ಬಿಗ್ ಬಾಸ್ ಸೀಸನ್ 7 ಮುಗಿದು ಶೈನ್ ಶೆಟ್ಟಿ ಶೈನ್ ಆಗ್ತಿರೋದು ಈಗ ಹಳೇ ನ್ಯೂಸ್. ಆದರೆ ಹೊಸ ಸುದ್ದಿ ನ್ಯೂಸ್ ಬಿಗ್ ಬಾಸ್ 5 ನ ಕ್ಯೂಟ್ ಜೋಡಿ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಇದೇ ತಿಂಗಳ ಕೊನೆಯ ವಾರದಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಡುತ್ತಿರೋದು. ಹಾಗೆ ನೋಡಿದರೆ ನಿವೇದಿತಾ ಇನ್ನೂ ಚಿಕ್ಕ ಹುಡುಗಿ. ಈಕೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಹೊತ್ತಿಗೇ ಕಿಚ್ಚ ಸುದೀಪ್ ಸಣ್ಣ ಆತಂಕ ವ್ಯಕ್ತ ಪಡಿಸಿದ್ರು. ಅದು ಮತ್ತೇನೂ ಅಲ್ಲ, ಇಷ್ಟು ಚಿಕ್ಕ ಹುಡುಗಿ ಆ ದೊಡ್ಡ ಮನೆಯಲ್ಲಿ ಹೇಗೆ ಏಗ್ತಾಳೋ, ಈ ಮುಗ್ದ ಹುಡುಗಿಗೆ ಅವಳ ಒಳ್ಳೆಯತನವೇ ಎಲ್ಲಿ ಎರವಾಗುತ್ತೋ ಅನ್ನೋ ಭಯ ಕಿಚ್ಚಂಗೆ ಇದ್ದ ಹಾಗಿತ್ತು. ಆದರೆ ಈ ಬಾರ್ಬಿ ಗರ್ಲ್ ಈ ಕಾಲದವಳು. ಬಹಳ ಬೇಗ ದೊಡ್ಡ ಮನೆಗೆ ಹೊಂದಿಕೊಂಡಳು. ಅಷ್ಟೇ ಅಲ್ಲ, ಒಬ್ಬ ಸಾಮಾನ್ಯ ಹುಡುಗಿಯಾಗಿದ್ದವಳು ತನ್ನ ಪರ್ಫಾಮೆನ್ಸ್, ಚೂಟಿತನದಿಂದ ಇಡೀ ಕರ್ನಾಟಕದಲ್ಲಿ ಮನೆ ಮಾತಾದಳು. ಈಕೆಯ ಫಾರಿನ್ ಆಕ್ಸೆಂಟ್ ಕನ್ನಡವೂ ಇವಳಿಗೊಂದು ಪ್ಲಸ್ ಪಾಯಿಂಟ್ ಆಯ್ತು. ಆರಂಭದಲ್ಲಿ ಇವಳ ಆಕ್ಸೆಂಟ್ ಕೇಳಿದ ಕನ್ನಡಿಗರೆಲ್ಲ ಬೈಕೊಂಡು ಬೈಕೊಂಡು ಶೋ ನೋಡುತ್ತಿದ್ದರು. ಆದರೆ ಆಮೇಲೆ ಇವಳ ಒಳ್ಳೆತನ, ಇನ್ನೊಬ್ಬರಿಗೆ ಒಳ್ಳೆಯದಾಗುತ್ತೆ ಅಂದರೆ ತಾನು ಎಷ್ಟು ಕಷ್ಟಪಡಲೂ ರೆಡಿಯಾಗುವ ರೀತಿ ಕಂಡು ಜನ ಕರಗಿ ನೀರಾದ್ರು. ಇವಳ ಕಂಗ್ಲೀಷನ್ನೂ ಎನ್ ಜಾಯ್ ಮಾಡಲಾರಂಭಿಸಿದರು.

ಚಂದನ್​ ಶೆಟ್ಟಿ ಜತೆ ನಿವೇದಿತಾ ಗೌಡ ಎಂಗೇಜ್​ಮೆಂಟ್

ಬಿಗ್ ಬಾಸ್ ಮನೆಯ ಹಾಡೋ ಹುಡುಗ ಚಂದನ್, ಒಳ್ಳೆ ಹುಡುಗಿ ನಿವೇದಿತಾ ಅದ್ಯಾವಾಗ ಪ್ರೇಮದ ಸುಳಿಯಲ್ಲಿ ಸಿಕ್ಕಿದರೋ ದೇವನೇ ಬಲ್ಲ. ಆದರೆ ಈ ಮನೆಯೊಳಗಿನ ಕ್ರಶ್ಶು, ಪ್ರೇಮ ಪುರಾಣಗಳಿಗೆಲ್ಲ ಅಲ್ಲಿಂದ ಹೊರಬಂದ ಮೇಲೆ ಏಕ್ ದಂ ಬ್ರೇಕ್ ಬೀಳುತ್ತೆ. ಅಲ್ಲಿ ಪ್ರೇಮಿಗಳ ಫೋಸ್ ಕೊಡುತ್ತಿದ್ದವರು ಈಚೆ ಬಂದ್ಮೇಲೆ ತಮ್ಮ ಪಾಡಿಗೆ ತಾವಿರ್ತಾರೆ. ಆದರೆ ಚಂದನ್ ನಿವೇದಿತಾ ವಿಷ್ಯದಲ್ಲಿ ಹೀಗಾಗಲಿಲ್ಲ. ಅವರ ಪ್ರೀತಿ ಹೊರಗೆ ಬಂದ ಮೇಲೂ ಮುಂದುವರಿಯುತ್ತಲೇ ಹೋಯ್ತು. ಆದರೆ ಚಂದನ್ ಮೈಸೂರ ದಸರಾದಲ್ಲಿ ತನ್ನ ಹುಡುಗಿಗೆ ಡಿಫರೆಂಟಾಗಿ ಪ್ರೊಪೋಸ್ ಮಾಡಲಿಕ್ಕೆ ಹೋಗಿ ಹಿಗ್ಗಾಮುಗ್ಗಾ ಉಗಿಸಿಕೊಂಡದ್ದೂ ಆಯ್ತು. ಇದಾದ ಕೆಲವೇ ದಿನಗಳಲ್ಲಿ ಇವರಿಬ್ಬರು ಎಂಗೇಜ್ ಮೆಂಟ್ ಮಾಡಿಕೊಂಡಳು. ಇದೇ ಟೈಮ್ ಗೆ ಕಾಲೇಜಿಗೆ ಹೋಗ್ತಿದ್ದ ಹುಡುಗಿ ತನಗೋಸ್ಕರ ಒಂದು ಕೆಲಸನೂ ಹುಡುಕ್ಕೊಂಡ್ಲು. ತಾನು ಏರ್ ಫೋರ್ಟ್ ನಲ್ಲಿ ಕೆಲಸ ಮಾಡಬೇಕು ಅನ್ನೋದು ಈ ಹುಡುಗಿಯ ಬಹುದಿನಗಳ ಆಸೆ. ಆಪರೇಟರ್ ಕೆಲಸವೂ ಸಿಕ್ತು ನಿವೇದಿತಾಗೆ. ಇನ್ನೇನು ಕೆಲವೇ ದಿನಗಳಲ್ಲಿ ಈ ಜೋಡಿ ಮೈಸೂರಿನಲ್ಲಿ ಸಪ್ತಪದಿ ತುಳಿದು ದಾಂಪತ್ಯಗೀತೆಗೆ ಹೆಜ್ಜೆ ಹಾಕಲಿದ್ದಾರೆ.

ಇಷ್ಟೆಲ್ಲ ರೊಮ್ಯಾಂಟಿಕ್ ಆಗಿರುವ ಜೋಡಿ ತಮ್ಮ ಹನಿಮೂನ್ ಗೆ ಎಲ್ಲಿಗೆ ಹೋಗಬಹುದು ಅನ್ನೋದು ಬಹು ಜನರ ಕುತೂಹಲ.

ವೀಕೆಂಡ್‌ನಲ್ಲಿ ಮಾತ್ರ ಜೊತೆಯಾಗ್ತಾರೆ ಗಂಡ ಹೆಂಡತಿ!

ಹಾಗೆ ನೋಡಿದರೆ ಮದುವೆ ಮುಗಿಯೋದೇ ಫೆಬ್ರವರಿ ಕೊನೆಗೆ. ಇನ್ನೇನು ಬೇಸಿಗೆ ಶುರುವಾಗುವ ಟೈಮು. ನಮ್ಮ ದೇಶದಲ್ಲೇ ಈ ಟೈಮ್ ನಲ್ಲಿ ಎನ್ ಜಾಯ್ ಮಾಡುವ ಬಹಳಷ್ಟು ಜಾಗಗಳಿವೆ. ಆದರೆ ಸ್ವಿಜರ್ ಲ್ಯಾಂಡ್ ನಲ್ಲಿ ಮಾರ್ಚ್ ಹನಿಮೂನ್ ಮಾಸ ಅಂತಲೇ ಫೇಮಸ್ಸು. ಆ ಹೊತ್ತಿಗೆ ಹೋದರೆ ಚಳಿಯ ತೀವ್ರತೆ ತಗ್ಗಿರುತ್ತೆ. ಹಿಮ ಮುಚ್ಚಿದ ಬೆಟ್ಟದ ತುದಿ ನೋಡುತ್ತಾ ಇಬ್ಬರೂ ರೊಮ್ಯಾಂಟಿಕ್ ಕ್ಷಣಗಳನ್ನು ಕಳೆಯಬಹುದು. ಸೆಂಟ್ರಲ್ ಯುರೋಪ್ ನಲ್ಲಿರುವ ಈ ದೇಶ ವಿಶ್ವದಲ್ಲೇ ಅತೀ ಸುಂದರವಾದದ್ದು. ಅನೇಕ ಸುಂದರವಾದ ಸರೋವರಗಳು, ಚೆಂದದ ಹಳ್ಳಿಗಳು, ಎರಡು ಪರ್ವತಗಳನ್ನು ಜೋಡಿಸುವ ರಮ್ಯ ಸೇತುವೆಗಳು.. ಹೀಗೆ ಅನೇಕ ಜಾಗಗಳಿವೆ. ಆರು ಡಿಗ್ರಿಗಳಷ್ಟು ಟೆಂಪರೇಚರ್ ಇರುತ್ತದೆ. ಇದಿಲ್ಲ ಅಂದರೆ ಪ್ಯಾರಿಸ್ ನಲ್ಲಿ ಪ್ರಣಯವಾಡಬಹುದು. ಥೈಲ್ಯಾಂಡ್ ನ ಸುಂದರ ಬೀಚ್ ಗಳಲ್ಲಿ ವಿಹರಿಸಬಹುದು.

ಯಾವ ಜಾಗ ಆರಿಸಿಕೊಂಡದರೂ ಈ ಜೋಡಿ ಸಖತ್ತಾಗಿ ಎನ್ ಜಾಯ್ ಮಾಡೋದ್ರಲ್ಲಿ ಡೌಟಿಲ್ಲ. ಏಕೆಂದರೆ ಬಿಗ್ ಬಾಸ್ ಮನೆಯ ವಾತಾವರಣದಲ್ಲೇ ಹಾಯಾಗಿದ್ದವರು, ಇನ್ನು ಜಗತ್ತಿನ ಸುಂದರ ಜಾಗಗಳಲ್ಲಿ ಖಂಡಿತಾ ಖುಷಿಯಾಗಿಯೇ ಇರುತ್ತಾರೆ. ಈ ಜೋಡಿಗೆ ಅಡ್ವಾನ್ಸ್ ಆಗಿ ವಿಶ್ ಮಾಡೋಣ..