ಕಿರುತೆರೆಯಲ್ಲಿ ರಿಯಾಲಿಟಿ ಶೋಗಳ ಅಬ್ಬರ ಹೆಚ್ಚಾಗಿ, ಕನ್ನಡ ವಾಹಿನಿಗಳಲ್ಲೂ ಬಿಗ್ ಬಾಸ್, ಕನ್ನಡದ ಕೋಟ್ಯಧಿಪತಿ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಕಾಮಿಡಿ ಕಿಲಾಡಿಗಳು ಹೀಗೆ ಪ್ರೇಕ್ಷಕರನ್ನು ಮನೋರಂಜಿಸಲು ಸಾಲು ಸಾಲು ಕಾರ್ಯಕ್ರಮಗಳು ಬಿತ್ತರಗೊಳ್ಳುತ್ತಿವೆ. ಹಿಂದಿ ವಾಹಿನಿಗಳೂ ಇದರಿಂದ ಹಿಂದೆ ಬಿದ್ದಿಲ್ಲ. ಬಿಗ್ ಬಾಸ್ ಸೀಸನ್-13 ಹಾಗೂ ಇದೀಗ ಇಂಡಿಯನ್ ಐಡಲ್ ಸಹ ಶುರುವಾಗಿದೆ. ಪ್ರತಿಭಾನ್ವಿತರು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುತ್ತಿದ್ದರೆ, ಪ್ರೇಕ್ಷಕರು ಅದನ್ನು ನೋಡಿ ಮೂಕ ವಿಸ್ಮಿತರಾಗುತ್ತಿದ್ದಾರೆ. 

ಬಡತನದಿಂದ ಬಂದ ಸರಿಗಮಪ ಹುಡುಗ ಕರುನಾಡಿನ ಮನೆಮಾತಾದ ಕಥೆ!

ರಿಯಾಲಿಟಿ ಶೋ ಭರಾಟೆ, ಟಿಆರ್‌ಪಿಗಾಗಿ ನಡೆಯೋ ಆಟಗಳು...ಎಲ್ಲವೂ ಗೊತ್ತಿದ್ದೂ ಪ್ರೇಕ್ಷಕ ಮಾತ್ರ ಇಂಥ ಶೋಗಳಿಗೆ ಮರುಳಾಗದೇ ಇರೋಲ್ಲ. ಅಲ್ಲಿ ಅಳ್ತಾರೆ, ಕುಣಿಯುತ್ತಾರೆ, ನಗುತ್ತಾರೆ....ಆದರೆ, ಅದು ನಿಜವೋ, ಸುಳ್ಳೋ ಗೊತ್ತಿಲ್ಲ. ತಮಗೆ ಬೇಕಾದ್ದನ್ನು, ತಮ್ಮಿಷ್ಟದಂತೆ ಸ್ವೀಕರಿಸುವ ನೋಡುಗ ಮಾತ್ರ ಮಜಾ ತೆಗೆದುಕೊಳ್ಳುತ್ತಾನೆ. 

 

ಹೀಗೆ ಪ್ರೇಕ್ಷಕನನ್ನು ಆಗರ್ಷಿಸುವಲ್ಲಿ ಯಶಸ್ವಿಯಾದ ಮತ್ತೊಂದು ರಿಯಾಲಿಟಿ ಶೋ ಸೋನಿ ಟಿವಿಯಲ್ಲಿ ಪ್ರಸಾರವಾಗುವ ಇಂಡಿಯನ್ ಐಡಲ್ ಸೀಸನ್ 11. ಇದರ ಮೆಗಾ ಆಡಿಷನ್ ನಡೆಯುತ್ತಿದೆ. ಆದಿತ್ಯ ನಾರಾಯಣ್ ಈ ಕಾರ್ಯಕ್ರಮವನ್ನು ನಿರೂಪಿಸುತ್ತಿದ್ದು, ನೀಹಾ ಕಕ್ಕರ್, ವಿಶಾಲ್ ದಾಲ್ದೀನ್ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 

ಆ ಒಂದು ಚುಂಬನ...

ಕೈ ತುಂಬಾ ಗಿಫ್ಟ್ ಹಿಡಿದು ವೇದಿಕೆ ಮೇಲೆ ಆಗಮಿಸಿದ ಸ್ಪರ್ಧಿಯೊಬ್ಬನ ವೇಷ ಭೂಷಣ ಜಡ್ಜ್‌ಗಳ ಗಮನ ಸೇಳೆದಿತ್ತು. ಗಾಯಕಿ ನೇಹಾಳಿಗೆ ಗಿಫ್ಟ್ ನೀಡಲು ಆ ಸ್ಪರ್ಧಿ ವೇದಿಕೆಗೆ ಆಹ್ವಾನಿಸಿದ. ಗಿಫ್ಟ್‌ ನೀಡಿದ ಬಳಿಕ 'ಥ್ಯಾಂಕ್ಸ್‌' ಎಂದ ಗಾಯಕಿ ಸ್ಪರ್ಧಿಯನ್ನು ಅಪ್ಪಿಕೊಳ್ಳುತ್ತಾರೆ. ತಕ್ಷಣವೇ ಆತ ಅವರನ್ನು ಬಿಗಿದಪ್ಪಿ, ಚುಂಬಿಸಿಯೇ ಬಿಡುತ್ತಾನೆ. ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.  ಈ ವೇಳೆ ನಿರೂಪಕ ಘಟನೆಯನ್ನು ತಡೆಯಲು ಯತ್ನಿಸುತ್ತಾರೆ. ಆದರೂ ಎಲ್ಲವೂ ಕ್ಷಣ ಮಾತ್ರದಲ್ಲಿ ನಡೆದು ಬಿಡುತ್ತದೆ ಮತ್ತೊಬ್ಬ ತೀರ್ಪುಗಾರ ವಿಶಾಲ್ ದಿಗ್ಭ್ರಾಂತರಾಗಿ ಈ ಘಟನೆಗೆ ಸಾಕ್ಷಿಯಾಗಿದ್ದಾರೆ. ಈ ಘಟನೆ ಬಗ್ಗೆ ಏನೂ ಪ್ರತಿಕ್ರಿಯೆ ತೋರದ ನೇಹಾ ಕುರ್ಚಿ ಮೇಲೆ ಕುಳಿತು ಕಣ್ಣೀರಿಡುತ್ತಾರೆ. 

BB7; ಬಯಲಾಯ್ತು ಮದ್ವೆ ಗುಟ್ಟು, 'ಅಗ್ನಿಸಾಕ್ಷಿ' ಚಂದ್ರಿಕಾಳ ಸಿಂಗಲ್‌ ಲೈಫ್‌ಗೆ ಬ್ರೇಕ್?

ಈ ಹಿಂದೆ ಈ ನೇಹಾರನ್ನು ಆ ಸ್ಪರ್ಧಿ ಭೇಟಿ ಮಾಡಿದ್ದು, ಅದರಿಂದಾನೇ ಸಲುಗೆಯಿಂದ ಮಾತನಾಡಿದ್ದಾರೆ. ಈ ವರ್ತನೆಯೇ ಅಲ್ಲಿದ್ದವರಿಗೆ ಕೊಂಚ ಮುಜುಗರ ಮಾಡಿತ್ತು. ಈ ಘಟನೆ ಬಗ್ಗೆ ನೇಹಾ ಅಭಿಮಾನಿಗಳು 'ಇದು ಲೈಂಗಿಕ ದೌರ್ಜನ್ಯ' ಎಂದೇ ಆರೋಪಿಸುತ್ತಿದ್ದಾರೆ. ಒಟ್ಟಿನಲ್ಲಿ ಸ್ಪರ್ಧಿ ಹಗ್ ಮಾಡಿದ್ದು, ಅದಕ್ಕೆ ಜಡ್ಜ್ ಪ್ರತಿಕ್ರಿಯೆ ನೀಡಿದ್ದು ಎಲ್ಲವೂ ಒಂದಕ್ಕೊಂದು ಪೂರ್ವ ನಿಯೋಜಿತವೋ ಅಥವಾ ಆ ಸಂದರ್ಭಕ್ಕೆ ತಕ್ಕಂತೆ ನಡೆದಿರುವ ಘಟನೆಯೋ ಗೊತ್ತಿಲ್ಲ. ಅದರಲ್ಲಿಯೂ ರಿಯಾಲಿಟಿ ಶೋ ವೇದಿಕೆ ನಡೆಯುವ ಇಂಥ ಘಟನೆಗಳೂ ಟಿಆರ್‌ಪಿಗಾಗಿಯೇ ನಡೆಯುತ್ತೆ ಎನ್ನುವ ಆರೋಪವೂ ಇದೆ.