ಗಂಡಂದಿರಿಗೆ ಒಂದು ವಾರದ ಚಾಲೆಂಜ್ ಕೊಡಲು ರೆಡಿಯಾದ 'ಭಾಗ್ಯಲಕ್ಷ್ಮಿ' ಫ್ಯಾನ್ಸ್! ಏನಿದು ವಿಷ್ಯ?
ಭಾಗ್ಯಲಕ್ಷ್ಮಿ ಮನೆಬಿಟ್ಟು ಹೋಗಿದ್ದಾಳೆ. ತಾಂಡವ್ಗೆ ಒಂದು ವಾರದ ಟಾಸ್ಕ್ ಶುರುವಾಗಿದೆ. ಇದನ್ನು ನೋಡಿ ಮಹಿಳಾ ಫ್ಯಾನ್ಸ್ ಏನಂತಿದ್ದಾರೆ?
ನಿನ್ನಿಂದಲೇ ನನ್ನ ಬದುಕು ನರಕವಾಗಿದ್ದು, ನೀನು ಇಲ್ಲದಿದ್ದರೆ ನಾನು ಹಾಗೂ ಇಡೀ ಕುಟುಂಬ ಸಂತೋಷವಾಗಿರುತ್ತಿದ್ದೆವು. ನೀನು ಮನೆ ಬಿಟ್ಟು ಹೋದರೆ ಎಲ್ಲವೂ ಸರಿಯಾಗಿರುತ್ತೆ, ನಾವೆಲ್ಲರೂ ನೆಮ್ಮದಿಯಿಂದ ಇರಬೇಕು ಎಂದರೆ ನೀನು ಮನೆಬಿಟ್ಟು ಹೋಗಬೇಕು ಎಂದು ತಾಂಡವ್ ಪತ್ನಿ ಭಾಗ್ಯಳಿಗೆ ಹೇಳಿ ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕುವಲ್ಲಿ ತಾಂಡವ್ ಯಶಸ್ವಿಯಾಗಿದ್ದಾನೆ. ಶ್ರೇಷ್ಠಾಳ ಪ್ರೇಮದ ನಶೆಯಲ್ಲಿರೋ ತಾಂಡವ್ಗೆ ಕಟ್ಟಿಕೊಂಡ ಹೆಂಡತಿ, ಹೆತ್ತ ಮಕ್ಕಳು ಬೇಡವಾಗಿದೆ. ಆದ್ದರಿಂದ ಡಿವೋರ್ಸ್ ಕೊಡಲು ಮುಂದಾಗಿದ್ದಾನೆ. ಮನೆ ಬಿಟ್ಟು ಹೋಗುವಂತೆ ಪತ್ನಿಗೆ ಹೇಳಿದ್ದ. ಮನೆಬಿಟ್ಟು ಹೋಗಲು ರೆಡಿಯಾಗಿದ್ದ ಭಾಗ್ಯ ಈಗ ಪತಿಗೆ ಚಾಲೆಂಜ್ ಹಾಕಿದ್ದಳು. ಏಳು ದಿನಗಳು ನಾನು ಮನೆಯಲ್ಲಿ ಇರುವುದಿಲ್ಲ. ನೀವು ಈ ಏಳು ದಿನಗಳನ್ನು ಚೆನ್ನಾಗಿ ನಿಭಾಯಿಸಿದ್ದೇ ಆದಲ್ಲಿ ನಿಮ್ಮ ಬಾಳಿನಿಂದ ದೂರ ಹೋಗುತ್ತೇನೆ ಎಂದಿದ್ದಳು. ಏಳು ದಿನ ತಾನೆ, ಅದೇನು ದೊಡ್ಡ ಮಹಾ? ಅಷ್ಟು ದೊಡ್ಡ ಬಿಸಿನೆಸ್ ನಡೆಸೋ ತನಗೆ ಏಳು ದಿನ ಮನೆ ನಡೆಸುವುದು ಕಷ್ಟವೇ ಎಂದುಕೊಂಡಿದ್ದ.
ಇದೀಗ ಆತನ ಟಾಸ್ಕ್ ಶುರುವಾಗಿದೆ. ಮೊದಲ ಟಾಸ್ಕ್ನಲ್ಲಿ ಮಕ್ಕಳನ್ನು ಒಲಿಸಿಕೊಳ್ಳಲು ನೋಡಿದ್ದ ತಾಂಡವ್ಗೆ ಹಿನ್ನಡೆಯಾಗಿತ್ತು. ದುಡ್ಡಿದ್ದರೆ, ದುಬಾರಿ ಗಿಫ್ಟ್ ಕೊಟ್ಟರೆ ಮಕ್ಕಳು ಖುಷಿಯಿಂದ ತನ್ನ ಕಡೆ ವಾಲುತ್ತಾರೆ ಎಂದು ಆತ ಅಂದುಕೊಂಡಿದ್ದ. ದುಬಾರಿ ಗಿಫ್ಟ್ ಕೊಟ್ಟು ಮಕ್ಕಳ ಪ್ರೀತಿ ಗಳಿಸಬಹುದು ಎನ್ನುವ ಅವನ ಅನಿಸಿಕೆ ಸುಳ್ಳಾಗಿದೆ. ಮಗ ಗಿಫ್ಟ್ ಎಸೆದು ಹೋದರೆ, ಮಗಳು ತನಗೆ ಇದೆಲ್ಲಾ ಬೇಡ ಎಂದು ಅಪ್ಪನ ಮುಖಕ್ಕೆ ಹೊಡೆಯುವಂತೆ ಹೇಳಿದ್ದಾಳೆ. ದುಡ್ಡೇ ದೊಡ್ಡಪ್ಪ ಎಂಬ ಗಾದೆ ಎಲ್ಲ ಸಂದರ್ಭದಲ್ಲಿಯೂ ಅನ್ವಯ ಆಗುವುದಿಲ್ಲ. ಮಕ್ಕಳ ಪ್ರೀತಿಯನ್ನು ದುಡ್ಡಿನಿಂದ ಕೊಂಡುಕೊಳ್ಳಲು ಸಾಧ್ಯವಿಲ್ಲ ಎಂಬ ಮೊದಲ ಅರಿವು ತಾಂಡವ್ಗೆ ಆಗಿದೆ.
ಮಹಾಭಾರತದ 'ಕೃಷ್ಣ' ಪಾತ್ರಧಾರಿಗೆ ಪತ್ನಿಯಿಂದ ಟಾರ್ಚರ್? ಲೇಡಿ ಎಸಿಪಿ ಎಂಟ್ರಿ- ಪೊಲೀಸರು ಹೇಳಿದ್ದೇನು?
ಈಗ ಅಡುಗೆ ಮಾಡುವ ಸರದಿ. ಆತ ಏನೇ ಸಹಾಯ ಕೇಳಿದರೂ ಕುಸುಮಾ ಆಗಲೀ, ಅಪ್ಪ ಆಗಲೀ ಆತನಿಗೆ ಸಹಕರಿಸುತ್ತಿಲ್ಲ. ಏಕೆಂದರೆ ಯಾರ ಸಹಾಯವೂ ಇಲ್ಲದೇ ಮನೆ ನಿಭಾಯಿಸುವುದು ಸುಲಭ ಎಂದಿದ್ದಾನಲ್ಲಾ ಆಸಾಮಿ. ಆದರೆ ಈಗ ಪೇಚಿಗೆ ಸಿಲುಕಿದ್ದಾನೆ ತಾಂಡವ್. ಅನ್ನಕ್ಕೆ ಎಷ್ಟು ನೀರು ಹಾಕಬೇಕು ಎಂದು ಕೇಳಿದಾಗ ಕುಸುಮಾ ಹೇಳಲಿಲ್ಲ. ನೀನು ಹೇಳದಿದ್ರೆ ಏನು ನನಗೆ ಗೊತ್ತಾಗಲ್ವಾ ಎಂದು ತಾನೇ ಒಂದಿಷ್ಟು ನೀರು ಹಾಕಿ ಅನ್ನ ಮಾಡಿದ್ದಾನೆ. ಬಹುಶಃ ಆ ಅನ್ನ ಪಾಯಸದ ರೀತಿಯಾಗುವ ಲಕ್ಷಣಗಳು ಕಾಣುತ್ತಿವೆ. ಅದೇ ಇನ್ನೊಂದೆಡೆ ಮೈಕ್ರೋವೋವನ್ನಲ್ಲಿ ಪಲ್ಯ ಬಿಸಿ ಮಾಡಲು ಹೋಗಿ ಸಾಮಾನ್ಯ ಪ್ಲಾಸ್ಟಿಕ್ ಪಾತ್ರೆ ಇಟ್ಟಿದ್ದಾನೆ. ಅದು ಸುಟ್ಟು ಹೋಗಿದೆ.
ಮಗ ಗುಂಡಣ್ಣ ಮೈಕ್ರೋವೋವನ್ಗೆ ಅಂತನೇ ಬೇರೆ ಪಾತ್ರೆ ಇರುತ್ತದೆ, ಅಷ್ಟೂ ಗೊತ್ತಿಲ್ವಾ ಅಂತ ಕೇಳಿದ್ದಾನೆ. ತಾಂಡವ್ಗೆ ಕೆನ್ನೆಯ ಮೇಲೆ ಹೊಡೆದಂಥ ಅನುಭವ ಆಗಿದೆ. ಆದರೂ ತಾನು ಸೋಲಬಾರದು, ಭಾಗ್ಯ ಮನೆಗೆ ಬರಬಾರದು. ಡಿವೋರ್ಸ್ ಪಡೆದು ಶ್ರೇಷ್ಠಾಳ ಜೊತೆ ಹಾಯಾಗಿ ಇರಬಹುದು ಎನ್ನುವ ಮನಸ್ಥಿತಿಯಲ್ಲಿಯೇ ಎಲ್ಲವನ್ನೂ ನಿಭಾಯಿಸುವ ಪಣ ತೊಟ್ಟಿದ್ದಾನೆ. ಆದರೆ ಒಂದರ ಮೇಲೊಂದರಂತೆ ಆತನಿಗೆ ಸೋಲು ಉಂಟಾಗುತ್ತಿದೆ. ಏನೋ ಕಷ್ಟಪಟ್ಟು ಅಡುಗೆ ಮಾಡುತ್ತಿದ್ದೇನೆ. ನೀವೆಲ್ಲಾ ಹೀಗೆ ಹೇಳುತ್ತಿದ್ದೀರಿ ಎಂದು ಬೈದಿದ್ದಾನೆ. ಇಷ್ಟೆಲ್ಲಾ ಹೇಳಿಸಿಕೊಂಡು ಇವನು ಮಾಡಿದ ಅಡುಗೆ ತಿನ್ನಬೇಕೇ ಎಂದು ಅಪ್ಪ ನುಡಿದಿದ್ದಾನೆ. ಎರಡನೆಯ ಹಂತದಲ್ಲಿ ತಾಂಡವ್ಗೆ ಸೋಲಾಗಿದೆ. ಮುಂದೇನು?
ಇದರ ಪ್ರೊಮೋ ಬಿಡುಗಡೆಯಾಗುತ್ತಲೇ ಸೂಪರ್ ಸೂಪರ್ ಎನ್ನುವ ಕಮೆಂಟ್ಗಳ ಸುರಿಮಳೆಯಾಗಿದೆ. ಬಹಳಷ್ಟು ಮಹಿಳೆಯರಿಗಂತೂ ಇದು ಖುಷಿಕೊಟ್ಟಿದೆ. ಗೃಹಿಣಿ ಎಂದು ಮೂದಲಿಸುವ ಗಂಡಸರಿಗೆ ಇದು ತಕ್ಕ ಪಾಠವಾಗಿದೆ ಎನ್ನುತ್ತಿರುವ ಮಹಿಳೆಯರು ತಾವೂ ಒಂದು ವಾರ ಮನೆ ಬಿಟ್ಟು ಹೋದರೆ ಗಂಡಸರಿಗೆ ಬುದ್ಧಿ ಬರುತ್ತದೆ ಎನ್ನುತ್ತಿದ್ದಾರೆ. ಹೋಟೆಲ್ ಊಟ ಮಾಡಬಾರದು, ಪಾರ್ಸೆಲ್ ತರಿಸಿಕೊಳ್ಳಬಾರದು ಎಂಬ ಚಾಲೆಂಜ್ ಹಾಕಿ ಇಡೀ ಕುಟುಂಬವನ್ನು ನೋಡಿಕೊಳ್ಳಲು ಹೇಳುವ ಚಾಲೆಂಜ್ ಶುರುವಾದರೆ ಒಳ್ಳೆಯದು. ಆಗಲಾದ್ರೂ ಮಹಿಳೆಯರನ್ನು ಮೂದಲಿಸುವ ಗುಣ ಕಡಿಮೆಯಾಗಬಹುದು ಎನ್ನುತ್ತಿದ್ದಾರೆ. ಹೀಗಾದರೆ ಏನಾಗಬಹುದು? ಗೃಹಿಣಿಯರನ್ನು ಹೀಗಳೆಯುವ ಗುಣ ಕಮ್ಮಿಯಾಗ್ಬೋದಾ?
ಪ್ರೀತಿ, ಕಾಮದ ಟಿಪ್ಸ್ ನೀಡುತ್ತಲೇ 72ನೇ ವಯಸ್ಸಿನಲ್ಲಿ ತಮ್ಮ ಡೇಟಿಂಗ್ ವಿಷ್ಯ ಹೇಳಿದ ನಟಿ ಜೀನತ್ ಅಮಾನ್!