ಸಂದರ್ಶನ ಅಂತ ಓಡೋಡಿ ಬಂದ ಮಂಜಣ್ಣನಿಗೆ ಪ್ರ್ಯಾಂಕ್ ಮಾಡಿದ ತರಲೆ ಕಾರ್‌ ತಂಡ.... 

ಹಾಯ್‌ ಫ್ರೆಂಡ್ಸ್‌.....ಬಾಯ್ ಫ್ರೆಂಡ್ಸ್....ಹೀಗೆ ಜೋರು ಜೋರಾಗಿ ಕೂಗಾಡಿ ಜನರನ್ನು ಇನ್‌ಸ್ಟಾಗ್ರಾಂನಲ್ಲಿ ಮನೋರಂಜಿಸುತ್ತಿರುವ ಮಂಜುನಾಥ್ ಕುಮಾರ್ ಉರ್ಫ್‌ ಮಂಜಣ್ಣಈಗ ಪ್ರ್ಯಾಂಕ್‌ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಸ್ತೆಯಲ್ಲಿ ಫ್ರೀ ಡ್ರಾಪ್‌ ಆಂಡ್‌ ಪಿಕಪ್ ಹೇಳುವ ಜನರಿಗೆ ಬುದ್ಧಿ ಕಲಿಸಬೇಕು ಎಂದು ಮಾಡುವ ತರ್ಲೆ ಕಾರು ತಂಡ ಈ ಸಲ ಮಂಜಣ್ಣನಿಗೆ ಪ್ರ್ಯಾಂಕ್ ಮಾಡಿದ್ದಾರೆ. ಸುಮಾರು ದಿನಗಳಿಂದ ಮಂಜಣ್ಣರನ್ನು ಸಂಪರ್ಕ ಮಾಡಿ ಕೊನೆಗೂ ಭೇಟಿ ಮಾಡಿದ್ದಾರೆ. 

ಮಂಜಣ್ಣ ಆಗಮಿಸುತ್ತಿದ್ದಂತೆ ಕಾರಿನಲ್ಲಿ ಕೂರಿಸಿಕೊಂಡ ತಂಡ ಲಾಂಗ್‌ ಡ್ರೈವ್‌ ಹೋಗುವಂತೆ ಹೇಳಿ ಕರೆದುಕೊಂಡು ಹೋಗುತ್ತಾರೆ. ಕಾರಿನಲ್ಲಿ ಅರ್ಧ ದಾರಿ ಸಾಗಿದ ಮೇಲೆ ಮಂಜಣ್ಣನಿಗೆ ಪ್ರ್ಯಾಂಕ್‌ ಮಾಡಲು ಶುರು ಮಾಡುತ್ತಾರೆ. ಅಪರಿಚಿತರ ಬಳಿ ತಲೆ ಕೂದಲ ಎಣ್ಣೆ ತಯಾರಿಸಿ ಅಪಾರ್ಟ್‌ಮೆಂಟ್‌ ನಿವಾಸಿಗಳಿಗೆ ನೀಡಲಾಗಿತ್ತು. ಅದನ್ನು ಬಳಸಿದ ಒಂದು ತಿಂಗಳಲ್ಲಿ ಸಂಪೂರ್ಣ ಕೂದಲನ್ನು ಕಳೆದುಕೊಂಡಿದ್ದಾರೆ. ನಿಮ್ಮಂತೆ ಕಡಿಮೆ ಕೂದಲು ಇರುವ ವ್ಯಕ್ತಿ ಈ ಬ್ರ್ಯಾಂಡ್‌ನ ಜಾಹೀರಾತು ಮಾಡಿದ್ದು ಆದರೆ ಈಗ ಆ ವ್ಯಕ್ತಿ ಕಾಣಿಸುತ್ತಿಲ್ಲದ ಕಾರಣ ನಮಗೆ ಸಮಸ್ಯೆ ಆಗಿದೆ ಎಂದು ತರಲೆ ಕಾರಿನ ತಂಡ ಹೇಳಿದಾಗ ಮಂಜಣ್ಣ ತಾಳ್ಮೆಯಿಂದ ಕೇಳಿಸಿಕೊಳ್ಳುತ್ತಾರೆ.

ರೀಲ್ಸ್‌ ದೀಪಕ್‌ ಗೌಡ Prank; ಇವನೇ ಬೇಕೆಂದು ವಿಷ ಸೇವಿಸಿದ ಯುವತಿ ಯಾರು?

ಆ ತಲೆ ಕೂದಲು ಇಲ್ಲದ ವ್ಯಕ್ತಿಯಾಗಿ ನೀವು ಬರಬೇಕು ಎಂದು ಹೇಳಿದಾಗ ಮಂಜಣ್ಣ ಸೈಕ್ ಆಗುತ್ತಾರೆ. ನಾನು ಎಂದೂ ಜನಗಳ ಪರ ಯಾವತ್ತೂ ಅವರಿಗೆ ಮೋಸ ಮಾಡುವುದಿಲ್ಲ ಅವರಿಗೆ ಸುಳ್ಳು ಹೇಳುವುದಿಲ್ಲ ಈ ಕೆಲಸ ನನ್ನಿಂದ ಸಾಧ್ಯವಿಲ್ಲ ಎನ್ನುತ್ತಾರೆ. ಆದರೂ ಅಲ್ಲಿಗೆ ಬಿಡದ ತಂಡ ಸಾಕಷ್ಟು ಪ್ರಯತ್ನಗಳನ್ನು ಮಾಡಿ ಇಲ್ಲ ನೀವು ಬರಲೇ ಬೇಕು ನಿಮಗೆ 1ಲಕ್ಷ ರೂಪಾಯಿ ಹಣ ಕೊಡುತ್ತೀವಿ ಎನ್ನುತ್ತಾರೆ...ಆಗೋಲ್ಲ ಅಂದ್ರೆ ಅಗಲ್ಲ ಎಂದಾಗ ಸುಮಾರು 15 ಲಕ್ಷ ರೂಪಾಯಿವರೆಗೂ ಮಾತುಕತೆ ಶುರುವಾಗುತ್ತದೆ. ಯಾವುದಕ್ಕೂ ಒಪ್ಪದ ಮಂಜಣ್ಣ ಜೋರಾಗಿ ಕೂಗಾಡಲು ಶುರು ಮಾಡುತ್ತಾರೆ. ಸುಮಾರು 1 ಗಂಟೆಗಳ ಕಾಲ ಪ್ರ್ಯಾಂಕ್ ಆದ ಮೇಲೆ ಸತ್ಯ ತಿಳಿಸಿ ವಿಡಿಯೋ ಮುಗಿಸುತ್ತಾರೆ.

ಚಿಕ್ಕಪೇಟೆಯಲ್ಲಿ ಮದುವೆ ಸೀರೆ ಖರೀದಿಸಿದ ನಟಿ ಸೋನಲ್; ಸರಳತೆಯ ಸುಂದರಿ ಎಂದ ನೆಟ್ಟಿಗರು!

YouTube video player