ವೃತ್ತಿ ಧರ್ಮ ಎತ್ತಿ ಹಿಡಿದ ರಾಮಾಚಾರಿ, ಚಾರು ಮದ್ವೆಗೂ ಪೌರೋಹಿತ್ಯ ಮಾಡಿಸ್ತಾನಾ ಚಾರಿ?
ರಾಮಾಚಾರಿ ಸೀರಿಯಲ್‌ನಲ್ಲಿ ರಾಮಾಚಾರಿ ಉಭಯ ಸಂಕಟದಲ್ಲಿ ಸಿಲುಕಿದ್ದಾನೆ. ತನ್ನ ಹೆಂಡತಿ ಚಾರು ಜಾತಕ ಇನ್ನೊಬ್ಬ ಹುಡುಗನ ಜೊತೆ ಕೂಡಿ ಬರುತ್ತಾ ಇಲ್ವಾ ಅಂತ ಹೇಳಬೇಕಿದೆ. ಇಲ್ಲಿ ಪತಿ ಧರ್ಮ ಇಟ್ಟು ವೃತ್ತಿ ಧರ್ಮ ಎತ್ತಿ ಹಿಡಿಯೋ ರಾಮಾಚಾರಿಗೆ ಚಾರು ಪ್ರಶ್ನೆ ಮಾಡ್ತಿದ್ದಾಳೆ.
ರಾಮಾಚಾರಿ ಸೀರಿಯಲ್‌ನಲ್ಲಿ ಇದೀಗ ಕುತೂಹಲದ ತಿರುವು ಬಂದಿದೆ. ತನ್ನ ಪತ್ನಿಯ ಜಾತಕ ಇನ್ನೊಬ್ಬ ಹುಡುಗನ ಜೊತೆಗೆ ಸರಿ ಹೋಗುತ್ತಾ ಇಲ್ವಾ ಅಂತ ಹೇಳ್ಬೇಕಾದ ಪೇಚಿಗೆ ರಾಮಾಚಾರಿ ಸಿಲುಕಿದ್ದಾನೆ. ಅವನ ದುರಾದೃಷ್ಟಕ್ಕೆ ಜಾತಕ ಕರೆಕ್ಟಾಗಿ ಕೂಡಿಬರ್ತಿದೆ. ಈಗ ಜಾತಕ ಸರಿ ಬರುತ್ತೆ ಅಂತ ಸತ್ಯ ಹೇಳಿದರೆ ತಾನು ಮದುವೆಯಾದ ಚಾರುವಿಗೆ ಮೋಸ ಮಾಡಿದಂತೆ. ಸುಳ್ಳು ಹೇಳಿದರೆ ತನ್ನ ವೃತ್ತಿಗೆ ಮೋಸ ಮಾಡಿದಂತೆ. ಸದ್ಧರ್ಮದ ಪರವಾಗಿಯೇ ನಿಲ್ಲೋ ರಾಮಾಚಾರಿ ಎಲ್ಲರೂ ಅಂದುಕೊಂಡ ಹಾಗೆ ತನ್ನ ವೃತ್ತಿ ಧರ್ಮಕ್ಕೇ ಜೈ ಅಂದಿದ್ದಾನೆ. ಅಂದರೆ ತಾನು ಮದುವೆಯಾದ ಹುಡುಗಿ ಚಾರುವಿನ ಜಾತಕ ಇನ್ನೊಬ್ಬ ಹುಡುಗನ ಜಾತಕದ ಜೊತೆಗೆ ಕೂಡಿ ಬರುತ್ತೆ ಅನ್ನೋ ಮಾತು ಹೇಳಿದ್ದಾನೆ. ಇದು ಚಾರುವಿಗೆ ಆಘಾತ ತಂದಿದೆ. ಆಕೆಯ ಮಾತು ರಾಮಾಚಾರಿಯನ್ನು ಇರಿಯುತ್ತಿದೆ. ಆತ ಧರ್ಮಸಂಕಟದಲ್ಲಿ ಬಿದ್ದಿದ್ದಾನೆ. ಈಗ ರಾಮಾಚಾರಿ ಹೇಳಿದ ಮಾತಿನ ಪ್ರಕಾರ ಬೇರೆ ಹುಡುಗನ ಜೊತೆಗೆ ಚಾರು ಮದುವೆ ನಡೀಬೇಕಿದೆ.
ಇಷ್ಟು ದಿನ ಹಾವು ಮುಂಗುಸಿಯಂತೆ ದ್ವೇಷ ಕಾರುತ್ತಿದ್ದ ರಾಮಾಚಾರಿ ಹಾಗೂ ಚಾರುಲತಾ ಪತಿ - ಪತ್ನಿಯಾಗಿ ಕೆಲ ದಿನಗಳಾಗಿವೆ. ಪ್ರಕೃತಿ ಸಾಕ್ಷಿಯಾಗಿ ಚಾರುಲತಾ ಕೊರಳಿಗೆ ರಾಮಾಚಾರಿ ತಾಳಿ ಕಟ್ಟಿದ್ದಾನೆ. ಅದಕ್ಕೂ ಮೊದಲು ತನ್ನನ್ನು ತಬ್ಬಿಕೊಂಡ ಚಾರುವನ್ನು ರಾಮಾಚಾರಿ ತಳ್ಳಿದ ಪರಿಣಾಮ ಕೆಮಿಕಲ್ ಮೇಲೆ ಬಿದ್ದ ಚಾರುಲತಾ ಕಣ್ಣಿನ ದೃಷ್ಟಿ ಕಳೆದುಕೊಳ್ಳುತ್ತಾಳೆ. ಚಾರುಲತಾ ಶಾಶ್ವತವಾಗಿ ದೃಷ್ಟಿ ಕಳೆದುಕೊಂಡಿದ್ದಾಳೆ ಎಂದು ವೈದ್ಯರು ಕೂಡ ಹೇಳುತ್ತಾರೆ. ತಾನು ಮಾಡಿದ ಎಡವಟ್ಟಿನಿಂದಾಗಿ ಚಾರುಲತಾ ದೃಷ್ಟಿ ಕಳೆದುಕೊಂಡಳು ಎಂಬ ಪಾಪಪ್ರಜ್ಞೆ ರಾಮಾಚಾರಿಗೆ ಕಾಡುತ್ತಿರುತ್ತೆ. ಹೀಗಾಗಿ, ಚಾರುಲತಾಗೆ ದೃಷ್ಟಿ ಬರಿಸಲು ರಾಮಾಚಾರಿ ಪಡುವ ಪ್ರಯತ್ನ ಒಂದೆರಡಲ್ಲ. ಕಡೆಗೂ ಚಾರುಲತಾಗೆ ಕಣ್ಣಿನ ದೃಷ್ಟಿ ಬರುತ್ತೆ. ಆದ್ರೆ ಈ ವಿಚಾರ ರಾಮಾಚಾರಿಗೆ ಗೊತ್ತಾಗಲ್ಲ. ಯಾಕಂದ್ರೆ, ಕಣ್ಣು ಕಾಣಿಸೋದು ರಾಮಾಚಾರಿಗೆ ಗೊತ್ತಾದರೆ ತನ್ನಿಂದ ಆತ ದೂರಾಗಬಹುದು ಎಂಬ ಭಯ ಚಾರುಲತಾಗೆ. ಹೀಗಾಗಿ ನನ್ನನ್ನ ಮದುವೆಯಾಗಿ ಜೀವನ ಪೂರ್ತಿ ಕಣ್ಣಾಗಿರು. ಇಲ್ಲಾಂದ್ರೆ ಬೆಟ್ಟದ ಮೇಲಿಂದ ಬಿದ್ದು ಸಾಯ್ತೀನಿ ಎಂದು ಚಾರುಲತಾ ಒತ್ತಡ ಹೇರುತ್ತಾಳೆ. ವಿಧಿಯಿಲ್ಲದೇ ಕಳೆದುಕೊಂಡ ಕಣ್ಣನ್ನ ನಾನು ವಾಪಸ್ ಕೊಡೋದಕ್ಕೆ ಆಗಲಿಲ್ಲ. ಆದರೆ, ಬಾಳ ಸಂಗಾತಿಯಾಗಿ ಜೀವನಪರ್ಯಂತ ನಿಮ್ಮ ಕಣ್ಣಾಗಿರ್ತೀನಿ ಅಂತ ಹೇಳಿ ಚಾರುಲತಾ ಕೊರಳಿಗೆ ರಾಮಾಚಾರಿ ಅರಶಿನ ದಾರ ಕಟ್ಟುತ್ತಾನೆ ಮಾಡುತ್ತಾನೆ.
ಪ್ರಕೃತಿ ಸಾಕ್ಷಿಯಾಗಿ ಚಾರುಗೆ ತಾಳಿ ಕಟ್ಟಿದ ರಾಮಚಾರಿ: ದ್ರೋಹಿಗೆ ಬಾಳು ಕೊಟ್ರಾ ಎಂದು ನೆಟ್ಟಿಗರು!
ಮದುವೆಯಾಗಿರುವ ವಿಷಯವನ್ನ ರಾಮಾಚಾರಿ ಹಾಗೂ ಚಾರುಲತಾ ಮನೆಯಲ್ಲಿನ್ನೂ ಹೇಳಿಲ್ಲ. ಇತ್ತ ಚಾರುಲತಾಗೆ ಮದುವೆ ಮಾಡಿಸಲು ತಾಯಿ ಮಾನ್ಯತಾ ಮುಂದಾಗಿದ್ದಾರೆ. ಜಾತಕ ನೋಡುವ ಜವಾಬ್ದಾರಿ ರಾಮಾಚಾರಿ ಹೆಗಲಿಗೆ ಬಿದ್ದಿದೆ. ತನ್ನ ಪತ್ನಿ ಹಾಗೂ ಪತ್ನಿಗೆ ಬಂದಿರುವ ಸಂಬಂಧದ ಜಾತಕವನ್ನ ರಾಮಾಚಾರಿ ನೋಡಬೇಕಿದೆ. ವೃತ್ತಿಧರ್ಮವನ್ನ ಪಾಲಿಸಿ ಜಾತಕವನ್ನ ರಾಮಾಚಾರಿ ಮ್ಯಾಚ್ ಮಾಡುತ್ತಾನೋ, ಅಥವಾ ಪತಿಧರ್ಮವನ್ನ ಪಾಲಿಸಿ ಪತ್ನಿಯನ್ನ ರಾಮಾಚಾರಿ ಬಚಾವ್ ಮಾಡುತ್ತಾನೋ ಎಂಬ ಪ್ರಶ್ನೆ ಇತ್ತು. ಅದಕ್ಕೀಗ ಉತ್ತರ ಸಿಕ್ಕಿದೆ. ರಾಮಾಚಾರಿ ತನ್ನ ವೃತ್ತಿ ಧರ್ಮಕ್ಕೇ ಜೈ ಅಂದಿದ್ದಾನೆ. ಆ ಮೂಲಕ ಪತಿ ಧರ್ಮಕ್ಕೆ ಮೋಸ ಮಾಡಿದ್ದಾನೆ ಅನ್ನೋದು ಚಾರು ಆಕ್ಷೇಪ. ಆಕೆ ರಾಮಾಚಾರಿಯ ಈ ನಡೆಯನ್ನು ಪ್ರಶ್ನೆ ಮಾಡುತ್ತಾಳೆ. ನೀನು ಕಟ್ಟಿದ ಈ ತಾಳಿಗೋಸ್ಕರ ಒಂದು ಸುಳ್ಳು ಹೇಳೋದಕ್ಕೆ ಆಗಿಲ್ವಾ ಅಂತ ಕೇಳ್ತಾಳೆ. ಇದಕ್ಕೆ ರಾಮಾಚಾರಿಯ ಬಳಿ ಸರಿಯಾದ ಉತ್ತರ ಇಲ್ಲ.
ಮುಂದೆ ತನ್ನ ಕೈಯ್ಯಾರೆ ಚಾರು ಮದುವೆಯನ್ನು ಚಾರಿ ಮಾಡೋ ಸಂದರ್ಭವೂ ಬರಬಹುದಾ ಅನ್ನೋ ಸಂದೇಹ ವೀಕ್ಷಕರದು. ಸತ್ಯಸಂಧ ರಾಮಾಚಾರಿ ಆಗ ಏನು ಮಾಡಬಹುದು ಅನ್ನೋ ಕುತೂಹಲ ಇದೆ. ರಾಮಾಚಾರಿಯಾಗಿ ರಿತ್ವಿಕ್ ಕೃಪಾಕರ್, ಚಾರುಲತಾ ಪಾತ್ರದಲ್ಲಿ ಮೌನಾ ಗುಡ್ಡೇಮನೆ ನಟಿಸಿದ್ದಾರೆ. ಝಾನ್ಸಿ ಸುಬ್ಬಯ್ಯ, ಶಂಕರ್ ಅಶ್ವತ್ಥ್, ಗುರುದತ್ ಮುಖ್ಯಪಾತ್ರಗಳಲ್ಲಿದ್ದಾರೆ.
ಜೀ ಕನ್ನಡದ ಜನಪ್ರಿಯ ಸೀರಿಯಲ್ ನಾಗಿನಿ 2 ವೈಂಡ್‌ಅಪ್, ಹೊಸ ಸೀರಿಯಲ್ಸ್ ಕ್ಯೂನಲ್ಲಿ!