ಅಮೃತಧಾರೆ ಸೀರಿಯಲ್‌ನಲ್ಲಿ ಕಳೆದ ವಾರ ಹೈ ಡ್ರಾಮ ನಡೆದಿದೆ. ಎಲ್ಲವೂ ಸರಿಯಾದ ಹಂತದಲ್ಲಿ ಡುಮ್ಮಾ ಸರ್ ಭೂಮಿಯನ್ನು ಬಾಚಿ ತಬ್ಬಿಕೊಂಡಿದ್ದಾರೆ. 

ಅಮೃತಧಾರೆ ಜೀ ಕನ್ನಡದಲ್ಲಿ (Zee Kannada Serial Amruthadhare) ಪ್ರಸಾರವಾಗ್ತಿರೋ ಸೀರಿಯಲ್‌. ಇದರಲ್ಲಿ ಕಳೆದ ವಾರ ಫುಲ್ ಹೈ ಡ್ರಾಮಾ ನಡೆದಿತ್ತು. ಅದರಲ್ಲಿ ಭೂಮಿಯ ಕೊಲೆಯ ಸಂಚು ನಡೆದು ಆಕೆ ತೀರಿಕೊಂಡೇ ಬಿಟ್ಟಳೇನೋ ಅನ್ನೋ ಸನ್ನಿವೇಶ ಕ್ರಿಯೇಟ್ ಆಗಿತ್ತು. ರೌಡಿ ಕೆಂಚ ಭೂಮಿಕಾಳನ್ನು ಕಿಡ್ನ್ಯಾಪ್‌ (Kidnap) ಮಾಡಿದ್ದ. ಅದರ ಜೊತೆಗೆ ಗೌತಮ್ ದಿವಾನ್ ಅವರ ಬಳಿ ದುಡ್ಡಿಗೂ ಬೇಡಿಕೆ ಇಟ್ಟಿದ್ದ. ಆದರೆ ರಾಮಾಯಣದಲ್ಲಿ ಸೀತೆ ಮಾಡಿದ ಹಾಗೆ ತನ್ನೆಲ್ಲ ಒಡವೆಯನ್ನು ಕಿಡ್ನಾಪ್ ಮಾಡಿದ ದಾರಿಯಲ್ಲಿ ಎಸೆಯುತ್ತಾ ಬಂದಿದ್ದಾಳೆ. ಭೂಮಿಗಾಗಿ ಎಲ್ಲೆಡೆ ಹುಡುಕಾಟ ನಡೆಸುತ್ತಿದ್ದ ಗೌತಮ್ ಕಣ್ಣಿಗೆ ಅದು ಕಂಡಿದೆ. ಅವರು ಅದೇ ಜಾಡನ್ನು ಹುಡುಕಿಕೊಂಡು ಹೊರಟಾಗ ಭೂಮಿಯನ್ನು ಜೀವಂತವಾಗಿ ಮಣ್ಣು ಮಾಡಿದ ಜಾಗ ಸಿಗುತ್ತೆ. ಹಣದಾಸೆಗೆ ಶಕುಂತಲಾ ಪ್ಲಾನ್‌ಗೆ ಬಲಿಯಾದ ರೌಡಿ ಕೆಂಚ ಭೂಮಿಕಾಳನ್ನು ಜೀವಂತವಾಗಿ ಬ್ಯಾರಲ್ ಒಳಗೆ ಹಾಕಿ ಗುಂಡಿ ತೋಡಿ ಅದರಲ್ಲಿ ಬ್ಯಾರಲ್ ಇಟ್ಟು ಗುಂಡಿ ಮುಚ್ಚಿದ್ದ.

ಇತ್ತ ಭೂಮಿಕಾ ಜಾಡು ಹಿಡಿದು ಬಂದ ಗೌತಮ್ ಈ ಜಾಗ ಪತ್ತೆ ಹಚ್ಚಿದ್ದಾರೆ. ಮಣ್ಣು ಮುಚ್ಚಿದ ಜಾಗದ ಬಗ್ಗೆ ಅನುಮಾನ ಬಂದು ಅಲ್ಲಿ ಮಣ್ಣು ಸರಿಸಿ ನೋಡಿದಾಗ ಬ್ಯಾರಲ್ ಒಳಗಿದ್ದ ಭೂಮಿಕಾ ಸಿಕ್ಕಿದ್ದಾಳೆ. ಅವಳಿಗೆ ತಮ್ಮ ಉಸಿರು ನೀಡಿ, ಪ್ರಾಥಮಿಕ ಚಿಕಿತ್ಸೆ ಮಾಡಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಇದೀಗ ಭೂಮಿಕಾ ಚೇತರಿಸಿದ್ದಾಳೆ. ಇದು ಗೌತಮ್‌ಗೆ ದೊಡ್ಡ ನಿರಾಳತೆ. ಈ ನಡುವೆ ಈ ಹೈ ಡ್ರಾಮಕ್ಕೊಂದು ಸೊಗಸಾದ ಎಂಡ್ ಸಿಕ್ಕಿದೆ. ಕಳೆದ ಹತ್ತು ಹಲವು ಎಪಿಸೋಡ್‌ಗಳಲ್ಲಿ, ಹಲವು ತಿಂಗಳ ಸಂಚಿಕೆಯಲ್ಲಿ ಅಮೃತಧಾರೆಯಲ್ಲಿ ಗೌತಮ್‌ ಭೂಮಿಕಾಳಿಗೆ ಪ್ರಪೋಸ್‌ ಮಾಡಲು ಸಾಧ್ಯವಾಗದೆ ಪರಿತಪಿಸುತ್ತಿದ್ದರು.

ಭೂಮಿಗೆ ಉಸಿರು ತುಂಬಿ ಜೀವ ನೀಡಿದ ಗೌತಮ್​: ಸೀರಿಯಲ್​ ಜೋಡಿ ಅನ್ನೋದನ್ನೂ ಮರೆತುಬಿಟ್ರಾ ಫ್ಯಾನ್ಸ್​?

ಇದೇ ರೀತಿ ಭೂಮಿಕಾಳಿಗೂ ತನ್ನ ಮನದ ಮಾತು ಹೇಳಲು ಸಾಧ್ಯವಾಗಿರಲಿಲ್ಲ. ಇದೀಗ ಕೊನೆಗೂ ಕಾಲಕೂಡಿ ಬಂದಿದೆ. ಈ ಹಿಂದೆ ಗೌತಮ್‌ ಮತ್ತು ಭೂಮಿಕಾರ ಪ್ರೀತಿ ಮಾತುಗಳಿಗೆ ನಾನಾ ಅಡ್ಡಿ, ವಿಘ್ನಗಳು ಬಂದಿದ್ದವು. ಶಕುಂತಲಾದೇವಿ ಪ್ರಮುಖ ಅಡ್ಡಿಯಾಗಿದ್ದಳು. ಇದೀಗ ಚಿಕ್ಕಮಗಳೂರಿನಲ್ಲಿ ನಡೆದ ಘಟನೆಯೊಂದರ ಬಳಿಕ ಇಬ್ಬರೂ ತಮ್ಮ ಹೃದಯದಲ್ಲಿ ಬಚ್ಚಿಟ್ಟುಕೊಂಡ ಪ್ರೀತಿಯ ಮಾತುಗಳನ್ನು ಹೇಳಿದ್ದಾರೆ.

ಪ್ರೋಮೋದಲ್ಲಿ ಈ ಸುಂದರ ಗಳಿಗೆಯ ಸಂಕ್ಷಿಪ್ತ ಕ್ಲಿಪ್‌ ತೋರಿಸಲಾಗಿದೆ. ಗೌತಮ್‌ ಮತ್ತು ಭೂಮಿಕಾ ಡಿನ್ನರ್‌ಗೆ ಕುಳಿತಿದ್ದಾರೆ. ಆನಂದ್‌ ಮತ್ತು ಅಪರ್ಣಾ ಊಟ ಅರೇಂಜ್‌ ಮಾಡಿರುತ್ತಾರೆ. ಈ ಸಮಯದಲ್ಲಿ ಗೌತಮ್‌ ತನ್ನ ಮನದ ಮಾತುಗಳನ್ನು ಹೇಳುತ್ತಾರೆ. 'ಸಾರಿ ಭೂಮಿಕಾ ಈ ರೀತಿ ಎಲ್ಲಾ ಆಗಿರುವುದು ನನ್ನ ಮನಸ್ಸಿಗೆ ತುಂಬಾ ಬೇಜಾರು ಉಂಟು ಮಾಡಿದೆ' ಎನ್ನುತ್ತಾರೆ ಗೌತಮ್‌. ಕುಳಿತಲ್ಲಿಂದ ಎದ್ದ ಗೌತಮ್‌ 'ನಾನು ನಿಮ್ಮನ್ನು ತುಂಬಾ ಹಚ್ಚಿಕೊಂಡಿದ್ದೇನೆ ಭೂಮಿಕಾ, ಎಷ್ಟೆಂದರೆ ಅದು ಹೇಳಿಕೊಳ್ಳಲಾಗದಷ್ಟು' ಎಂದು ಕಣ್ಣೀರಿಡುತ್ತಾರೆ ಗೌತಮ್‌.

ಮಾಲಾ ಟಮ್​ ಟಮ್​ ಎಂದ ಸೀತಾರಾಮ ಪ್ರಿಯಾ: ನಿಮ್​ ನೋಡಿ ಎದೆ ಡಬ್​ ಡಬ್​ ಆಯ್ತು ಎಂದ ಫ್ಯಾನ್ಸ್​

ಆಕಸ್ಮಿಕವಾಗಿ ಹಿಂದಿರುಗಿ ನೋಡಿದರೆ, ಭೂಮಿಕಾ ಕೆಂಪು ಗುಲಾಬಿ ಹಿಡಿದುಕೊಂಡು ಗೌತಮ್‌ಗೆ ಪ್ರಪೋಸ್‌ (Love Proposal) ಮಾಡಿದ್ದಾರೆ. 'ನೀವು ನಿಮ್ಮ ಮನಸ್ಸಿನ ಮಾತುಗಳನ್ನು ಹೇಳಿ ಹಗುರವಾಗಿದ್ದೀರಿ. ಈಗ ನನ್ನ ಸರದಿ. ಐ ಲವ್‌ ಯು ಗೌತಮ್‌ ಅವರೇ' ಎಂದು ಭೂಮಿಕಾ ಪ್ರಪೋಸ್‌ ಮಾಡಿದ್ದಾರೆ. ಕಣ್ಣೀರಿನೊಂದಿಗೆ ಗೌತಮ್‌ "ಐ ಲವ್‌ ಯು ಟೂ" ಎಂದಿದ್ದಾರೆ.

ಹೂವಿನಂಥಾ ಹುಡುಗಿ ಭೂಮಿಯನ್ನು ಡುಮ್ಮ ಸಾರ್ ಬಾಚಿ ತಬ್ಬಿಕೊಂಡಿದ್ದಾರೆ.

View post on Instagram

ಈ ಸುಂದರ ಕ್ಷಣ ನೋಡಿ ಸೋಷಿಯಲ್‌ ಮೀಡಿಯಾದಲ್ಲಿ ಅಮೃತಧಾರೆ ವೀಕ್ಷಕರಿಗೆ ಸಖತ್‌ ಖುಷಿಯಾಗಿದೆ.