ಬಿಗ್‌ಬಾಸ್‌ ಮನೆಯಲ್ಲಿ ಮಹಿಳೆಯರ ಬಳೆಯ ಬಗ್ಗೆ ಹಗುರವಾಗಿ ಮಾತನಾಡಿದ ವಿನಯ್‌ಗೆ ಕಿಚ್ಚ ಸುದೀಪ್‌ ಖಡಕ್‌ ವಾರ್ನಿಂಗ್‌ ನೀಡಿದ್ದಾರೆ.

ಬೆಂಗಳೂರು (ನ.4): ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ಬಿಗ್‌ ಬಾಸ್‌ ಕನ್ನಡ ಸೀಸನ್‌ 10ರಲ್ಲಿ ಡಾಮಿನೇಟ್‌ ಆಗಿ ವರ್ತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿರುವ ವಿನಯ್‌ ಅವರು, ಮಹಿಳೆಯರ ಬಳೆ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ರಾಜ್ಯಾದ್ಯಂತ ವಿರೋಧ ವ್ಯಕ್ತವಾಗಿತ್ತು. ಇದರ ಬೆನ್ನಲ್ಲಿಯೇ ವಾರದ ಕಥೆ ಕೇಳಿ ಪಂಚಾಯಿತಿಗೆ ಬಂದ ಕಿಚ್ಚ ಸುದೀಪ್‌ ವಿನಯ್‌ಗೆ ಮಾತಿನ ಮೇಲೆ ನಿಗಾ ಇರ್ಲಿ ಎಂದು ಖಡಕ್‌ ವಾರ್ನಿಂಗ್‌ ನೀಡಿದ್ದಾರೆ. 

ವಾರದ ಕಥೆ ಕಿಚ್ಚನ ಜೊತೆ ಶೂಟಿಂಗ್‌ ಮುಕ್ತಾಯವಾಗಿದ್ದು ಪ್ರೋಮೋ ಬಿಡುಗಡೆ ಮಾಡಲಾಗಿದೆ. ಇಂದು ರಾತ್ರಿ ಬಿಗ್‌ಬಾಸ್‌ ಪ್ರಸಾರಕ್ಕೂ ಮುನ್ನ ವಿನಯ್‌ಗೆ ಕ್ಲಾಸ್‌ಬ ತೆಗೆದುಕೊಂಡ ಕಿಚ್ಚ ಸುದೀಪ್‌ ಅವರ ಪ್ರೋಮೋ ಭಾರಿ ಸದ್ದು ಮಾಡುತ್ತಿದೆ. ಅವರ ಮಾತಿನ ಧಾಟಿಯನ್ನು ನೋಡಿದರೆ ವಿನಯ್‌ಗೆ ಗ್ರಹಚಾರವನ್ನೇ ಬಿಡಿಸಿದ್ದಾರೆ ಎಂಬಂತೆ ಕಾಣುತ್ತಿದೆ. ಇಲ್ಲಿದೆ ನೋಡಿ ಸುದೀಪ್‌ ತರಾಟೆ ತೆಗೆದುಕೊಂಡ ಮಾತಿನ ಧಾಟಿ..

ಬಿಗ್ ಬಾಸ್ ಮನೆಯಲ್ಲಿ 'ಆನೆ' ವಿನಯ್ ಗೌಡಗೆ ಪಟ್ಟಾಭಿಷೇಕ; ಸಂಗೀತಾ ಎದೆಯಲ್ಲಿ ಗಡಗಡ ನಡುಕ!

ಸುದೀಪ್‌: ಗಂಡಸಿನ ಥರ ಆಡು, ಬಳೆ ಹಾಕೊಂಡು ಹೆಂಗಸರ ಥರ ಆಡಬೇಡ, ಬಳೆ ಅವನಿಗೆ ತೊಡಿಸು ಅಂತ ಹೇಳ್ತೀರಾ.. ಬಳೆ ಬಗ್ಗೆ ನಿಮ್ಮ ಅಭಿಪ್ರಾಯ ಏನು? 
ವಿನಯ್: ಅವನು (ಕಾರ್ತಿಕ್‌) ಯಾವಾಗಲೂ ತನಿಶಾ ಮತ್ತು ಸಂಗೀತಾ ಜೊತೆಗಿರ್ತಾನಲ್ಲಾ ಸರ್ ಅದಕ್ಕೆ ಆ ರೀತಿ ಹೇಳಿದೆ. 
ಸುದೀಪ್‌: ಅವರಿಬ್ಬರೂ ಕಾರ್ತಿಕ್‌ ಒಟ್ಟಿಗೆ ಇರೋದಕ್ಕೆ ಅವರು ಯಾಕೆ ಮೀಸೆಗಳ ರಾಣಿಗಳು ಆಗಿರಬಾರದು ಸರ್? ಹೆಣ್ಣನ್ನೇ ಯಾಕೆ ಟಾರ್ಗೆಟ್‌ ಆಗಬೇಕು? 
ವಿನಯ್: ಬೇಕು ಅಂತಾ ಆ ರೀತಿಯಾಗಿ ಹೇಳಿಲ್ಲ ಸರ್.. 
ಸುದೀಪ್‌: ನಾನೇನು ಬಳೆ ಹಾಕೋಂಡು ಕುಳಿತಿಲ್ಲ ಅಂದಾಗ ನಮ್ಮ ತಲೆಯಲ್ಲಿ ಒಂದು ಅರ್ಥ ಇರುತ್ತಲ್ವಾ ಸರ್.
ವಿನಯ್: ಅದು ಫ್ಲೋನಲ್ಲಿ ಬಂದಿದ್ದಂತಹ ಮಾತು.. 
ಸುದೀಪ್‌: ಕೆಲವೊಂದು ಸಾರಿ ಸೈಲೆಂಟಾಗಿ ಇದ್ದುಬಿಟ್ರೆ ಬೆಟರ್‌ ಅನ್ನೋದು ಇದಕ್ಕೇ ಸಾರ್‌..! ಮಾತಿನ ಮೇಲೆ ನಿಗಾ ಇರ್ಲಿ ಎಂದು ಬಿಗ್‌ಬಾಸ್‌ ಸ್ಪರ್ಧಿ ವಿನಯ್‌ಗೆ ಖಡಕ್ ವಾರ್ನಿಂಗ್‌ ನಿಡಿದ್ದಾರೆ.

View post on Instagram

'ತಾನೊಬ್ನೆ ಗಂಡ್ಸು ಅನ್ನೋ ಥರ ವಿನಯ್‌ ಆಡ್ತಾನೆ..' ಬಿಗ್‌ ಬಾಸ್‌ 'ಆನೆ' ವಿರುದ್ಧ ಚಿತ್ರಾಲ್‌ ಗರಂ!

ಬೆಂಗಳೂರು (ನ.4): ಬಿಗ್‌ ಬಾಸ್ 10ನೇ ಆವೃತ್ತಿಯ ಈ ವಾರದ ಟಾಸ್ಕ್‌ಗಳು ಸಖತ್‌ ಸದ್ದು ಮಾಡಿವೆ. ಆದರೆ, ಬಿಗ್‌ ಬಾಸ್‌ ಸ್ಪರ್ಧಿಗಳು ಆಡಿರುವ ಒಂದೊಂದು ಮಾತುಗಳು, ಅತಿರೇಕದ ವರ್ತನೆಗೆ ಟೀಕೆ ಕೂಡ ವ್ಯಕ್ತವಾಗಿದೆ. ವಿನಯ್‌ ಗೌಡ ಮಹಿಳೆಯರ ಬಗ್ಗೆ ಕೇವಲವಾಗಿ ಮಾತನಾಡಿರುವ ಕುರಿತಾಗಿ ಬಾಡಿ ಬಿಲ್ಡರ್‌ ಚಿತ್ರಾಲ್‌ ರಂಗಸ್ವಾಮಿ ಕಿಡಿ ಕಾರಿದ್ದಾರೆ. ಬಿಗ್‌ಬಾಸ್‌ ಸೀಸನ್‌ ಆರಂಭದಲ್ಲಿಯೇ ಸಂಗೀತಾ ಅವರ ವಿರುದ್ಧ ಅವಹೇಳನಕಾರಿಯಾಗಿ ವಿನಯ್‌ ಮಾತನಾಡಿದ್ದರು. ಸಂಗೀತಾ ವಿರುದ್ಧ ಅವರು ಬಳಸಿದ್ದ ಅವಾಚ್ಯ ಶಬ್ದಗಳನ್ನು ಬಿಗ್‌ ಬಾಸ್‌ ಬೀಪ್‌ ಮಾಡಿ ಪ್ರಸಾರ ಮಾಡಿತ್ತು. ಆದರೆ, ಈ ಬಗ್ಗೆ ಸುದೀಪ್‌ ಆಗಲಿ, ಬಿಗ್‌ ಬಾಸ್‌ ಆಗಲಿ ಯಾವುದೇ ಎಚ್ಚರಿಕೆಯನ್ನು ವಿನಯ್‌ ಗೌಡಗೆ ನೀಡಿರಲಿಲ್ಲ. ಇದರ ಪರಿಣಾಮ ಎನ್ನುವಂತೆ ವಿನಯ್‌ ಗೌಡ ಹಳ್ಳಿ ಮನೆ ಟಾಸ್ಕ್‌ನಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ ಮಹಿಳೆಯರ ಬಗ್ಗೆಯೇ ನಿಂದನಾತ್ಮಕವಾಗಿ ಮಾತನಾಡಿರುವುದಕ್ಕೆ ಜನರು ತಮ್ಮ ಆಕ್ರೋಶ ಹೊರಹಾಕಿದ್ದಾರೆ.