Asianet Suvarna News Asianet Suvarna News

ಬಿಗ್‌ಬಾಸ್ ಸೀಸನ್ 8: ರಿಯಾಲಿಟಿ ಶೋ ಆರಂಭ ದಿನಾಂಕ ಘೋಷಿಸಿದ ಕಿಚ್ಚ ಸುದೀಪ್!

ನಟ ಕಿಚ್ಚ ಸುದೀಪ್ ನಿರೂಪಣೆಯ ಬಿಗ್ ಬಾಸ್ 8ನೇ ಆವೃತ್ತಿ ಆರಂಭಕ್ಕೆ ಪ್ರೇಕ್ಷಕರು ಕಾಯುತ್ತಿದ್ದಾರೆ. ದಿನದಿಂದ ದಿನಕ್ಕೆ ಬಿಗ್‌ಬಾಸ್ ಕುತೂಹಲಗಳು ಹೆಚ್ಚಾಗುತ್ತಿದೆ. ಇದರ ನಡುವೆ ಕಿಚ್ಚ ಸುದೀಪ್ ರಿಯಾಲಿಟಿ ಶೋ ಆರಂಭ ದಿನಾಂಕ ಘೋಷಿಸಿದ್ದಾರೆ. ಹೆಚ್ಚಿನ ವಿವರ ಇಲ್ಲಿದೆ.

Bigg Boss Kannada Season 8 Host Kichcha Sudeep announces Launch date and timings ckm
Author
Bengaluru, First Published Feb 15, 2021, 7:13 PM IST

ಬೆಂಗಳೂರು(ಫೆ.15):  ಬಿಗ್‌ಬಾಸ್ 8ನೇ ಆವೃತ್ತಿ ರಿಯಾಲಿಟಿ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್ ಆಗಿದೆ. ಜ್ಯೋತಿಷಿ ಗೆಟಪ್‌ನಲ್ಲಿ ಕಾಣಿಸಿಕೊಂಡ ನಟ, ಬಿಗ್‌ಬಾಸ್ ನಿರೂಪಕ ಕಿಚ್ಚ ಸುದೀಪ್, ಶೋ ಆರಂಭದ ಶುಭ ಘಳಿಗೆಯನ್ನು ಹೇಳಿದ್ದಾರೆ. ಇದೇ ಫೆಬ್ರವರಿ 28ರಂದು ಸಂಜೆ 6 ಗಂಟೆಗೆ ಬಿಗ್‌ಬಾಸ್ ಸೀಸನ್ 8 ಆರಂಭಗೊಳ್ಳಲಿದೆ.

ಕಾಮಿಡಿ ಮಾಡೋರಿಗೂ ಬಿಗ್‌ಬಾಸ್‌ ಮನೆಯಲ್ಲಿದೆ ಜಾಗ; ನಯನಾ ಹೋಗೋದು ಗ್ಯಾರಂಟಿ?

ಭುದ, ಶುಕ್ರ, ಗುರು ಹಾಗೂ ಶನಿ ಒಂದೇ ಕೋಣೆಯಲ್ಲಿದೆ. ಉತ್ತಮ ಕಾಲ ಕೂಡಿಬಂದಿದ್ದು ಶುಭ ಮುಹೂರ್ತದಲ್ಲಿ ಬಿಗ್‌ಬಾಸ್ ಸೂಸೂತ್ರವಾಗಿ ಆರಂಭವಾಗಲಿದೆ ಎಂದು ಕಿಚ್ಚ ಸುದೀಪ್ ಹೇಳಿದ್ದಾರೆ. ಸುದೀಪ್ ಜ್ಯೋತಿಷಿ ಗೆಟಪ್‌ನಲ್ಲಿ ಕಾಣಿಸಿಕೊಂಡು ಬಿಗ್ ಬಾಸ್ ದಿನಾಂಕ ಘೋಷಿಸಿದ ಪ್ರೋಮೊವನ್ನು ಕಲರ್ಸ್ ಕನ್ನಡ ವಾಹಿನಿ ರಿಲೀಸ್ ಮಾಡಿದೆ.

 

ಬಿಗ್ ಬಾಸ್‌ ಮನೆಗೆ ಸನ್ನಿಧಿ; ಆಫರ್ ಬಂದ ವಿಚಾರ ಒಪ್ಪಿಕೊಂಡ ಅಗ್ನಿಸಾಕ್ಷಿ ನಟಿ!.

100 ದಿನಗಳ ಕಾಲ ನಡೆಯಲಿರುವ ಈ ಬಾರಿಯ ಬಿಗ್‌ಬಾಸ್ ಸ್ಪರ್ಧೆಯಲ್ಲಿ ಸ್ಪರ್ಧಿಗಳು ಯಾರು, ಯಾರು ಫೈನಲ್ ಪ್ರವೇಶಿಸುತ್ತಾರೆ. ಕೊರೋನಾ ಬಳಿಕ ಆರಂಭವಾಗುತ್ತಿರುವ ಮೊದಲ ಬಿಗ್‌ಬಾಸ್ ಶೋ ಇದಾಗಿದ್ದು, ಸ್ಪರ್ಧೆಯ ಸ್ವರೂಪ ಹೇಗಿರಲಿದೆ ಅನ್ನೋ ಕುತೂಹಲ ಇದೀಗ ಇಮ್ಮಡಿಯಾಗಿದೆ.

Follow Us:
Download App:
  • android
  • ios