Asianet Suvarna News Asianet Suvarna News

Saregama Little champs: ವೇದಿಕೆಯಲ್ಲೇ ಅಮ್ಮನಿಗೆ ಬಳೆ ತೊಡಿಸಿದ ಗುರುಪ್ರಸಾದ್,ವೀಕ್ಷಕರು ಭಾವುಕ

ಜೀ ಕನ್ನಡದ ಸರೆಗಮಪ ಲಿಟಲ್‌ ಚಾಂಪ್ಸ್ ವೇದಿಕೆ ಅಮ್ಮ ಮಗನ ಭಾವುಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಏಕಾಂಗಿಯಾಗಿ ಮನೆ ಕೆಲಸ ಮಾಡಿ ಮಗ, ಮನೆಯನ್ನು ಪೊರೆಯುತ್ತಿರುವ ಅಮ್ಮನಿಗೆ ಎಳೆಯ ಗಾಯಕ ಗುರುಪ್ರಸಾದ್ ಗಾಜಿನ ಬಳೆ ತೊಡಿಸಿದ್ದಾನೆ. ಅಮ್ಮ ಕಣ್ಣೀರಾಗಿದ್ದಾರೆ. ಈ ಭಾವುಕ ಕ್ಷಣ ನೋಡಿ ವೀಕ್ಷಕರ ಕಣ್ಣಂಚೂ ಒದ್ದೆಯಾಗಿದೆ.

 

In Saregamapa Little champs Guprasad gave Bangles to his mother
Author
First Published Dec 5, 2022, 12:50 PM IST

ಜೀ ಕನ್ನಡದ ಬಹಳ ಜನಪ್ರಿಯ ಕಾರ್ಯಕ್ರಮ ಸರೆಗಮಪ ಲಿಟಲ್‌ ಚಾಂಪ್ಸ್. ಮಕ್ಕಳ ಗಾಯನ ಪ್ರತಿಭೆಯನ್ನು ಜಗತ್ತಿಗೆ ಪರಿಚಯಿಸುವ ಈ ಕಾರ್ಯಕ್ರಮ ಇದೀಗ ಮನೆಮಾತಾಗಿದೆ. ಅನೇಕ ಪುಟ್ಟ ಮಕ್ಕಳು ಇಲ್ಲಿ ಹಾಡಿ ಇಲ್ಲಿಂದಲೇ ಜನಪ್ರಿಯತೆ ಗಳಿಸಿಕೊಂಡು ಎತ್ತರಕ್ಕೆ ಬೆಳೆದ ಉದಾಹರಣೆಗಳಿವೆ. ಈ ಬಾರಿಯ ಸರೆಗಮಪ ಲಿಟಲ್‌ ಚಾಂಪ್ಸ್‌ ವೇದಿಕೆಯಲ್ಲಿ ವಿಭಿನ್ನ ಹಿನ್ನೆಲೆಯಿಂದ ಬಂದ ಮಕ್ಕಳಿದ್ದಾರೆ. ಅದರಲ್ಲಿ ಗುರುಪ್ರಸಾದ್ ಕೂಡ ಒಬ್ಬ. ಈ ಪುಟ್ಟ ಹುಡುಗನ ಬದುಕೇ ಕಣ್ಣೀರ ಕಥೆ. ಆದರೂ ತನ್ನ ನೋವನ್ನೆಲ್ಲ ಹಾಡಿನಲ್ಲೇ ಮರೆಯುವ ಗುಣ ಈ ಬಾಲಕನಿಗೆ ಸಿದ್ಧಿಸಿದೆ. ಲಿಟಲ್‌ ಚಾಂಪ್ಸ್ ವೇದಿಕೆಯಲ್ಲಿ ಸುಂದರವಾದ ಹಾಡುಗಳನ್ನು ಹಾಡುತ್ತ ಬಂದಿರುವ ಈ ಮೈಸೂರಿನ ಪೋರ ಜಡ್ಜಸ್ ಮೆಚ್ಚುಗೆಗೂ ಪಾತ್ರವಾಗಿದ್ದಾನೆ. ಇದೀಗ ಈತನ ಮೂಲಕ ಒಂದು ಭಾವುಕ ಕ್ಷಣಕ್ಕೆ ಸರೆಗಮಪ ಲಿಟಲ್‌ ಚಾಂಪ್ಸ್ ವೇದಿಕೆ ಸಜ್ಜಾಗಿದೆ. ಈತ ಈ ವೇದಿಕೆಯಲ್ಲೇ ಹಾಡಿನ ಮೂಲಕ ತನ್ನಮ್ಮನ ಬಡಕಲು ಕೈಗಳಿಗೆ ಹೊಸ ರಂಗು ತಂದಿದ್ದಾನೆ. ಅಮ್ಮ ಭಾವುಕರಾಗಿ ವೇದಿಕೆಯಲ್ಲೇ ಕಣ್ಣೀರು ಹಾಕಿದ್ದಾರೆ.

ಕಳೆದ ವಾರದ ಸರೆಗಮಪ ವೇದಿಕೆ ಅಮ್ಮ ಮಗನ ಎಮೋಶನಲ್‌ ಕ್ಷಣಗಳಿವೆ ವೇದಿಕೆ ಆಯ್ತು. ಗುರುಪ್ರಸಾದ್ ವೇದಿಕೆಯ ಮೇಲೆ ಅಮ್ಮನಿಗಾಗಿ ಅದ್ಭುತವಾದ ಗೀತೆಯೊಂದನ್ನು ಹಾಡಿದ. ರಾಜ್ಯವೇ ಹೆಮ್ಮೆ ಪಡುವಂಥಾ ಪ್ರತಿಭಾವಂತ ಕಿರಿಯ ಗಾಯಕನನ್ನು ನೋಡಿ ದಿಗ್ಗಜರಾದ ಹಂಸಲೇಖ ಅವರೇ ಹುಡುಗನನ್ನು ಹರಸಿದರು. ಪ್ರಸಿದ್ಧ ಗಾಯಕ ವಿಜಯ ಪ್ರಕಾಶ್ ಈ ಕ್ಷಣದ ಸಾಕ್ಷಿಯಾಗಿ ಹೊಸತೊಂದು ಅಧ್ಯಾಯಕ್ಕೆ ನಾಂದಿ ಹಾಡಿದರು. ಈ ಮೂಲಕ ಈ ಬಾರಿಯ ಸರೆಗಮಪ ವೇದಿಕೆಗೆ ಬೇರೆಯದೇ ರಂಗು ಬಂತು. ಇದಕ್ಕೆಲ್ಲ ಕಾರಣ ಆದದ್ದು ಮೈಸೂರಿನ ಕಿರಿಯ ಗಾಯಕ ಗುರುಪ್ರಸಾದ್. ಈತ ಬಡತನದಲ್ಲಿ ಬಹಳ ಕಷ್ಟದಲ್ಲಿ ಬೆಳೆದವನು. ಆದರೆ ಹಾಡಿನ ಪ್ರೀತಿ ಈತನನ್ನು ಮತ್ತೊಂದು ಎತ್ತರಕ್ಕೆ ಏರಿಸಿತು.

ಸಾನ್ಯ ಅಯ್ಯರ್ ಮೈ ಮೇಲೆ ಕಾಮಾಕ್ಯ ದೇವಿ; ವೈರಲ್ ವಿಡಿಯೋ ಹಿಂದಿರುವ ಗುಟ್ಟು ಏನು?

'ಎಲ್ಲ ಅಮ್ಮಂದಿರು ಕೈಯಲ್ಲಿ ಬಳೆ ಅಥವಾ ವಾಚ್ ಹಾಕ್ತಾರೆ. ನಮ್ಮ ಅಮ್ಮನ ಕೈಯಲ್ಲಿ ಏನೂ ಇರುತ್ತಿರಲಿಲ್ಲ. ಕೆಲಸ ಮಾಡ್ತಾ, ಮಾಡ್ತಾ ಬಳೆಯಲ್ಲಾ ಒಡೆದು ಹೋಗ್ತಾ ಇತ್ತು. ಹೀಗಾಗಿ ಅಮ್ಮನ ಕೈ ಹೆಚ್ಚಿನ ವೇಳೆ ಬೋಳಾಗಿಯೇ ಇರುತ್ತಿತ್ತು. ಆ ಕೈಗೆ ಬಣ್ಣ ತುಂಬಿಸಬೇಕು ಅನ್ನುವುದು ನನ್ನ ಕನಸು. ಅದಕ್ಕಾಗಿ ಅಮ್ಮನಿಗೆ ಬಳೆ ತಂದಿದ್ದೇನೆ' ಎಂದು ಗುರುಪ್ರಸಾದ್ ಹೇಳಿದ್ದಾನೆ. ಆತನೆ ತಾಯಿಯ ಕೈಗೆ ಬಳೆ(Bangle) ತೊಡಿಸಿದ್ದಾನೆ. ಇನ್ನು ನೋಡಿ ಆತನ ತಾಯಿಯ ಕಣ್ಣಲ್ಲಿ ನೀರು(Tears) ಬಂದಿದೆ. ಆಕೆ ವೇದಿಕೆಯ ಮೇಲೇ ಗದ್ಗದಿತರಾಗಿದ್ದಾರೆ. ಜಡ್ಜಸ್ ಮಾತ್ರವಲ್ಲ, ವೀಕ್ಷಕರೂ ಈ ಭಾವುಕ(Emotional)  ಕ್ಷಣಗಳಿಗೆ ಸಾಕ್ಷಿಯಾಗಿದ್ದಾರೆ. ಎಲ್ಲರ ಕಣ್ಣಂಚೂ ಒದ್ದೆಯಾಗಿದೆ. 6 ತಿಂಗಳ ಹಿಂದೆ ಈ ಹದಿನೈದರ ಹರೆಯದ ಹುಡುಗನ ಅಪ್ಪ ಹಾರ್ಟ್ ಅಟ್ಯಾಕ್ ಆಗಿ ತೀರಿ ಹೋಗಿದ್ದಾರಂತೆ. ಅಮ್ಮ ಮನೆ ಕೆಲಸ ಮಾಡಿ ಇವರನ್ನು ಸಾಕುತ್ತಿದ್ದಾಳೆ. ತಿಂಗಳಿಗೆ 7 ಸಾವಿರ ಬರುತ್ತಂತೆ. ಅದರಲ್ಲೇ ಮಗನ ಓದು, ಮನೆಯ ಖರ್ಚು ನಿಭಾಯಿಸುತ್ತಾರೆ.

ಈ ವೇಳೆ ನಿರೂಪಕಿ ಅನುಶ್ರೀ 'ಸಂಗೀತ(Music) ಕಲಿಯುತ್ತಿದ್ದೀರಾ' ಎಂದು ಗುರುಪ್ರಸಾದ್‌ನನ್ನು ಕೇಳುತ್ತಾರೆ. ಆತ ಇಲ್ಲ ಎನ್ನುತ್ತಾನೆ. 'ಮತ್ತೆ ಹೇಗೆ ಹಾಡ್ತೀರಿ?' ಎಂದಿದ್ದಕ್ಕೆ, 'ವಿಜಯ್ ಪ್ರಕಾಶ್ ಅವರ ಹಾಡು ಕೇಳಿ ಕಲಿತಿದ್ದೇನೆ' ಎನ್ನುತ್ತಾನೆ. ಗಾಯಕ ವಿಜಯ್ ಪ್ರಕಾಶ್ ಅವರಿಗೆ ಇದು ಅಚ್ಚರಿಯ ಕ್ಷಣ. ಅವರು ಖುಷಿಯಿಂದಲೇ ಗುರುಪ್ರಸಾದ್‍ ಗೆ ಸಂಗೀತ ಪಾಠ ಹೇಳಿಕೊಡಲು ಒಪ್ಪಿಕೊಂಡಿದ್ದಾರೆ. ಎಷ್ಟು ದಿನ ಇಲ್ಲಿ ಇರ್ತಿಯೋ ಗೊತ್ತಿಲ್ಲ. ನೀನು ಇರುವ ತನಕ ನನ್ನ ಕೈಯಲ್ಲಿ ಆಗಿದ್ದು, ನಾನು ಸಂಗೀತ ಪಾಠ ಹೇಳಿ ಕೊಡ್ತೇನೆ ಎಂದು ವಿಜಯ್ ಪ್ರಕಾಶ್ ಅವರು ಹೇಳಿದ್ದಾರೆ. ವೇದಿಕೆಯಲ್ಲೇ ಸರಿಗಮಪ ಸಂಗೀತ ಪಾಟ ಶುರುವಾಗಿದೆ.

ರೂಪೇಶ್‌ ಶೆಟ್ಟಿ ಬೇಕೆಂದು ದೂರ ಉಳಿಯುತ್ತಿದ್ದಾನೆ, ನಮ್ಮ ಸಂಬಂಧ ಬದಲಾಗುವುದಿಲ್ಲ: ಸಾನ್ಯಾ ಅಯ್ಯರ್

ಇದನ್ನು ನೋಡಿದ ವೀಕ್ಷಕರೂ ವಾಹಿನಿ ಬಗ್ಗೆ, ಈ ಕಾರ್ಯಕ್ರಮ(Program)ದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಹೇಳಿದ್ದಾರೆ.

Follow Us:
Download App:
  • android
  • ios