- Home
- Entertainment
- Sandalwood
- GST ಟೀಮ್ ಫೋಟೋಸ್ ಹಂಚಿಕೊಂಡ Niveditha Gowda: ಫೋಟೋಗಳಿಗೆ ಫಿಲ್ಟರ್ ಬಳಸಬೇಡಿ ಅನ್ನೋದಾ!
GST ಟೀಮ್ ಫೋಟೋಸ್ ಹಂಚಿಕೊಂಡ Niveditha Gowda: ಫೋಟೋಗಳಿಗೆ ಫಿಲ್ಟರ್ ಬಳಸಬೇಡಿ ಅನ್ನೋದಾ!
ನಟ, ನಿರೂಪಕ ಸೃಜನ್ ಲೋಕೇಶ್ ಈಗಾಗಲೇ ನಿರ್ದೇಶನದತ್ತ ಮುಖ ಮಾಡಿದ್ದು, 'ಜಿಎಸ್‌ಟಿ' ಎಂಬ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಚಿತ್ರದಲ್ಲಿ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ನಟಿಸುತ್ತಿದ್ದಾರೆ.

ನಿವೇದಿತಾ ಗೌಡ ಕಿರುತೆರೆಯಿಂದ ಹಿರಿತೆರೆಗೆ ಪಾದಾರ್ಪಣೆ ಮಾಡಿದ್ದಾರೆ. ಸೃಜನ್ ಲೋಕೇಶ್ ನಿರ್ದೇಶನದ 'ಜಿಎಸ್‌ಟಿ' ಸಿನಿಮಾದಲ್ಲಿ ದೆವ್ವದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇದೀಗ ನಿವೇದಿತಾ ಗೌಡ 'ಜಿಎಸ್‌ಟಿ' ಚಿತ್ರತಂಡದ ಜೊತೆಯಲ್ಲಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿದೆ.
ಸೃಜನ್ ಲೋಕೇಶ್, ಅವರ ಪತ್ನಿ ಗ್ರೀಷ್ಮಾ, ಪೂಜಾ ಲೋಕೇಶ್ ಸೇರಿದಂತೆ ಇನ್ನಿತರ ನಟಿಯರ ಜೊತೆ ನಿವೇದಿತಾ ಗೌಡ ಕಪ್ಪು ಬಣ್ಣದ ಡ್ರೆಸ್‌ನಲ್ಲಿ ಫೋಟೋಗಳಿಗೆ ಭರ್ಜರಿಯಾಗಿ ಪೋಸ್ ನೀಡಿದ್ದಾರೆ. ಈ ಫೋಟೋಗೆ ಥಹರೇವಾರಿ ಕಮೆಂಟ್ಗಳು ಬರುತ್ತಿವೆ.
ಮಾಮೂಲಿನಂತೆ ನಿವೇದಿತಾ ಅವರ ಕ್ಯೂಟ್ನೆಸ್ಗೆ ಹಾರ್ಟ್ ಎಮೋಜಿಗಳಿಂದ ಕಮೆಂಟ್ಗಳ ಸುರಿಮಳೆಯಾಗುತ್ತಿದ್ದರೆ, ಹಲವರು ಇದಕ್ಕೆ 'ಜಿಎಸ್‌ಟಿ' ಗ್ಯಾಂಗ್ ಎಂದು ಕರೆದಿದ್ದಾರೆ. ಇನ್ನು ಕೆಲವರು ಫೋಟೋಗಳಿಗೆ ಫಿಲ್ಟರ್ ಇದೆ ಎಂದು ಈ ರೇಂಜ್‌ಗೆ ಬಳಸಿದ್ದೀರಾ ಎಂದಿದ್ದಾರೆ.
'ಜಿಎಸ್‌ಟಿ' ಚಿತ್ರದಲ್ಲಿ ಸೃಜನ್ ಲೋಕೇಶ್ ಪುತ್ರ ಸುಕೃತ್ ಬಾಲ ನಟನಾಗಿ ಈ ಚಿತ್ರದಿಂದ ಬಣ್ಣದ ಲೋಕಕ್ಕೆ ಪಾದಾರ್ಪಣೆ ಮಾಡ್ತಿದ್ದಾರೆ. ಜಿಎಸ್‌ಟಿ ಚಿತ್ರಕ್ಕೆ ಘೋಸ್ಟ್ ಇನ್ ಟ್ರಬಲ್ ಎಂಬ ಅಡಿಬರಹ ನೀಡಲಾಗಿದೆ. ದೆವ್ವಗಳೂ ಸಮಸ್ಯೆಯಲ್ಲಿವೆ ಅನ್ನೋದು ಇದರ ಅರ್ಥ.
ಈ ಚಿತ್ರದಲ್ಲಿ ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ರಜನಿ ಭಾರದ್ವಾಜ್, ನಿವೇದಿತಾ ಗೌಡ, ಅರವಿಂದ್ ರಾವ್, ತಬಲ ನಾಣಿ, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮೊದಲಾದವರು ನಟಿಸಲಿದ್ದಾರೆ. ಚಿತ್ರಕ್ಕೆ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.