ಬಕೀಟ್ ಗಟ್ಲೆ ಅಳುವಿನ ಮೂಲಕವೇ ಮನೆ ಮಾತಾದ ನಟಿ ಅಮೃತವರ್ಷಿಣಿ ಸೀರಿಯಲ್ ನ ಅಮೃತಾ ಅಲಿಯಾಸ್ ರಜಿನಿ. ಮೂಗ್ ಆಪರೇಶನ್ ಮಾಡಿಸ್ಕೊಳ್ತೀನಿ ಅಂತ ಹೋದ ರಜಿನಿ ಮತ್ತೆ ಪತ್ತೆಯಾಗಿದ್ದಾರೆ. ಈಗ ಹೇಗಿದ್ದಾರೆ ಗೊತ್ತಾ?
'ಪ್ರತಿಯೊಂದರ ಬೆಲೆ ಗೊತ್ತಾಗೋದು ಎರಡು ಬಾರಿ ಮಾತ್ರ. ಒಮ್ಮೆ ಪಡೆಯುವ ಮೊದಲು, ಇನ್ನೊಮ್ಮೆ ಕಳೆದುಕೊಂಡಾಗ..' ಅಚ್ಚಗನ್ನಡದಲ್ಲಿ ಹೀಗೆ ಬರ್ಕೊಂಡಿದ್ದಾರೆ ರಜಿನಿ. ಅವರು ಹೀಗೆಲ್ಲ ಬರ್ದಿರೋದು ತಮ್ಮ ಮೂಗಿನ ಬಗ್ಗೆನಾ ಅಂತ ಹಲವರಿಗೆ ಡೌಟ್ ಇದೆ. ಯಾಕೆಂದರೆ ರಜಿನಿ ತಮ್ಮ ಮೂಗಿಗೆ ಸರ್ಜರಿ ಮಾಡಿಸಿಕೊಂಡಿದ್ದಾರೆ. 'ಅಷ್ಟು ಚೆನ್ನಾಗಿತ್ತಲ್ಲವ್ವಾ ನಿನ್ ಮೂಗು, ಯಾಕೆ ಮೂಗ್ ಕುಯಿಸ್ಕೊಳ್ಳೋ ಕೆಲಸ ಮಾಡ್ಕಂಡೆ ತಾಯಿ?' ಅಂತ ಆಕೆಯನ್ನು ಬಹಳ ಮಂದಿ ಕೇಳಿದ್ದಾರೆ. ಮತ್ತೊಂದು ವಿಚಾರ ಏನ್ ಗೊತ್ತಾ, ಹೀಗೆ ಮೂಗಿಗೆ ಸರ್ಜರಿ ಮಾಡಿಸ್ಕೊಂಡ ಮೇಲೆ ಪಬ್ಲಿಕ್‌ನಲ್ಲಿ ಬಿಂದಾಸ್ ಆಗಿ ಓಡಾಡಿಕೊಂಡಿದ್ರೂ ಯಾರಿಗೂ ಇವಳೇ ಅಮೃತ ವರ್ಷಿಣಿ ಸೀರಿಯಲ್ ನ ಅಮೃತಾ, ನಾವು ವರ್ಷಗಟ್ಲೆ ಈ ಯಮ್ಮನ ಕಣ್ಣೀರನ್ನೇ ಕಂಡು ಕಣ್ಣೊರೆಸಿಕೊಂಡಿದ್ದು ಅಂತ ಯಾರಿಗೂ ಗೊತ್ತಾಗ್ತಿಲ್ಲ. ಜನ ಸಾಮಾನ್ಯರಿಗೆ ಬಿಡಿ ಸಿನಿಮಾ ಸೀರಿಯಲ್ ಫೀಲ್ಡ್‌ನವರೂ ಈಕೆಯನ್ನು ಮರೆತು ಬಿಟ್ಟಂಗಿದೆ. ಇದಕ್ಕೆಲ್ಲ ಕಾರಣ ಮೂಗು!
'ಮೂಗ್ಯಾಕೆ ಕುಯ್ಯಿಸಿಕೊಂಡೆ ಅಮೃತಾ?' ಅಂದರೆ, 'ಎಲ್ರೂ ನಿನ್ನ ಮೂಗಿನ ಶೇಪೇ ಚೆನ್ನಾಗಿಲ್ಲ. ನಿನ್ನ ಮೂಗು ಉದ್ದ ಅಂತೆಲ್ಲ ಹೇಳ್ತಿದ್ರು. ಅದು ಮನಸ್ಸಿಗೆ ಕಸಿವಿಸಿ ಆಗ್ತಿತ್ತು. ಆ ಕಾರಣಕ್ಕೆ ಸೀರಿಯಲ್, ಪ್ರೋಗ್ರಾಂಗಳಿಂದ ಒಂದಿಷ್ಟು ದಿನಕ್ಕೆ ಅಂತ ಬ್ರೇಕ್ ತಗೊಂಡು ಮೂಗಿನ ಸರ್ಜರಿ ಮಾಡಿಸಿಕೊಂಡೆ' ಅಂತಾರೆ ಅಮೃತಾ ಅಲಿಯಾಸ್ ರಜಿನಿ.
ಜೊತೆ ಜೊತೆಯಲಿ ಆರ್ಯವರ್ಧನ್ ಪಾತ್ರ ಇನ್ನು ಇರೋಲ್ವಾ? ...
ಈಕೆ ಮೂಗಿನ ಸರ್ಜರಿಗೆ ಅಂತ ಗ್ಯಾಪ್ ತಗೊಳ್ಳೋ ಮುಂಚೆ ಈಕೆಗೆ ಸಾಕಷ್ಟು ಕಡೆ ಭರ್ಜರಿ ಆಫರ್ ಗಳಿದ್ದವು. ಆದರೆ ರಜಿನಿ ಇವಕ್ಕಿಂತ ಎಲ್ಲ ಮೂಗೇ ಇಂಪಾರ್ಟೆಂಟ್ ಆಗಿ ಕಾಣಿಸಿತೋ ಏನೋ.. ಫಸ್ಟ್ ಮೂಗಿನ ಸರ್ಜರಿ ಆಮೇಲೆ ಉಳಿದಿದ್ದೆಲ್ಲಾ ಅಂದುಕೊಂಡರು. ಅಲ್ಲೇ ಯಡವಟ್ಟಾಗಿದ್ದು ಶಿವಾ! ಮೂಗ್ ರೆಡಿ ಮಾಡಿಸ್ಕೊಂಡು, ನಾನೀಗ ರೆಡಿ ಅಂತ ಈಕೆ ರನ್ನಿಂಗ್ ರೇಸ್ ಗೆ ನಿಂತವರ ಪೋಸ್ ನೀಡಿದ್ರೂ, ಯಾರೂ ಈಕೆಯ ಕಡೆ ನೋಡ್ತಿಲ್ಲ. ಯಾಕೆಂದರೆ ಮೂಗಿನ ಚಿಕಿತ್ಸೆ ನಂತರ ರಜಿನಿ ಮೊದಲಿನ ರಜಿನಿ ಥರ ಕಾಣ್ತನೇ ಇಲ್ಲ. ಕಂಪ್ಲೀಟ್ ಲುಕ್ಕೇ ಚೇಂಜ್ ಆಗಿದೆ. ಕನ್ನಡಿ ಮುಂದೆ ನಿಂತರೆ ಈಕೆಗೇ ಶುರು ಶುರುವಲ್ಲಿ ತನ್ನ ಗುರುತು ಹತ್ತಿತ್ತೋ ಇಲ್ಲವೋ..
ಆದರೆ ರಜಿನಿ ನಿರೀಕ್ಷೆ ಕಳೆದುಕೊಂಡಿಲ್ಲ. ಹೊಸ ಅವಕಾಶಗಳ ಬೇಟೆಯಲ್ಲಿದ್ದಾರೆ. ಆದರೆ ಅಮೃತವರ್ಷಿಣಿಯ ಅಮೃತಾ ಪಾತ್ರದಂತೆ ಅಳುಮುಂಜಿ ಪಾತ್ರ ಬೇಡವೇ ಬೇಡ, ಸ್ವಲ್ಪ ಗ್ಲಾಮರ್ ಟಚ್ ಇರುವ ಮಾಡರ್ನ್ ಪಾತ್ರ ಬೇಕು. ನೆಗೆಟಿವ್ ಶೇಡ್ ಆದ್ರೂ ಓಕೆ, ಆದ್ರೆ ಅಭಿನಯಕ್ಕೆ ಅವಕಾಶ ಇರಬೇಕು ಅಂತಿದ್ದಾರೆ.
ಸಖತ್ ಗ್ಲಾಮರಸ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ರೀ ಇಂಟ್ರಿಗೂ ಸಜ್ಜಾಗ್ತಿದ್ದೀನಿ ಅನ್ನೋ ರಜಿನಿ ಸದ್ಯ ಫಿಟ್‌ನೆಸ್ ಕಡೆ ಗಮನ ಕೊಟ್ಟಿದ್ದಾರೆ. ಮನೆಯಲ್ಲಿ ಅಡುಗೆ, ಯೋಗ ಅಂತಲೂ ಬ್ಯುಸಿಯಾಗಿದ್ದಾರೆ.
ಬರ್ತಿದ್ದಾಳೆ ಬೇಸಾಯವೇ ಬದುಕೆನ್ನುವ ಮಣ್ಣಿನ ಮಗಳು 'ರುಕ್ಕು' ...
ಈಗಲೂ ಗರಿ ಗರಣಿ ಅವರ ನಿರ್ದೇಶನದ ತನಗೆ ಬ್ರೇಕ್ ಕೊಟ್ಟ 'ಅಮೃತ ವರ್ಷಿಣಿ' ಸೀರಿಯಲ್ ಬಗ್ಗೆ ಪ್ರೀತಿ ಇದೆ. ಈಗ ಈ ಸೀರಿಯಲ್ ಪ್ರಸಾರ ಇದ್ದಿದ್ರೆ ನಮ್ ಕತೆನೇ ಬೇರೆ ಇರ್ತಿತ್ತು ಅಂತಾರೆ. ಕಾರಣ ಅಮೃತ ವರ್ಷಿಣಿ ಜನಪ್ರಿಯ ಆಗಿದ್ದ ಕಾಲಕ್ಕೆ ಅಂದರೆ ಆರೇಳು ವರ್ಷಗಳ ಕೆಳಗೆ ಸೋಷಿಯಲ್ ಮೀಡಿಯಾ ಈ ಮಟ್ಟಿಗೆ ಜನಪ್ರಿಯ ಆಗಿರಲಿಲ್ಲ. ಹಾಗಾಗಿ ಸೀರಿಯಲ್ ಲಿಮಿಟೆಡ್ ಜನರನ್ನು ರೀಚ್ ಆಗೋದು ಸಾಧ್ಯವಾಯ್ತು. ಈಗಿನ ಸೋಷಿಯಲ್ ಮೀಡಿಯಾ ಭರಾಟೆಯಲ್ಲಿ ತಮ್ ಸೀರಿಯಲ್ ಬರ್ತಿದ್ದಿದ್ರೆ ಎಲ್ಲ ಕಡೆ ಪಾಪ್ಯುಲರ್ ಆಗ್ತಿತ್ತು, ಎಲ್ಲಾ ಕಡೆ ನಮ್ ಹವಾನೇ ಇರ್ತಿತ್ತು ಅನ್ನೋ ಮನಸ್ಥಿತಿಯಲ್ಲಿದ್ದಾರೆ ರಜಿನಿ.
ಸೋ, ಆಫ್ಟರ್ ಮೂಗಿನ್ ಸರ್ಜರಿ, ರಜಿನಿ ಹೊಸ ಅವಕಾಶಗಳು ಸಿಗುತ್ತಿರಲಿ. ಉದ್ದ ಮೂಗಿನ ಸುಂದರಿಯನ್ನು ಮೆಚ್ಚಿಕೊಂಡವರು, ಈಗ ಪುಟ್ಟ ಮೂಗಿನ ಚೆಲುವೆಯನ್ನೂ ಒಪ್ಪಿಕೊಳ್ಳಲಿ.
ಅಪ್ಪನ ಅಂತ್ಯ ಸಂಸ್ಕಾರ ಭುವಿಯ ಮನಸು ತಟ್ಟಿದ್ದೇಕೆ..? ರಂಜನಿ ಈ ಅನುಭವದ ಬಗ್ಗೆ ಏನಂತಾರೆ? ...
Read Exclusive COVID-19 Coronavirus News updates, from Karnataka, India and World at Asianet News Kannada.
ವರ್ಚುಯಲ್ ಬೋಟ್ ರೇಸಿಂಗ್ ಗೇಮ್ ಆಡಿ ಮತ್ತು ನಿಮಗೆ ನೀವೇ ಸವಾಲು ಹಾಕಿಕೊಳ್ಳಿ ಈಗಲೇ ಆಡಲು ಕ್ಲಿಕ್ಕಿಸಿ
Last Updated Jan 8, 2021, 4:41 PM IST