ಹಿಂದಿ ಬಿಗ್ ಬಾಸ್‌ ಸೀಸನ್‌ 14ರ ಸೀನಿಯರ್ ಸ್ಪರ್ಧಿಯಾಗಿರುವ ಹೀನಾ ಖಾನ್‌ ಕಿರುತೆರೆ ಜರ್ನಿ ನೆನೆದು ಕಣ್ಣೀರಿಟ್ಟಿದ್ದಾರೆ. 8 ವರ್ಷಗಳಿಂದ ಅಭಿನಯಿಸಿದ ಧಾರಾವಾಹಿ ತಮ್ಮ ಸಿನಿಮಾ ಜರ್ನಿಗೆ ಮುಳುವಾಗಿದ್ದನ್ನು ಈಗಲೂ ನಂಬಲಾಗುತ್ತಿಲ್ಲ ಎಂದಿದ್ದಾರೆ.

ಕಳ್ಳತನದ ಆರೋಪ ಎದುರಿಸಿದ ಕಿರುತೆರೆ ನಟಿ ಇಂದು ಬಾಲಿವುಡ್ ಸ್ಟಾರ್‌! 

ಖಾಸಗಿ ಸಂದರ್ಶನದಲ್ಲಿ ಮಾತನಾಡಿದ ನಟಿ ಹೀನಾ ಖಾನ್‌, ತಮ್ಮ ಕಿರುತೆರೆ ಜರ್ನಿ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. 'ನನ್ನ ಮೊದಲ ಸೀರಿಯಲ್ ಮೊದಲ ಆಡಿಶನ್‌ನಲ್ಲೇ ನನಗೆ ಒಳ್ಳೆಯ ಅವಕಾಶ ಸಿಕ್ಕಿತ್ತು. ಪ್ರಾರಂಭದಲ್ಲಿ ಎಲ್ಲವೂ ಸುಲಭವಾಗಿತ್ತು. ಆದರೆ ನಿಜವಾದ ಕಷ್ಟ ಶುರುವಾಗಿದ್ದು ನನ್ನ ಧಾರಾವಾಹಿ ತಿರುವು ಪಡೆದುಕೊಂಡ ನಂತರ. ನಾನು 8 ವರ್ಷಗಳ ಕಾಲ ಒಂದು ಧಾರಾವಾಹಿಯಲ್ಲಿ ಕಾಣಿಸಿಕೊಂಡೆ (ಯೇ ರಿಶ್ತಾ ಕೆಹಲಾತಾ ಹೇ). ಧಾರಾವಾಹಿ ಮಾಡುವಾಗ ನನಗೆ ಸಾಕಷ್ಟು ದೊಡ್ಡ ದೊಡ್ಡ ಆಫರ್‌ಗಳು ಬರುತ್ತಿದ್ದವು. ಆದರೆ ಶೆಡ್ಯೂಲ್ ಇಲ್ಲದ ಕಾರಣ ಕೈ ಬಿಡಬೇಕಾಯ್ತು. ಇಷ್ಟೊಂದು ಅವಕಾಶ ಮಿಸ್ ಆಗುತ್ತಿದೆ ಎಂದು ಧಾರಾವಾಹಿಯಿಂದ ಹೊರ ಬಂದೆ,' ಎಂದು ಹೇಳಿದ್ದಾರೆ.

ಕಷ್ಟದ ನಿರ್ಧಾರ:
ಕಿರುತೆರೆಯಿಂದ ಬೆಳ್ಳೆತೆರೆ ನಟಿಯಾಗಬೇಕೆಂದು ಕನಸು ಕಂಡಿದ್ದ ಹೀನಾ ಖಾನ್‌ ವೃತ್ತಿ ಜೀವನ ಬದಲಾಗಿದ್ದೇ ಧಾರಾವಾಹಿಯಿಂದ ಹೊರ ಬಂದ ನಂತರವಂತೆ. '2 ವರ್ಷ ಒಂದು ಶೋನಲ್ಲಿ ಕಾಣಿಸಿಕೊಂಡರೆ ಜನರು ನಿಮ್ಮನ್ನು ಗುರುತು ಹಿಡಿಯದೇ ಇರಬಹುದು. ಆದರೆ ನಾನು 8 ವರ್ಷ ಅದರಲ್ಲಿದ್ದೆ. ಈ ಸಮಯದಲ್ಲಿ ಓರ್ವ ನಿರ್ಮಾಪಕರು ನನಗೆ ಕರೆ ಮಾಡಿ ಹೇಳಿದರು, ನಿಮ್ಮ ಜೊತೆ ಒಂದು ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಈ ಕಾರಣಕ್ಕೆ ನಿಮ್ಮ ಬಗ್ಗೆ ನಾನು ಇಂಟರ್ನೆಟ್‌ನಲ್ಲಿ ಹುಡುಕಿದೆ. ನನಗೆ ಕಾಣಿಸಿದ್ದು ಯೇ ರಿಶ್ತಾ ವಿಡಿಯೋಗಳು ಮಾತ್ರ. ಈ ಕಾರಣಕ್ಕೆ ನನ್ನ ನಿರ್ಧಾರ ಬದಲಾಯಿಸಿ ಬೇರೆ ನಟಿಯನ್ನು ಆಯ್ಕೆ ಮಾಡಿಕೊಂಡೆ ಎಂದರು. ಇದು ನನಗೆ ತುಂಬಾ ಬೇಸರವಾಯ್ತು. ಇನ್ನು ಮುಂದೆಯಾದರೂ ಆ ದೊಡ್ಡ ನಿರ್ಮಾಪಕರು ನನಗೆ ಕರೆ ಮಾಡಿ ಇಲ್ಲ, ತಪ್ಪು ಮಾಡಿದೆ ಬನ್ನಿ, ಕೆಲಸ ಕೊಡುತ್ತೇನೆ ಎಂದು ಮತ್ತೆ ಕರೆಯುವಂತೆ  ಬೆಳೆಯಬೇಕು ಎಂದು ನಿರ್ಧರಿಸಿದೆ' ಎಂದು ಮಾತನಾಡಿದ್ದಾರೆ.

ಆರ್ಯವರ್ಧನ್ ಭೇಟಿ ಮಾಡಲು ಅವಕಾಶ;' ವಿಶ್ವಾಸವೇ ನನಗೆ ಅತಿ ದೊಡ್ಡ ಗಿಫ್ಟ್'! 

ಹ್ಯಾಕರ್ ಚಿತ್ರದ ಮೂಲಕ ಬೆಳ್ಳೆತೆರೆಗೆ ಎಂಟ್ರಿ ಕೊಟ್ಟ ಹೀನಾ ಮೊದಲ ಚಿತ್ರದಲ್ಲಿ ಹೀನಾಯವಾದ ಸೋಲು ಕಂಡರು. ಆದರೂ ಆನ್‌ಲೈನ್‌ನಲ್ಲಿ ಪಡೆದುಕೊಂಡ ಮೆಚ್ಚುಗೆಯನ್ನು ನೋಡಿ ಸಮಾಧಾನವಾಗಿದ್ದಾರಂತೆ.