Asianet Suvarna News Asianet Suvarna News

ಹೊಸ ವರ್ಷಾಚರಣೆ ವೇಳೆ ಪತ್ನಿಯನ್ನು ರಕ್ಷಿಸಲು ಹೋಗಿ ಗಾಯಗೊಂಡ ನಟ ಗುರ್ಮೀತ್ ಚೌಧರಿ; ಸಖತ್ ಟ್ರೋಲ್

ಹೊಸ ವರ್ಷದ ಪಾರ್ಟಿ ಸಮಯದಲ್ಲಿ ಪತ್ನಿಯನ್ನು ರಕ್ಷಿಸಲು ಹೋಗಿ ನಟ ಗುರ್ಮೀದ್ ಚೌಧರಿ ಗಾಯಕೊಂಡಿದ್ದಾರೆ. 

Gurmeet Choudhary gets injured while protecting wife Debina Bonnerjee from crowd on New Year party sgk
Author
First Published Jan 2, 2023, 3:30 PM IST

ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತ ಮಾಡಲಾಗಿದೆ. ಇಡೀ ಜಗತ್ತು 2023ರನ್ನು ಗ್ರ್ಯಾಂಡ್ ಆಚರಿಸಿದೆ. ಪಾರ್ಟಿ, ಡಾನ್ಸ್, ಪಾಟಿಕಿ ಸದ್ದಿನೊಂದಿಗೆ 2023ರನ್ನು ಬರಮಾಡಿಕೊಳ್ಳಲಾಗಿದೆ. ಅದರಲ್ಲೂ ಸಿನಿ ಸೆಲೆಬ್ರಿಟಿಗಳು ಮತ್ತಷ್ಟು ಎಂಜಾಯ್ ಮಾಡುತ್ತಾ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಬಾಲಿವುಡ್ ಮಂದಿ ಬಹುತೇಕರು ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡಿದ್ದಾರೆ. ಹೊಸ ವರ್ಷದ ಮುನ್ನಾದಿನ 2022 ಇಯರ್ ಎಂಡ್ ನಟ ಗುರ್ಮೀತ್ ಚೌಧರಿ ದಂಪತಿ ಕೂಡ ಅದ್ದೂರಿ ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜನಸಂದಣಿ ನಡುವೆ ತನ್ನ ಪತ್ನಿಯನ್ನು ರಕ್ಷಿಸಲು ಹೋಗಿ ಕಾಲಿಗೆ ಸರಿಯಾಗಿಏಟು ಮಾಡಿಕೊಂಡಿದ್ದಾರೆ ನಟ  ಗುರ್ಮೀತ್ ಚೌಧರಿ. 

ಪಾರ್ಟಿಯಲ್ಲಿ ಭಾಗಿಯಾಗಿದ್ದ ಗುರ್ಮೀತ್ ಚೌಧರಿ ಪತ್ನಿ ಡೆಬಿನಾ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು. ಕ್ರೌಡ್ ನಡುವೆ ಸಿಲುಕಿಕೊಂಡಿದ್ದ ಗುರ್ಮೀತ್ ದಂಪತಿ ಹೊರ ಬರಲು ಪರದಾಡಿದ್ದರು. ಪತ್ನಿಯನ್ನು ರಕ್ಷಿಸಲು ಹರಸಾಹಸ ಪಟ್ಟಿದ್ದರು. ಜನದಟ್ಟಣೆಯಿಂದ ಪಾರಾಗುವ ವೇಳೆ ಗುರ್ಮೀತ್ ಕಾಲಿಗೆ ಗಾಯವಾಗಿದೆ. ಕಾಲಿಗೆ ಏಟಾದ ಫೋಟೋವನ್ನು ಶೇರ್ ಶೇರ್ ಮಾಡಿದ್ದಾರೆ ಗುರ್ಮೀತ್.

ಸದ್ಯ ಇಬ್ಬರ ವಿಡಿಯೋ ಕೂಡ ವೈರಲ್ ಆಗಿದೆ. ಇಬ್ಬರೂ ಭದ್ರತ ಸಿಬ್ಬಂದಿಯೊಂದಿಗೆ ಕಾರ್ಯಕ್ರಮದಿಂದ ಹೊರ ಬಂದರು. ಎಷ್ಟು ಕಷ್ಟಪಟ್ಟು ಹೊರಬಂದರು ಎನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗುರ್ಮೀತ್ ವಿಡಿಯೋಗೆ ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಪರ ಕಾಮೆಂಟ್ ಮಾಡಿದ್ರೆ ಇನ್ನು ಕೆಲವರು ಟ್ರೋಲ್ ಮಾಡುತ್ತಿದ್ದಾರೆ. 'ಚಿಕ್ಕ ಮಗು ಕೂಡ ಹೀಗೆ ಗಾಯವನ್ನು ಪ್ರದರ್ಶನ ಮಾಡಲ್ಲ' ಎಂದು ಹೇಳಿದ್ದಾರೆ. ಮತ್ತೋರ್ವ ಕಾಮೆಂಟ್ ಮಾಡಿ, ಎಷ್ಟು ಗಂಭೀರ ಗಾಯವಾಗಿದೆ ಯಾರಾದರೂ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ವ್ಯಂಗ್ಯವಾಡಿದ್ದಾರೆ.  

ಮತ್ತೆ ಒಂದಾದ ಎಕ್ಸ್ ಲವ್ ಬರ್ಡ್ಸ್; ಲಂಡನ್‌ನಲ್ಲಿ ಒಟ್ಟಿಗೆ ಹೊಸ ವರ್ಷ ಆಚರಿಸಿದ ಕಾರ್ತಿಕ್-ಸಾರಾ ಅಲಿ ಖಾನ್

ಅಂದಹಾಗೆ ಗುರ್ಮೀತ್ ಮತ್ತು ಡೆಬಿನಾ ಇಬ್ಬರೂ 2011ರಲ್ಲಿ ವಿವಾಹವಾದರು. ಇಬ್ಬರೂ ಮೊದಲು ರಾಮಾಯಣ ಧಾರಾವಾಹಿ ಸೆಟ್ ನಲ್ಲಿ ಭೇಟಿಯಾದರು. ಈ ಧಾರಾವಾಹಿ 2008ರಲ್ಲಿ ಪ್ರಸಾರವಾಗುತ್ತಿತ್ತು. ಆ ಧಾರಾವಹಿಯಲ್ಲಿ ಗುರ್ಮೀತ್ ರಾಮನಾಗಿ ಕಾಣಿಸಿಕೊಂಡಿದ್ದರು ಸೀತೆಯಾಗಿ ಡೆಬಿನಾ ನಟಿಸಿದ್ದರು. ಧಾರಾವಾಹಿ ಸೆಟ್ ನಲ್ಲಿ ಪರಿಚಿತರಾದ ಇಬ್ಬರೂ ಬಳಿಕ ಪ್ರೀತಿಯಲ್ಲಿ ಬಿದ್ದರು. 2011ರಲ್ಲಿ ಇಬ್ಬರೂ ದಾಂಪತ್ಯಕ್ಕೆ ಕಾಲಿಟ್ಟರು. ಕಳೆದ ವರ್ಷದ ಏಪ್ರಿಲ್‌ನಲ್ಲಿ ಈ ಸ್ಟಾರ್ ಜೋಡಿ ಎರಡನೇ ಮಗುವನ್ನು ಸ್ವಾಗತ ಮಾಡಿದರು.

ಹೊಸ ವರ್ಷಕ್ಕೆ ವಿಶ್ ಮಾಡಿ ತಗಲಾಕೊಂಡ ವಿಜಯ್ ದೇವರಕೊಂಡ; ರಶ್ಮಿಕಾ ಜೊತೆ ಇದ್ರಾ ಎಂದು ಕಾಲೆಳೆದ ನೆಟ್ಟಿಗರು

ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ನಲ್ಲಿ ತಮ್ಮ ಎರಡನೇ ಮಗುವಿನ ಸುದ್ದಿಯನ್ನು ಹಂಚಿಕೊಂಡಿದ್ದ ಗುರ್ಮೀತ್, 'ನಮ್ಮ ಹೆಣ್ಣು ಮಗುವನ್ನು ಜಗತ್ತಿಗೆ ಸ್ವಾಗತ. ನಾವು ಮತ್ತೆ ಪೋಷಕರಾಗುತ್ತಿರುವುದು ಖುಷಿಯಾಗುತ್ತಿದೆ. ನಮ್ಮ ಖಾಸಗಿತನವನ್ನು ಗೌರವಿಸಿ.  ನಿಮ್ಮ ನಿರಂತರ ಪ್ರೀತಿ ಆಶೀರ್ವದ ನಮ್ಮ ಮೇಲಿರಲಿ' ಎಂದು ಹೇಳಿದ್ದರು. ಈ ಸ್ಟಾರ್ ಜೋಡಿ ಕ್ರಿಸ್ಮಸ್ ಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದರು. ವಿಶೇಷ ಫೋಟೋಗಳನ್ನು ಶೇರ್ ಮಾಡಿ ಕ್ರಿಸ್ಮಸ್ ಆಚರಿಸಿದ್ದರು. 

Follow Us:
Download App:
  • android
  • ios