ಕಿವುಡು ಮತ್ತು ಮೂಗಿಯಾಗಿದ್ದರೂ, ನಟಿ ಅಭಿನಯ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಗಳಿಸಿದ್ದಾರೆ. ಅವರು ಪುನೀತ್ ರಾಜ್‌ಕುಮಾರ್ ಅವರ 'ಹುಡುಗರು' ಚಿತ್ರದಲ್ಲಿ ನಟಿಸಿದ್ದು, ಈಗ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಲ್ಲಾ ಸರಿ ಇದ್ದರೂ ಸಿನಿಮಾರಂಗದಲ್ಲಿ ಯಶಸ್ಸು ಸಿಗೋದು ಕಷ್ಟ. ಆದರೆ, ಕಿವಿ ಕೇಳಿಸದ, ಮಾತು ಬಾರದ ನಟಿಯೊಬ್ಬಳು ದಕ್ಷಿಣ ಭಾರತ ಸಿನಿಮಾ ರಂಗದಲ್ಲಿ ದೊಡ್ಡ ಯಶಸ್ಸು ಸಂಪಾದಿಸಿದ್ದರು. ತಮಿಳು, ತೆಲುಗು ಮಾತ್ರವಲ್ಲದೆ ಕನ್ನಡದಲ್ಲೂ ಸೂಪರ್‌ಹಿಟ್‌ ಸಿನಿಮಾದಲ್ಲಿ ನಟಿಸಿದ್ದರು. ಪುನೀತ್‌ ರಾಜ್‌ಕುಮಾರ್‌ ಅವರ ವೃತ್ತಿಜೀವನದಲ್ಲಿ ಅತಿದೊಡ್ಡ ಹಿಟ್‌ ಎನಿಸಿಕೊಂಡಿದ್ದ ಹುಡುಗರು ಸಿನಿಮಾದಲ್ಲಿ ಪುನೀತ್‌ ಸಹೋದರಿಯಾಗಿ ನಟಿಸಿದ್ದ ಅಭಿನಯ ಅವರು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ನಟಿ ಅಭಿನಯ ಹುಟ್ಟು ಕಿವುಡಾಗಿದ್ದರು ಸಹ ಸಿನಿಮಾಗಳಲ್ಲಿ ತಮ್ಮ ಪಾತ್ರದ ಮೂಲಕ ಜನರ ಮನ ಗೆದಿದ್ದರು. ಈಗ ಎಂಗೇಜ್‌ಮೆಂಟ್‌ ವಿಚಾರ ತಿಳಿಸುವ ಮೂಲಕ ಅಭಿಮಾನಿಗಳಿಗೆ ಸಂಭ್ರಮ ನೀಡಿದ್ದಾರೆ.

ತಮ್ಮ ಎಲ್ಲಾ ನ್ಯೂನ್ಯತೆಗಳನ್ನು ಮೆಟ್ಟಿನಿಂತಿದ್ದ ಅಭಿನಯ ಅವರು ಕನ್ನಡದಲ್ಲಿ ಮಾತ್ರ ತೆಲುಗು ಹಾಗೂ ತಮಿಳು ಭಾಷೆಯಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ಸೌಂದರ್ಯದಿಂದ ಅಪಾರ ಅಭಿಮಾನಿಗಳನ್ನು ಸಂಪಾದಿಸಿರುವ ಅಭಿನಯ ಹೆಸರು ಈ ಹಿಂದೆ ಕೆಲವು ನಟರೊಂದಿಗೂ ತಳುಕು ಹಾಕಿಕೊಂಡಿತ್ತು.

ಹುಡುಗರು ಸಿನಿಮಾದಲ್ಲಿ ಪುನೀತ್ ರಾಜ್‌ಕುಮಾರ್‌ ಅವರ ತಂಗಿಯಾಗಿ, ಶ್ರೀನಗರ ಕಿಟ್ಟಿ ಅವರ ಪ್ರೇಯಸಿಯಾಗಿ ಅಭಿನಯ ನಟಿಸಿದ್ದರು. ಸಣ್ಣ ಪಾತ್ರದಲ್ಲಿಯೂ ಇವರು ಸ್ಯಾಂಡಲ್‌ವುಡ್‌ನಲ್ಲಿ ಸಖತ್‌ ಫೇಮಸ್‌ ಆಗಿದ್ದರು.

ಇನ್ನೇನು ನಟ ವಿಶಾಲ್‌ ಅವರೊಂದಗೆ ಅಭಿನಯ ಅವರ ವಿವಾಹ ಆಗಿಯೇ ಬಿಟ್ಟಿತು ಎನ್ನುವಷ್ಟು ಸುದ್ದಿಯಾಗಿತ್ತು. ಆದರೆ, ಈ ಸುದ್ದಿಯನ್ನು ನಿರಾಕರಿಸಿದ್ದ ಅಭಿನಯ ಆಗಲೇ, ತಮಗೆ ಈಗಾಗಲೇ ಬಾಯ್‌ಫ್ರೆಂಡ್‌ ಇದ್ದು ಮದುವೆಯ ಮಾತುಕತೆಗಳು ನಡೆಯುತ್ತಿದೆ ಎಂದು ಮಾಹಿತಿ ನೀಡಿದ್ದರು. ಈಗ ಎಂಗೇಜ್‌ಮೆಂಟ್‌ ಆಗಿರುವ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ "ನಾನು ನನ್ನ ಬಾಲ್ಯದ ಸ್ನೇಹಿತನೊಂದಿಗೆ ಪ್ರೀತಿಸುತ್ತಿದ್ದೇನೆ. ನಾವಿಬ್ಬರು 15 ವರ್ಷಗಳಿಂದ ರಿಲೇಶನ್‌ನಲ್ಲಿದ್ದೇವೆ. ನಾನು ಯಾವುದೇ ಭಯವಿಲ್ಲದೆ ಅವರೊಂದಿಗೆ ಏನು ಬೇಕಾದರೂ ಹಂಚಿಕೊಳ್ಳಬಹುದು" ಎಂದು ನಟಿ ಅಭಿನಯ ಹೇಳಿದ್ದರು.

ಇನ್ಸ್ಟಾಗ್ರಾಮ್‌ನಲ್ಲಿ ಫೋಟೋವನ್ನು ಹಂಚಿಕೊಂಡಿರುವ ಅಭಿನಯ, ನಶ್ಚಿತ ವರನೊಂದಿಗೆ ಗಂಟೆ ಬಾರಿಸುತ್ತಿರುವ ಫೋಟೋವನ್ನು ಅಭಿಮಾನಿಗಳಿಗೆ ನೀಡಿದ್ದು, ತಮ್ಮ ಮದುವೆ ಫಿಕ್ಸ್‌ ಆದ ಸಂಗತಿಯನ್ನು ಬಹಿರಂಗ ಮಾಡಿದ್ದಾರೆ.

33 ವರ್ಷದ ನಟಿಯನ್ನು ಪ್ರೀತಿಸುತ್ತಿದ್ದಾರಾ ವಿಶಾಲ್: ಇವರಿಬ್ಬರು ಜೋಡಿಯಾಗಿ ನಟಿಸಿದ ಚಿತ್ರ ಯಾವುದು?

ನಮ್ಮ ಪ್ರಯಾಣ ಇಂದಿನಿಂದ ಪ್ರಾರಂಭವಾಗುತ್ತದೆ ಎಂದು ಈ ಫೋಟೋಗೆ ಬರೆದುಕೊಂಡಿದ್ದು, ಭಾವಿ ಪತಿಯನ್ನು ತೋರಿಸಿಲ್ಲ. ತಾವು ಮದುವೆ ಆಗಲಿರುವ ಹುಡುಗ ಯಾರೆಂಬ ಬಗ್ಗೆಯೂ ಇನ್ನೂ ಕುತೂಹಲ ಇರಿಸಿಕೊಂಡಿದ್ದಾರೆ.

ನನಗೆ ಲವರ್ ಇದ್ದಾರೆ, ಇನ್ಮೇಲೆ ನನ್ನ ಬಗ್ಗೆ ಯಾರು ಲವ್ ಗಾಸಿಪ್ ಹಬ್ಬಿಸಬೇಡಿ: ನಟಿ ಅಭಿನಯಾ