ಬಿಗ್ ಬಾಸ್ ಸೀಸನ್ 11ರ ಫಿನಾಲೆ ಆರಂಭವಾಗಿದ್ದು, ಇದೀಗ ಇಡೀ ಸೀಸನ್‌ನಲ್ಲಿ ಅತಿಹೆಚ್ಚು ಮನರಂಜನೆ ನೀಡಿದ ಸ್ಪರ್ಧಿ ಎಂಬ ಪ್ರಶ್ನೆಗೆ ಅತಿಹೆಚ್ಚು ಮತಗಳನ್ನು ಪಡೆದವರು ಯಾರು ಎಂಬುದು ರಿವೀಲ್ ಆಗಿದೆ..

ಬೆಂಗಳೂರು (ಜ.26): ಬಿಗ್ ಬಾಸ್ ಸೀಸನ್ 11ರ ಫಿನಾಲೆ ಈಗಾಗಲೇ ಆರಂಭವಾಗಿದ್ದು, ಅಸಲಿಯಾಗಿ ಅವಾರ್ಡ್ ವಿನ್ನರ್ ಯಾರೆಂಬುದು ಘೋಷಣೆಗೆ ಕ್ಷಣಗಣನೆ ಶುರುವಾಗಿದೆ. ಆದರೆ, ಈಗ ಬಿಗ್ ಬಾಸ್ ಮನೆಯಲ್ಲಿ ಅತಿಹೆಚ್ಚು ಮನರಂಜನೆ ನೀಡಿದ ಆಟಗಾರ ಯಾರು ಎಂಬ ಪ್ರಶ್ನೆ ಶುರುವಾಗಿದೆ. ಅದಕ್ಕೆ ಜನರು ಕೂಡ ವೋಟ್ ಮಾಡಿದ್ದು, ಸಂಪೂರ್ಣ ವಿವರ ಇಲ್ಲಿದೆ ನೋಡಿ..

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಿಗ್ ಬಾಸ್ ಕನ್ನಡ ಸೀಸನ್ 11 ರಿಯಾಲಿಟಿ ಶೋ ಫಿನಾಲೆ ಆರಂಭವಾಗಿದ್ದು, ಯಾರು ಸೀಸನ್ ವಿಜೇತರು ಎಂಬುದನ್ನು ಘೋಷಣೆ ಮಾಡುವುದಕ್ಕೆ ಕ್ಷಣಗಣನೆ ಶುರುವಾಗಿದೆ. ಆದರೆ, ಇದೀಗ ಇಡೀ ಬಿಗ್ ಬಾಸ್ ಸೀಸನ್ 11ರಲ್ಲಿ ಫೈನಲಿಸ್ಟ್ ಆಗಿರುವವರ ಪೈಕಿ ಯಾರು ಅತಿಹೆಚ್ಚು ಮನರಂಜನೆ ನೀಡಿದ ಸ್ಪರ್ಧಿಗಳು ಎಂಬ ಪ್ರಶ್ನೆ ಬಂದಿದೆ. ಇದನ್ನು ಸ್ವತಃ ಕಲರ್ಸ್ ಕನ್ನಡ ವಾಹಿನಿಯಿಂದ ಬಿಗ್ ಬಾಸ್ ವೀಕ್ಷಕರ ಮುಂದಿಡಲಾಗಿತ್ತು. ಇದಕ್ಕೆ ವೋಟಿಂಗ್ ಮೂಲಕ ವೀಕ್ಷಕರು ಯಾರು ಮನರಂಜನೆ ನೀಡಿದ ಸ್ಪರ್ಧಿ ಎಂಬುದನ್ನು ತಿಳಿಸಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯ ಸಾಮಾಜಿಜ ಜಾಲತಾಣದಲ್ಲಿ ಕೇಳಲಾದ ಬಿಗ್ ಬಾಸ್ ಮನೇಲಿ ಯಾರು ಹೆಚ್ಚು ಮನರಂಜಿಸಿದ್ದು? ಎಂಬ ಪ್ರಶ್ನೆಗೆ ವೋಟಿಂಗ್ ಅವಕಾಶ ನೀಡಲಾಗಿತ್ತು. ಅದರಲ್ಲಿ, ಉಗ್ರಂ ಮಂಜು - 1800, ರಜತ್ ಕಿಶನ್ - 3000, ತ್ರಿವಿಕ್ರಮ್ - 1500, ಮೋಕ್ಷಿತಾ - 2800, ಭವ್ಯಾ - ಕೇವಲ 929 ಹಾಗೂ ಹನುಮಂತು ಅವರಿಗೆ - 11000 ಮತಗಳು ಬಿದ್ದಿವೆ. ಅಂದರೆ, ಹನುಮಂತು ಅವರು ಉಳಿದ ಎಲ್ಲ ಬಿಗ್ ಬಾಸ್ ಸ್ಪರ್ಧಿಗಳಿಗೆ ಬಿದ್ದ ವೋಟಿಗಿಂತ ಹೆಚ್ಚು ಮತಗಳನ್ನು ಗಳಿಸಿದ್ದಾರೆ. ಹೀಗಾಗಿ, ಗಾಯಕ ಹನುಮಂತು ಅವರೇ ಅತಿಹೆಚ್ಚು ಮನರಂಜನೆ ನೀಡಿದ ವ್ಯಕ್ತಿ ಎಂದು ಸಾಮಾಜಿಕ ಜಾಲತಾಣದ ವೋಟಿಂಗ್ ಆಧಾರದಲ್ಲಿ ನಿರ್ಧರಿಸಲಾಗಿದೆ.

ಇಬ್ಬರೂ ವೈಲ್ಡ್ ಕಾರ್ಡ್ ಕಂಟೆಸ್ಟೆಂಟ್: ಬಿಗ್ ಬಾಸ್ ಮನೆಗೆ ಬಂದ 20 ಜನ ಸ್ಪರ್ಧಿಗಳ ಪೈಕಿ ಅತಿಹೆಚ್ಚು ಮನರಂಜನೆ ನೀಡಿದ ವ್ಯಕ್ತಿಗಳ ಪೈಕಿ ಅತಿಹೆಚ್ಚು ಮತಗಳನ್ನು ಪಡೆದವರು ಗಾಯಕ ಹನುಮಂತು ಹಾಗೂ ನಟ ರಜತ್ ಕಿಶನ್ ಅವರಾಗಿದ್ದಾರೆ. ಅಂದರೆ, ಈ ಇಬ್ಬರೂ ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಆಗಮಿಸಿದವರಾಗಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲಿ ವೈಲ್ಡ್ ಕಾರ್ಡ್ ಮೂಲಕ ಪ್ರವೇಶ ಪಡೆದ ಸ್ಪರ್ಧಿಗಳು ಅತಿಹೆಚ್ಚಿನ ಪೈಪೋಟಿ ನೀಡಿದ ಸೀಸನ್ ಇದು ಎಂದು ಹೇಳಬಹುದು.

ಇದನ್ನೂ ಓದಿ: Bigg Boss Kannada 11 ವಿಜೇತರಿಗೆ ಸಿಕ್ಕ ಮತ ಎಷ್ಟು? ಸೃಷ್ಟಿಯಾಯ್ತು ಇತಿಹಾಸ!

ಬಿಗ್ ಬಾಸ್ ಸೀಸನ್ 11ರ ವಿಜೇತ ಯಾರು?
ಬಿಗ್ ಬಾಸ್ ಸೀಸನ್ 11ರ ಫೈನಲಿಸ್ಟ್ ಆಗಿ ಗಾಯಕ ಹನುಮಂತ, ನಟರಾದ ತ್ರಿವಿಕ್ರಮ್, ಉಗ್ರಂ ಮಂಜು, ರಜತ್ ಕಿಶನ್ ಹಾಗೂ ನಟಿಯರಾದ ಭವ್ಯಾ ಗೌಡ, ಮೋಕ್ಷಿತಾ ಪೈ ಆಗಮಿಸಿದ್ದಾರೆ. ಆದರೆ, ಈಗಾಗಲೇ ಅಗ್ರ 6 ಜನ ಫೈಲಿಸ್ಟ್ ಪೈಕಿ ಈಗಾಗಲೇ ಭವ್ಯಾ ಗೌಡ ಅವರನ್ನು 5ನೇ ರನ್ನರ್ ಅಪ್ ಆಗಿ ಬಿಗ್ ಬಾಸ್ ಮನೆಯಿಂದ ಹೊರಗೆ ಕಳುಹಿಸಲಾಗಿದೆ. ಇದೀಗ ಐವರು ಉಳಿದುಕೊಂಡಿದ್ದು, ಅದರಲ್ಲಿ ಮೂವರನ್ನು ಹಂತ ಹಂತವಾಗಿ ಮನೆಯಿಂದ ಹೊರಗೆ ಕರೆಸಿಕೊಳ್ಳಲಾಗುತ್ತದೆ. ಕೊನೆಗೆ ಇಬ್ಬರು ಫೈನಲಿಸ್ಟ್‌ಗಳನ್ನು ಉಳಿಸಿ ನಂತರ ಕಿಚ್ಚ ಸುದೀಪ್ ಅವರೇ ಮನೆಯೊಳಗೆ ಹೋಗಿ ಫೈನಲಿಸ್ಟ್ ಅವರನ್ನು ಕರೆದುಕೊಂಡು ಬಂದು ನಂತರ ಇಬ್ಬರ ಪೈಕಿ ಯಾರು ವಿನ್ನರ್ ಎಂಬುದನ್ನು ಕೈ ಎತ್ತುವ ಮೂಲಕ ಘೋಷಣೆ ಮಾಡಲಿದ್ದಾರೆ.