Asianet Suvarna News Asianet Suvarna News

ಜೊತೆ ಜೊತೆಯಲಿ: ಯಾರಾಗಬಹುದು ಮುಂದಿನ ಆರ್ಯವರ್ಧನ್?

ಜೊತೆ ಜೊತೆಯಲಿ ಸೀರಿಯಲ್ ನಲ್ಲಿ ದೊಡ್ಡ ವಾಗ್ವಾದ ನಡೆದಿದೆ. ಈ ಸೀರಿಯಲ್ ಹೀರೋ ಆರ್ಯವರ್ಧನ ಪಾತ್ರದಿಂದ ಅನಿರುದ್ಧ ಹೊರ ನಡೆದಿದ್ದಾರೆ. ಇದೀಗ ಆರ್ಯವರ್ಧನ್ ಪಾತ್ರಕ್ಕೆ ಯಾರು ಬರಬಹುದು ಅನ್ನೋ ಬಗ್ಗೆ ಚರ್ಚೆ ಜೋರಾಗಿದೆ. ಈ ನಡುವೆ ಆರ್ಯವರ್ಧನ್ ಪಾತ್ರಕ್ಕೆ ಪದೇ ಪದೇ ಕೇಳಿ ಬರ್ತಿರೋ ಹೆಸರು ಯಾರದು ಗೊತ್ತಾ?

In Jothe jotheyali serial who would suitable for the role
Author
Bangalore, First Published Aug 22, 2022, 10:18 AM IST

'ಜೊತೆ ಜೊತೆಯಲಿ' ಸೀರಿಯಲ್ ಒಳಗೆ ದೊಡ್ಡ ಜಗಳವೇ ಆಗಿದೆ. ನಾಯಕ ಆರ್ಯವರ್ಧನ್ ಪಾತ್ರದಲ್ಲಿ ಮಿಂಚುತ್ತಿರುವ ಡಾ ವಿಷ್ಣುವರ್ಧನ್ ಅಳಿಯ ಅನಿರುದ್ಧ ಅವರನ್ನು ಸೀರಿಯಲ್‌ನ ಪಾತ್ರದಿಂದ ಕಿತ್ತು ಹಾಕಲಾಗಿದೆ. ಸೀರಿಯಲ್ ಸೆಟ್ ನಲ್ಲಿ ಅನಿರುದ್ಧ ಮಾಡಿಕೊಂಡ ಕಿರಿಕ್ ಅವರನ್ನು ಈ ಧಾರವಾಹಿಯಿಂದ ಹೊರದಬ್ಬಲು ಪ್ರಮುಖ ಕಾರಣ. ಸೀರಿಯಲ್‌ ಟೀಮ್ ಅಂದ ಮೇಲೆ ಕಲಾವಿದರ ಹಾಗೂ ತಂಡದವರ ನಡುವೆ ಪರಸ್ಪರ ಸೌಹಾರ್ದ ಇರಬೇಕಾದ್ದು ಅತ್ಯವಶ್ಯಕ. ಆದರೆ 'ಜೊತೆ ಜೊತೆಯಲಿ' ಟೀಮ್‌ನಲ್ಲಿ ಇದು ಸಾಧ್ಯವಾಗುತ್ತಿಲ್ಲ. ಪರಿಣಾಮ ಈ ಸೀರಿಯಲ್ ನಿಂದ ಮುಖ್ಯ ಪಾತ್ರಧಾರಿಯನ್ನೇ ಹೊರಗೆ ತರಲಾಗಿದೆ. ಇಡೀ ಸೀರಿಯಲ್ ನಿಂತಿರೋದೇ ಈ ಪಾತ್ರದ ಮೇಲೆ. ಇದೀಗ ಮುಖ್ಯ ಪಾತ್ರವೇ ಹೊರ ನಡೆದಾಗ ಅವರ ಬದಲಿಗೆ ಬೇರೆ ಯಾರನ್ನು ಸೀರಿಯಲ್ ಟೀಮ್‌ನವರು ಹಾಕ್ಕೊಳ್ಳಬಹುದು, ನಾಯಕ ನಟನಾಗಿ ಶೋಧ ನಡೆದಿದೆಯಾ, ಸೀರಿಯಲ್ ತಂಡ ಹಾಗೂ ಚಾನಲ್ ನವರು ನಾಯಕನ ಪಾತ್ರಕ್ಕೆ ಯಾರನ್ನಾದ್ರೂ ಆಯ್ಕೆ ಮಾಡಿಕೊಂಡಿದ್ದಾರಾ ಅನ್ನೋ ಪ್ರಶ್ನೆ ವೀಕ್ಷಕರದ್ದು. ಆದರೆ ಸೀರಿಯಲ್ ಟೀಮ್ ನವರೇ ಹೇಳಿಕೊಂಡ ಪ್ರಕಾರ ಸೀರಿಯಲ್‌ ಅನ್ನು ಈ ಕ್ಷಣಕ್ಕೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. ಹಾಗಿದ್ದರೆ ಅನಿರುದ್ಧ ಪಾತ್ರಕ್ಕೆ ಯಾರು ಬರಬಹುದು?

ಜೊತೆ ಜೊತೆಯಲಿ ಸೀರಿಯಲ್‌ನಿಂದ ಅನಿರುದ್ಧ ಹೊರ ನಡೆದ ಮೇಲೆ ವೀಕ್ಷಕರ ಮುಂದೆ ಬಂದಿರವ ಪ್ರಶ್ನೆ ಇದು. ಇದು ಸೀರಿಯಲ್‌ನ ಮಹತ್ವದ ಪಾತ್ರ. ಶೇ.೯೫ರಷ್ಟು ಕಥೆ ಈ ಪಾತ್ರದ ಮೇಲೇ ನಡೆಯುತ್ತೆ. ಸದ್ಯಕ್ಕೆ ಈ ಪಾತ್ರಕ್ಕೆ ಕೊನೆ ಸಿಕ್ಕಿಲ್ಲ. ಏಕಾಏಕಿ ಸೀರಿಯಲ್‌ನಿಂದ ಲೀಡ್ ಪಾತ್ರವನ್ನು ಕಿತ್ತು ಹಾಕೋದು ಕಷ್ಟ. ಆದರೆ ಸೀರಿಯಲ್ ಟೀಮ್ ಈ ಪಾತ್ರವನ್ನು ಕೆಲವು ವಾರಗಳ ಮಟ್ಟಿಗೆ ಕಥೆಯಿಂದ ಹೊರಗಿಟ್ಟಿದೆ. ಈ ಪಾತ್ರ ವಿದೇಶಕ್ಕೆ ಹೋಗಿದೆ ಅಂತಲೋ, ನಾಪತ್ತೆ ಆಗಿದ್ದಾರೆ ಅಂತಲೋ ಕತೆ ಹೆಣೆಯುವ ಕೆಲಸ ನಡೆಯುತ್ತಿದೆ. ಜೊತೆಗೆ ಈ ಸೀರಿಯಲ್‌ ಇನ್ನೇನು ಎರಡು ಮೂರು ತಿಂಗಳೊಳಗೆ ಮುಕ್ತಾಯವಾಗುತ್ತೆ. ಆ ಪಾತ್ರವಿಲ್ಲದೇ ಸೀರಿಯಲ್ ಮುಕ್ತಾಯ ಮಾಡಬಹುದು ಎಂಬ ಮಾತುಗಳೂ ಇವೆ. ಈ ಸೀರಿಯಲ್ ಮುಕ್ತಾಯದ ಹಂತದಲ್ಲಿದೆ ಅನ್ನೋ ವಿಚಾರ ಈ ಸೀರಿಯಲ್ ಟೀಮ್‌ನಿಂದಲೇ ಹೊರಬಿದ್ದಿದೆ. ಇದರ ಬದಲಿಗೆ ಈ ಟೀಮ್‌ನವರೇ ಸೇರಿಕೊಂಡು ಹೊಸತೊಂದು ಸೀರಿಯಲ್ ಆರಂಭಿಸುವ ಚರ್ಚೆ ನಡೆಯುತ್ತಿದೆಯಂತೆ.

20 ವರ್ಷಗಳಿಂದ ಲೀವ್‌ಇನ್‌ನಲ್ಲಿದ್ದರೂ ಇನ್ನೂ ಮದುವೆಯಾಗಿಲ್ಲ ಕಿರುತೆರೆಯ ಅತ್ತಿಗೆ ಮೈದುನ ಜೋಡಿ

ಆದರೆ ಇನ್ನೊಂದು ಕಡೆ ಆರ್ಯವರ್ಧನ್ ಪಾತ್ರಕ್ಕೆ ಕೆಲವು ನಟರ ಹೆಸರು ಹೆಚ್ಚೆಚ್ಚು ಕೇಳಿಬರುತ್ತಿದೆ. ಪ್ರಮುಖವಾಗಿ ಕೇಳಿ ಬರುತ್ತಿರುವ ಹೆಸರು ಜೆಕೆ ಅಂದರೆ ಜೈ ಕಾರ್ತಿಕ್. ಇವರು ಈ ಹಿಂದೆ ನಟಿಸಿದ 'ಅಶ್ವಿನಿ ನಕ್ಷತ್ರ' ಸೀರಿಯಲ್ ಸೂಪರ್ ಹಿಟ್ ಆಗಿತ್ತು. ಆದರೆ ಜೆಕೆ ಸದ್ಯ ಹಿಂದಿ ಸೀರಿಯಲ್‌ನಲ್ಲಿ ಬ್ಯುಸಿ ಇದ್ದಾರೆ. ಹಿಂದಿ ಸೀರಿಯಲ್‌ನಲ್ಲಿ ಮೇನ್ ವಿಲನ್ ಪಾತ್ರದಲ್ಲಿ ಮಿಂಚುತ್ತಿದ್ದಾರೆ. ಎರಡು ಪ್ರಮುಖ ಪಾತ್ರಗಳನ್ನು ಏಕಕಾಲಕ್ಕೆ ನಿಭಾಯಿಸೋದು ಸಾಧ್ಯವಾ ಅನ್ನುವ ಪ್ರಶ್ನೆಯೂ ಇದೆ. ಅದು ಸಾಧ್ಯ ಅಂತಾದರೆ ಜೆಕೆ ಅವರೇ ಈ ಪಾತ್ರವನ್ನು ಚೆನ್ನಾಗಿ ನಿಭಾಯಿಸಬಲ್ಲರು ಅನ್ನುವ ಮಾತುಗಳು ಕೇಳಿಬರುತ್ತಿದೆ.

Jothe Jotheyali: ಅಸಹಕಾರದ ಆರೋಪ ಸುಳ್ಳು: ನಟ ಅನಿರುದ್ಧ್‌

ಇನ್ನೊಂದೆಡೆ ಆನ್‌ಲೈನ್‌ನಲ್ಲಿ ಅನಿರುದ್ಧ ಅವರೇ ಆರ್ಯವರ್ಧನ ಪಾತ್ರವನ್ನು ಮುನ್ನಡೆಸಬೇಕಾ ಬೇಡವಾ ಅನ್ನೋ ಬಗ್ಗೆ ಹಲವು ಕಡೆಯಿಂದ ಪೋಲಿಂಗ್ ನಡೆಯುತ್ತಿದೆ. ಹೆಚ್ಚಿನವರು ಆರ್ಯವರ್ಧನ್ ಪಾತ್ರವನ್ನು ಅನಿರುದ್ಧ ಅವರೇ ಮಾಡಬೇಕು. ಅವರನ್ನು ಹೊರತಾಗಿ ಬೇರೆಯವರ ಆಯ್ಕೆ ಒಪ್ಪುವುದಿಲ್ಲ ಎಂಬ ಮಾತು ಹೇಳಿದ್ದಾರೆ. ಇನ್ನೂ ಕೆಲವರು ಬಹಳ ಕಾಲದಿಂದ ಬರುತ್ತಿರುವ ಈ ಸೀರಿಯಲ್ ನಿಲ್ಲಿಸುವುದು ಸೂಕ್ತ ಎಂಬ ನಿರ್ಧಾರಕ್ಕೂ ಬಂದಿದ್ದಾರೆ. ಏನಾಗಬಹುದು ಅನ್ನೋದು ಶೀಘ್ರದಲ್ಲೇ ತಿಳಿದು ಬರಲಿದೆ.

Follow Us:
Download App:
  • android
  • ios