ಜೀ ಕನ್ನಡದ ಜನಪ್ರಿಯ ಸೀರಿಯಲ್ ನಾಗಿನಿ 2 ವೈಂಡ್‌ಅಪ್, ಹೊಸ ಸೀರಿಯಲ್ಸ್ ಕ್ಯೂನಲ್ಲಿ!

ಹೊಸ ವರ್ಷ ಶುರುವಲ್ಲೇ ಒಂದೊಂದೇ ಸೀರಿಯಲ್‌ಗಳು ವೈಂಡ್‌ಅಪ್‌ ಆಗ್ತಿವೆ. ಸದ್ಯಕ್ಕೀಗ ನಾಗಿನಿ 2 ಸೀರಿಯಲ್ ಕೊನೆಯಾಗೋ ಹಂತ ತಲುಪಿದೆ.

Nagini 2 serial winding up

ಎಷ್ಟೋ ವರ್ಷಗಳಿಂದ ಪ್ರಸಾರವಾಗ್ತಿದ್ದ ಸೀರಿಯಲ್‌ಗಳೆಲ್ಲ ಕಳೆದ ವರ್ಷದ ಕೊನೆ ಈ ವರ್ಷದ ಆರಂಭದಲ್ಲಿ ಮುಕ್ತಾಯವಾಗುತ್ತಿವೆ. ಕಲರ್ಸ್ ಕನ್ನಡದಲ್ಲಿ ಕನ್ನಡತಿ ಸೀರಿಯಲ್ ಮುಕ್ತಾಯವಾಗಿದ್ದು ದೊಡ್ಡ ಸದ್ದು ಮಾಡಿತ್ತು. ಹಿಂದೆ ಎಷ್ಟೋ ವರ್ಷಗಳಿಂದ ಪ್ರಸಾರವಾಗ್ತಿದ್ದ ಮಂಗಳ ಗೌರಿ ಮದುವೆ ಸೀರಿಯಲ್‌ ಕೂಡ ಕಳೆದ ವರ್ಷದ ಅಂತ್ಯಕ್ಕೆ ಮುಕ್ತಾಯ ಕಂಡಿತು. ಈಗ ಜೀ ಕನ್ನಡ ವಾಹಿನಿಯ ಸೀರಿಯಲ್‌ಗಳು ವೈಂಡ್‌ ಅಪ್‌ ಆಗಲು ರೆಡಿ ಆಗ್ತಿವೆ. ಸದ್ಯಕ್ಕೆ ಆ ಲೀಸ್ಟ್ ನಲ್ಲಿ ಮೊದಲಲ್ಲಿರೋ ಹೆಸರು ನಾಗಿನಿ ೨. ಈ ಸೀರಿಯಲ್ ನ ಮೊದಲ ಭಾಗವೂ ಸೇರಿದರೆ ಇದು ಕಳೆದ ಏಳುವರ್ಷಗಳಿಂದ ಪ್ರಸಾರವಾಗಿತ್ತು. ಇದೀಗ ಕೊನೆಯ ಹಂತದಲ್ಲಿದೆ. ಈ ಸೀರಿಯಲ್ ಮುಕ್ತಾಯ ಆಗ್ತಿರೋ ಸುಳಿವನ್ನು ಈ ಸೀರಿಯಲ್‌ನ ಮುಖ್ಯ ಪಾತ್ರಧಾರಿ ಪರೋಕ್ಷವಾಗಿ ಹೇಳಿದ್ದಾರೆ. ಅಲ್ಲಿಗೆ ಈ ಸೀರಿಯಲ್ ಮುಗಿಯೋದು ಪಕ್ಕಾ ಅಂತ ಹೇಳಬಹುದು.

ಏಳು ವರ್ಷಗಳ ಹಿಂದೆ ಪ್ರಾರಂಭವಾದ 'ನಾಗಿಣಿ' ಧಾರಾವಾಹಿ ಬಳಿಕ 'ನಾಗಿಣಿ- 2' ಕಥೆಯೂ ಮುಂದುವರಿದಿತ್ತು. ಇದೀಗ ಈ ಧಾರಾವಾಹಿ ಮುಕ್ತಾಯಗೊಳ್ಳುವ ಹಂತ ತಲುಪಿದೆ. ಇನ್ನು ಕೆಲವೇ ದಿನಗಳಲ್ಲಿ 'ನಾಗಿಣಿ- 2' ಧಾರಾವಾಹಿ ಅಂತ್ಯವಾಗುತ್ತಿದೆ. ಈ ಬಗ್ಗೆ ನಟಿ ನಮ್ರತಾ ಗೌಡ ಅವರು ಬಿಗ್ ಅಪ್ ಡೇಟ್ ನೀಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಈ ಬಗ್ಗೆ ಸುಳಿವು ನೀಡಿದ್ದಾರೆ. ಕಳೆದ ವರ್ಷವೇ 'ನಾಗಿಣಿ- 2' ಧಾರಾವಾಹಿ ಮುಕ್ತಾಯಗೊಳ್ಳಬೇಕಿತ್ತು. ಆದರೆ, ಆ ಸಂದರ್ಭದಲ್ಲಿ ಹೊಸ ಧಾರಾವಾಹಿಗಳು ಪ್ರಸಾರಕ್ಕೆ ಸಿದ್ಧವಾಗಿರಲಿಲ್ಲ. ಹೀಗಾಗಿ ಕತೆಯನ್ನು ಎಳೆದಿದ್ದರು. ಆದರೆ ಈಗ ಎರಡು ಹೊಸ ಧಾರಾವಾಹಿಗಳು ಪ್ರಸಾರಕ್ಕೆ ಸಜ್ಜಾಗಿವೆ. ಆ ಎರಡೂ ಧಾರಾವಾಹಿಗಳಲ್ಲಿ ಒಂದಕ್ಕೆ 'ನಾಗಿಣಿ- 2' ಸ್ಥಳಾವಕಾಶ ಮಾಡಿಕೊಡುತ್ತಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಹೇಳಿಕೆ ಇನ್ನಷ್ಟೇ ಹೊರಬೀಳಬೇಕಿದೆ. 

ಮಂಗಳೂರಿನಲ್ಲಿ ದೀಪಿಕಾ ದಾಸ್‌ ಬೆಕ್ಕು ಪತ್ತೆ; 15 ಸಾವಿರ ಬಹುಮಾನ ಯಾರ ಕೈ ಸೇರಿತ್ತು?

ಅಷ್ಟಕ್ಕೂ ಈ ಸೀರಿಯಲ್ ಮುಕ್ತಾಯವಾಗುತ್ತಿರುವ ಸೂಚನೆ ಕೊಟ್ಟದ್ದು ನಟಿ ನಮ್ರತಾ ಗೌಡ. ಅವರು ಈ ಸೀರಿಯಲ್‌ನ ಪ್ರಮುಖ ಪಾತ್ರ ಶಿವಾನಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿ ನಮ್ರತಾ ಗೌಡ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ "ಶಿವಾನಿ ಪಾತ್ರದಿಂದ ಹೊರ ಬರುತ್ತಿದ್ದೇನೆ. ಎಲ್ಲರಿಗೂ ಧನ್ಯವಾದ" ಎಂದು ಬರೆದುಕೊಂಡಿದ್ದಾರೆ. ಇದಕ್ಕೆ ಮತ್ತೊಬ್ಬ ನಟಿ ಐಶ್ವರ್ಯ ಸಿಂದೋಗಿ ಅದ್ಭುತವಾದ ಪ್ರಾಜೆಕ್ಟ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು 'ನಾಗಿಣಿ- 2' ಧಾರಾವಾಹಿ ಅಂತ್ಯಗೊಳ್ಳುತ್ತಿದೆ ಎಂಬುದನ್ನು ಅರ್ಥ ಮಾಡಿಕೊಂಡಿದ್ದಾರೆ. ಇನ್ನು ಇದರೊಂದಿಗೆ ನಮ್ರತಾ ಗೌಡ ಅವರು ತಮ್ಮ ಸೀರಿಯಲ್ ಸೆಟ್ ತಂಡದ ಜೊತೆಗೆ ಫೋಟೋಗಳನ್ನು ತೆಗೆಸಿಕೊಂಡಿದ್ದು, ಧಾರಾವಾಹಿ ಮುಕ್ತಾಯಗೊಳ್ಳುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ. ಆದರೆ, ಧಾರಾವಾಹಿ ಯಾವಾಗ ಅಂತ್ಯವಾಗುತ್ತದೆ ಎಂಬುದು ಇನ್ನು ತಿಳಿದು ಬಂದಿಲ್ಲ.

ಇನ್ನು ಈ ಧಾರಾವಾಹಿ ಅಂತ್ಯಗೊಂಡರೆ, ಇದರ ಜಾಗದಲ್ಲಿ 'ಸೀತಾ ರಾಮ' ಇಲ್ಲವೇ 'ಭೂಮಿಗೆ ಬಂದ ಭಗವಂತ' ಎಂಬ ಎರಡು ಧಾರಾವಾಹಿಗಳಲ್ಲಿ(Serial) ಒಂದು ಪ್ರಸಾರವಾಗುತ್ತದೆ. 'ಭೂಮಿಗೆ ಬಂದ ಭಗವಂತ' ಧಾರಾವಾಹಿ ಮಧ್ಯಮ ವರ್ಗದ ಸಂಸಾರದ ಕಥೆಯಾಗಿದ್ದು, ನಾಯಕ ನಟನಿಗಾಗಿ ಭಗವಂತನೇ ಭೂಮಿಗೆ ಇಳಿದು ಬರುತ್ತಾನೆ. ಇದರಲ್ಲಿ ನಟ ನವೀನ್ ಕೃಷ್ಣ ನಾಯಕನ ಪಾತ್ರದಲ್ಲೂ, ನಟಿ ಕೃತಿಕಾ ರವೀಂದ್ರ ಅವರು ನಾಯಕಿಯ ಪಾತ್ರದಲ್ಲೂ ಕಾಣಿಸಿಕೊಳ್ಳಲಿದ್ದಾರೆ. ಹಲವು ವರ್ಷಗಳ ಬಳಿಕ ಇಬ್ಬರೂ ನಟ-ನಟಿಯರು ಕಿರುತೆರೆಗೆ ರೀ-ಎಂಟ್ರಿ(Re entry) ಕೊಟ್ಟಿದ್ದಾರೆ. ಮತ್ತೊಂದು ಧಾರಾವಾಹಿ 'ಸೀತಾ ರಾಮ'. ಈ ಧಾರಾವಾಹಿಯಲ್ಲಿ ನಾಯಕ(Hero) ಹಾಗೂ ನಾಯಕಿ ಪ್ರೀತಿಗೆ ಸೇತುವೆಯಾಗಿ ಬರುವ ಪುಟಾಣಿ ಇರುವಂತಹ ಕಥೆಯಾಗಿದೆ. ಇದರಲ್ಲಿ ನಟ ಗಗನ್ ಚಿನ್ನಪ್ಪ ಅವರು ನಾಯಕನ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟಿ ವೈಷ್ಣವಿ ಗೌಡ ಅವರು ನಾಯಕಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಎರಡೂ ಧಾರಾವಾಹಿಯ ಪ್ರೋಮೋ ಈಗಾಗಲೇ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಂಡಿದ್ದು, ಯಾವುದು ಮೊದಲು ಶುರುವಾಗುತ್ತೆ ಎಂಬ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ.

ಸಖತ್ ಹಾಟ್ 'ಗೀತಾ' ಧಾರಾವಾಹಿ ಭಾನುಮತಿ ಖ್ಯಾತಿಯ ಶರ್ಮಿತಾ ಗೌಡ: ಸ್ವಿಮ್‌ಸೂಟ್ ಫೋಟೋ ವೈರಲ್

Latest Videos
Follow Us:
Download App:
  • android
  • ios