Asianet Suvarna News Asianet Suvarna News

Ramachari Serial: ಸೂಪರ್ ಗರ್ಲ್ ಆದ ಚಾರು ಅಲ್ಲಲ್ಲ ಶೈಲೂ, ರಾಮಾಚಾರಿ ಫಿದಾ!

'ಅಟ್ಟಿಸ್ಕೊಂಡು ಬಂದ್ರೆ ಹೆದ್ರುಕೊಂಡು ಓಡೋದಲ್ಲ, ಅಟ್ಟಾಡಿಸಿಕೊಂಡು ಹೊಡೀಬೇಕು' ಅನ್ನುತ್ತಾ ಸೂಪರ್ ಗರ್ಲ್ ಆಗಿ ಮಿಂಚಿದ್ದಾಳೆ ಶೈಲೂ. ಅಲ್ಲಲ್ಲ ಚಾರು. ಹೌದು, ಚಾರುನೇ ಇದೀಗ ಶೈಲೂ ವೇಷದಲ್ಲಿ ಬಂದು ರಾಮಾಚಾರಿ ತಂಗಿ ಶ್ರುತಿನ ಕಾಪಾಡಿದ್ದಾಳೆ. ಚಾರು ಹೊಸ ಅವತಾರಕ್ಕೆ ಪ್ರೇಕ್ಷಕರು ಭೇಷ್ ಅಂದಿದ್ದಾರೆ 

In Ramachari serial Charu becomes Super girl
Author
First Published Dec 17, 2022, 12:38 PM IST

ರಾಮಾಚಾರಿ ಸೀರಿಯಲ್ ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತೆ.ಇದರಲ್ಲೀಗ ರಾಮಚಾರಿಯನ್ನು ಒಲಿಸಿಕೊಳ್ಳೋ ಚಾರು ಪ್ರಯತ್ನ ಚಾಲ್ತಿಯಲ್ಲಿದೆ. ರಾಮಾಚಾರಿಗೆ ಚಾರು ಫಿದಾ ಆಗಿ ಯಾವ್ದೋ ಕಾಲ ಆಯ್ತು. ತನ್ನ ತಾಯಿಯ ಕೆಟ್ಟತನಕ್ಕೆ ತಾನೇ ಬಲಿಯಾಗಬೇಕಾದ ಸಂದರ್ಭ ಚಾರುವನ್ನು ಕಾಪಾಡಿದವನು ಚಾರಿ. ಅವತ್ತು ಆತ ಚಾರುಗಾಗಿ ಸುರಿಸಿದ ಕಣ್ಣೀರು, ಆಕೆ ಬದುಕಿ ಬರಲಿ ಎಂದು ಆತ ಪ್ರಾರ್ಥಿಸಿದ ರೀತಿಯ ಬಗ್ಗೆ ಎಲ್ಲ ತಿಳಿದ ಚಾರುಗೆ ರಾಮಾಚಾರಿಯ ಮೇಲೆ ಪ್ರೀತಿ ಹುಟ್ಟಿದೆ. ಆದರೆ ರಾಮಾಚಾರಿಗೆ ತನ್ನ ಪ್ರಾಜೆಕ್ಟ್ ನ ಹೈಜಾಕ್ ಮಾಡಿದ ಚಾರು ಮೇಲಿನ ಸಿಟ್ಟು ಹೋಗಿಲ್ಲ. ಆಕೆ ಹಾಗೆ ಚಾರಿಯ ಪ್ರಾಜೆಕ್ಟ್ ಕದ್ದಿದ್ದರಿಂದಲೇ ಆತ ತನ್ನ ತಾಯಿಗಿಂತ ಹೆಚ್ಚು ಪ್ರೀತಿಸುತ್ತಿದ್ದ ಅತ್ತಿಗೆ ಅಪರ್ಣಾಳನ್ನು ಉಳಿಸಿಕೊಳ್ಳಲಾಗಲಿಲ್ಲ. ಕ್ಯಾನ್ಸರ್ ನಿಂದ ಬಳಲಿ ಸರಿಯಾದ ಚಿಕಿತ್ಸೆ ಸಿಗದೇ ರಾಮಾಚಾರಿ ಅತ್ತಿಗೆ ಇಹಲೋಕ ತ್ಯಜಿಸಿದ್ದಾಳೆ.

ಈ ಕಾರಣಕ್ಕೆ ರಾಮಾಚಾರಿ ಮಾತ್ರ ಅಲ್ಲ, ಮನೆಯವರಿಗೆಲ್ಲ ಚಾರು ಮೇಲೆ ಕೋಪ ಇದೆ. ಆದರೆ ಚಾರು ರಾಮಾಚಾರಿಯ ಹಿಂದೆ ಬಿದ್ದಿದ್ದಾಳೆ. ಆತನಿಗೂ ತನ್ನ ಮೇಲೆ ಪ್ರೀತಿ ಹುಟ್ಟುವಂತೆ ಮಾಡುವ ಪ್ರಯತ್ನದಲ್ಲಿದ್ದಾಳೆ. ಆ ಪ್ರಯತ್ನದಲ್ಲಿ ಹುಟ್ಟಿರೋ ಹೊಸ ಪಾತ್ರವೇ ಶೈಲೂ. ಚಾರುವನ್ನು ಇಷ್ಟಪಡದ ಚಾರಿ ಇದೀಗ ಶೈಲೂ ಮೇಲೆ ಸ್ನೇಹ(Friendship) ತೋರಿಸುತ್ತಿದ್ದಾನೆ. ಆಕೆಯೂ ಚಾರಿ ಮೆಚ್ಚುವ ಕೆಲಸ ಮಾಡುತ್ತಿದ್ದಾಳೆ.

ರಸ್ತೆಯಲ್ಲಿ ರಾಮಾಚಾರಿ ತಂಗಿ ಶ್ರುತಿ ಹೋಗುತ್ತಿದ್ದಾಳೆ. ಒಬ್ಬ ರೌಡಿ ಬಂದು ಆಕೆಯ ಚೂಡಿದಾರ್ ವೇಲ್ ಎಳೆದು ಆಕೆಯ ಹಿಂದೆ ಬಿದ್ದಿದ್ದಾನೆ. ಆತನಿಂದ ತಪ್ಪಿಸಿಕೊಳ್ಳಲು ಶ್ರುತಿ ರಸ್ತೆಯಲ್ಲಿ ಓಡುತ್ತಿದ್ದಾಳೆ. ಈ ಸುದ್ದಿಯನ್ನು ರಾಮಾಚಾರಿಗೆ ಯಾರೋ ಮುಟ್ಟಿಸುತ್ತಾರೆ. ಈ ವೇಳೆ ರಾಮಾಚಾರಿ ತಂಗಿಯ ರಕ್ಷಣೆಗೆ ಓಡಿ ಬರುತ್ತಿರುವಾಗ ಆತನಿಗಿಂತ ಮೊದಲೇ ಆ ದಾರಿಯಲ್ಲಿ ಬಂದ ಶೈಲೂ ಸೂಪರ್ ಗರ್ಲ್ (Super girl)ಥರ ಆ ರೌಡಿಯ ಜೊತೆಗೆ ಹೋರಾಡಿ ಅವನಿಂದ ಶ್ರುತಿಯನ್ನು ಕಾಪಾಡುತ್ತಾಳೆ.

ಇದನ್ನೂ ಓದಿ: BBK9 ಮಿಣಿ ಮಿಣಿ ಮೀನಾಕ್ಷಿ ಆದ ದೀಪಿಕಾ ದಾಸ್; ಗಂಡು ಬೇಕಂದವರಿಗೆ ಸೊಪ್ಪಿದೆ ಎಂದ ನೆಟ್ಟಿಗರು

ಆ ರೌಡಿಗೆ ಹೆಣ್ಣನ್ನು ಹೇಗೆ ಗೌರವಿಸಬೇಕು ಅಂತ ಪಾಠ ಮಾಡ್ತಾಳೆ. ಅಷ್ಟೇ ಅಲ್ಲ, ಓಡಿ ಹೋಗುತ್ತಿದ್ದ ಶ್ರುತಿಯಲ್ಲಿ ಧೈರ್ಯ(Courage) ತುಂಬುತ್ತಾಳೆ. 'ಅಟ್ಟಿಸ್ಕೊಂಡು ಬಂದ್ರೆ ಹೆದರ್ಕೊಂಡು ಓಡೋದಲ್ಲ. ಅಟ್ಟಾಡಿಸಿಕೊಂಡು ಹೊಡೀಬೇಕು' ಅಂತ ಶ್ರುತಿಗೆ ಬುದ್ಧಿವಾದ ಹೇಳ್ತಾಳೆ. 'ಧೈರ್ಯಕ್ಕೆ ಇನ್ನೊಂದು ಹೆಸರೇ ಹೆಣ್ಣು(Women)' ಅನ್ನೋ ಅವಳ ಈ ಮಾತನ್ನು ಶ್ರುತಿ ಮಾತ್ರ ಅಲ್ಲ, ಈ ಸೀರಿಯಲ್(Serial) ನೋಡೋ ವೀಕ್ಷಕರೂ ಮೆಚ್ಚಿದ್ದಾರೆ.

 

ಸದ್ಯಕ್ಕೀಗ ಚಾರುವಿನ ಹೊಸ ರೂಪ ಶೈಲೂ ವರ್ಶನ್ ಬಂದಿದೆ. ಚಾರುವನ್ನು ರಾಮಾಚಾರಿ ಹತ್ತಿರಕ್ಕೂ ಸೇರಿಸಿಕೊಳಲ್ಲ ಅನ್ನುವಾಗ ಚಾರು ಶೈಲುವಾಗಿ ರಾಮಾಚಾರಿಗೆ ಹತ್ತಿರವಾಗೋ ಹಾದಿಯಲ್ಲಿದ್ದಾಳೆ. ಇದ್ಯಾವುದೂ ಗೊತ್ತಿಲ್ಲದ ರಾಮಾಚಾರಿ ಆಗಾಗ ತನಗೆ ನೆರವಾಗುತ್ತಿರುವ ಶೈಲೂ ಜೊತೆಗೆ ಸ್ನೇಹದಿಂದ ಇದ್ದಾನೆ. ಆದರೆ ಚಾರು ಅಂದರೆ ಉರಿದು ಬೀಳ್ತಾನೆ. ಆದರೆ ಹಠಮಾರಿ ಹುಡುಗಿ ಚಾರು ತನ್ನ ಪ್ರಯತ್ನ ಬಿಡ್ತಿಲ್ಲ. ರಾಮಾಚಾರಿಯನ್ನು ನಾನಾ ಬಗೆಯಲ್ಲಿ ಒಲಿಸಿಕೊಳ್ಳೋ ಪ್ರಯತ್ನ ಮಾಡ್ತಾನೇ ಇದ್ದಾಳೆ. ಬದಲಾದ ಚಾರುವಿನ ಈ ರೂಪವನ್ನು ಕೆಲವು ಮಂದಿ ವೀಕ್ಷಕರಿಗೆ ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಆದರೆ ಬಹಳ ಮಂದಿ ಇಷ್ಟಪಟ್ಟದ್ದಾರೆ. ಈಕೆಯ ಹೊಸ ಹೊಸ ಟ್ರಿಕ್ ಗಳನ್ನು, ಈಕೆ ಶೈಲೂ ಆಗಿ ಮಾರ್ಪಟ್ಟು ಮಾಡೋ ಸರ್ಕಸ್ ಗಳನ್ನು ಖುಷಿಯಿಂದ ಎನ್‌ಜಾಯ್ ಮಾಡ್ತಿದ್ದಾರೆ. ಅದರಲ್ಲೂ ಸೂಪರ್ ಗರ್ಲ್ ನಂತೆ ಬಂದು ರಾಮಾಚಾರಿ ತಂಗಿಯನ್ನು ಕಾಪಾಡಿ ಅವಳಲ್ಲಿ ಧೈರ್ಯ ತುಂಬಿದ ಶೈಲೂ ಪಾತ್ರಕ್ಕೆ ಜನ ಶಹಭಾಸ್ ಅಂದಿದ್ದಾರೆ.

ಇದನ್ನೂ ಓದಿ: Kannadathi: ಹಾರ ಹಾಕಿದ ತನ್ನ ಫೋಟೋ ಪಕ್ಕ ನಿಂತ ಚಿತ್ಕಳಾ! ಫ್ಯಾನ್ಸ್ ಖುಷ್

Follow Us:
Download App:
  • android
  • ios