ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಭಾಗ್ಯ ತವರು ಸೇರಿದ್ದಾಳೆ. ತಾಂಡವ್ ಅಡುಗೆ ಭಟ್ಟನಾಗಿ ಕಿಚನ್ ಸೇರಿದ್ದಾನೆ. ಇನ್ನೇನು ನೋಡ್ಬೇಕೋ ಅಂತ ವೀಕ್ಷಕರು ತಲೆ ತಲೆ ಚಚ್ಕೊಳ್ತಿದ್ದಾರೆ.

ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಭಾಗ್ಯಲಕ್ಷ್ಮೀ ಸೀರಿಯಲ್‌ನಲ್ಲಿ ಹೈ ಡ್ರಾಮಾ ನಡೆದು ಸದ್ಯ 'ಮಳೆ ನಿಂತು ಹೋದ ಮೇಲೆ...' ಥರದ ಸನ್ನಿವೇಶ ಕ್ರಿಯೇಟ್ ಆಗಿದೆ. ಭಾಗ್ಯಾ ತವರು ಮನೆ ಸೇರಿದ್ದಾಳೆ. 'ನಂದೇ ಮನೆ, ನಾನೇ ಹುಟ್ಟಿ ಬೆಳ್ದಿರೋ ಜಾಗ. ಆದರೆ ಒಂದು ಸಮಯದ ನಂತರ ನಾನೇ ಇಲ್ಲಿಗೆ ಅತಿಥಿ' ಅನ್ನೋ ಭಾಗ್ಯಾಳ ಮಾತು ಅವಳ ಅಪ್ಪ ಅಮ್ಮ ಮಾತ್ರ ಅಲ್ಲ, ಕೆಲವು ವೀಕ್ಷಕರಲ್ಲೂ ಕಣ್ಣೀರು ತರಿಸಿದೆ. ಆದರೆ ಕೆಲವರು ಮಾತ್ರ ಮುಸಿ ಮುಸಿ ನಗ್ತಿದ್ದಾರೆ. 'ಇನ್ ಇನ್ನೂರು ವರ್ಷ ಮುಂದೆ ಹೋದ್ರೂ ನಮ್ ಸೀರಿಯಲ್ ಕಥೆ ಬದಲಾಗಲ್ಲ ಬಿಡಿ' ಅಂತ ಬಿದ್ದೂ ಬಿದ್ದೂ ನಗ್ತಿದ್ದಾರೆ. ಇರಲಿ, ಎಲ್ಲ ಅವರವರ ಭಾವಕ್ಕೆ, ಅವರವರ ಭಕುತಿಗೆ. ಇತ್ತ ಭಾಗ್ಯಾ ಅತ್ತೆ ಕುಸುಮಾ ಬಂದು, 'ಅವಳು ನಿಮ್ಮ ಮಗಳಲ್ಲ, ನನ್ನ ಸೊಸೆ, ಅವಳನ್ನು ಚೆನ್ನಾಗಿ ನೋಡ್ಕೊಳ್ಬೇಕು' ಅಂತ ಭರ್ಜರಿ ಡೈಲಾಗ್ ಉದುರಿಸಿ ಹೋಗಿದ್ದಾರೆ. ಅದನ್ನು ನೋಡಿ ಒಂದಿಷ್ಟು ಮಂದಿ ಹೆಣ್ಮಕ್ಕಳು ಭಯ ಭಕ್ತಿಯಿಂದ, 'ಎಲ್ಲರಿಗೂ ಕುಸುಮಾಳಂಥಾ ಅತ್ತೆ ಸಿಗಬೇಕು' ಅಂತ ಪ್ರಾರ್ಥಿಸಿದ್ದಾರೆ.

ಇನ್ನೊಂದು ಕಡೆ ತಾಂಡವ ಮೂರ್ತಿಗಳ ಕಿಚನ್ ಪ್ರಹಸನ ನಡೀತಾ ಇದೆ. ಆಧುನಿಕ ನಳ ಮಹಾರಾಜನ ಫಚೀತಿ ಈ ಸೀರಿಯಲ್ ವೀಕ್ಷಕರಿಗೆ ಸಖತ್ ಮನೋರಂಜನೆಯನ್ನಂತೂ ನೀಡುತ್ತಿದೆ. ಇದಕ್ಕೂ ಮೊದಲು ಕುಸುಮಾ ತಾಂಡವ್‌ನನ್ನು ಕರೆಯುತ್ತಾಳೆ. ಅಮ್ಮ ಕರೆಯುತ್ತಿದ್ದಂತೆ ಖುಷಿಯಿಂದ ಓಡುವ ತಾಂಡವ್‌ ಊಟಕ್ಕೆ ಕರೆದಂತೆ ಹೋಗಿ ಡೈನಿಂಗ್‌ ಟೇಬಲ್‌ನಲ್ಲಿ ಆರಾಮವಾಗಿ ಕುಳಿತುಕೊಳ್ಳುತ್ತಾನೆ. ಆದರೆ ತಾನೇ ಅಡುಗೆ ಮಾಡಬೇಕು, ಬಡಿಸಬೇಕು ಎಂದು ಗೊತ್ತಾದಾಗ ಶಾಕ್‌ ಆಗುತ್ತಾನೆ.

ಗಂಡಂದಿರಿಗೆ ಒಂದು ವಾರದ ಚಾಲೆಂಜ್​ ಕೊಡಲು ರೆಡಿಯಾದ 'ಭಾಗ್ಯಲಕ್ಷ್ಮಿ' ಫ್ಯಾನ್ಸ್​! ಏನಿದು ವಿಷ್ಯ?

ಎಂದಿಗೂ ಅಡುಗೆ ಮನೆ ಕಡೆ ಹೋಗದ ತಾಂಡವ್‌, ಅಡುಗೆ ಮಾಡದ ತಾಂಡವ್‌ ಅಡುಗೆ ಮನೆಗೆ ಹೋಗಿ ಫಜೀತಿ ಪಡುತ್ತಾನೆ. ಅನ್ನ ಮಾಡಲು ಬಾರದೆ , ಸಾಂಬಾರ್‌ ಬಿಸಿ ಮಾಡಲು ಬಾರದೆ ಪರದಾಡುತ್ತಾನೆ. ಹೇಗೋ ಪಾಯಸದಂತೆ ಮಾಡಿದ ಅನ್ನವನ್ನು ಎಲ್ಲರಿಗೂ ಬಡಿಸುತ್ತಾನೆ. ಹಾಕಿದ ಸವಾಲಿನಲ್ಲಿ ತಾಂಡವ್‌ ಮೊದಲ ದಿನ ತಾಂಡವ್ ಅಚೀವ್‌ಮೆಂಟ್‌ ಬಿಗ್‌ ಜೀರೋ ಆಗಿಬಿಟ್ಟಿದೆ.

ಮತ್ತೊಂದೆಡೆ ಭಾಗ್ಯಾ ತಂಗಿ ಪೂಜಾಗೆ ಶ್ರೇಷ್ಠಾ ಎಲ್ಲಾ ವಿಚಾರವನ್ನೂ ಬಾಯಿ ಬಿಟ್ಟಿದ್ದಾಳೆ. ತಾಂಡವ್‌ ಹಾಗೂ ತರುಣ್‌ ಇಬ್ಬರೂ ಒಂದೇ. ಭಾವ, ಶ್ರೇಷ್ಠಾಳನ್ನು ಎಂಗೇಜ್‌ಮೆಂಟ್‌ ಮಾಡಿಕೊಂಡಿದ್ದಾಳೆ ಎಂದು ತಿಳಿದು ಪೂಜಾ ಶಾಕ್‌ ಆಗಿದ್ದಾಳೆ.

ಈ ವಿಚಾರ ತಿಳಿದು ಪೂಜಾಗೆ ಗಾಬರಿ ಆದರೂ ಶ್ರೇಷ್ಠಾಗೆ ಎಚ್ಚರಿಕೆ ನೀಡುತ್ತಾಳೆ. ನಿಮ್ಮನ್ನು ರೆಡ್‌ ಹ್ಯಾಂಡ್‌ಆಗಿ ಹಿಡಿಯಬೇಕೆಂಬ ಉದ್ದೇಶಕ್ಕೆ ನಾನು ಇಂದು ಇಲ್ಲಿಗೆ ಬಂದಿದ್ದು. ನಾನಂತೂ ನಿಮ್ಮಿಬ್ಬರ ಮದುವೆ ಆಗಲು ಬಿಡುವುದಿಲ್ಲ ಎನ್ನುತ್ತಾಳೆ. ಈ ವೇಳೆ ಭಂಡ ಧೈರ್ಯ ತೋರುವ ಶ್ರೇಷ್ಠಾ, ನಾನು ತಾಂಡವ್‌ನನ್ನು ಮದುವೆ ಆಗೇ ಆಗುತ್ತೇನೆ, ಈಗಲೇ ಬೇಕಾದರೆ ಕುಸುಮಾಗೆ ಹೋಗಿ ಹೇಳು, ಮನಸ್ಸು ಮಾಡಿದರೆ ಈಗಲೇ ತಾಂಡವ್‌ನನ್ನು ಇಲ್ಲಿಗೆ ಕರೆಸಿಕೊಳ್ಳುತ್ತೇನೆ ಎಂದು ಚಾಲೆಂಜ್‌ ಮಾಡುತ್ತಾಳೆ.

ಬಾನದಾರಿಯಲ್ಲಿ ಸೂರ್ಯ... ಹಾಡು ಹೇಳಿ ಸೀತಮ್ಮನನ್ನು ಮಲಗಿಸಿದ ಸಿಹಿ: ಸೋ ಕ್ಯೂಟ್​ ಎಂದ ಫ್ಯಾನ್ಸ್​

ಶ್ರೇಷ್ಠಾಗೆ ಕೂಡಾ ಚಾಲೆಂಜ್‌ ಮಾಡುವ ಪೂಜಾ, ಕಾನೂನಿನ ಪ್ರಕಾರ ಮೊದಲ ಹೆಂಡತಿ ಬದುಕಿರುವಾಗಲೇ ಮತ್ತೊಂದು ಮದುವೆ ಆಗುವಂತಿಲ್ಲ. ಒಂದು ವೇಳೆ ಆದರೂ ಕಾನೂನು ಅದನ್ನು ಒಪ್ಪುವುದಿಲ್ಲ. ನನ್ನ ಅಕ್ಕ ಒಂದು ಕೇಸ್‌ ಹಾಕಿದರೆ ಸಾಕು ನಿನ್ನ ಪರಿಸ್ಥಿತಿ ಏನಾಗುತ್ತೆ ಗೊತ್ತಾ ಎಂದು ಪ್ರಶ್ನಿಸುತ್ತಾಳೆ. ಪೂಜಾ ಮಾತಿಗೆ ಶ್ರೇಷ್ಠಾ ಗಾಬರಿ ಆಗುತ್ತಾಳೆ.

ಇದರ ನಡುವೆ ಭಾಗ್ಯಾಗೆ ಬಲ ತುಂಬಿ ಅಂತ ಕಲರ್ಸ್‌ನವರು ಪದೇ ಪದೇ ಪ್ರೋಮೋ ಬಿಡ್ತಿದ್ದಾರೆ. ಇದರಿಂದ ಕಿರಿಕಿರಿ ಅನುಭವಿಸಿದ ವೀಕ್ಷಕರು, 'ಬಲ ತುಂಬ ಬೇಕಾದ್ದು ನೀವು, ನಾವಲ್ಲ.. ಹೋಗತ್ಲಾಗೆ' ಅಂತ ಮುಖ ತಿರುವುತ್ತಿದ್ದಾರೆ. ಅಲ್ಲಿಗೆ ಭಾಗ್ಯಾ ಕಣ್ಣೀರಿಗೆ ವೀಕ್ಷಕರೆಲ್ಲ ಕರಗಿ ನೀರಾಗ್ತಾರೆ ಅನ್ನೋ ಸೀರಿಯಲ್ ಟೀಮ್ ಕನಸೂ ನೀರು ನೀರಾಗಿದೆ.