ಒಲವಿನ ನಿಲ್ದಾಣ ಸೀರಿಯಲ್‌ನಲ್ಲಿ ಸಿದ್ಧಾಂತ್‌ಗೆಂದು ಜಗದೀಶ್ವರಿ ಕಡೆಯವರು ಹೊಡೆದ ಗುಂಡೇಟು ತಾರಿಣಿ ತಲೆಗೆ ಬಿದ್ದಿದೆ. ಅವಳೀಗ ಸಾವಿನಂಚಲ್ಲಿದ್ದಾಳೆ. ಸಿದ್ಧಾಂತ್ ಪ್ರೀತಿ ಅವಳನ್ನು ಉಳಿಸುತ್ತಾಅನ್ನೋದು ಒಂದು ಪ್ರಶ್ನೆ ಆದರೆ ಪಾಲಾಕ್ಷನ ಇದನ್ನು ತನಗೆ ಬೇಕಾದ ಹಾಗೆ ತಿರುಗಿಸಿ ಸಿದ್ಧಾಂತ್‌ನ ಈ ಕೇಸಲ್ಲಿ ಸಿಕ್ಕಿಸುತ್ತಾನಾ ಅನ್ನೋದು ಇನ್ನೊಂದು ಪ್ರಶ್ನೆ.

'ಒಲವಿನ ನಿಲ್ದಾಣ' ಕಲರ್ಸ್ ಕನ್ನಡದಲ್ಲಿ ಸೋಮವಾರದಿಂದ ಶುಕ್ರವಾರದವರೆಗೆ ಸಂಜೆ 6 ಗಂಟೆಗೆ ಪ್ರಸಾರವಾಗುತ್ತಿದೆ. ಈ ಸೀರಿಯಲ್‌ನಲ್ಲಿ ನಾಯಕಿ ತಾರಿಣಿ ಸಾವು ಬದುಕಿನ ಮಧ್ಯೆ ಹೋರಾಡ್ತಾ ಇದ್ದಾಳೆ. ಸಿದ್ಧಾಂತ್‌ ಗೆ ಅಂತ ಹೊಡೆದ ಗುಂಡು ತಪ್ಪಿ ತಾರಿಣಿಗೆ ಬಿದ್ದಿದೆ. ತಾರಿಣಿಯನ್ನು ಸಿದ್ಧಾಂತ್ ಪ್ರೀತಿ ಉಳಿಸುತ್ತಾ ಎಂಬ ಪ್ರಶ್ನೆ ಎದುರಾಗಿದೆ. ಇನ್ನೊಂದು ಕಡೆ ತಾರಿಣಿ ಮಾವ ಪಾಲಾಕ್ಷ ಈ ಸ್ಥಿತಿಯನ್ನೂ ತನಗೆ ಬೇಕಾದಂತೆ ತಿರುಚಲು ಪ್ಲಾನ್‌ ಮಾಡ್ತಿರೋ ಹಾಗಿದೆ. ವಿಲನ್‌ ಜಗದೀಶ್ವರಿ ಮತ್ತು ಅವಳ ಮಗನಿಗೆ ತಾರಿಣಿ ಮತ್ತು ಸಿದ್ಧಾಂತ್‌ ರಿಂದ ಅವಮಾನ ಆಗಿದೆ. ಜಗದೀಶ್ವರಿ ಮಗನ ಜೊತೆಗೆ ಪಾಲಾಕ್ಷ ತಾರಿಣಿಯನ್ನು ಮದುವೆ ಮಾಡಲು ನಿಶ್ಚಯಿಸಿದ್ದ. ಆದರೆ ತಾರಿಣಿಗೆ ಈ ಮದುವೆ ಇಷ್ಟ ಇರಲಿಲ್ಲ. ಅಷ್ಟೇ ಅಲ್ಲ ಜಗದೀಶ್ವರಿ ಮಗ ತನ್ನ ಕೆಟ್ಟತನಕ್ಕೂ ಹೆಸರಾಗಿದ್ದವ. ಏನೇನೋ ಕುತಂತ್ರ ಮಾಡಿ ಸಿದ್ಧಾಂತ್‌ನನ್ನು ಹಣಿಯಲು ಇವರು ಪ್ಲಾನ್ ಮಾಡುತ್ತಿದ್ದಾರೆ. ಇದೀಗ ಆತನಿಗೆ ಗುಂಡು ಹಾರಿಸಿ ಕೊಲ್ಲಲು ಜಗದೀಶ್ವರಿಯ ಪ್ಲ್ಯಾನ್ ಮಾಡಿರುತ್ತಾಳೆ. ಅಂತೆಯೇ ಅವಳ ಆಜ್ಞೆಯಂತೆ ಗನ್‍ನಿಂದ ಕಿಲ್ಲರ್ ಬುಲೆಟ್ ಹಾರಿಸಿಬಿಟ್ಟಿದ್ದಾನೆ. ಸಿದ್ಧಾಂತ್‍ಗೆ ತಗುಲಬೇಕಿದ್ದ ಬುಲೆಟ್ ಮಿಸ್ ಆಗಿ ತಾರಿಣಿಗೆ ತಗುಲಿದೆ.

ಶ್ರುತಿ ನಾಯ್ಡು ನಿರ್ಮಾಣದಲ್ಲಿ (Production) ಹೊರಬರುತ್ತಿರುವ ಒಲವಿನ ನಿಲ್ದಾಣ ಧಾರಾವಾಹಿ ಆರಂಭದಿಂದಲೂ ಮಲೆನಾಡ ಹುಡುಗಿ ಮತ್ತು ಸಿಟಿ ಹುಡುಗನ (City Boy) ಪ್ರೇಮದ ಕಣ್ಣಾಮುಚ್ಚಾಲೆ, ವಿರಸ, ಸರಸ (Romance), ನಡುವೆ ವಿಲನ್‌ ಕಾಟದಿಂದ ವಿಭಿನ್ನವಾಗಿ ಬರುತ್ತಿತ್ತು. ಆಕ್ಸಿಡೆಂಟಲ್ ಆಗಿ ತಾರಿಣಿಗೆ ಸಿಕ್ಕ ಹುಡುಗ ಸಿದ್ಧಾಂತ್. ಆತನ ಮೇಲೆ ಆಕೆಗೆ ಲವ್ವಾಗಿತ್ತು. ಆದರ ಸಿದ್ಧಾಂತ್ ಗೆ ತನ್ನ ಗುರಿಯೇ ಮುಖ್ಯ. ಮನಸ್ಸಿನ ಮೂಲೆಯಲ್ಲಿ ತಾರಿಣಿ ಬಗ್ಗೆ ಪ್ರೀತಿ ಇದ್ದರೂ ಆ ಗುರಿ ಸಾಧನೆ ಅವನ ಪ್ರೇಮಕ್ಕೆ ಅಡ್ಡಿ ಬರುತ್ತಿತ್ತು. ತಾರಿಣಿ ಇಷ್ಟ ಇಲ್ಲದ ಎಂಗೇಜ್‌ಮೆಂಟ್‌ ಅನ್ನು ತಪ್ಪಿಸಲು ಈತ ತಾನೇ ಆಕೆಯ ಪ್ರೇಮಿ ಎಂದು ಸುಳ್ಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾನೆ. ಆದರೆ ನಂತರ ಅದು ಸುಳ್ಳು ಅಂತ ಎಲ್ಲರಿಗೂ ಹೇಳಲು ಒದ್ದಾಡುತ್ತಾನೆ.

View post on Instagram

ಪ್ರೀತಿ ಹೇಳಿಕೊಳ್ಳಲು ಹೋದಾಗಲೇ ಗುಂಡೇಟು
ತನ್ನ ಪ್ರೀತಿ(Love) ಸುಳ್ಳು ಅಂತ ಸಿದ್ಧಾಂತ್ ಹೇಳಿದರೂ ಆತನೊಳಗೆ ಪ್ರೇಮವಿದೆ. ಕೊನೆಗು ಆತ ತನ್ನೊಳಗೆ ತಾರಿಣಿಗೆ ಜಾಗ ಇರುವುದನ್ನು ಕಂಡುಕೊಂಡಿದ್ದಾನೆ. ತಾನವಳನ್ನು ಪ್ರೀತಿಸುತ್ತಿದ್ದೇನೆ ಅನ್ನೋದರ ಅರಿವು ಆತನಿಗೆ ಆಗಿದೆ. ಆತ ಅದನ್ನು ತಾರಿಣಿಗೆ ಹೇಳಲು ಮುಂದೆ ಬಂದಿದ್ದಾನೆ. ಆದರೆ ಅದಕ್ಕೂ ಮೊದಲೇ ತಾರಿಣಿಗೆ ಸಿದ್ಧಾಂತ್‌ಗೆ ತನ್ನ ಮೇಲೆ ಪ್ರೀತಿ ಇಲ್ಲ, ಆತನೇ ಎಂಗೇಜ್‌ಮೆಂಟ್ (Engagement)ಮುರಿಯೋ ಮೊದಲು ತಾನೇ ನಮ್ಮಿಬ್ಬರ ನಡುವೆ ಏನೂ ಇಲ್ಲ ಅನ್ನೋದನ್ನು ಹೇಳೋಣ ಅಂತ ಮನೆಯವರ ಮುಂದೆ ತಾವಿಬ್ಬರೂ ಮದುವೆ(Marriage) ಆಗೋದಿಲ್ಲ ಅನ್ನೋ ಸತ್ಯವನ್ನು ಹೇಳಿದ್ದಾಳೆ. ಇದರಿಂದ ಮನೆಯವರಿಗೆ ಶಾಕ್‌ ಆಗಿದೆ.

Ramachari: ಚಾರು ಸತ್ತೇ ಹೋದಳಾ? ಮಾನ್ಯತಾ ಕೈಯಲ್ಲಿದೆ ಚಾರು ಡೆತ್‌ ಸರ್ಟಿಫಿಕೇಟ್‌!

ಸಿದ್ಧಾಂತ್ ಪ್ರೀತಿ ಹೇಳುವ ಮೊದಲೇ ಮುರಿದ ಮದುವೆ
ಆದರೆ ಸಿದ್ಧಾಂತ್‌ಗೆ ಈ ಹೊತ್ತಿಗೆ ತಾರಿಣಿ ಮೇಲೆ ಪ್ರೀತಿ ಆಗಿದೆ. ಆತ ಅದನ್ನು ಅವಳ ಮುಂದೆ ಹೇಳಲು ತೋಟಕ್ಕೆ ಬಂದಾಗಲೇ ಕಿಲ್ಲರ್ ಗುಂಡು ಹಾರಿಸಿದ್ದಾನೆ. ಅದು ತಾರಿಣಿ ಮೇಲೆ ಬಿದ್ದಿದೆ. ಇತ್ತ ತಾರಿಣಿಯನ್ನು ಎತ್ತಿಕೊಂಡು ಬಂದು ಆಸ್ಪತ್ರೆ ಸೇರಿಸಿದ್ದಾನೆ. ಆಕೆ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾಳೆ.

Kannadathi: ಅಮ್ಮಮ್ಮನ ಕೊಲೆ ಯತ್ನದ ಕೇಸ್‌ ಸಾನ್ಯಾ ಮೇಲೆ ಬೀಳೋ ಕ್ಷಣ ಹತ್ತಿರದಲ್ಲಿದೆ!

ಪಾಲಾಕ್ಷನ ಕುತಂತ್ರ
ಆದರೆ ಪಾಲಾಕ್ಷ ಈ ಪರಿಸ್ಥಿತಿಯನ್ನ ತನ್ನ ಸ್ವಾರ್ಥಕ್ಕೆ(Selfishness) ಬಳಸಿಕೊಳ್ಳುತ್ತಿದ್ದಾನೆ. ಪೊಲೀಸರ(Police) ಎದುರು ಮೊಸಳೆ ಕಣ್ಣೀರು ಸುರಿಸುತ್ತಿದ್ದಾನೆ. ಇಲ್ಲೂ ಸಿದ್ಧಾಂತ್‌ನನ್ನು ಸಿಲುಕಿಸುವ ಪ್ರಯತ್ನ ಆತನದು. ಸಿದ್ಧಾಂತ್ ಈ ಸನ್ನಿವೇಶದಲ್ಲಿ(Situation) ಏನು ಮಾಡ್ತಾನೆ? ತನ್ನ ಪ್ರೀತಿಯನ್ನು ಉಳಿಸಿಕೊಳ್ತಾನಾ, ಪಾಲಾಕ್ಷನ ಕುತಂತ್ರದಿಂದ ಹೇಗೆ ಪಾರಾಗ್ತಾನೆ ಅನ್ನೋದನ್ನು ಕಾದು ನೋಡಬೇಕು.