ಬಿಗ್ಬಾಸ್ 13ನೇ ಸೀಸನ್ನಿಂದ ಹೊರಬಂದಿರುವ ನಟಿ ಕಾವ್ಯಾ ಗೌಡ ಅವರ ಸಂಭಾವನೆಯ ಬಗ್ಗೆ ತೀವ್ರ ಕುತೂಹಲ ಮೂಡಿದೆ. ಆರು ವಾರಗಳ ಕಾಲ ಮನೆಯಲ್ಲಿದ್ದ ಅವರಿಗೆ ಅಂದಾಜು ಎಷ್ಟು ಸಂಭಾವನೆ ಸಿಕ್ಕಿದೆ? ಹೀಗಿದೆ ನೋಡಿ ಲೆಕ್ಕಾಚಾರ
ಭಾಗ್ಯಲಕ್ಷ್ಮಿ ಸೀರಿಯಲ್ ಶ್ರೇಷ್ಠಾ ಮೂಲಕ, ಎಲ್ಲರ ಮನಸ್ಸಿನಲ್ಲಿ ಅಚ್ಚಳಿಯದೇ ಇದ್ದವರು ನಟಿ ಕಾವ್ಯಾ ಗೌಡ (Bigg Boss 13 Kavya Gowda). ಬಿಗ್ಬಾಸ್ನಲ್ಲಿ ಅವರು ಫೈನಲಿಸ್ಟ್ ಆಗುತ್ತಾರೆ ಎಂದುಕೊಂಡವರೇ ಹೆಚ್ಚು. ಆದರೆ ಅವರು ಹೊರಕ್ಕೆ ಬಂದಿರುವುದು ಹಲವರಿಗೆ ತುಂಬಾ ನೋವಾಗಿದೆ. ಸಹಜವಾಗಿ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಒಂದಷ್ಟು ದಿನ ಅವರ ಕ್ರೇಜ್ ಎಲ್ಲೆಡೆ ಇರುತ್ತದೆ. ಅವರಿಗೆ ಸಿಕ್ಕಾಪಟ್ಟೆ ಡಿಮಾಂಡ್ ಕೂಡ ಇರುತ್ತದೆ. ಅವರ ಸಂದರ್ಶನ ಪಡೆಯಲು ಹಾಗೂ ಅವರ ಬಿಗ್ಬಾಸ್ ಪಯಣದ ಕುರಿತು ತಿಳಿದುಕೊಳ್ಳಲು ಹಲವರು ಕಾತರದಿಂದ ಕಾಯುತ್ತಿರುತ್ತಾರೆ. ಅದೇ ರೀತಿ ಸದ್ಯ ಕಾವ್ಯಾ ಗೌಡ ಅವರು ಕೂಡ ಸಂದರ್ಶನ ನೀಡುವಲ್ಲಿ ಬಿಜಿಯಾಗಿದ್ದಾರೆ.
ಸಾಮಾನ್ಯವಾಗಿ ಬಿಗ್ಬಾಸ್ ಮನೆಯಿಂದ ಬಂದ ತಕ್ಷಣ ಕೇಳಿಬರುವ ಪ್ರಶ್ನೆ ಎಷ್ಟು ಸಂಭಾವನೆ ಸಿಕ್ಕಿದೆ ಎನ್ನುವುದು. ಆದರೆ ಬಿಗ್ಬಾಸ್ ಮನೆಗೆ ಸೆಲೆಕ್ಟ್ ಆದ ತಕ್ಷಣವೇ ಸ್ಪರ್ಧಿಗಳಿಗೆ ಕೆಲವೊಂದು ಕಂಡೀಷನ್ ಹಾಕಿರಲಾಗುತ್ತದೆ. ಅವರು ಸೆಲೆಕ್ಟ್ ಆಗಿರುವ ವಿಷ್ಯ ಮೊದಲೇ ರಿವೀಲ್ ಮಾಡಬಾರದು ಎನ್ನುವುದರಿಂದ ಹಿಡಿದು ಹೊರಕ್ಕೆ ಬಂದ ಮೇಲೆ ಅವರಿಗೆ ಸಿಕ್ಕಿರುವ ಸಂಭಾವನೆ ಎಷ್ಟು ಎನ್ನುವ ಗುಟ್ಟು ಎಲ್ಲಿಯೂ ಬಾಯಿ ಬಿಡಬಾರದು ಎನ್ನುವವರಿಗೆ ಷರತ್ತುಗಳು ಇರುತ್ತವೆ. ಅದೇ ರೀತಿ ಕಾವ್ಯಾ ಗೌಡ ಕೂಡ ಅವರ ಸಂಭಾವನೆಯ ಗುಟ್ಟು ರಿವೀಲ್ ಮಾಡಲು ಸಾಧ್ಯವಿಲ್ಲ. ಹಾಗೆಂದು ಬಿಗ್ಬಾಸ್ ಪ್ರೇಮಿಗಳು ಸುಮ್ಮನೇ ಕುಳಿತುಕೊಳ್ಳುವುದಿಲ್ಲವಲ್ಲ. ಒಂದಿಷ್ಟು ಲೆಕ್ಕಾಚಾರವಂತೂ ಹಾಕಿಯೇ ಹಾಕುತ್ತಾರೆ.
ಸಂಭಾವನೆಯ ಲೆಕ್ಕಾಚಾರ ಹೀಗಿದೆ
ಅಷ್ಟಕ್ಕೂ ಬಿಗ್ಬಾಸ್ನ ಎಲ್ಲಾ ಸ್ಪರ್ಧಿಗಳಿಗೂ ಒಂದೇ ರೀತಿಯ ಸಂಭಾವನೆ ಇರುವುದಿಲ್ಲ. ಅವರ ಕೀರ್ತಿ, ಅವರ ದುಡಿಮೆ, ಬಿಗ್ಬಾಸ್ಗೆ ಬರದೇ ಹೋಗಿದ್ದರೆ, ಅವರು ಹೊರಗಡೆ ಎಷ್ಟು ಹಣ ಸಂಪಾದಿಸುತ್ತಿದ್ದರು, ಅವರಿಗೆ ಇರುವ ಇನ್ಕಮ್... ಇತ್ಯಾದಿ ಇತ್ಯಾದಿಗಳ ಮೇಲೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಸಂಭಾವನೆ ಫಿಕ್ಸ್ಮಾಡಲಾಗುತ್ತದೆ. ಕೆಲವರಿಗೆ ಅತ್ಯಂತ ಕಡಿಮೆ ಸಂಭಾವನೆ ಇದ್ದರೆ, ಮತ್ತೆ ಕೆಲವರಿಗೆ ಅತ್ಯಧಿಕ ಇರಬಹುದು. ಅಂದಾಜಿನ ಪ್ರಕಾರ, ಕಾವ್ಯಾ ಗೌಡ ವಾರಕ್ಕೆ ₹1 ಲಕ್ಷದವರೆಗೆ ಸಂಭಾವನೆ ಪಡೆದಿರಬಹುದಾಗಿದೆ. ಈ ಲೆಕ್ಕಾಚಾರದಂತೆ ಆರು ವಾರಗಳ ಕಾಲ ಮನೆಯಲ್ಲಿ ಉಳಿದರೆ ₹6 ಲಕ್ಷದವರೆಗೆ ಗಳಿಸುವ ಸಾಧ್ಯತೆಯಿದೆ. ಇದರ ಜೊತೆಗೆ ಪ್ರಾಯೋಜಕರಿಂದ ದೊರೆಯುವ 3 ಲಕ್ಷ ರೂಪಾಯಿ ನಗದು ಬಹುಮಾನವನ್ನು ಸೇರಿಸಿದರೆ, ಕಾವ್ಯಾ ಗೌಡ ಅವರಿಗೆ ಬಿಗ್ಬಾಸ್ ಮನೆಯಿಂದ ಒಟ್ಟು 9 ಲಕ್ಷ ರೂಪಾಯಿ ಹಣ ಸಿಗಬಹುದು ಎಂದು ಅಂದಾಜಿಸಲಾಗಿದೆ. ಆದರೆ ಇವೆಲ್ಲವೂ ಅಂದಾಜು ಮಾತ್ರವೇ ವಿನಾ, ಅಸಲಿ ಸಂಭಾವನೆ ರಿವೀಲ್ ಆಗುವುದಿಲ್ಲ.
ನಟಿಯ ಕುರಿತು
ಇನ್ನು ನಟಿ ಕಾವ್ಯಾ ಗೌಡ ಕುರಿತು ಹೇಳುವುದಾದರೆ, ಬೆಂಗಳೂರಿನವರೇ ಆದ ಕಾವ್ಯಾ, ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಇರುವಂತೆ ನಿಜ ಜೀವನದಲ್ಲೂ ಸಖತ್ ಸ್ಟೈಲಿಶ್ ಆಗಿದ್ದಾರೆ. ಅದನ್ನು ಅವರ ಸೋಷಿಯಲ್ ಮೀಡಿಯಾ ನೋಡಿದ್ರೇನೆ ತಿಳಿಯುತ್ತೆ. ಆದರೆ ಶ್ರೇಷ್ಠಾ ಅಂತ ವ್ಯಕ್ತಿತ್ವ ಮಾತ್ರ ನನ್ನದಲ್ಲ, ನಾನು ತುಂಬಾನೆ ಸಾಫ್ಟ್ ಹುಡುಗಿ ಎನ್ನುತ್ತಾರೆ ನಟಿ. ಕಾವ್ಯಾ ಗೌಡಾಗೆ ಇದು ಮೊದಲ ಸೀರಿಯಲ್ ಅಲ್ಲ, ಹಲವು ವರ್ಷಗಳ ಹಿಂದೆ ಮಿಸ್ಟರ್ ಆಂಡ್ ಮಿಸಸ್ ರಂಗೇಗೌಡ ಸೀರಿಯಲ್ ನಲ್ಲಿ ನಾಯಕಿ ಪಾತ್ರಕ್ಕೆ ಬಣ್ಣ ಹಚ್ಚಿದ್ದರು. ಆದರೆ ಕೆಲವೇ ದಿನಗಳಲ್ಲಿ ಸೀರಿಯಲ್ ಬಿಡಬೇಕಾಗಿ ಬಂತು. ಬಳಿಕ ಐದು ವರ್ಷಗಳ ಕಾಲ ತೆಲುಗು ಕಿರುತೆರೆಯಲ್ಲಿ ಮಿಂಚಿದ ನಟಿ ಇವರು. ಇನ್ನು ಕಾವ್ಯಾ ಗೌಡ ಸಿನಿಮಾದಲ್ಲೂ ನಟಿಸಿದ್ದಾರೆ. ವಿಜಯ್ ರಾಘವೇಂದ್ರ ಜೊತೆ ರಿಂಗ ರಿಂಗ ರೋಸಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಅಷ್ಟೇ ಅಲ್ಲ ಶೋಧ ಎನ್ನುವ ಚಿತ್ರದಲ್ಲೂ ನಟಿಸಿದ್ದಾರೆ. ಇದಾದ ಬಳಿಕ ಭಾಗ್ಯಲಕ್ಷ್ಮಿ ಸೀರಿಯಲ್ ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ.
ಭಾಗ್ಯಲಕ್ಷ್ಮಿ ಸೀರಿಯಲ್ನಲ್ಲಿ ಮೊದಲು ಗೌತಮಿ ಗೌಡ ಶ್ರೇಷ್ಠಾ ಪಾತ್ರ ನಿರ್ವಹಿಸುತ್ತಿದ್ದರು. ಆ ಪಾತ್ರಕ್ಕೆ ಕಾವ್ಯಾ ಬಂದಾಗ, ಮೊದಲಿಗೆ ಈ ಪಾತ್ರ ಮಾಡಲು ಸಾಧ್ಯವೇ ಎನ್ನುವ ಭಯ ಇತ್ತಂತೆ ಇವರಿಗೆ. ಅಳುಮುಂಜಿ ಪಾತ್ರಗಳನ್ನೆ ಮಾಡುತ್ತಾ ಬಂದಿದ್ದ ಕಾವ್ಯಾಗೆ ಈ ಪಾತ್ರ ಚಾಲೆಂಜಿಗ್ ಆಗಿತ್ತಂತೆ. ಸದ್ಯಕ್ಕಂತೂ ಶ್ರೇಷ್ಠಾ ಪಾತ್ರಕ್ಕೆ ಜೀವ ತುಂಬಿರೋ ನಟಿಯನ್ನು ಜನರು ಗುರುತು ಹಿಡಿಯುತ್ತಿರುವುದು ಸಂತೋಷ ತಂದಿದೆ ಅಂತೆ. ತುಂಬಾ ಜನ ಬೈದಿದ್ದು ಇದೆಯಂತೆ. ಒಬ್ಬರು ಬಂದು, ಬಿಟ್ಟು ಬಿಡಿ ತಾಂಡವನ್ನು ನಿಮಗೆ ಬೇರೊಬ್ಬ ಹುಡುಗ ಸಿಗ್ತಾನೆ ಅಂತಾನೂ ಹೇಳಿದ್ರಂತೆ.


