ಬಿಗ್‌ಬಾಸ್ ಮನೆಯಲ್ಲಿ ಆರ್ಯವರ್ಧನ್ ಗುರೂಜಿ ಸಹ ಸ್ಪರ್ಧಿ ರೂಪೇಶ್ ಶೆಟ್ಟಿ ಅವರನ್ನು ಮಗ ಎಂದು ಕರೆದು ಭಾವುಕರಾಗಿದ್ದಾರೆ. ಟಾಸ್ಕೊಂದರಲ್ಲಿ ತನ್ನ ಬದಲು ಮಗನೇ ಗೆಲ್ಲಬೇಕಿತ್ತು ಎನ್ನುತ್ತಾ ಕಣ್ಣೀರು ಹಾಕಿದ್ದಾರೆ. ಇದನ್ನು ನೋಡಿ ದೊಡ್ಮನೆಯ ಉಳಿದವರೂ ಭಾವುಕರಾಗಿದ್ದಾರೆ.

ಬಿಗ್‌ಬಾಸ್ ಸೀಸನ್‌ 9 ಕೊನೆ ಕೊನೆಯ ಹಂತವನ್ನು ತಲುಪುತ್ತಿರುವ ಹಾಗೆ ಹೆಚ್ಚೆಚ್ಚು ಇಂಟರೆಸ್ಟಿಂಗ್ ಆಗಿ ಸಾಗ್ತಾ ಇದೆ. ಇದರಲ್ಲಿ ಹುಡುಗ ಹುಡುಗಿ ನಡುವೆ ಕ್ರಶ್ ಆಗೋದು, ಪ್ರೇಮ ಹುಟ್ಟೋದು ಕಾಮನ್. ಹಾಗೇ ಅಣ್ಣ ತಂಗಿ ಬಂಧ, ತಂದೆ ಮಗನ ಬಾಂಧವ್ಯಕ್ಕೂ ಈ ಮನೆ ಕಾರಣವಾಗ್ತಿರೋದು ಫ್ಯಾನ್ಸ್‌ಗೆ ಖುಷಿ ತಂದಿದೆ. ಇದೀಗ ಬಾವುಟದ ಟಾಸ್ಕೊಂದು ಆರ್ಯವರ್ಧನ್ ಬಹಳ ಭಾವುಕರಾಗುವ ಹಾಗೆ ಮಾಡಿದೆ. ಆರ್ಯವರ್ಧನ್ ಅವರು ಮೊದಲಿಂದಲೂ ರೂಪೇಶ್ ಶೆಟ್ಟಿ ಅವರನ್ನು ಬೇರೆ ರೀತಿ ನೋಡುತ್ತಾ ಬಂದವರು. ಅವರನ್ನು ತನ್ನ ಮಗ ಎಂದೇ ಭಾವಿಸಿ ಮಾತನಾಡುತ್ತಿರುವುದು ಎಲ್ಲರಿಗೂ ತಿಳಿದ ವಿಚಾರವೇ. ಆದರೆ ಬಿಗ್‌ಬಾಸ್ ಮನೆಯಲ್ಲಿ ಅವರೆಲ್ಲ ಸ್ಪರ್ಧಿಗಳೇ. ಗೆಲ್ಲಬೇಕೆಂಬ ಹಂಬಲ ಎಲ್ಲರಲ್ಲೂ ಇರೋದು ಸಹಜ, ಅದೇ ಕಾಮನ್ ಕೂಡ. ಆದರೆ ಇಲ್ಲಿ ತಂದೆ ಮಗನ ಭಾಂದವ್ಯ ಸ್ಪರ್ಧೆಯ ಚೌಕಟ್ಟನ್ನೂ ಮೀರಿ ಹೋಗಿದೆ. ಬಾವುಟವನ್ನು ತನ್ನ ಬದಲು ಮಗ ರೂಪಿ ಪಡೆಯಬೇಕಿತ್ತು ಎನ್ನುತ್ತಾ ಗುರೂಜಿ ಗದ್ಗದಿತರಾಗಿದ್ದಾರ

ಬಿಗ್ ಬಾಸ್ ಮನೆ ಆಗಾಗ ಹಲವು ಬಾಂಧವ್ಯಕ್ಕೂ ಕಾರಣವಾಗುತ್ತೆ. ಬಿಗ್ ಬಾಸ್ ಮನೆಯಿಂದ ಹೊರಗೆ ಬಂದ ಮೇಲೆ ತಾವ್ಯಾರೋ ಉಳಿದವರ್ಯಾರೋ ಅನ್ನೋ ಸ್ಥಿತಿ ಇದ್ದರೂ ಅದನ್ನೂ ಮೀರಿದ ಬಂಧ ಇಲ್ಲಿ ಬೆಳೆದು ಬಿಡುತ್ತದೆ. ಹೀಗೆಲ್ಲ ಹೇಳಲು ಕಾರಣ ಅಂದ್ರೆ ಆರ್ಯವರ್ಧನ್ ಗುರೂಜಿ ಹಾಗೂ ರೂಪೇಶ್ ಶೆಟ್ಟಿ. ಆರ್ಯವರ್ಧನ್ ಗುರೂಜಿ ಒಟಿಟಿ ಸೀಸನ್ ನಿಂದಲೇ ಬಿಗ್ ಬಾಸ್ ಮನೆ ನೋಡಿದವರು. ಅದರಲ್ಲಿ ರೂಪೇಶ್ ಶೆಟ್ಟಿಯನ್ನು ತಮ್ಮ ಮಗನೆಂದೆ ಭಾವಿಸಿದ್ದಾರೆ. ಆ ಪ್ರೇಮಕ್ಕೆ ಇಂದು ಕಣ್ಣೀರು ಹಾಕಿದ್ದಾರೆ. ಮನೆ ಮಂದಿಯೆಲ್ಲಾ ಅವರ ಕಣ್ಣೀರು ಕಂಡು ಸೋ ಕ್ಯೂಟ್ ಎಂದಿದ್ದಾರೆ.

ಮಗಳಿಗೆ ಆಪರೇಷನ್; ಬಿಗ್‌ ಬಾಸ್‌ ಮನೆಯಿಂದ ದಿಢೀರ್ ಹೊರ ಹೋದ ಅರುಣ್ ಸಾಗರ್

ಹಾಗೆ ನೋಡಿದರೆ ಆರ್ಯವರ್ಧನ್ ಗುರೂಜಿ ಅವರ ಆಟದಲ್ಲಿ ಶಕ್ತಿಗಿಂತ ಯುಕ್ತಿಯೂ ಜಾಸ್ತಿಯೇ ಇದೆ. ಅದರಲ್ಲೂ ಮಗುವಿನ ಹೆಸರೆತ್ತಿದರೆ ಸಾಕು ಅವರು ಸಖತ್ ಸ್ಟ್ರಾಂಗ್ ಆಗ್ತಾರೆ. ಒಟಿಟಿ ಸೀಸನ್ ನಿಂದ ಬಂದಿರುವ ಗುರೂಜಿ ಹೆಚ್ಚು ಕಾಣಿಸಿಕೊಳ್ಳುವುದು ಅಡುಗೆ ಮನೆಯಲ್ಲಿಯೇ. ರುಚಿಕಟ್ಟಾದ ಊಟ ಬಡಿಸಿ, ಅದರಿಂದ ಸಿಗುವ ಕಮೆಂಟ್ ಗಳಿಗೆ ಖುಷಿ ಪಡುತ್ತಾರೆ. ಒಟಿಟಿ ಸೀಸನ್‌ನಿಂದ ರೂಪೇಶ್ ಶೆಟ್ಟಿ ಹಾಗೂ ಗುರೂಜಿ ಅಪ್ಪ‌ಮಗನ ಬಾಂಧವ್ಯ ಶುರುವಾಗಿದ್ದು. ಆಮೇಲಿಂದ ಪತ್ರ ಬರೆಯುವುದಾಗಲಿ, ಎಮೋಷನಲಿ ವಿಚಾರದ ಆಯ್ಕೆಗಾಗಲಿ ಇಬ್ಬರು ಒಬ್ವರನ್ನೊಬ್ವರು ಬಿಟ್ಟುಕೊಟ್ಟದ್ದು ಬಹಳ ಕಡಿಮೆ.

ಬಿಗ್‌ಬಾಸ್‌ನಲ್ಲಿ ಈ ಬಾರಿ ಒಂದು ಹೊಸ ಟಾಸ್ಕ್‌ ಇತ್ತು. ವೃತ್ತಾಕಾರದಲ್ಲಿ ಬಟ್ಟೆಯ ಪೀಸುಗಳನ್ನು ಇಡಲಾಗಿತ್ತು. ಐದು ಜನ ಕಂಟೆಸ್ಟೆಂಟ್ ಗಳಿದ್ದರೆ ನಾಲ್ಕು ಬಟ್ಟೆಗಳನ್ನು ಇಡಲಾಗಿತ್ತು. ಹೀಗೆ ಆಡುವಾಗ ಒಮ್ಮೆ ರೂಪೇಶ್ ಶೆಟ್ಟಿ ಹಾಗೂ ಆರ್ಯವರ್ಧನ್ ಗುರೂಜಿ ಎದುರು ಬದುರಾದರು. ಮೊದಲು ಬಟ್ಟೆಯನ್ನು ರೂಪೇಶ್ ಶೆಟ್ಟಿಯೇ ತೆಗೆದುಕೊಂಡರು, ಬಳಿಕ ಗುರೂಜಿಗೆ ಆ ಬಟ್ಟೆಯನ್ನು ಬಿಟ್ಟುಕೊಟ್ಟಿದ್ದಾರೆ. ಟಾಸ್ಕ್(Task) ನಡುವೆಯೇ ಗುರೂಜಿ ಕಣ್ಣೀರು ಹಾಕಿದ್ದಾರೆ. ಎಲ್ಲರು ಅವರಿಗೆ ಸಮಾಧಾನ ಮಾಡಲು ನೋಡಿದಾಗಲೂ 'ಮಗ ರೂಪೇಶ್ ಗೆಲ್ಲಬೇಕಿತ್ತು, ಆದರೆ ನಾನು ಗೆದ್ದು ಬಿಟ್ಟೆ. ಆಟ ಆಗಬಹುದು ಏನೇ ಆಗಬಹುದು. ನೀನು ನನ್ನ ಮಗನೆ. ನೀನು ಯಾವಾಗಲೂ ಬಿಟ್ಟು ಕೊಡ್ತೀಯಾ. ಅದು ನಿನಗೆ ರೂಢಿ' ಎಂದು ಗುರೂಜಿ ಎಮೋಷನಲ್ ಆಗಿದ್ದಾರೆ. ಮತ್ತೆ ರೂಪೇಶ್ ಶೆಟ್ಟಿ ಸಮಾಧಾನ ಪಡಿಸಿದ್ದು, ಹಾಗೆಲ್ಲಾ ಏನು ಇಲ್ಲ. ಇದು ಆಟ(Game) ಅಷ್ಟೇ. ನೀವೆ ಮೊದಲು ಹಿಡಿದುಕೊಂಡಿರಿ ಅಂತ ನಾನು ಭಾವಿಸಿದ್ದೆ. ಅದಕ್ಕೆ ಬಿಟ್ಟೆ ಎಂದು ಸಮಾಧಾನ ಮಾಡಿದ್ದಾರೆ.

BBK9 ತಪ್ಪು ಒಪ್ಪಿಕೊಳ್ಳಲು ಕಷ್ಟವಾಗುತ್ತೆ; ರೂಪೇಶ್ ರಾಜಣ್ಣಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ ಸುದೀಪ್

ಈ ಬಾಂಧವ್ಯ ಬಿಗ್‌ಬಾಸ್ ಮನೆಯ ಉಳಿದೆಲ್ಲ ಸ್ಪರ್ಧಿಗಳನ್ನೂ ಭಾವುಕರನ್ನಾಗಿ ಮಾಡಿದೆ. ಅವರಿದಕ್ಕೆ ಸೋ ಕ್ಯೂಟ್‌(Cute) ಅಂದಿದ್ದಾರೆ.