Asianet Suvarna News Asianet Suvarna News

ಸೂರ್ಯ 'ಗರಡಿ'ಗೆ ಎದುರಾಗಿದ್ಯಾ ಭಾರೀ ಸಂಕಷ್ಟ, ಮಲ್ಟಿಫ್ಲೆಕ್ಸ್‌ಗಳಿಗೆ ಯಾಕೆ ಭಯವಿಲ್ಲ?

ಹೌದು, ಬಿಸಿ ಪಾಟೀಲ್ ನಿರ್ಮಾಣ, ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರ ಮೊನ್ನೆ, ನವೆಂಬರ್ 10ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  ಈ ಚಿತ್ರದಲ್ಲಿ ನಟ ದರ್ಶನ್ ಗೆಸ್ಟ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಇನ್ನಷ್ಟು ಹೈಪ್ ಸಿಗಲು ಕಾರಣವಾಗಿದೆ. ಯೋಗರಾಜ್‌ ಭಟ್ ವೃತ್ತಿಜೀವನದಲ್ಲಿ ಈ ಚಿತ್ರವು ವಿಭಿನ್ನ ಕಥೆ ಮತ್ತು ನಿರೂಪಣಾ ಶೈಲಿ ಹೊಂದಿದೆ ಎನ್ನಬಹುದು. 

Yogaraj bhat garadi movie show problem happens from multiplexes srb
Author
First Published Nov 12, 2023, 7:21 PM IST

ಸೂರ್ಯ ನಾಯಕತ್ವದ ಯೋಗರಾಜ್ ಭಟ್ ನಿರ್ದೇಶನದ 'ಗರಡಿ' ಚಿತ್ರಕ್ಕೆ ಸಂಕಷ್ಟ ಎದುರಾಗಿದ್ಯಾ? ಏಕೆಂದರೆ, ಇಂದು ಬಿಡುಗಡೆಯಾಗಿರುವ (12 ನವೆಂಬರ್ 2023) ಸಲ್ಮಾನ್ ಖಾನ್ ನಾಯಕತ್ವದ ಟೈಗರ್ 3' ಚಿತ್ರಕ್ಕೆ ಮಲ್ಟಿಫ್ಲೆಕ್ಸ್‌ ಚಿತ್ರಮಂದಿರಗಳಲ್ಲಿ ಶೋಗಳನ್ನು ನೀಡಲಾಗಿದೆ. ಈ ಶುಕ್ರವಾರ, ಅಂದರೆ 10 ನವೆಂಬರ್ 2023 ಯಂದು ಬಿಡುಗಡೆ ಕಂಡು 3ನೇ ದಿನಕ್ಕೇ ಗರಡಿ ಚಿತ್ರವು ಈ ಮೂಲಕ ಸಾಕಷ್ಟು ಶೋಗಳನ್ನು ಕಳೆದುಕೊಂಡಂತಾಗಿದೆಯೇ? ಈಗಾಗಲೇ ಈ ಬಗ್ಗೆ ಫಿಲಂ ಚೇಂಬರ್‌ನಲ್ಲಿ ದೂರು ದಾಖಲಾಗಿದೆ. 

ಹೌದು, ಬಿಸಿ ಪಾಟೀಲ್ ನಿರ್ಮಾಣ, ಯೋಗರಾಜ್ ಭಟ್ ನಿರ್ದೇಶನದ ಗರಡಿ ಚಿತ್ರ ಮೊನ್ನೆ, ನವೆಂಬರ್ 10ರಂದು ಕರ್ನಾಟಕದಾದ್ಯಂತ ಬಿಡುಗಡೆಯಾಗಿ ಯಶಸ್ವಿ ಪ್ರದರ್ಶನ ಕಾಣುತ್ತಿದೆ.  ಈ ಚಿತ್ರದಲ್ಲಿ ನಟ ದರ್ಶನ್ ಗೆಸ್ಟ್‌ ರೋಲ್‌ನಲ್ಲಿ ಕಾಣಿಸಿಕೊಂಡಿದ್ದು, ಚಿತ್ರಕ್ಕೆ ಇನ್ನಷ್ಟು ಹೈಪ್ ಸಿಗಲು ಕಾರಣವಾಗಿದೆ. ಯೋಗರಾಜ್‌ ಭಟ್ ವೃತ್ತಿಜೀವನದಲ್ಲಿ ಈ ಚಿತ್ರವು ವಿಭಿನ್ನ ಕಥೆ ಮತ್ತು ನಿರೂಪಣಾ ಶೈಲಿ ಹೊಂದಿದೆ ಎನ್ನಬಹುದು. ದೇಸಿ ಕಲೆಯೊಂದರ ಸುತ್ತ ಸುತ್ತಿರುವ ಗರಡಿ ಕಥೆ, ಕಳೆದುಹೋಗಿರುವ ಒಂದು ಕುಸ್ತಿ ಕಲೆ ಮತ್ತು ಅದನ್ನು ಕಲಿಸುವ ಜಾಗವನ್ನು ಪರಿಚಯ ಮಾಡುವ ನಿಟ್ಟಿನಲ್ಲಿ ಬಹಳಷ್ಟು ಮುಖ್ಯ ಪಾತ್ರ ವಹಿಸಿದೆ ಎನ್ನಬಹುದು. 

ಮಲ್ಟಿಫ್ಲೆಕ್ಸ್ ಗಳಲ್ಲಿ ಕನ್ನಡ ಚಿತ್ರಗಳಿಗೆ ಭಾರೀ ತಾರತಮ್ಯ; ಸಿಡಿದೆದ್ದ 'ಗರಡಿ' ಬಿಸಿ ಪಾಟೀಲ್

ನಾಯಕನಟರಾಗಿ ಸೂರ್ಯ (ಯಶಸ್ ಸೂರ್ಯ)  ನಟಿಸಿದ್ದು ಅವರಿಗೆ ನಾಯಕಿಯಾಗಿ ಸೋನಲ್ ಮಂಥೆರೋ ಕಾಣಿಸಿಕೊಂಡಿದ್ದಾರೆ. ಖಳನಟರಾಗಿ ನಟ ರವಿಶಂಕರ್ ನಟಿಸಿದ್ದರೆ, ನಾಯಕನ ಅಣ್ಣನ ಪಾತ್ರದಲ್ಲಿ ನಟ ದರ್ಶನ್ 'ಅತಿಥಿ'ಯಾಗಿ ತೆರೆಯ ಮೇಲೆ ಅಬ್ಬರಿಸಿದ್ದಾರೆ. ಈ ಚಿತ್ರವು ಮಲ್ಟಿಫ್ಲೆಕ್ಸ್ ಸೇರದಂತೆ ಬಹಳಷ್ಟು ಥಿಯೇಟರ್‌ಗಳಲ್ಲಿ ಬಿಡುಗಡೆ ಕಂಡಿದೆ. ಆದರೆ, ಇಂದು ಬಾಲಿವುಡ್ ಚಿತ್ರವೊಂದರ ಕಾರಣಕ್ಕೆ ಕನ್ನಡ ಚಿತ್ರವನ್ನು ಮಲ್ಟಿಫ್ಲೆಕ್ಸ್ ಚಿತ್ರಮಂದಿರಗಳು ಕಡೆಗಣಿಸಿದವೇ? ಇದಕ್ಕೆ ಪಕ್ಕಾ ಎನ್ನುವಂತಹ ಉತ್ತರ ಸದ್ಯದಲ್ಲೇ ಸಿಗಲಿದೆ. ಗಾಸಿಪ್ ಪ್ರಕಾರ, ಈ ಕನ್ನಡ ಚಿತ್ರದ ಶೋ ಸಂಖ್ಯೆಯನ್ನು ಗಣನೀಯವಾಗಿ ಕಮ್ಮಿ ಮಾಡಲಾಗಿದೆ.

ನಟ ದರ್ಶನ್‌ಗೆ ದೀಪಾವಳಿ ವೇಳೆ ಸಿಹಿ-ಕಹಿ ಸಂಗಮ; ಪೊಲೀಸ್‌ ನೋಟಿಸ್, ಕಾಟೇರ ಪೋಸ್ಟರ್ ಎರಡೂ ಬಂತು! 

Follow Us:
Download App:
  • android
  • ios