- Home
- Entertainment
- Cine World
- ನನಗೆ ಲವರ್ ಇದ್ದಾರೆ, ಇನ್ಮೇಲೆ ನನ್ನ ಬಗ್ಗೆ ಯಾರು ಲವ್ ಗಾಸಿಪ್ ಹಬ್ಬಿಸಬೇಡಿ: ನಟಿ ಅಭಿನಯಾ
ನನಗೆ ಲವರ್ ಇದ್ದಾರೆ, ಇನ್ಮೇಲೆ ನನ್ನ ಬಗ್ಗೆ ಯಾರು ಲವ್ ಗಾಸಿಪ್ ಹಬ್ಬಿಸಬೇಡಿ: ನಟಿ ಅಭಿನಯಾ
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಗಾಸಿಪ್‌ಗಳು ಹರಿದಾಡುವುದು ಸಹಜ. ಅಭಿನಯಾ ಕೂಡ ಇದಕ್ಕೆ ಹೊರತಾಗಿಲ್ಲ. ನನಗೆ ಲವರ್ ಇದ್ದಾರೆ, ಇನ್ಮೇಲೆ ನನ್ನ ಬಗ್ಗೆ ಯಾರು ಲವ್ ಗಾಸಿಪ್ ಹಬ್ಬಿಸಬೇಡಿ ಅಂತ ನಟಿ ಅಭಿನಯಾ ಕೇಳಿಕೊಂಡಿದ್ದಾರೆ.

2008 ರಲ್ಲಿ ತೆಲುಗಿನ 'ನೇನಿಂತೆ' ಚಿತ್ರದ ಮೂಲಕ ನಟಿಯಾಗಿ ಪಾದಾರ್ಪಣೆ ಮಾಡಿದವರು ಅಭಿನಯಾ. ತೆಲುಗು ಚಿತ್ರಗಳಲ್ಲಿ ನಟಿಸುತ್ತಿದ್ದ ಇವರು, 2009 ರಲ್ಲಿ ಸಮುದ್ರಖನಿ ನಿರ್ದೇಶನದ 'ನಾಡೋಡಿಗಳು' ಚಿತ್ರದ ಮೂಲಕ ತಮಿಳಿನಲ್ಲಿ ಪಾದಾರ್ಪಣೆ ಮಾಡಿದರು.
ಈ ಚಿತ್ರಕ್ಕಾಗಿ ಅತ್ಯುತ್ತಮ ಚೊಚ್ಚಲ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ, ಅತ್ಯುತ್ತಮ ಪೋಷಕ ನಟಿಗಾಗಿ ವಿಜಯ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗಳನ್ನು ಪಡೆದರು. ಈ ಚಿತ್ರದ ಯಶಸ್ಸಿನಿಂದಾಗಿ ಅಭಿನಯಾಗೆ ಸಾಲು ಸಾಲು ಚಿತ್ರಗಳಲ್ಲಿ ನಟಿಸುವ ಅವಕಾಶಗಳು ದೊರೆತವು. ಆಯಿರತ್ತಿಲ್ ಒರುವನ್, ಈಶನ್, ಜೀನಿಯಸ್, ವೀರಂ, ಪೂಜೈ, ಮಾರ್ಕ್ ಆಂಟನಿ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿದರು.
ಕಳೆದ ವರ್ಷ ಅಕ್ಟೋಬರ್ 24 ರಂದು ಬಿಡುಗಡೆಯಾದ ಅಭಿನಯಾ ಅಭಿನಯದ 'ಪಣಿ' ಚಿತ್ರಕ್ಕೆ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಚಿತ್ರದಲ್ಲಿ ಅವರ ಅಭಿನಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರಮಂದಿರಗಳಲ್ಲಿ ಬಿಡುಗಡೆಯಾದ ಈ ಚಿತ್ರ ಇತ್ತೀಚೆಗೆ ಸೋನಿ ಲಿವ್ ಓಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿದೆ.
ಈ ಚಿತ್ರದ ಯಶಸ್ಸಿನ ಸಮಾರಂಭದಲ್ಲಿ ಚಿತ್ರತಂಡದ ಹಲವರು ಭಾಗವಹಿಸಿ ಸಂಭ್ರಮಿಸಿದರು. ಚಿಕ್ಕಂದಿನಿಂದಲೂ ಕಿವುಡಿ ಮತ್ತು ಮೂಕಳಾಗಿದ್ದ ಅಭಿನಯಾ ತಮ್ಮ ಆತ್ಮವಿಶ್ವಾಸದಿಂದಲೇ ಇಂದು ನಟಿಯಾಗಿ ಮಿಂಚುತ್ತಿದ್ದಾರೆ. ಅವರ ಪೋಷಕರು ಅವರ ಆಸೆಗೆ ಬೆಂಬಲ ನೀಡಿದ್ದು ಅವರ ಯಶಸ್ಸಿಗೆ ಪ್ರಮುಖ ಕಾರಣ ಎನ್ನಬಹುದು.
ಸಾಮಾನ್ಯವಾಗಿ ಚಿತ್ರರಂಗದಲ್ಲಿ ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ಗಾಸಿಪ್‌ಗಳು ಹರಿದಾಡುವುದು ಸಹಜ. ಅಭಿನಯಾ ಕೂಡ ಇದಕ್ಕೆ ಹೊರತಾಗಿಲ್ಲ. ಕಳೆದ ವರ್ಷ ವಿಶಾಲ್ ಜೊತೆ ಅಭಿನಯಾ ಹೆಸರು ತಳುಕು ಹಾಕಿಕೊಂಡಿತ್ತು. ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬರೆದಿದ್ದರು.
ಇಂತಹ ಗಾಸಿಪ್‌ಗಳಿಗೆ ತೆರೆ ಎಳೆಯುವಂತೆ, ಅಭಿನಯಾ ಮೊದಲ ಬಾರಿಗೆ ತಮ್ಮ ಪ್ರೀತಿಯ ಬಗ್ಗೆ ಬಹಿರಂಗವಾಗಿ ಹೇಳಿಕೊಂಡಿದ್ದಾರೆ. "ಕಳೆದ 15 ವರ್ಷಗಳಿಂದ ನಾನು ಪ್ರೀತಿಯಲ್ಲಿದ್ದೇನೆ. ಅವರು ನನ್ನ ಬಾಲ್ಯದ ಗೆಳೆಯ. ನಮಗೇ ತಿಳಿಯದಂತೆ ನಾವಿಬ್ಬರೂ ಪ್ರೀತಿಸಲು ಶುರುಮಾಡಿದೆವು. ಇನ್ಮೇಲೆ ನನ್ನನ್ನು ಯಾವ ನಟರ ಜೊತೆಯೂ ಹೋಲಿಸಿ ಮಾತನಾಡಬೇಡಿ" ಎಂದಿದ್ದಾರೆ. ಶೀಘ್ರದಲ್ಲೇ ಅಭಿನಯಾ ಮದುವೆ ಸುದ್ದಿ ಹೊರಬೀಳಬಹುದು ಎಂದು ನಿರೀಕ್ಷಿಸಲಾಗಿದೆ.