡತಿಯನ್ನೇ ಬಿಟ್ಟು ಹೋಗಿ ಮತ್ತೋರ್ವ ಹೆಂಡತಿಯ ಜೊತೆ ಸಂಸಾರ ಮಾಡುತ್ತಿದ್ದಾನೆ. ಒಂಟಿ ಹೆಣ್ಣು ಪುಟ್ಟಕ್ಕ ಮೂವರು ಹೆಣ್ಣು ಮಕ್ಕಳನ್ನು ಸಾಕುವ ಕಥೆಯೇ ಪುಟ್ಟಕ್ಕನ ಮಕ್ಕಳು.
