Asianet Suvarna News Asianet Suvarna News

ಮನೆ ಕಟ್ಟಿ ನೋಡು, ಮದುವೆ ಮಾಡಿ‌ ನೋಡು; 'ಲಕ್ಷ್ಮೀ ನಿವಾಸ'ಕ್ಕೆ ಗೆಜ್ಜೆನಾದ ಶ್ವೇತಾ ಆಗಮನ!

'ಮನೆ ಕಟ್ಟಿ ನೋಡು, ಮದುವೆ ಮಾಡಿ‌ ನೋಡು ಅಂತ ಹಂಬಲಿಸೋ ಪ್ರತೀ ತುಂಬು ಕುಟುಂಬದ ಕಥೆ!' ಶೀಘ್ರದಲ್ಲಿ ಎಂಬ ಬರಹದ ಈ ಪ್ರೊಮೋ ನೋಡಿದರೆ, ಸ್ಯಾಂಡಲ್‌ವುಡ್ ಪ್ರೇಕ್ಷಕರು ಥಟ್ಟನೇ ನಟಿ ಶ್ವೇತಾ ಗುರುತು ಹಿಡಿಯಬಹುದು. ಸುಧಾರಾಣಿ, ಮಹಾಲಕ್ಷ್ಮೀ ಸೇರಿದಂತೆ ಹಲವು ಕನ್ನಡ ಸಿನಿಮಾ ನಟಿಯರು ಕಿರುತೆರೆಯಲ್ಲಿ ಮಿಂಚುತ್ತಿದ್ದು, ಈ ಸಾಲಿಗೆ ನಟಿ ಶ್ವೇತಾ ಸೇರಿಕೊಳ್ಳಲಿದ್ದಾರೆ ಎನ್ನಬಹುದು.

Gejjenada fame Actress Shwetha lead Lakshmi Nivasa Serial Starts in Zee Kannada srb
Author
First Published Nov 12, 2023, 7:52 PM IST

ಜೀ ಕನ್ನಡದಲ್ಲಿ ಹೊಸ ಧಾರಾವಾಹಿಯೊಂದು ಶುರುವಾಗಲಿದೆ. 'ಲಕ್ಷ್ಮೀ ನಿವಾಸ' ಹೆಸರಿನಲ್ಲಿ ಮೂಡಿಬರಲಿರುವ ಈ ಸೀರಿಯಲ್‌ ಪ್ರೊಮೋ ಜೀ ಕನ್ನಡ ವಾಹಿನಿಯ ಸೋಷಿಯಲ್‌ ಮೀಡಿಯಾ ಪೇಜ್‌ನಲ್ಲಿ ಬಿಡುಗಡೆಯಾಗಿದೆ. ಈ ಪ್ರೋಮೋದಲ್ಲಿ ಅಚ್ಚರಿಯೊಂದು ಕಾದಿದೆ. ಅದೇನೆಂದರೆ, ಹಲವು ದಶಕಗಳ ಹಿಂದೆ ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ನಟಿ ಶ್ವೇತಾ ಈ ಧಾರಾವಾಹಿಯ ಮುಖ್ಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಹೌದು, ಅದೇ ಗೆಜ್ಜೆನಾದ, ಚೈತ್ರದ ಪ್ರೇಮಾಂಜಲಿ ಸೇರಿದಂತೆ ಹಲವು ಚಿತ್ರಗಳಲ್ಲಿ ಕನ್ನಡ ಪ್ರೇಕ್ಷಕರನ್ನು ರಂಜಿಸಿದ್ದ ನಟಿ ಶ್ವೇತಾ!

'ಮನೆ ಕಟ್ಟಿ ನೋಡು, ಮದುವೆ ಮಾಡಿ‌ ನೋಡು ಅಂತ ಹಂಬಲಿಸೋ ಪ್ರತೀ ತುಂಬು ಕುಟುಂಬದ ಕಥೆ!' ಶೀಘ್ರದಲ್ಲಿ ಎಂಬ ಬರಹದ ಈ ಪ್ರೊಮೋ ನೋಡಿದರೆ, ಸ್ಯಾಂಡಲ್‌ವುಡ್ ಪ್ರೇಕ್ಷಕರು ಥಟ್ಟನೇ ನಟಿ ಶ್ವೇತಾ ಗುರುತು ಹಿಡಿಯಬಹುದು. ಸುಧಾರಾಣಿ, ಮಹಾಲಕ್ಷ್ಮೀ ಸೇರಿದಂತೆ ಹಲವು ಕನ್ನಡ ಸಿನಿಮಾ ನಟಿಯರು ಕಿರುತೆರೆಯಲ್ಲಿ ಮಿಂಚುತ್ತಿದ್ದು, ಈ ಸಾಲಿಗೆ ನಟಿ ಶ್ವೇತಾ ಸೇರಿಕೊಳ್ಳಲಿದ್ದಾರೆ ಎನ್ನಬಹುದು. ಸೀರಿಯಲ್ ಯಾವಾಗ ಪ್ರಾರಂಭ ಎಂಬ ಮಾಹಿತಿ ಇನ್ನೂ ಹೊರಬಿದ್ದಿಲ್ಲ. ಆದರೆ, ಸದ್ಯದಲ್ಲೇ ಜೀ ಕನ್ನಡದಲ್ಲಿ ಈ ಸೀರಿಯಲ್ ಪ್ರಸಾರವಾಗಲಿದೆ. 

ನಟ ದರ್ಶನ್‌ಗೆ ದೀಪಾವಳಿ ವೇಳೆ ಸಿಹಿ-ಕಹಿ ಸಂಗಮ; ಪೊಲೀಸ್‌ ನೋಟಿಸ್, ಕಾಟೇರ ಪೋಸ್ಟರ್ ಎರಡೂ ಬಂತು!

ಕನ್ನಡ ಸಿನಿಮಾಗಳ ನಟನೆ ಬಿಟ್ಟು ಅನೇಕ ವರ್ಷಗಳ ಬಳಿಕ ನಟಿ ಶ್ವೇತಾ ಕನ್ನಡ ಧಾರಾವಾಹಿ ಮೂಲಕ ಮತ್ತೆ ತಮ್ಮ ಅಭಿಮಾನಿಗಳಿಗೆ ದರ್ಶನ ನೀಡಲಿದ್ದಾರೆ. 
ಶ್ವೇತಾ ಸದ್ಯ ಚೆನ್ನೈನಲ್ಲಿ ನೆಲೆಸಿದ್ದಾರೆ. ಪತಿ ಮತ್ತು ಇಬ್ಬರೂ ಮಕ್ಕಳ ಜೊತೆ ಶ್ವೇತಾ ಕುಟುಂಬ ನಡೆಸುತ್ತಿದ್ದಾರೆ. ಮದುವೆಯಾದ ಬಳಿಕ ಸಿನಿಮಾರಂಗಕ್ಕೆ ಗುಡ್‌ಬೈ ಹೇಳಿರುವ ನಟಿ ಮತ್ತೆ ಚಿತ್ರರಂಗಕ್ಕೆ ಮರಳುವ ಆಸೆಯಲ್ಲಿದ್ದಾರೆ ಎನ್ನಲಾಗಿತ್ತು. ಇದೀಗ, ಕನ್ನಡ ಸೀರಿಯಲ್ ಮೂಲಕ ಮತ್ತೆ ಮನರಂಜನಾ ಲೋಕಕ್ಕೆ ಮರಳುತ್ತಿದ್ದಾರೆ. 

ಸೂರ್ಯ 'ಗರಡಿ'ಗೆ ಎದುರಾಗಿದ್ಯಾ ಭಾರೀ ಸಂಕಷ್ಟ, ಮಲ್ಟಿಫ್ಲೆಕ್ಸ್‌ಗಳಿಗೆ ಯಾಕೆ ಭಯವಿಲ್ಲ?

ಅನೇಕ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ನಟಿ ಶ್ವೇತಾ ಕನ್ನಡ, ತೆಲುಗು, ತಮಿಳು ಮತ್ತು ಮಲಯಾಳಂ ಸಿನಿಮಾಗಳಲ್ಲಿ ಬಾಲನಟಿಯಾಗಿ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟವರು. ಚೆನ್ನೈನಲ್ಲಿ ಹುಟ್ಟಿ ಬೆಳೆದ ನಟಿ ಶ್ವೇತಾ ಅವರ ಮೂಲ ಹೆಸರು ಲಕ್ಷ್ಮೀ. ವಿನೋದಿನಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ಆದರೆ ಕನ್ನಡಕ್ಕೆ ವಿನೋದಿನಿ ಶ್ವೇತಾ ಆಗಿ ಪರಿಚಯವಾದರು. ನಿರ್ದೇಶಕ ಎಸ್ ನಾರಾಯಣ್ ಅವರು ಶ್ವೇತಾ ಎಂದು ನಾಮಕರಣ ಮಾಡಿದರು. ಬಳಿಕ ಕನ್ನಡದಲ್ಲಿ ಶ್ವೇತಾ ಅಗಿಯೇ ಖ್ಯಾತರಾದರು. 

Follow Us:
Download App:
  • android
  • ios