Asianet Suvarna News Asianet Suvarna News

ಬಿಗ್ ಬಾಸ್‌ 14 ಟ್ರೋಫಿ ಹಿಡಿದ ರುಬೀನಾ ದಿಲೈಕ್; ಸಲ್ಮಾನ್‌ನ ಎದುರಾಕಿ ಕೊಂಡಿದ್ದಕ್ಕೆ ಸಿಕ್ಕ ಜಯ!

ಬಿಗ್ ಬಾಸ್‌ ಹಿಂದಿ ಸೀಸನ್‌ 14 ಟ್ರೋಫಿ ಎತ್ತಿ ಹಿಡಿದ ರುಬೀನಾ ದಿಲೈಕ್, ಎರಡನೇ ಸ್ಥಾನ ಪಡೆದುಕೊಂಡ ಗಾಯಕ ರಾಹುಲ್ ವೈದ್ಯ.

hindi bigg boss 14 finale winner rubina dilaika runner up rahul vaidya vcs
Author
Bangalore, First Published Feb 22, 2021, 10:34 AM IST
  • Facebook
  • Twitter
  • Whatsapp

ಹಿಂದಿ ಬಿಗ್ ಬಾಸ್‌ ಸೀಸನ್‌ 14 ಎಂಥಾ ದೊಡ್ಡ ಸುದ್ದಿ ಮಾಡುತ್ತಿತ್ತು, ಎಂದು ಎಲ್ಲರಿಗೂ ಗೊತ್ತಿರುವ ವಿಚಾರ. ಮನಸ್ಸಿನಲ್ಲಿ ಯಾವ ಸ್ಪರ್ಧಿ ಗೆಲ್ಲಬೇಕು ಅಂತ ಇದ್ದರೂ ಹೇಳಲಾಗುತ್ತಿರಲಿಲ್ಲ, ಕಾರಣ ಫಿನಾಲೆ ತಲುಪಿದ ಪ್ರತಿಯೊಬ್ಬರೂ ಆತ್ಮೀಯರೇ.  ವೇದಿಕೆಯ ಮೇಲೆ ನಿಂತು ರಾಖಿ ಸಾವಂತ್ ಮಾತು ಕೇಳಬೇಕು ಎಂದೆನಿಸುತ್ತಿದ್ದ ಅಭಿಮಾನಿಗಳಿಗೆ ವಿನ್ನರ್‌ ಯಾರೆಂದು ನಿರೀಕ್ಷೆ ಮಾಡಿದ್ದರು.

ಬಿಗ್‌ ಬಾಸ್ ಸುಂದರಿ ತೊಟ್ಟ ಪರ್ಪಲ್ ಡ್ರೆಸ್.. ಅಯ್ಯೋ ಎಂಥ ಅಚಾತುರ್ಯ! 

ಹೌದು! ಅಲಿ ಗೋನಿ, ನಿಕ್ಕಿ ತಂಬೋಲಿ, ರಾಖಿ ಸಾವಂತ್, ರುಬೀನಾ ಹಾಗೂ ರಾಹುಲ್ ಫಿನಾಲೆ ತಲುಪಿದ್ದರು. ಇವರಲ್ಲಿ ರುಬೀನಾ ಮೊದಲ ಸ್ಥಾನ, ರಾಹುಲ್ ಎರಡನೇ ಸ್ಥಾನ ಹಾಗೂ ನಿಕ್ಕಿ ತಂಬೋಲಿ ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.

hindi bigg boss 14 finale winner rubina dilaika runner up rahul vaidya vcs

ಪತಿ ಅಭಿನವ್‌ ಜೊತೆ ಬಿಗ್‌ಬಾಸ್‌ ಮನೆ ಪ್ರವೇಶಿಸಿದ ರುಬಿನಾ ನಿರೂಪಕ ಸಲ್ಮಾನ್‌ ಖಾನ್‌ ಅವರನ್ನು ಎದುರು ಹಾಕಿಕೊಂಡಿದ್ದರು. ತಮಾಷೆಗೊ ಅಥವಾ ಬೇಕಂತಲೋ ಅಭಿನವ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ ಸಲ್ಮಾನ್ ವಿರುದ್ಧ ವೀಕೆಂಡ್‌ ಕಾರ್ಯಕ್ರಮದಲ್ಲಿ ರುಬೀನಾ ಉಲ್ಟಾ ಉತ್ತರ ನೀಡಿದ್ದರು. ಅಂದಿನಿಂದ ಸಲ್ಮಾನ್ ಹಾಗೂ ರುಬೀನಾಳಿಗೆ ಅಷ್ಟಕಷ್ಟೆೇ.  ಆದರೆ ಇಂದು ಫಿನಾಲೆಯಲ್ಲಿ ರುಬೀನಾ ವಿನ್ನರ್ ಎಂದು ಕೈ ಎತ್ತಿ ಹಿಡಿದದ್ದು ಅದೇ ಬಿಗ್‌ಬಾಸ್ ಬ್ಯಾಡ್‌ಬಾಯ್ ಸಲ್ಮಾನ್ ಖಾನ್.

ಬಿಗ್‌ಬಾಸ್ ಸೀಸನ್ 8: ರಿಯಾಲಿಟಿ ಶೋ ಆರಂಭ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್! 

hindi bigg boss 14 finale winner rubina dilaika runner up rahul vaidya vcs

ಬಿಗ್ ಬಾಸ್‌ ಟ್ರೋಫಿ ಹಾಗೂ 36 ಲಕ್ಷ ರೂ .ರುಬೀನಾ ಪಾಲಾಯಿತು. ಕೊರೋನಾ ಸೋಂಕಿನ ಭಯದ ನಡುವೆಯೂ ಬಿಗ್ ಬಾಸ್‌ ಕಾರ್ಯಕ್ರಮ ನಡೆಸಿದ್ದು ದೊಡ್ಡ ಸವಾಲ್ ಆಗಿತ್ತು. ಅದರಲ್ಲೂ ಟಿಆರ್‌ಪಿ ಕುಸಿದು ಬಿದ್ದಾಗ ದಿ ಪವರ್‌ ಹೌಸ್‌ ಆಫ್‌ ಬಿಗ್ ಬಾಸ್ ರಾಖಿ ಸಾವಂತ್ ಎಂಟ್ರಿ ಕೊಟ್ಟರು. ಒಟ್ಟಿನಲ್ಲಿ ಹಿಂದಿ ಬಿಗ್ ಬಾಸ್‌ ಮುಕ್ತಾಯವಾಗಿದೆ, ಕನ್ನಡ ಬಿಗ್ ಬಾಸ್‌ ಇದೇ ಫೆಬ್ರವರಿ 28ರಿಂದ ಆರಂಭವಾಗಲಿದೆ.

Follow Us:
Download App:
  • android
  • ios