ಮತ್ತೆ ಒಂದಾದ ಎಕ್ಸ್ ಲವ್ ಬರ್ಡ್ಸ್; ಲಂಡನ್ನಲ್ಲಿ ಒಟ್ಟಿಗೆ ಹೊಸ ವರ್ಷ ಆಚರಿಸಿದ ಕಾರ್ತಿಕ್-ಸಾರಾ ಅಲಿ ಖಾನ್
ಬಾಲಿವುಡ್ ಎಕ್ಸ್ ಲವ್ ಬರ್ಡ್ಸ್ ಗಳಾದ ಕಾರ್ತಿಕ್ ಆರ್ಯನ್ ಮತ್ತು ಸಾರಾ ಅಲಿ ಖಾನ್ ಒಟ್ಟಿಗೆ ಹೊಸ ವರ್ಷ ಸಂಭ್ರಮಿಸಿದ್ದಾರೆ.
ಬಾಲಿವುಡ್ ಹ್ಯಾಂಡ್ ಸಮ್ ಹಂಕ್ ಕಾರ್ತಿಕ್ ಆರ್ಯನ್ ಮತ್ತು ನಟಿ ಸಾರಾ ಅಲಿ ಖಾನ್ ಮತ್ತೆ ಒಂದಾಗಿದ್ದಾರೆ. ಒಂದು ಕಾಲದ ಲವ್ ಬರ್ಡ್ಸ್ ಕಾರ್ತಿಕ್ ಮತ್ತು ಸಾರಾ ದೂರ ಆಗಿದ್ದರು. ಇದೀಗ ಒಟ್ಟಿಗೆ ವಿದೇಶದಲ್ಲಿ ಹೊಸ ವರ್ಷ ಆಚರಣೆ ಮಾಡುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಕಾರ್ತಿಕ್ ಮತ್ತು ಸಾರಾ ಇಬ್ಬರೂ ಒಟ್ಟಿಗೆ 2023ರನ್ನು ಸ್ವಾಗತಿಸಿದ್ದಾರೆ ಎನ್ನುವ ಸುದ್ದಿ ಬಾಲಿವುಡ್ ಅಂಗಳದಲ್ಲಿ ಗುಲ್ಲಾಗಿದೆ. ಇಬ್ಬರೂ ಲಂಡನ್ಗೆ ಹಾರಿದ್ದು ಒಟ್ಟಿಗೆ ಹೊಸ ವರ್ಷ ವೆಲ್ ಕಮ್ ಮಾಡಿದ್ದಾರೆ. ಇಬ್ಬರು ಶೇರ್ ಮಾಡಿರುವ ಫೋಟೋಗಳು ಇವರ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ.
ಇಬ್ಬರೂ ಪ್ರತ್ಯೇಕವಾಗಿ ಲಂಡನ್ಗೆ ಹಾರಿದ್ರೂ ಸಹ ಒಂದೇ ದೇಶದಲ್ಲಿ ಇರುವುದು ಅಚ್ಚರಿ ಮೂಡಿಸಿದೆ. ಸಾರಾ ಮತ್ತು ಕಾರ್ತಿಕ್ ಸಾಕಷ್ಟು ಫೋಟೋಗಳನ್ನು ಶೇರ್ ಮಾಡಿದ್ದಾರೆ. ಸಾರಾ ಅಲಿ ಖಾನ್ ತನ್ನ ಸಹೋದರ ಇಬ್ರಾಮ್ ಜೊತೆ ಇರುವ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಕಾರ್ತಿಕ್ ಸಿಂಗಲ್ ಆಗಿ ಇರುವ ಫೋಟೋ ಹಂಚಿಕೊಂಡಿದ್ದಾರೆ.
ಸಾರಾ ಅಲಿ ಖಾನ್ ಗ್ಲಾಸ್ ಒಳಗೆ ಇರುವ ಪೋಟೋವನ್ನು ಹಂಚಿಕೊಂಡಿದ್ದಾರೆ. ಗ್ಲಾಸ್ ಒಲಗೆ ನಿಂತು ಅಭಿಮಾನಿಗಳಿಗೆ ನ್ಯೂ ಇಯರ್ಗೆ ಶುಭಕೋರಿದ್ದಾರೆ. ಫೋಟೋದಲ್ಲಿ ಕ್ಲಾರಿಡ್ಜ್ ಎಂದು ಹಾಕಿದ್ದಾರೆ. ಅದೇ ಸಮಯಕ್ಕೆ ಕಾರ್ತಿಕ್ ಆರ್ಯನ್ ಕೂಡ ಫೋಟೋ ಶೇರ್ ಮಾಡಿ ಕ್ಲಾರಿಡ್ಜ್ ಎಂದು ಹೇಳಿದ್ದಾರೆ. ಹಾಗಾಗಿ ಅಭಿಮಾನಿಗಳಿಗೆ ಕುತೂಹಲ ಹೆಚ್ಚಾಗಿದೆ. ಇಬ್ಬರೂ ಒಟ್ಟಿಗೆ ಇದ್ದಾರೆ, ಮತ್ತೆ ಒಂದಾಗಿದ್ದಾರೆ ಎನ್ನಲಾಗುತ್ತಿದೆ.
ಕಾಫಿ ವಿತ್ ಕರಣ್ ಸೀಸನ್ ನಲ್ಲಿ ಸಾರಾ ಅಲಿ ಖಾನ್ ರ್ಯಾಪಿಡ್ ಪೈರ್ ರೌಂಡ್ ನಲ್ಲಿ ಕಾರ್ತಿಕ್ ಆರ್ಯನ್ ಜೊತೆ ಡೇಟ್ ಮಾಡ್ತೀನಿ ಎಂದು ಹೇಳಿದ್ದರು. ಲವ್ ಆಜ್ ಕಲ್ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದರು. ಈ ಸಿನಿಮಾದ ಸಮಯದಲ್ಲಿ ಇಬ್ಬರಿಗೂ ಲವ್ ಆಗಿದ್ದು ಡೇಟಿಂಗ್ ಮಾಡುತ್ತಿದ್ದರು. ಸಿಕ್ಕಾಪಟ್ಟೆ ಸುದ್ದಿಯಾಗಿದ್ದರು. ಆದರೆ ಸಿನಿಮಾ ರಿಲೀಸ್ ಸಮಯದಲ್ಲಿ ಇಬ್ಬರೂ ದೂರ ದೂರ ಆಗಿದ್ದರು. ಇಬ್ಬರ ಬ್ರೇಕಪ್ ಕೂಡ ಅಚ್ಚರಿ ಮೂಡಿಸಿತ್ತು.
ಇದೀಗ ಮತ್ತೆ ಒಂದಾಗಿರುವುದು ಕೂಡ ಅಚ್ಚರಿ ಮೂಡಿಸಿದೆ. ಅಂದಹಾಗೆ ಕಾರ್ತಿಕ್ ಆರ್ಯನ್ ಕೊನೆಯದಾಗಿ ಫ್ರೆಡಿ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ಶೆಹಜಾದ ಮತ್ತು ಸತ್ಯಪ್ರೇಮ್ ಕಿ ಕಥಾ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.