ʼಬಿಗ್ ಬಾಸ್ ಕನ್ನಡ ಸೀಸನ್ 11ʼ ಶೋ ವಿಜೇತ ಹನುಮಂತ ಅವರಿಗೆ ಟ್ರೋಫಿ ಜೊತೆಗೆ ಸಿಕ್ಕ ಹಣ ಸಂಪೂರ್ಣ ಲಾಭ ಅಂತಲೇ ಹೇಳಬಹುದು. ಹೇಗೆ?
ʼಬಿಗ್ ಬಾಸ್ʼ ಮನೆಗೆ ಹೋಗೋದು ಅಂತ ಗೊತ್ತಾದಕೂಡಲೇ ಸ್ಪರ್ಧಿಗಳು ಲಕ್ಷಗಟ್ಟಲೇ ಹಣ ಖರ್ಚು ಮಾಡಿ ಶಾಪಿಂಗ್ ಮಾಡ್ತಾರೆ, ಇನ್ನೂ ಕೆಲವರು ಪಿಆರ್ ಏಜೆನ್ಸಿಗೆ ಹಣ ಸುರಿಯುತ್ತಾರೆ. ಆದರೆ ಹನುಮಂತ ಮಾತ್ರ ಒಂದು ರೂಪಾಯಿಯೂ ಖರ್ಚು ಮಾಡದೆ ಐವತ್ತು ಲಕ್ಷ ರೂಪಾಯಿ ಜೊತೆಗೆ ಇನ್ನೊಂದಿಷ್ಟು ಬಹುಮಾನಗಳನ್ನು ಪಡೆದಿದ್ದಾರೆ.
ಏಜೆನ್ಸಿಗಳ ಅಬ್ಬರ ಜಾಸ್ತಿ ಆಯ್ತು!
ಹೌದು, ʼಬಿಗ್ ಬಾಸ್ʼ ಮನೆಯಲ್ಲಿ ಉಳಿಯಬೇಕು ಅಂದ್ರೆ ಅದಿಕ್ಕೆ ಸರಿಯಾಗಿ ಆಟ ಆಡಬೇಕು, ಇಲ್ಲವೇ ಮತ ಬೀಳಬೇಕು. ಈಗ ಸೋಶಿಯಲ್ ಮೀಡಿಯಾ ಯುಗ. ಎಲ್ಲರೂ ಕೈಯಲ್ಲೂ ಮೊಬೈಲ್‌ಗಳು ರಾರಾಜಿಸುತ್ತವೆ. ಹೀಗಾಗಿ ಮನೆಯಲ್ಲಿಯೇ ಕುಳಿತು ವೋಟ್ ಮಾಡಬಹುದು. ಇನ್ನು ಪಿಆರ್ ಏಜೆನ್ಸಿಗಳು ಹುಟ್ಟಿಕೊಂಡು ಸ್ಪರ್ಧಿಗಳ ಪರ ಪ್ರಚಾರ ಮಾಡುತ್ತವೆ. ಕಳೆದ ಮೂರು-ನಾಲ್ಕು ಸೀಸನ್‌ಗಳಿಂದ ಈ ರೀತಿ ಏಜೆನ್ಸಿಗಳ ಅಬ್ಬರ ಹೆಚ್ಚಾಗಿವೆ.
BBK 11 ಮನೆಗೆ ಹೋಗೋ ಮುನ್ನ ತ್ರಿವಿಕ್ರಮ್‌ಗೆ ಲವ್ವರ್ ಇದ್ರಾ? ಉತ್ತರ ಕೊಟ್ಟ ತ್ರಿವಿಕ್ರಮ್!
ಏಜೆನ್ಸಿ ಏನು ಮಾಡುತ್ತದೆ?
ಒಂದು ಏಜೆನ್ಸಿಗೆ ಇಂತಿಷ್ಟು ಅಂತ ಹಣ ಕೊಡುವುದರ ಜೊತೆಗೆ ಸ್ಪರ್ಧಿಗಳ ಸೋಶಿಯಲ್ ಮೀಡಿಯಾ ಖಾತೆಯ ಅಕ್ಸೆಸ್ ಕೊಟ್ಟರಾಯಿತು, ಅವರು ಆ ಸ್ಪರ್ಧಿಗಳ ಪರವಾಗಿ ಪ್ರಚಾರ ಮಾಡುತ್ತಾರೆ, ಟ್ರೋಲ್ ಪೇಜ್‌ಗಳಿಗೆ ಕಂಟೆಂಟ್ ಕೊಡ್ತಾರೆ. ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕ್ತಾರೆ, ಅಭಿಯಾನಗಳನ್ನು ಮಾಡುತ್ತಾರೆ. ಈ ರೀತಿ ಪ್ರಚಾರಕ್ಕೆ ಒಂದಷ್ಟು ಹಣ ಸುರಿಯಬೇಕಾಗುತ್ತದೆ. ʼಬಿಗ್ ಬಾಸ್ʼ ಸ್ಪರ್ಧಿಗಳು ಈ ರೀತಿ ಪ್ರಚಾರಕ್ಕೆ ಲಕ್ಷಗಟ್ಟಲೇ ಹಣ ಸುರಿಯುತ್ತಾರೆ. ಆದರೆ ಹನುಮಂತ ಇದ್ಯಾವುದನ್ನು ಮಾಡಿಲ್ಲ. ಇದರಿಂದ ಎಷ್ಟು ಪ್ರಯೋಜನ ಇದೆಯೋ ಅಷ್ಟೇ ಸಮಸ್ಯೆಯೂ ಆಗಬಹುದು. ಒಮ್ಮೊಮ್ಮೆ ತಮ್ಮ ಸ್ಪರ್ಧಿಗಳ ಬಗ್ಗೆ ಪ್ರಚಾರ ಮಾಡಬೇಕು ಎಂದು ಇನ್ನೋರ್ವ ಸ್ಪರ್ಧಿಗಳ ಬಗ್ಗೆ ಅಪಪ್ರಚಾರಕ್ಕೆ ಇಳಿಯಬಹುದು. ಬಿಗ್ ಬಾಸ್ ಪ್ರಸಾರ ಆಗುವ ಟೈಮ್‌ನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಹುಟ್ಟಿಕೊಳ್ಳುವ ಸ್ಪರ್ಧಿಗಳ ಫ್ಯಾನ್ ಪೇಜ್‌ಗಳು ಆಮೇಲೆ ಕಾಣಿಸೋದಿಲ್ಲ. ಇನ್ನು ಇಂತಹ ಪೇಜ್‌ಗಳಿಂದ ಕೆಲವೊಮ್ಮೆ ಬೇರೆ ಬೇರೆ ಸ್ಪರ್ಧಿಗಳ ಅಪಪ್ರಚಾರ ಮಾಡಲಾಗುತ್ತದೆ.
BBK 11: ನನಗೆ ನೂರು ಎಕ್ಸ್ ಇದ್ದಾರೆ, ಯಾರ್ ಬಗ್ಗೆ ಮಾತಾಡ್ತಿದ್ದೀರಿ: ರಜತ್ ಕಿಶನ್ ಖಡಕ್ ಮಾತು!
ಕೆಂಪು ಬಸ್ ಹತ್ತಿ ಬಂದ್ರಾ ಹನುಮಂತ?
ಬಿಗ್ ಬಾಸ್ ಮನೆಯಿಂದ ಹೊರಬಂದ ಸ್ಪರ್ಧಿಗಳು ನಾವು ಇಷ್ಟು ಲಕ್ಷ ಖರ್ಚು ಮಾಡಿದ್ವಿ ಅಂತ ಹೇಳೋದನ್ನು ಕೇಳಿರುತ್ತೀರಿ. ಇನ್ನು ಸ್ಪರ್ಧಿಗಳು ಒಮ್ಮೆ ಹಾಕಿದ ಬಟ್ಟೆಯನ್ನು ಅಲ್ಲಿ ಮತ್ತೊಮ್ಮೆ ಹಾಕೋದಿಲ್ಲ. ಆದರೆ ಹನುಮಂತ ಮಾತ್ರ ಇದಕ್ಕೆಲ್ಲ ಹಣವನ್ನೇ ಹಾಕಿಲ್ಲ. ʼಬಿಗ್ ಬಾಸ್ʼ ಮನೆಯಲ್ಲಿ ರಂಜಿತ್, ಜಗದೀಶ್ ಅವರು ಎಲಿಮಿನೇಟ್ ಆಗುತ್ತಿದ್ದಂತೆ ಹನುಮಂತನ ಎಂಟ್ರಿ ಆಯ್ತು. ಬಿಗ್ ಬಾಸ್ ಮನೆಗೆ ಬರುವ ಎರಡು ದಿನ ಮುನ್ನ ಅವರಿಗೆ ಈ ವಿಷಯ ತಿಳಿಸಲಾಗಿತ್ತು. ಆಗ ಹನುಮಂತ ತನ್ನ ಜೊತೆ ಇದ್ದ 10 ಜೊತೆ ಬಟ್ಟೆ ತಗೊಂಡು ಕೆಂಪು ಬಸ್ ಹತ್ತಿದ್ರೋ ಅಥವಾ ಕಾರ್‌ನಲ್ಲಿ ಬಂದ್ರೋ ಏನೋ ಬಹಳ ಸಿಂಪಲ್ ಹಾದಿಯಲ್ಲಿ ದೊಡ್ಮನೆಗೆ ಕಾಲಿಟ್ಟರು.
ಹನುಮಂತ ಬಳಿ ಇದ್ದಿದ್ದೇ ಹತ್ತು ಜೊತೆ ಬಟ್ಟೆ…!
ಇದ್ದ ಬಟ್ಟೆಯನ್ನೇ ಹನುಮಂತ ಅವರು ಪದೇ ಪದೇ ಹಾಕಿಕೊಂಡರು. ಬಟ್ಟೆ ತೊಳೆಯೋದು ಕಷ್ಟ ಅಂತ ಅವರು ಬಿಗ್ ಬಾಸ್ ಮನೆಯಲ್ಲಿ ನಿತ್ಯವೂ ಸ್ನಾನ ಕೂಡ ಮಾಡುತ್ತಿರಲಿಲ್ಲವಂತೆ. ಈ ವಿಷಯ ತಿಳಿದ ಸುದೀಪ್ ಅವರು ಹನುಮಂತಗೆ ನಾಲ್ಕು ಜೊತೆ ಬ್ರ್ಯಾಂಡೆಟ್ ಬಟ್ಟೆ, ಶೂ ಕಳಿಸಿದ್ದರು. ಹನುಮಂತ ಅವರು ಯಾವುದೇ ಪಿಆರ್ ಏಜೆನ್ಸಿಯನ್ನು ಇಟ್ಟುಕೊಂಡಿರಲಿಲ್ಲ, ಅಷ್ಟೇ ಯಾಕೆ ಅವರ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹನುಮಂತ ಬಗ್ಗೆ ಪ್ರಚಾರ ಮಾಡುವಷ್ಟು ಪೋಸ್ಟ್‌ಗಳು ಕಾಣುತ್ತಿರಲಿಲ್ಲ.
