Asianet Suvarna News Asianet Suvarna News

ಸೊಂಟ ಬಳುಕಿಸೋದನ್ನು ಬಿಟ್ಟು ಕಣ್ಣಲ್ಲೇ ಡ್ಯಾನ್ಸ್‌ ಮಾಡಿದ ಬಾರ್ಬಿಡಾಲ್‌ ನಿವೇದಿತಾಗೌಡ!

ಬಿಗ್‌ಬಾಸ್‌ನಿಂದ ಸ್ಟಾರ್‌ಡಮ್‌ ಪಡೆದ ಹಾಗೂ ಬಾರ್ಬಿಡಾಲ್‌ ಖ್ಯಾತಿಯ ನಿವೇದಿತಾಗೌಡ ಉದ್ದನೆಯ ತಲೆ ಕೂದಲಿನ ಜೊತೆಗೆ ಕಣ್ಣು ರೆಪ್ಪೆಯ ಕೂದಲನ್ನೂ ಉದ್ದವಾಗಿ ಬೆಳೆಸಿಕೊಂಡಿದ್ದಾಳೆ.

Gicchi Gili Gili actress Nivedita Gowda posted long eye lashed video on instagram sat
Author
First Published Nov 4, 2023, 8:17 PM IST

ಬೆಂಗಳೂರು (ನ.04): ಟಿಕ್‌ಟಾಕ್‌ ರೀಲ್ಸ್‌ ಮತ್ತು ಕಲರ್ಸ್‌ ಕನ್ನಡದ ಬಿಗ್‌ಬಾಸ್‌ ಸ್ಪರ್ಧೆಯಲ್ಲಿ ಭಾಗವಹಿಸಿ ಸ್ಟಾರ್‌ಡಮ್‌ ಪಡೆದ ಹಾಗೂ ಕನ್ನಡ ಕಿರುತೆರೆಯ ಬಾರ್ಬಿಡಾಲ್‌ ಎಂದೇ ಖ್ಯಾತಿಯಾಗಿರುವ ನಿವೇದಿತಾಗೌಡ ಅವರು ಸೊಂಟ ಬಳುಕಿಸಿ ಡ್ಯಾನ್ಸ್‌ ಮಾಡಿದ್ದೇ ಹೆಚ್ಚು. ಈ ಬಾರಿ ನಿವೇದಿತಾಗೌಡ ತನ್ನ ಅಂಗಸೌಷ್ಟವವನ್ನು ಪ್ರದರ್ಶನ ಮಾಡದೇ ಕಣ್ಣಿನ ಸುಂದರಿಯಾಗಿ ಕಾಣಿಸಿಕೊಂಡಿದ್ದಾಳೆ. ಕಣ್ಣಿನಲ್ಲಿಯೇ ಮ್ಯೂಸಿಕ್‌ ಒಂದಕ್ಕೆ ನಯನ ನೃತ್ಯವನ್ನು ಮಾಡಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಕಣ್ಣಿನ ರೆಪ್ಪೆಯ ಕೂದಲುಗಳನ್ನು ಉದ್ದವಾಗಿ ಬೆಳೆಸಿಕೊಂಡಿದ್ದೇನೆ ಎಂದು ಹೇಳಿದ್ದಾಳೆ.

ಕನ್ನಡ ಕಿರುತೆರೆ ಬಾರ್ಬಿ ಡಾಲ್, ಬಿಗ್ ಬಾಸ್ ಸ್ಪರ್ಧಿ ನಿವೇದಿತಾ ಗೌಡ ಉದ್ದ ಕೂದಲಿಗೆ ಸಖತ್ ಫ್ಯಾನ್ಸ್‌ ಇದ್ದಾರೆ. ಪ್ರತಿ ಪೋಸ್ಟ್‌ನಲ್ಲೂ ಕೂದಲ ಬಗ್ಗೆ ಕಾಮೆಂಟ್ ಮಾಡ್ತಾರೆ. ಬಿಗ್‌ಬಾಸ್‌ ಮುಗಿದಾಕ್ಷಣ ರ್ಯಾಪರ್‌ ಚಂದನ್‌ಶೆಟ್ಟಿ ಮದುವೆಯಾಗಿರುವ ನಿವೇದಿತಾಗೌಡ ನಂತರವೂ ತನ್ನಿಷ್ಟದ ರೀಲ್ಸ್‌ ಮಾಡುವುದನ್ನು ಮುಂದುವರೆಸಿದ್ದಾಳೆ. ಜೊತೆಗೆ ಮದುವೆಯ ನಂತರವೂ ತುಂಡುಡುಗೆ ತೊಟ್ಟು ದೇಹಸಿರಿ ಪ್ರದರ್ಶನ ಮಾಡಿ ಪಡ್ಡೆಗಳ ನಿದ್ದೆ ಕದಿಯುತ್ತಿದ್ದ ಸುಂದರಿಗೆ ಕೆಲವರು ಪದೇ ಪದೇ ಯಾಕೆ ಚಡ್ಡಿ ತೋರಿಸ್ತೀಯಾ? ಲಕ್ಷಣವಾಗಿ ಸೀರೆಯುಡುವಂತೆ ಸಲಹೆಯನ್ನೂ ನೀಡಿದ್ದರು. ಹೀಗಾಗಿ, ಫ್ಯಾನ್ಸ್‌ಗಳ ಸಲಹೆಯಂತೆ ದಸರಾ ಹಾಗೂ ವಿಜಯದಶಮಿ ವೇಳೆ ಕೆಂಪು ಸೀರೆಯುಟ್ಟು ಪೋಸ್‌ ಕೊಟ್ಟಿದ್ದ ನಿವೇದಿತಾ, ಈಗ ಕಣ್ಣಿನಲ್ಲಿಯೇ ನೃತ್ಯ ಮಾಡಿ ತನ್ನ ರೆಪ್ಪೆಯ ಕೂದಲು ಉದ್ದ ಬೆಳೆದಿವೆ ಎಂದು ತೋರಿಸಿದ್ದಾಳೆ.

ಬಳೆ ಬಗ್ಗೆ ಹಗುರ ಮಾತನಾಡಿದ ವಿನಯ್‌ಗೆ ಕಿಚ್ಚ ಸುದೀಪ್‌ ಖಡಕ್‌ ವಾರ್ನಿಂಗ್‌: ಮಾತಿನ ಮೇಲೆ ನಿಗಾ ಇರ್ಲಿ!

ಇನ್ನು ಜೆಪಿ ನಗರದಲ್ಲಿರುವ ಖಾಸಗಿ ಸೌಂದರ್ಯವರ್ಧಕ ಮಳಿಗೆಯೊಂದರಲ್ಲಿ ನಿರಂತರವಾಗಿ ಕೋರ್ಸ್‌ ಪಡೆದು ತಾನು ಉಗುರು ಹಾಗೂ ಕಣ್ಣಿನ ರೆಪ್ಪೆಯ ಕೂದಲನ್ನು ಉದ್ದವಾಗಿ ಬೆಳೆಸಿಕೊಂಡಿದ್ದೇನೆ ಎಂದು ವಿಡಿಯೋ ಮೂಲಕ ತೋರಿಸಿದ್ದಾರೆ. ಸೌಂದರ್ಯವರ್ಧಕದ ಮಳಿಗೆಯ ಇನ್ಸ್‌ಸ್ಟಾಗ್ರಾಮ್‌ ಖಾತೆಯಿಂದಲೂ ನಿವೇದಿತಾಗೌಡ ಅವರ ವಿಡಿಯೋ ಹಾಗೂ ಕಣ್ಣಿನ ರೆಪ್ಪೆಯ ಕೂದಲು ಉದ್ದವಾಗಿ ಬೆಳೆಸಿಕೊಂಡಿರುವ ಬಗ್ಗೆ ಫೋಟೋ ಹಂಚಿಕೊಂಡಿದ್ದಾರೆ. ಅದೇನೇ ಇರಲಿ ಉದ್ದ ಕೂದಲಿನ ಸುಂದರಿಗೆ ಉದ್ದನೆಯ ಕಣ್ಣು ರೆಪ್ಪೆಗಳು ಮತ್ತಷ್ಟು ಸೌಂದರ್ಯವನ್ನು ಹೆಚ್ಚಿಸಿವೆ.

ಸದಾ ಚಡ್ಡಿಯಲ್ಲಿ ಕಾಣಿಸುತ್ತಿದ್ದ ನಿವೇದಿತಾ ಗೌಡ ದಸರಾದಲ್ಲಿ ಕೆಂಪು ಸೀರೆಯುಟ್ಟು ಟ್ರೆಡಿಶನಲ್ ಲುಕ್‌ನಲ್ಲಿ ಮಿಂಚಿದ್ದರು. ನಿವೇದಿತಾ ಗೌಡ ರೆಡ್ ಸ್ಯಾರಿ ಮತ್ತು ಯೆಲ್ಲೋ ಕಲರ್ ಬ್ಲೌಸ್ ತೊಟ್ಟು, ಜುಮ್ಕಾ ಹಾಕಿ ಸಾಂಪ್ರದಾಯಿಕವಾಗಿ ಕಾಣಿಸಿಕೊಂಡಿದ್ದು, ಟ್ರೆಡಿಶನಲ್‌ ಲುಕ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ನಿವೇದಿತಾ ಗೌಡ ಸ್ಯಾರಿ ಲುಕ್‌ಗೆ ಫ್ಯಾನ್ಸ್‌ಗಳ ಲೈಕ್ಸ್, ಹಾರ್ಟ್‌ ಎಮೋಜಿಗಳ ರಾಶಿನೇ ಬಂದಿದೆ. ಅಭಿಮಾನಿಗಳು ಬ್ಯೂಟಿಫುಲ್‌, ಕ್ಯೂಟ್ ಡಾಲ್‌, ಗಾರ್ಜಿಯಸ್‌, ಸೂಪರ್‌ ಗೊಂಬೆ, ಪ್ರೆಟ್ಟೀ ಎಂದೆಲ್ಲಾ ಕಾಮೆಂಟ್ ಮಾಡಿದ್ದರು.

GST ಟೀಮ್ ಫೋಟೋಸ್ ಹಂಚಿಕೊಂಡ Niveditha Gowda: ಫೋಟೋಗಳಿಗೆ ಫಿಲ್ಟರ್ ಬಳಸಬೇಡಿ ಅನ್ನೋದಾ!

ಬಿಗ್ ಬಾಸ್ ಕನ್ನಡ ಸೀಸನ್ 5 ರಿಯಾಲಿಟಿ ಶೋನಲ್ಲಿ ನಿವೇದಿತಾ ಗೌಡ ಹಾಗೂ ಚಂದನ್ ಶೆಟ್ಟಿ ಅವರು ಸ್ಪರ್ಧಿಸಿದ್ದರು. ಅಲ್ಲಿಯೇ ಅವರಿಗೆ ಮೊದಲ ಬಾರಿಗೆ ಪರಿಚಯ ಆಗಿದ್ದು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. 2020ರ ಫೆಬ್ರವರಿಯಲ್ಲಿ ಇಬ್ಬರು ಹಸೆಮಣೆ ಏರಿದ್ದರು. ನಿವೇದಿತಾ ಗೌಡ ಅವರು ಸದ್ಯ ಇನ್ಸ್ಟಾಗ್ರಾಮ್​​ನಲ್ಲಿ ಸುಮಾರು 1.6 ಮಿಲಿಯನ್ ಫಾಲೋವರ್ಸ್​ಗಳನ್ನು ಹೊಂದಿದ್ದಾರೆ. ನಿವೇದಿತಾ ಅವರು ಈವರೆಗೂ 1,777 ಪೋಸ್ಟ್​ಗಳನ್ನು ಮಾಡಿದ್ದಾರೆ. ನಿವೇದಿತಾ ಗೌಡಗೆ ಅಪಾರ ಅಭಿಮಾನಿ ಬಳಗ ಕೂಡ ಇದೆ.  ಗಿಚ್ಚಿ ಗಿಲಿಗಿಲಿ ಸೀಸನ್ 2ರಲ್ಲಿ ಸ್ಪರ್ಧಿಸಿದ್ದರು. ಸೀಸನ್ 1ರಲ್ಲಿ ಸ್ಪರ್ಧಿಸಿ ಫಸ್ಟ್‌ ರನ್ನರ್ ಟ್ರೋಫಿ ಕೂಡ ಪಡೆದುಕೊಂಡಿದ್ದರು.

Follow Us:
Download App:
  • android
  • ios