ಹೊಂಗನಸು ಸೀರಿಯಲ್‌ನಲ್ಲಿ ಗೌತಮ್‌ ಕಾರ್‌ ಬಳಿ ಕಾಯುತ್ತಿರುವಾಗಲೇ ರಿಷಿ ಮತ್ತು ವಸು ಅವನ ಬೈಕಲ್ಲಿ ಎಸ್ಕೇಪ್‌ ಆಗಿದ್ದಾರೆ. ಅವರ ಜೊತೆ ತಾನೂ ಹೋಗಲು ಹವಣಿಸುತ್ತಿದ್ದ ಗೌತಮ್‌ಗೆ ರಿಷಿ ಚಳ್ಳೇಹಣ್ಣು ತಿನ್ನಿಸಿದ್ದಾನೆ. ಇನ್ನೊಂದೆಡೆ ರಿಷಿ ತನ್ನ ವಸುವನ್ನು ತನ್ನ ತೋಳುಗಳಿಂದ ರಿಷಿ ಹಿಡಿದೆತ್ತಿದ್ದಾನೆ. ಶಾಕ್‌ನಲ್ಲಿ ಗೌತಮ್‌ ಮೂರ್ಛೆ ಹೋಗೋದೊಂದು ಬಾಕಿ.

ಹೊಂಗನಸು ಸ್ಟಾರ್‌ ಸುವರ್ಣದಲ್ಲಿ ಪ್ರಸಾರವಾಗುತ್ತಿರುವ ಸೀರಿಯಲ್‌. ತೆಲುಗಿನ ಗುಪ್ಪದಂಥಾ ಮನಸು ಸೀರಿಯಲ್‌ನ ಡಬಿಂಗ್‌ ಸೀರಿಯಲ್‌ ಇದು. ಆದರೂ ಲವಲವಿಕೆಯ ಕಥೆಯ ಮೂಲಕ ಕನ್ನಡದಲ್ಲೂ ಬಹಳ ಜನ ಫ್ಯಾನ್ಸ್‌ ಅನ್ನು ಪಡೆದಿದೆ. ಇದರ ಕಥೆ ವಿಭಿನ್ನವಾಗಿದೆ. ರಿಷಿ ಮತ್ತು ವಸು ಎಂಬ ಕ್ಯೂಟ್‌ ಜೋಡಿಗೆ ವೀಕ್ಷಕರು ಫಿದಾ ಆಗಿದ್ದಾರೆ. ಇದರ ಜೊತೆ ಕಮಂಗಿ ಹಾಗಿರುವ ಗೌತಮ್‌ ಪಾತ್ರವನ್ನೂ ಎನ್‌ಜಾಯ್‌ ಮಾಡ್ತಿದ್ದಾರೆ. ರಿಷಿ ಒಳಗೊಳಗೇ ಪ್ರೀತಿಸುತ್ತಿರುವ ವಸು ಮೇಲೆ ಗೌತಮ್‌ಗೆ ಕಣ್ಣು. ಚಾನ್ಸ್‌ ಸಿಕ್ಕಾಗಲೆಲ್ಲ ಅವಳನ್ನು ಇಂಪ್ರೆಸ್‌ ಮಾಡಲು ಪ್ರಯತ್ನಿಸುತ್ತಿದ್ದಾನೆ. ಆದರೆ ಪ್ರತೀಸಲವೂ ರುಷಿ ಅದನ್ನು ಕೆಡಿಸ್ತಾನೆ. ಅದಕ್ಕೆ ಗೌತಮ್‌ ರಿಷಿಗೆ ಇಟ್ಟಿರೋ ಅಡ್ಡ ಹೆಸರು ಮಿತ್ರದ್ರೋಹಿ ಅಂತ. ಇನ್ನೊಂದೆಡೆ ಆಕಸ್ಮಿಕ ಘಟನೆಗಳಿಂದಲೇ ವಸು ಮತ್ತು ರಿಷಿ ಹತ್ತಿರವಾಗುತ್ತಿದ್ದಾರೆ. ಗೌತಮ್‌ ಕಾಟದಿಂದ ತಪ್ಪಿಸಿಕೊಳ್ಳಲು ವಸು ಜೊತೆಗೆ ಏಕಾಂತ ಕಳೆಯಲು ಆಕೆಯನ್ನು ಗೌತಮ್‌ ಬೈಕ್‌ನಲ್ಲೇ ರಿಷಿ ಕರೆದೊಯ್ದಿದ್ದಾನೆ. ಇವರಿಬ್ಬರೂ ಬರ್ತಾರೆ, ನಾನೂ ಅವರ ಜೊತೆ ಹೋಗ್ತೀನಿ ಅಂತ ಕಾಯ್ತಿದ್ದ ಗೌತಮ್‌ಗೆ ಈ ಮೂಲಕ ಚಳ್ಳೇಹಣ್ಣು ತಿನ್ನಿಸಿದ್ದಾನೆ. ಇದೀಗ ತನ್ನ ಬಲಿಷ್ಠ ತೋಳುಗಳಿಂದ ವಸುವನ್ನು ಹಿಡಿದೆತ್ತಿದ್ದಾನೆ ರಿಷಿ. ಇದರ ಹಿನ್ನೆಲೆಯೂ ಇಂಟರೆಸ್ಟಿಂಗ್.

ಕಾಲೇಜ್‌ನಲ್ಲಿ ಜಗತಿ ಸಾರಥ್ಯದಲ್ಲಿ ಶಿಕ್ಷಣದ ಬಗ್ಗೆ ಅರಿವು ಮೂಡಿಸುವ ಕಿರುಚಿತ್ರ ತಯಾರಿಸಲಾಗಿದೆ. ಇದರ ಬಿಡುಗಡೆಗೆ ಮಂತ್ರಿಗಳನ್ನು ಕರೆಸಲಾಗಿದೆ. ಮಂತ್ರಿಗಳ ಆಗಮನಕ್ಕೆ ಕಾಲೇಜಿನಲ್ಲಿ ಭರದ ಸಿದ್ಧತೆ ನಡೆಯುತ್ತಿದೆ. ವಸು ಸ್ಟೇಜ್‌ನ ಅಲಂಕಾರದಲ್ಲಿ ತಲ್ಲೀನಳಾಗಿದ್ದಾಳೆ. ಮಾಡಲೇನೂ ಕೆಲಸವಿಲ್ಲದ ಗೌತಮ್‌ ಅಲ್ಲೂ ವಸು ಹಿಂದೆ ಬಿದ್ದಿದ್ದಾನೆ. ಮಂತ್ರಿಗಳಿಗೆ ಕೊಡಲೆಂದು ತಂದಿರಿಸಿದ್ದ ಬೊಕೆಯಿಂದ ಒಂದು ಗುಲಾಬಿ ಹೂವನ್ನು ಹಾರಿಸಿದ್ದಾನೆ. ವಸುವನ್ನು ಕರೆದು ಈ ಹೂವನ್ನು ಅವಳಿಗೆ ಕೊಟ್ಟಿದ್ದಾನೆ. ಇದನ್ಯಾಕೆ ಕೊಡ್ತಿದ್ದೀಯ ಅಂತ ವಸು ಕೇಳಿದರೆ ಉತ್ತರಿಸಲು ತಡಬಡಾಯಿಸಿದ್ದಾನೆ. ಅನುಮಾನಿಸುತ್ತಲೇ ವಸು ಆತನಿಂದ ರೋಸ್‌ ಪಡೆದಿದ್ದಾಳೆ. ಅದೇ ಸಮಯಕ್ಕೆ ಅತ್ತ ರಿಷಿ ಬಂದಿದ್ದಾನೆ. ಆತನನ್ನು ನೋಡಿ ವಸು ಆತನ ಬಳಿ ಹೋಗಿ ಕೈಚಾಚಿದ್ದಾಳೆ. ಈ ಕಾರ್ಯಕ್ರಮ ಯಶಸ್ವಿ ಆಗಲಿ ಅಂತ ಶೇಕ್‌ಹ್ಯಾಂಡ್‌ ಮಾಡಿ ವಿಶ್ ಮಾಡಿದ್ದಾಳೆ. ಅಷ್ಟೊತ್ತಿಗೆ ತನ್ನ ಕೈಯಲ್ಲಿರುವ ಗುಲಾಬಿಯನ್ನು ರಿಷಿ ಸರ್‌ಗೆ ಕೊಡೋಣ ಅಂತ ಅವಳಿಗೆ ಅನಿಸದೆ.

ಕನ್ನಡತಿ: ಕೊಲೆ ಯತ್ನ ಕೇಸ್‌ ಹಾಕಿ ಹರ್ಷನ್ನ ಜೈಲಿಗಟ್ಟೇ ಬಿಟ್ಲು ಸಾನ್ಯಾ, ಸೀರಿಯಲ್‌ ದಿಕ್ಕುತಪ್ತಿದೆ ಅಂತಿದ್ದಾರೆ ಫ್ಯಾನ್ಸ್!

ಹೂವನ್ನು ರಿಷಿ ಸಾರ್‌ ಕೈಗೆ ನೀಡಿ ಅವಳು ಮತ್ತೊಮ್ಮೆ ವಿಶ್‌(Wish) ಮಾಡಿದ್ದಾಳೆ. ರಿಷಿಗೆ ಒಳಗೊಳಗೇ ಖುಷಿಯಾದರೂ ಆತ ಅದನ್ನು ತೋರಿಸಿಕೊಂಡಿಲ್ಲ. ತಾನು ಕೊಟ್ಟ ರೋಸ್‌(Rose) ಅನ್ನು ವಸು ರಿಷಿಗೆ ಕೊಟ್ಟದ್ದನ್ನು ಕಂಡು ಗೌತಮ್‌ಗೆ ಮೈಯೆಲ್ಲ ಉರಿದಿದೆ. ಈ ಹೊತ್ತಿಗೆ ಆತ ಹೋಂ ಮಿನಿಷ್ಟರ್‌(Home Minister) ಎದುರುಗೊಳ್ಳಲು ಮಹೇಂದ್ರ ಸಾರ್‌, ಜಗತಿ ಮೇಡಂ ಹೋಗ್ತಿದ್ದಾರೆ. ನಿನ್ನ ಕರೆದಿಲ್ವಾ ಅಂತ ಕೆಣಕಿದ್ದಾನೆ. ಕಾರ್ಯಕ್ರಮದ ವೇಳೆ ಮಹೇಂದ್ರನಿಂದ ದೂರವಿರಿ ಅಂತ ರಿಷಿ ಮೊದಲೇ ಜಗತಿಗೆ ತಿಳಿಸಿದ್ದಾನೆ. ಆದರೆ ಆತ ಕಾರಿಂದಿಳಿಯುವಾಗ ತನ್ನ ತಂದೆ ಮಹೇಂದ್ರ, ಜಗತಿಯ ಕೈ ಹಿಡಿದು ನಡೆಯುತ್ತಿರುವುದು ಆತನ ಕಣ್ಣಿಗೆ ಬಿದ್ದು ಸಿಡಿಮಿಡಿಯಾಗಿದೆ. ಇದೀಗ ಗೌತಮ್‌ ಮತ್ತೆ ಅವರ ವಿಚಾರ ಎತ್ತಿದ್ದಕ್ಕೆ ಆತ ವಿಚಲಿತನಾಗಿದ್ದಾನೆ.

ಜೊತೆ ಜೊತೆಯಲಿ ಸೀರಿಯಲ್‌ ಪುಷ್ಪ ರಿಯಲ್‌ ಮಗಳು ಹೇಳಿದ ನೋವಿನ ಕಥೆ

ಈ ನಡುವೆ ಗೌತಮ್‌ ಅಲ್ಲಿಂದ ಹೋಗಿದ್ದಾನೆ. ಆ ಹೊತ್ತಿಗೆ ಸ್ಟೇಜ್‌ನಲ್ಲಿ ವಸು ಒಬ್ಬಳೇ ಇದ್ದಾಳೆ. ಸ್ಟೇಜ್‌(Stage)ನ ಬೋರ್ಡ್‌ ಮೇಲಿನ ಹಗ್ಗವನ್ನು ಕೆಳಕ್ಕೆ ಎಳೆಯಲು ಅವಳು ಮೇಲಕ್ಕೆ ಎಗರುತ್ತಿದ್ದಾಳೆ. ಎಷ್ಟು ಹಾರಿದರೂ ಹಗ್ಗ ಕೈಗೆ ಸಿಗುತ್ತಿಲ್ಲ. ಇದನ್ನು ಕಂಡ ರಿಷಿ ಸ್ಟೇಜ್‌ ಮೇಲೆ ಹತ್ತಿ ವಸುವನ್ನು ತನ್ನ ತೋಳುಗಳಿಂದ ಹಿಡಿದು ಎತ್ತಿದ್ದಾನೆ. ವಸು ಎದೆಬಡಿತ(Heart beat) ಹೆಚ್ಚಾಗಿದೆ, ಮುಖ ಕೆಂಪೇರಿದೆ. ರಿಷಿ ನಸು ನಗುತ್ತಾ ಹಗ್ಗ ಕೆಳಕ್ಕೆ ಎಳಿ ಅಂತ ಸನ್ನೆ ಮಾಡ್ತಾನೆ. ಅವರಿಬ್ಬರ ಒಳಗೂ ಬೇರೆಯದೇ ಫೀಲ್ ಇದೆ. ಅದೇ ಹೊತ್ತಿಗೆ ಗೌತಮ್‌ ಎಂಟ್ರಿಯಾಗಿದ್ದಾನೆ. ಇದನ್ನೆಲ್ಲ ನೋಡಿ ಆತ ಮೂರ್ಛೆ ಹೋಗೋದೊಂದು ಬಾಕಿ.

ಈ ಸೀರಿಯಲ್‌ನಲ್ಲಿ ರಿಷಿಯಾಗಿ ಮುಕೇಶ್‌ ಗೌಡ, ವಸು ಪಾತ್ರದಲ್ಲಿ ರಕ್ಷಾ ಗೌಡ, ಜಗತಿಯಾಗಿ ಜ್ಯೋತಿ ರೈ ನಟಿಸಿದ್ದಾರೆ.