ಬೆಂಗಳೂರು (ಡಿ. 13): ಯೂಟ್ಯೂಬ್ ನಲ್ಲಿ ದಿನಾ ದಿನಾ ಟ್ರೆಂಡ್ ಬದಲಾಗುತ್ತಲೇ ಇರುತ್ತದೆ. ಹೊಸ ಹೊಸ ವಿಡಿಯೋಗಳು ಸದ್ದು ಮಾಡುತ್ತಲೇ ಇರುತ್ತದೆ. 

ಕಳೆದ ಎರಡು ದಿನಗಳಿಂದ ನೇಹಾ ಕಕ್ಕರ್ ಡ್ಯಾನ್ಸ್ ಮಾಡುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ನೇಹಾ ಕಾಕರ್ ಅದ್ಭುತ ಗಾಯಕಿ ಅನ್ನೋದ್ರಲ್ಲಿ ಅನುಮಾನವೇ ಇಲ್ಲ. ಅದು ಗೊತ್ತಿರುವ ವಿಚಾರವೇ. ಆದರೆ ಆಕೆ ಅದ್ಭುತ ಡ್ಯಾನ್ಸರ್ ಅನ್ನೋ ವಿಚಾರ ಎಷ್ಟೋ ಮಂದಿಗೆ ಗೊತ್ತಿಲ್ಲ. 
ಆಂಕ್ ಮರೆ ಎನ್ನುವ ಸಿನಿಮಾದ ಹಾಡೊಂದಕ್ಕೆ ಸೂಪರ್ ಆಗಿ ಸ್ಟೆಪ್ ಹಾಕಿದ್ದಾರೆ. ಇವರ ಡ್ಯಾನ್ಸಿಂಗ್ ವಿಡಿಯೋ ಯೂಟ್ಯೂಬ್ ನಲ್ಲಿ ಧಮಾಕಾ ಎಬ್ಬಿಸಿದೆ. 

  ಹೇಗಿತ್ತು ನೀವೇ ಒಮ್ಮೆ ನೋಡಿ.