ಶ್ವೇತಾ- ನರಹರಿ ಮದುವೆ ಆಗಿ ಎರಡು ವರ್ಷ ಆಯ್ತು. ಇಬ್ಬರೂ ಬೇರೆ ಬೇರೆ ಕಂಪೆನಿಯಲ್ಲಿ ಕೆಲಸ ಮಾಡ್ತಾರೆ. ಇವರದ್ದು ಲವ್ ಮ್ಯಾರೇಜ್. ಆದರೆ ಈ ವೀಕ್‌ನಲ್ಲಿ ಅವರೊಂದು ಮಹತ್ವದ ನಿರ್ಧಾರಕ್ಕೆ ಬಂದಿದ್ದಾರೆ. ಇಬ್ಬರೂ ಸಪರೇಟ್‌ ಆಗಿರೋದು, ವೀಕೆಂಡ್ ನಲ್ಲಿ ಮಾತ್ರ ಜೊತೆಯಾಗಿರೋದು ಅಂತ. ಇದು ಸದ್ಯಕ್ಕೆ ಚಾಲ್ತಿಯಲ್ಲಿರುವ ಟ್ರೆಂಡ್ ಕೂಡ. ಫಾರಿನ್ ನಲ್ಲಿ ಎಷ್ಟೋ ದಂಪತಿಗಳು ಈ ರೂಲ್ಸ್ ಫಾಲೋ ಮಾಡಿ ಖುಷಿ ಖುಷಿಯಾಗಿ ಲೈಫ್‌ ಲೀಡ್‌ ಮಾಡ್ತಾ ಇದ್ದಾರೆ. ಅಲ್ಲಿ ಸಾಧ್ಯ ಆಗೋದಾದ್ರೆ ನಮ್ಮಲ್ಲೂ ಯಾಕೆ ಹಾಗೆ ಮಾಡಬಾರದು ಅನ್ನೋದು ಇವರ ವಾದ. ಹಾಗೆ ನೋಡಿದರೆ ಇದನ್ನು ಮೊದಲು ಪ್ರಸ್ತಾಪ ಮಾಡಿದ್ದು ಶ್ವೇತಾನೇ. ಅವಳಿಗೆ ದಾಂಪತ್ಯ ಅನ್ನೋದು ನರಕ, ಚಿತ್ರಹಿಂಸೆ ಅನಿಸಲು ಶುರುವಾಯ್ತು. ಅವಳ ಕೆಲಸದ ತಲೆಬಿಸಿ ನಡುವೆ ಮನೆ ಜವಾಬ್ದಾರಿ ತಗೊಳ್ಳೋಕೆ ಆಗುತ್ತಾ ಇರಲಿಲ್ಲ. ರಾತ್ರಿ ಕೆಲಸ ಮುಗಿಸಿ ಟ್ರಾಫಿಕ್ ನಲ್ಲಿ ಏಗುತ್ತಾ ಮನೆಗೆ ಬಂದಾಗ ರಾತ್ರಿಯಾಗಿರುತ್ತೆ. ಯಾವ ಪರಿ ಸುಸ್ತು ಅಂದರೆ ಒಂದು ವಸ್ತುವನ್ನೂ ಎತ್ತಿಡಲಾರದಷ್ಟು. ಆದರೆ ಇವಳ ನಂತರ ಬರುವ ನರಹರಿಗೂ ಇವಳಿಗೂ ಅಡುಗೆ ಮಾಡಲೇಬೇಕು. ದಿನವಿಡೀ ಕಂಪ್ಯೂಟರ್ ಮುಂದೆ ಕೂರುವ ಕಾರಣ ಬೆಳಗ್ಗೆ ಏಳುವಾಗ ಕಣ್ಣುಗಳು ಊದಿಕೊಂಡ ಹಾಗಿರುತ್ತೆ. ಒಂದು ಹತಾಶೆಯಲ್ಲೇ ದಿನದ ಆರಂಭ, ಆಮೇಲೆ ಕೆಲಸ, ಮನೆಗೆ ಬಂದು ವಾಪಾಸ್ ಕೆಲಸ. ಲೈಫ್ ಅಂದರೆ ಅದು ಎನ್‌ಜಾಯ್ ಮೆಂಟ್ ಅಂತ ತಿಳ್ಕೊಂಡಿದ್ದ ಶ್ವೇತಾಗೆ ಲೈಫ್ ಅಂದರೆ ನರಕ ಅನಿಸಲಾರಂಭಿಸಿತು. ಹಾಗಾಗಿ ನರಹರಿ ಮುಂದೆ ಈ ಪ್ರಸ್ತಾಪ ಇಟ್ಟರು. ನರಹರಿಗೂ ಇಷ್ಟ ಆಯ್ತು.

ಮದುವೆನಾ? ಲೀವಿಂಗ್ ರಿಲೇಶನ್‌ಷಿಪ್ಪಾ? ಗೊಂದಲಕ್ಕೆ ಉತ್ತರ ಇಲ್ಲಿದೆಯಪ್ಪಾ!.

ಇಬ್ಬರೂ ಮನೆಬಿಟ್ಟು ರೂಮ್‌ಗೆ ಶಿಫ್ಟ್ ಆದರು. ವೀಕೆಂಡ್ ಮಸ್ತ್ ಆಗಿ ಕಳೆಯುತ್ತಿತ್ತು. ಲಾಂಗ್ ಡ್ರೈವ್ ಅಥವಾ ಎಲ್ಲೋ ಒಂದು ಜಾಗದಲ್ಲಿ ಜೊತೆಯಾಗಿರೋದು, ಇದೆಲ್ಲ ಬೇಡ, ಮನೇಲೇ ಇರಬೇಕು ಅಂದರೆ ಯಾರದ್ದಾದ್ರೂ ಒಬ್ಬರ ರೂಮ್ ಗೆ ಶಿಫ್ಟ್ ಆಗೋದು. ಮಾತುಕತೆ, ಹರಟೆ, ಅಡುಗೆ, ಮನೆ ಊಟ ಹೀಗೆ. ಎರಡು ದಿನ ಕಳೆದದ್ದೇ ತಿಳಿಯೋದಿಲ್ಲ. ಇಬ್ಬರ ನಡುವೆ ಪ್ರೀತಿ ಹೆಚ್ಚಾಗ್ತಿದೆ. ಲೈಫ್ ಖುಷಿಯಾಗ್ತಿದೆ.

ಹಾಗಿದ್ದರೆ ಪ್ರತಿಯೊಬ್ಬ ದಂಪತಿಯೂ ಹೀಗೇ ಇರಬೇಕಾ ಅನ್ನೋ ಪ್ರಶ್ನೆ ಬರಬಹುದು. ಭಾರತೀಯ ಸಮಾಜದಲ್ಲಿ ಬೆರಳೆಣಿಕೆಯ ಮಂದಿಗಷ್ಟೇ ಇಂಥದ್ದೊಂದು ಟ್ರೆಂಡ್ ಫಾಲೋ ಮಾಡೋದು ಸಾಧ್ಯ. ಆದರೆ ಉಳಿದವರು ಮನೆಯಲ್ಲಿ ಸೀಮಿತ ಅವಧಿಯಲ್ಲೇ ಬದುಕನ್ನು ಎನ್ ಜಾಯ್ ಮಾಡಲು ಪ್ರಯತ್ನಿಸಬಹುದು.

 

ಮಕ್ಕಳು ಅಂದರೆ ಇಷ್ಟಾನೇ ಆಗಲ್ಲ! ಇದೊಂಥರಾ ಹೊಸ ಟ್ರೆಂಡಾ?..

 

- ಇಬ್ಬರ ನಡುವೆ ಒಂದು ಹ್ಯಾಪಿ ಗ್ಯಾಪ್ ಇರಲಿ. ಇಬ್ಬರ ಸ್ವಾತಂತ್ರ್ಯಕ್ಕೂ ಅವಕಾಶ ಇರಲಿ. ಇನ್ನೊಬ್ಬರ ಮೇಲೆ ಒಬ್ಬರು ಅಧಿಕಾರ ಚಲಾಯಿಸದ ಹಾಗೆ ನೋಡಿಕೊಳ್ಳಿ.

- ಕೆಲಸ ಹಂಚಿಕೊಂಡು ಮಾಡಿದರೆ ಚೆಂದ. ಆಗ ಕೆಲಸದ ಹೊರೆ ಕಡಿಮೆಯಾಗುತ್ತೆ.

- ಇಬ್ಬರೂ ಜೊತೆಯಾಗಿ ವೀಕೆಂಡ್ ನಲ್ಲಿ ಲಾಂಗ್ ಡ್ರೈವ್ ಹೋದರೆ ಆ ಮಜಾನೇ ಬೇರೆ. ಇದು ಅವಿವಾಹಿತರಿಗೆ ಮಾತ್ರ ಸಿಕ್ಕೋ ಚಾನ್ಸ್ ಅನ್ನೋದನ್ನು ತಲೆಯಿಂದ ಕಿತ್ತುಹಾಕಿ.

- ದಿನಾ ಮನೇಲಿ ಒಟ್ಟಿಗೇ ಇರ್ತೀವಲ್ಲಾ ಅನ್ನೋ ಉಡಾಫೆ ಬೇಡ. ಇಬ್ಬರೂ ಫ್ರೆಂಡ್ಸ್ ಅಂತ ತಿಳ್ಕೊಳ್ಳಿ. ಕಿತ್ತಾಡೋ ಟೈಮ್ ನಲ್ಲಿ ಕಿತ್ತಾಡಿ. ಅಳೋ ಟೈಮ್ ನಲ್ಲಿ ಅತ್ತು ಬಿಡಿ. ಮನಸ್ಸಲ್ಲಿ ಏನನ್ನೂ ಇಟ್ಟುಕೊಳ್ಳಬೇಡಿ.

- ದಿನದಲ್ಲಿ ಅರ್ಧ ಗಂಟೆಯಾದರೂ ಜೊತೆಗೇ ವಾಕಿಂಗ್ ಮಾಡೋದು ಬಹಳ ಒಳ್ಳೆಯ ಅಭ್ಯಾಸ. ಸಣ್ಣಪುಟ್ಟ ಅಸಮಾಧಾನಗಳು, ಒಬ್ಬರ ಬಗ್ಗೆ ಇನ್ನೊಬ್ಬರಿಗಿರುವ ಪೂರ್ವಾಗ್ರಹವನ್ನು ಇದು ಕಡಿಮೆ ಮಾಡುತ್ತೆ.

- ಮಕ್ಕಳಿದ್ದರೂ ಗಂಡ ಹೆಂಡತಿ ನಡುವೆ ಆಪ್ತತೆ ಕಡಿಮೆ ಆಗದ ಹಾಗೆ ನೋಡಿಕೊಳ್ಳಿ.

- ಎಷ್ಟೋ ಮನೆಗಳನ್ನು ಮಗುವನ್ನು ಜೊತೆಗೆ ಮಲಗಿಸಿ ಗಂಡ ಹೆಂಡತಿ ದೂರ ಮಲಗುತ್ತಾರೆ. ಇದು ಒಳ್ಳೆಯದಲ್ಲ. ಮಗುವಿಗೆ ನಿದ್ದೆ ಬಂದ ಬಳಿ ಗಂಡ ಹೆಂಡತಿ ಒಟ್ಟಿಗೆ ಮಲಗೋದು ಇಬ್ಬರಲ್ಲೂ ಕಂಫರ್ಟ್ ಫೀಲ್ ತರುತ್ತದೆ.